25-04-2024, 3:51 PM
ಮಂಗಳೂರು: ಯುವವಾಹಿನಿ(ರಿ.) ಅಡ್ವೇ ಘಟಕ ದಿನಾಂಕ 25-04-2024 ರಂದು ಭಾನುವಾರ ಘಟಕದ ವತಿಯಿಂದ ಒಂದು ದಿನದ ಕಿರು ಪ್ರವಾಸವನ್ನು ಹಮ್ಮಿಕೊಂಡಿದ್ದರು. ಮೊದಲು ತಾಯಿ ಶ್ರೀ ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ತೆರಳಿ ಅಲ್ಲಿ ತಾಯಿಯ ದರ್ಶನ ಪಡೆದು ತಾಯಿಯ ಅನ್ನ ಪ್ರಸಾದವನ್ನು ಸ್ವೀಕರಿಸಿ, ಅಲ್ಲಿಂದ ಮುಂದೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಬಂದು ದೇವಿಯ ದರ್ಶನ ಗೈದು, ಅಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು, ಅಲ್ಲಿಂದ ಮುಂದೆ ಕಳಸಕ್ಕೆ ಬಂದು ಪಾರ್ಕಲ್ಲಿ ಆಟವಾಡಿ ಅಲ್ಲಿಯೇ ಹತ್ತಿರದ ಹೋಟೆಲ್ ನಲ್ಲಿ ಸಂಜೆಯ […]
Read More
19-04-2024, 3:29 AM
ಮಂಗಳೂರು: ಭಜನೆ ಎಂಬ ಪದಕ್ಕೆ ವಿಶೇಷ ಅರ್ಥವಿದೆ. ‘ಭ’ ಎಂದರೆ ಭಗವಂತ, ‘ಜ’ ಎಂದರೆ ಜನ್ಮಾಂತರ, ‘ನೆ’ ಎಂದರೆ ನೆನೆಯುವುದು. ಜನ್ಮಜನ್ಮಾಂತರಗಳಿಂದ ಮಾಡಿದ ಪಾಪವನ್ನು ಕಳೆಯಲು ಹಾಗೂ ದೇವರನ್ನು ಒಲಿಸಿಕೊಳ್ಳಲು ಭಗವಂತನನ್ನು ಪೂಜಿಸುವುದೇ ಭಜನೆ. ಯುವವಾಹಿನಿ(ರಿ.) ಕೂಳೂರು ಘಟಕದಿಂದ ಪ್ರತಿ ತಿಂಗಳ ಒಂದು ದಿನ ಸಂಪರ್ಕದ ನೆಲೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀಮತಿ ವಿಮಲಾ ರವರ ಸಂಚಾಲಕತ್ವದಲ್ಲಿ ನಡೆಸಿಕೊಂಡು ಬರುವ ಮನೆ ಮನೆ ಭಜನೆ ಕಾರ್ಯಕ್ರಮದ 47 ನೇ ಭಜನಾ ಕಾರ್ಯಕ್ರಮವು ಘಟಕದ ಸದಸ್ಯರಾದ […]
Read More
17-04-2024, 3:24 AM
ಮಂಗಳೂರು: ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಅತ್ಯಂತ ಉಪಯುಕ್ತ ಕಾರ್ಯಕ್ರಮವಾಗಿದ್ದು ಇದರ ಉಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಯುವವಾಹಿನಿ(ರಿ.) ಕೂಳೂರು ಘಟಕ ಹಾಗೂ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಶ್ರೀ ಲೋಕೇಶ್ ಕೋಟ್ಯಾನ್ ರವರು ಯುವವಾಹಿನಿ(ರಿ.) ಕೂಳೂರು ಘಟಕ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಫಲ್ಗುಣಿ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಗಾಂಧಿನಗರ ಇವರ ಸಹಯೋಗದೊಂದಿಗೆ ದಿನಾಂಕ 17-04-2024ರ ಬೆಳಿಗ್ಗೆ 11.30ಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಗಾಂಧಿನಗರ ಇಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ […]
Read More
14-04-2024, 4:35 PM
