Yuvavahini

ಘಟಕಗಳು

ಬಡ ಕುಟುಂಬಕ್ಕೆ ಯುವವಾಹಿನಿ ಆಸರೆ

ಮುಲ್ಕಿ : ಇತ್ತೀಚೆಗೆ ಸುರಿದ ಗಾಳಿ ಮಳೆಯಿಂದಾಗಿ ಮುಲ್ಕಿ ಸಮೀಪದ ಕೊಳಚಿಕಂಬ್ಳದ ಕೇಶವ ಪೂಜಾರಿ ಹಾಗೂ ಮೀನಾಕ್ಷಿ ದಂಪತಿಗಳ ಬಡ ಕುಟುಂಬದ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಈ ಮನೆಯಲ್ಲಿ ವಾಸಿಸಲು‌ ಸಾಧ್ಯವಾಗದೆ ಕೇಶವ ಪೂಜಾರಿ ಯವರ ಬಡ ಕುಟುಂಬಕ್ಕೆ ದಿಕ್ಕೇ ತೋಚದಂತಾಯಿತು. ಈ‌ ಸಂದರ್ಭದಲ್ಲಿ ‌ಯುವವಾಹಿನಿ‌ ಮುಲ್ಕಿ ಘಟಕವು ಸುಮಾರು ‌ರೂಪಾಯಿ‌ 60,000/- ವೆಚ್ಚದಲ್ಲಿ ಈ ಮನೆಯನ್ನು ರಿಪೇರಿಗೊಳಿಸಿ‌ ವಾಸಿಸಲು ಯೋಗ್ಯವಾಗುವಂತೆ ಮಾಡಿ ದಿನಾಂಕ‌ ‌15.06.2018 ರಂದು‌ ಮನೆಯನ್ನು ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ […]

Read More

ಹಿರಿಯರ ಸತತ ಪ್ರಯತ್ನ, ದೂರದೃಷ್ಟಿ ಯುವವಾಹಿನಿಯ ಯಶಸ್ಸು : ಯಶವಂತ ಪೂಜಾರಿ

ಉಪ್ಪಿನಂಗಡಿ : ಸ್ವಸ್ಥ ಸಮಾಜದ ಕನಸನ್ನು ಕಂಡ ಯುವವಾಹಿನಿ ಯುವಕರು ಕಳೆದ 30 ವರ್ಷಗಳಿಂದ ಅವರದೇ ಆದ ವೈಯಕ್ತಿಕ ಬದುಕನ್ನು ಪಕ್ಕಕ್ಕಿಟ್ಟು ಸಾಮೂಹಿಕ ಬದುಕಿಗೆ ಪಣತೊಟ್ಡು ಹಬ್ಬದ ವಾತಾವರಣ ಒಂದು ಮನೆಗೆ ಸೀಮಿತವಾಗಿರದೆ ಇಡೀ ಸಮಾಜವೇ ಹಬ್ಬದ ವಾತಾವರಣದಿಂದ ಕೂಡಿರಬೇಕು ಎಂಬ ಯುವವಾಹಿನಿ ಯುವಕರ ಸತತ ಪರಿಶ್ರಮದ ಫಲವೇ ಯುವವಾಹಿನಿಯ ಯಶಸ್ಸು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 14.06.2018 ನೇ ಗುರುವಾರ ಇಂದಿರಾ ವೆಂಕಟೇಶ್ ಸಭಾಂಗಣ, ಹಿರಿಯ ಪ್ರಾಥಮಿಕ […]

Read More

ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಶಿಬಿರ

ಮೂಡಬಿದ್ರೆ : ಯುವವಾಹಿನಿ (ರಿ) ಮೂಡಬಿದ್ರೆ ಘಟಕದ ಆಶ್ರಯದಲ್ಲಿ ನೆಲ್ಲಿಕಾರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಹಯೋಗದೊಂದಿಗೆ ದಿನಾಂಕ 10.06.2018 ರಂದು ನೆಲ್ಲಿಕಾರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್‌ ಇದರ ಗೌರವ ವಿಶ್ವಸ್ಥರಾದ ಚಂದ್ರಶೇಖರ್ ಎಸ್.ಎಡಪದವು ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಾಗಾರ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಮೂಡಬಿದ್ರೆ ಘಟಕದ.ಅಧ್ಯಕ್ಷರಾದ ರಾಜೇಶ್ ಡಿ.ಕೋಟ್ಯಾನ್, ನೆಲ್ಲಿಕಾರು ಬಿಲ್ಲವ […]

