ಮಂಗಳೂರು:- ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ 2022-23ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ದಿನಾಂಕ 06 ನವೆಂಬರ್ 2022ರಂದು ಉರ್ವಾ ಸ್ಟೋರಿನ ಯುವವಾಹಿನಿ ಸಭಾಂಗಣದಲ್ಲಿ ಜರಗಿತು. ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಕರಾಗಿ ಪ್ರವೀಣ್ ಕುಮಾರ್ ಕೆಡೆಂಜಿ ಆಡಳಿತ ನಿದೇ೯ಶಕರು ಪುರುಷರತ್ನ ಬಯೋ ಪ್ರೊಡ್ಯೂಸರ್ ಕಂಪನಿ, ಕಡಬ ಇವರು ಭಾಗವಹಿಸಿ ಶುಭ ಹಾರೈಸಿದರು. ಹಾಗೂ ಮುಖ್ಯ ಅತಿಥಿಗಳಾದ ಸುಖಲಾಕ್ಷಿ ವೈ .ಸುವರ್ಣ ಪ್ರಧಾನ ಕಾರ್ಯದಶಿ೯ ಅಖಿಲ ಭಾರತ ಬಿಲ್ಲವ ಮಹಿಳಾ ಸಂಘ, ಪುಷ್ಪಾವತಿ ಕೆ.ಎ. ಅಧ್ಯಕ್ಷರು ಪ್ರಗತಿ ಮಹಿಳಾ ಮಂಡಲ ಉವ೯ಸ್ಟೋರ್ ಮಂಗಳೂರು , ರಘುರಾಮ್ ಕದ್ರಿ , ಪ್ರಾಂಶುಪಾಲರು, ಶ್ರೀ ಗೋಕರ್ಣನಾಥೇಶ್ವರ ಪದವಿ ಪೂವ೯ ಕಾಲೇಜು , ಘಟಕದ ಅಧ್ಯಕ್ಷೆ ಸುನಿತಾ ಗೋಪಾಲಕೃಷ್ಣ , ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ರಾಜೇಶ್ ಬಂಟ್ವಾಳ ಉಪಸ್ಥಿತರಿದ್ದು ಶುಭ ಹಾರೈಕೆ ಮಾಡಿದರು. ಘಟಕದ ಕಾರ್ಯದರ್ಶಿ ಚಿತ್ರಶ್ರೀ ಮನೋಜ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಘಟಕದ ಸದಸ್ಯರಾದ ರಮಣಿ, ಕಸ್ತೂರಿ, ಚಿತ್ರಾಕ್ಷಿ ಇವರು ಪ್ರಾರ್ಥಿಸಿದರು. ಘಟಕದ ಅಧ್ಯಕ್ಷರಾದ ಸುನಿತಾ ಗೋಪಾಲಕೃಷ್ಣರವರು ವೇದಿಕೆಯಲ್ಲಿದ್ದ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಪ್ರಸ್ತಾವನೆಯನ್ನು ಘಟಕದ ಮಾಜಿ ಅಧ್ಯಕ್ಷರಾದ ಉಮಾಶ್ರೀಕಾಂತ್ ಮಂಡಿಸಿದರು. ಘಟಕದ ಕಾರ್ಯದರ್ಶಿಯವರಾದ ಚಿತ್ರಶ್ರೀ ಮನೋಜ್ ರವರು 2021-22ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಘಟಕದ ವತಿಯಿಂದ ಐದು ಜನ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿ ವಿತರಣೆ ಮಾಡಲಾಯಿತು.
ಪ್ರಸ್ತುತ ಸಾಲಿನ ಚುನಾವಣಾಧಿಕಾರಿ , ಘಟಕದ ನಿಕಟ ಪೂವ೯ ಅಧ್ಯಕ್ಷರಾದ ರೇಖಾ ಗೋಪಾಲ ರವರು 2022 – 23 ನೇ ಸಾಲಿನ ನೂತನ ಪದಾಧಿಕಾರಿಗಳ ತಂಡವನ್ನು ವೇದಿಕೆಗೆ ಆಹ್ವಾನಿಸಿದರು. ಕೇಂದ್ರ ಸಮಿತಿಯ ಒಂದನೇ ಉಪಾಧ್ಯಕ್ಷರಾದ ರಾಜೇಶ್ ಬಂಟ್ವಾಳ ರವರು ಪ್ರತಿಜ್ಞಾವಿಧಿ ಬೋಧಿಸಿ, ಮಹಿಳಾ ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು. 2022 -23ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸರಸ್ವತಿ ಶ್ರೀನಿವಾಸ್ ರವರು ಮಾತನಾಡಿ ತನ್ನನ್ನು ಆಯ್ಕೆ ಮಾಡಿದ ಎಲ್ಲಾ ಪದಾಧಿಕಾರಿಗಳಿಗೆ, ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ ಧನ್ಯವಾದ ಅರ್ಪಿಸಿದರು. ಮುಂದಿನ ದಿನಗಳಲ್ಲಿ ನಡೆಯಲಿರುವ ಘಟಕದ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಹಕರಿಸುವಂತೆ ಸದಸ್ಯರುಗಳಲ್ಲಿ ಮನವಿ ಮಾಡಿಕೊಂಡರು. ನಿರ್ಗಮನ ಅಧ್ಯಕ್ಷರಾದ ಸುನೀತಾ ಗೋಪಾಲಕೃಷ್ಣರವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು. ತಮ್ಮ ಅಧ್ಯಕ್ಷತೆಯ ಅನುಭವವನ್ನು ಹಂಚಿಕೊಂಡು ಎಲ್ಲಾ ಮಾಜಿ ಅಧ್ಯಕ್ಷರುಗಳಿಗೆ, ಘಟಕದ ಸದಸ್ಯರೆಲ್ಲರಿಗೂ ನೆನಪಿನ ಕಾಣಿಕೆಯನ್ನು ನೀಡಿದರು. ಕೇಂದ್ರ ಸಮಿತಿಯ ಹಾಗೂ ವಿವಿಧ ಘಟಕಗಳಿಂದ ಆಗಮಿಸಿದ ಅಧ್ಯಕ್ಷರುಗಳು ಸದಸ್ಯರುಗಳು ನೂತನ ತಂಡಕ್ಕೆ ಶುಭ ಹಾರೈಸಿದರು. ಘಟಕದ ಮಹಿಳಾ ಸದಸ್ಯರುಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷರಾದ ವಿದ್ಯಾ ರಾಕೇಶ್ ರವರು ನಿರೂಪಿಸಿದರು. ನೂತನ ಕಾರ್ಯದರ್ಶಿ ಕಸ್ತೂರಿ ಮಹೇಶ್ ಧನ್ಯವಾದಗೈದರು.