ಬಜಪೆ: ಬಿಸು ಪರ್ಬ ಆಚರಣೆಯನ್ನು ದಿನಾಂಕ 14-04-2024 ರಂದು ನಾರಾಯಣ ಗುರು ಸಮುದಾಯ ಭವನ ಬಜಪೆಯಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬ್ರಹ್ಮ ಶ್ರೀ ಗುರುವರ್ಯರಿಗೆ ಮೊದಲು ಪೂಜೆ ಸಲ್ಲಿಸಿ ತದನಂತರ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು ಶಿವರಾಮ್ ಕೋಟ್ಯಾನ್ ಪೆರ್ಮುದೆ ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ರೇಣುಕಾ ಕಣಿಯೂರು ಇವರು ಮಾತನಾಡಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೊಸ ವರುಷ ಆಚರಿಸುವ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿ ಮುಂದಿನ […]
Read More
14-04-2024, 3:02 PM
ವಿಟ್ಲ: ದೇವರಿಗೆ ಸರ್ವ ಸೇವೆಯೂ ಶ್ರೇಷ್ಠ , ಸರ್ವವನ್ನು ಸ್ವೀಕರಿಸುವವರು ದೇವರು. ಎಲ್ಲಕ್ಕಿಂತಲೂ ಮಿಗಿಲೂ ದೇವಾಲಯದ ಸೇವಾ ಕಾರ್ಯ ದೇವರಿಗೆ ಪ್ರೀಯವೂ ಹೌದು. ಜೀರ್ಣೋದ್ಧಾರದಲ್ಲಿ ಒಂದು ಅಳಿಲು ಸೇವೆ ಎನ್ನುವಂತೆ ಶ್ರಮದಾನದ ಮುಖೇನ ಸಾರ್ಥಕ ತೃಪ್ತಿ ಪಟ್ಟುಕೊಂಡದ್ದು ನಮ್ಮ ಸಂಸ್ಥೆ. ಯುವವಾಹಿನಿ(ರಿ.) ವಿಟ್ಲ ಘಟಕ ಇದರ ನೇತೃತ್ವದಲ್ಲಿ ಯೋಗೀಶ್ವರ ಮಠ ಜೋಗಿ ಬೆಟ್ಟು ವಿಟ್ಲ ಇದರ ಜೀರ್ಣೋದ್ಧಾರದ ಪ್ರಯುಕ್ತ ದಿನಾಂಕ 14-04-2024 ಆದಿತ್ಯವಾರದಂದು ವಿಟ್ಲ ಘಟಕದ ಸದಸ್ಯರಿಂದ ಶ್ರಮದಾನ ನಡೆಯಿತು. ಈ ಸಂದರ್ಭದಲ್ಲಿ ಯುವವಾಹಿನಿ ವಿಟ್ಲ ಘಟಕದ […]
Read More
14-04-2024, 7:21 AM
ಪುತ್ತೂರು: ಯುವವಾಹಿನಿ (ರಿ.) ಪುತ್ತೂರು ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ 14/04/2024ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಘಟಕದ ಅಧ್ಯಕ್ಷರಾದ ಜಯರಾಮ್ ಬಿ ಏನ್ ವಹಿಸಿದರು. ಉದ್ಘಾಟನೆಯನ್ನು ನಿವೃತ್ತ ಯೋಧರಾದ ವಸಂತ ಸಾರಕೆರೆರವರು ತೆಂಗಿನ ಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿದರು. ಸ್ವಚ್ಛತಾ ಕಾರ್ಯಕ್ರಮವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನಕ್ಕೆ ತೆರಳುವ ಮಾರ್ಗ ನೆರಿಮೊಗೆರು ರಸ್ತೆಯಿಂದ ಮುಕ್ವೆಯವರೆಗೆ ಸ್ವಚ್ಚತೆಯನ್ನು ಮಾಡಿ ಯಶಸ್ವಿಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು […]
Read More
14-04-2024, 3:18 AM
ಉಡುಪಿ: ಯುವವಾಹಿನಿ(ರಿ.) ಉಡುಪಿ ಘಟಕದ ಸಭಾಂಗಣದಲ್ಲಿ ದಿನಾಂಕ 14-04-2024ರ ಭಾನುವಾರ ಸಂಜೆ 3.30ಕ್ಕೆ ಯುಗಾದಿ ಹಬ್ಬದ ಆಚರಣೆ, ಬಿಸು ಕಣಿ ಬಗ್ಗೆ ಮಾಹಿತಿ, ಮಹಿಳೆಯರಿಗಾಗಿ ಕಾರ್ಯಕ್ರಮ, ತುಳಿಲಿಪಿ ಪರೀಕ್ಷೆ ಬರೆದವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಮಾಣ ಪತ್ರ, ಗುರುವಂದನೆ ಇತ್ಯಾದಿ ಕಾರ್ಯಕ್ರಮಗಳು ನಡೆದವು. ನಾರಾಯಣ ಗುರುವರ್ಯರ ಭಾವಚಿತ್ರದ ಮುಂದೆ ಬಿಸು ಕಣಿಯನಿಟ್ಟು ದೀಪ ಹಚ್ಚಿ ಕೈಮುಗಿದು ಕಾರ್ಯಕ್ರಮ ಆರಂಭವಾಯಿತು. ಬಂದ ಸದಸ್ಯರಿಗೆಲ್ಲ ವಿವಿಧ ಆಟಗಳನ್ನು ಆಡಿಸಲಾಯಿತು. ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟವರು ಘಟಕದ ಮಾಜಿ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್ […]