Read More

ಶ್ರಮದಾನದ ಮೂಲಕ ಸೇವೆ

ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ಸದಸ್ಯರು ದಿನಾಂಕ 10/06/2018 ಪಂಜಿಮೊಗರು ಮಂಜೊಟ್ಟಿ ಅಂಗನವಾಡಿ ಕೇಂದ್ರದ ಎದುರಿನ ಪ್ರದೇಶದಲ್ಲಿ ಶ್ರಮದಾನ ಮಾಡಲಾಯಿತು. ಅಂಗನವಾಡಿ ಕೇಂದ್ರದ ಕಾಲುದಾರಿಯು ಅಸ್ತವ್ಯಸ್ತವಾಗಿದ್ದು ಶಾಲಾ ಮಕ್ಕಳಿಗೆ ಶಾಲೆಗೆ ಹಾಜರಾಗಲು ಅನಾನುಕೂಲವಾದ್ದರಿಂದ ಘಟಕದ ವತಿಯಿಂದ ಶ್ರಮದಾನ ಮಾಡಲಾಯಿತು. ಒಟ್ಟು 25 ಮಂದಿ ಸದಸ್ಯರು ಶ್ರಮದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಮತ್ತು ಈ ಕಾರ್ಯಕ್ರಮದ ಸಂಚಾಲಕಿ ಹಾಗೂ ಸಂಘಟನಾ ಕಾರ್ಯದರ್ಶಿಯಾದ […]

Read More

ಅಧ್ಯಕ್ಷರಾಗಿ ಶಿವಾನಂದ ಎಮ್. ಆಯ್ಕೆ

ಬಂಟ್ವಾಳ : ಯುವವಾಹಿನಿ (ರಿ) ಬಂಟ್ವಾಳ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ಶಿವಾನಂದ ಎಮ್. ಆಯ್ಕೆಯಾಗಿದ್ದಾರೆ, ಪದಾಧಿಕಾರಿಗಳು : ಅಧ್ಯಕ್ಷರು : ಶಿವಾನಂದ ಎಮ್ ಉಪಾಧ್ಯಕ್ಷರು : ನಾಗೇಶ್ ಎಮ್, ಸತೀಶ್ ಪೂಜಾರಿ ಬಾಯಿಲ ಕಾರ್ಯದರ್ಶಿ : ಕಿರಣ್ ರಾಜ್ ಪೂಂಜರೆಕೋಡಿ ಜತೆ ಕಾರ್ಯದರ್ಶಿ : ರಚನಾ ಕರ್ಕೇರ ಕೋಶಾಧಿಕಾರಿ : ಗಣೇಶ್ ಪೂಜಾರಿ ಮಣಿ ಸಂಘಟನಾ ಕಾರ್ಯದರ್ಶಿ : ಸುಂದರ ಪೂಜಾರಿ ಬೋಳಂಗಡಿ, ಪ್ರವೀಣ್ ಸುವರ್ಣ ತುಂಬೆ, ದೇವಪ್ಪ‌ ಕರ್ಕೇರ ರಾಯಿ, ಸ್ನೇಹಾ ಸುರೇಶ್, […]