Read More
12-04-2024, 6:01 AM
ಮಂಗಳೂರು: ಪಣಂಬೂರು-ಕುಳಾಯಿ ಘಟಕದ ಸದಸ್ಯರೊಳಗೆ ಆರೋಗ್ಯಕರ ಬಾಂಧವ್ಯ ವೃದ್ಧಿಸಲು ಹಾಗೂ ಘಟಕದ ಸದಸ್ಯರ ಕುಟುಂಬದೊಂದಿಗೆ ಬೆರೆಯಲು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಮನೆ ಮನೆ ಭಜನೆ ಕಾರ್ಯಕ್ರಮವೂ ಒಂದು. ದಿನಾಂಕ 12-04-2024 ಶುಕ್ರವಾರ ಸಂಜೆ ಘಟಕದ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೀವ್ ಪೂಜಾರಿರವರು ದೇರೆಬೈಲ್ ನಲ್ಲಿ ನೂತನವಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶ ದಂದು ಭಜನಾ ಸಂಕೀರ್ತನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಜನಾ ತಂಡದೊಂದಿಗೆ, ಅಧ್ಯಕ್ಷರಾದ ಮನಿಷಾ ರೋಪೇಶ್, ಮಾಜಿ ಅಧ್ಯಕ್ಷರುಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಸದಾನಂದ ಪೂಜಾರಿಯವರು […]
Read More
10-04-2024, 11:29 AM
ಬೆಳ್ತಂಗಡಿ:ಶ್ರೀ ರಾಮ ಕ್ಷೇತ್ರ ನಿತ್ಯಾನಂದ ನಗರ ಕನ್ಯಾಡಿಯಲ್ಲಿ ದಿನಾಂಕ 10/04/2024 ರಂದು ನಡೆದ ಜಾತ್ರಾ ಮಹೋತ್ಸವ ಹಾಗೂ ಶ್ರೀ ರಾಮ ತಾರಕ ಭಜನೋತ್ಸವ ಕಾರ್ಯಕ್ರಮದಲ್ಲಿ ಸಂಜೆ 4.00 ರಿಂದ 7.00 ಗಂಟೆವರೆಗೆ ನಡೆದ ಭಜನೆಯಲ್ಲಿ ಯುವವಾಹಿನಿ(ರಿ.) ಬೆಳ್ತಂಗಡಿ ಘಟಕದ ಸದಸ್ಯರು ಭಾಗಿಯಾಗಿದ್ದರು. ಘಟಕದ ಅಧ್ಯಕ್ಷರು, ಕಾರ್ಯದರ್ಶಿ, ಮಾಜಿ ಅಧ್ಯಕ್ಷರು, ಸಲಹೆಗಾರರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲ ಸದಸ್ಯರಿಗೆ ಅರ್ಚಕರು ಪ್ರಸಾದ ನೀಡಿ ಗೌರವಿಸಿದರು.
Read More
07-04-2024, 3:43 PM
ಮೂಡಬಿದರೆ: ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಆಶ್ರಯದಲ್ಲಿ ಹಾಗೂ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮಿಜಾರು ಮೂಡಬಿದ್ರೆ ಸಹಯೋಗದಲ್ಲಿ ಯುವವಾಹಿನಿ ಸ್ವಚ್ಛ ಪರಿಕಲ್ಪನೆ – 2024 ಎರಡನೇ ಹಂತದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಆರಂಭವು 07/04/2024 ನೇ ಆದಿತ್ಯವಾರ ಲಕ್ಷ್ಮಿ ಛಾಯಾ ನಿವಾಸ, ಬೆಟ್ಕೇರಿ ಮೂಡಬಿದ್ರೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಲಕ್ಷ್ಮಿಛಾಯಾ ನಿವಾಸದ ಮುಂಭಾಗದಲ್ಲಿ ಸಾಂಕೇತಿಕವಾಗಿ ಶ್ರೀಧರ್ ಆಚಾರ್ಯ ಹಿರಿಯ ಸ್ವರ್ಣ ಉದ್ಯಮಿ ಮೂಡುಬಿದ್ರೆ ಇವರು ಗಿಡ ನೆಡುವ ಮೂಲಕ ಉದ್ಘಾಟನೆಗೈದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. […]
Read More