Read More

ಯುವವಾಹಿನಿಯ 31ನೇ ಘಟಕ ಉದ್ಘಾಟನೆ

ಕಡಬ: ಯುವ ಜನತೆ ಸ್ವಾಭಿಮಾನಿ ಸ್ವಾವಲಂಭಿ ಬದುಕಿನತ್ತ ಹೆಜ್ಜೆ ಇಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಸಮಾಜದ ಮುಖ್ಯ ವಾಹಿನಿಗೆ ಬಂದು ಸದೃಡ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾಗಿರಬೇಕು ಎಂದು ಯುವವಾಹಿನಿ(ರಿ} ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಯಶವಂತ ಪೂಜಾರಿಯವರು ಹೇಳಿದರು. ಅವರು ದಿನಾಂಕ 10.06.2018 ರಂದು ಕಡಬ ದುರ್ಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆದ ಯುವವಾಹಿನಿ ಸಂಸ್ಥೆಯ 31ನೇ ಘಟಕ ಯುವವಾಹಿನಿ{ರಿ) ಕಡಬ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವವಾಹಿನಿ ಘಟಕ ಸ್ಥಾಪಿಸುವ ಮೂಲಕ ಬಿಲ್ಲವ ಸಮುದಾಯದ […]

Read More

ಯುವವಾಹಿನಿ(ರಿ) ಕುಪ್ಪೆಪದವು ಘಟಕದ ದೇಗುಲ ದರ್ಶನ

ದಿನಾಂಕ 10 .06.2018 ರಂದು ಘಟಕದ ವತಿಯಿಂದ ದೇಗುಲ ದರ್ಶನಕ್ಕಾಗಿ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಕುಪ್ಪೆಪದವಿನಿಂದ ಹೊರಟೆವು ಪ್ರಥಮವಾಗಿ ನಮ್ಮ ಪ್ರಯಾಣ ಆನೆಗುಡ್ಡೆಯತ್ತ ಸಾಗಿ.ದೇವರ ದರ್ಶನ ಪಡೆದು.ಅಲ್ಲಿಂದ ಪ್ರಯಾಣ ಕಮಲಶಿಲೆಯತ್ತ ಸಾಗಿ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮ್ಮನವರ ಮಹಾಪೂಜೆ ದರ್ಶನ ಪಡೆದು .ಮಹಾಪ್ರಸಾದವಾದ ಅನ್ನಪ್ರಸಾದವನ್ನು ಸ್ವೀಕರಿಸಿದ ನಂತರ.ಪ್ರಯಾಣವು ಮಂದಾರ್ತಿ ಕ್ಷೇತ್ರಕ್ಕೆ ಸಾಗಿ .ಅಲ್ಲಿ ದೇವರ ದರ್ಶನ ಪಡೆದನಂತರ, ಪಯಣವು ಮಲ್ಪೆ ಕಡಲತೀರಕ್ಕೆ ಬಂದು ಅಲ್ಲಿಯ ಕಡಲತೆರೆಯ ಅಬ್ಬರದ ಸೊಬಗನ್ನು ನೋಡಿ.ಕುಪ್ಪಳಿಸಿದ ನಂತರ. ಪಾಯಣವು ಸ್ವಗ್ರಹದತ್ತ ಸಾಗಿ ಕೊನೆಗೊಂಡಿತು..ಈ […]

Read More

ಮುಂಡಾರು ಹಿಂದೂ ರುದ್ರ ಭೂಮಿಯಲ್ಲಿ ವಿಶ್ವ ಪರಿಸರ ದಿನ‌ ಆಚರಣೆ.

ಬಜ್ಪೆ : ತಾ. 10.06.18 ಭಾನುವಾರ ಯುವವಾಹಿನಿ(ರಿ) ಬಜ್ಪೆ ಘಟಕದ ಸದಸ್ಯರಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಜ್ಪೆ ಸಮೀಪದ ಮುಂಡಾರು ಇಲ್ಲಿರುವ ಹಿಂದೂ ರುದ್ರ ಭೂಮಿಯ ಪರಿಸರ ಸ್ವಚ್ಛಗೊಳಿಸಿ, ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಶ್ರೀಯುತ ರಾಘವೇಂದ್ರ ಆಚಾರ್, ಮಾಲಕರು, ಶಾಂತಿ ಭವನ ಬಜ್ಪೆ ಮತ್ತು ಡಾ|| ಜಯರಾಮ್ ಶೆಟ್ಟಿ, ಖ್ಯಾತ ಮಕ್ಕಳ ತಜ್ಞರು, ಬಜ್ಪೆ ಇವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 20 ವಿವಿಧ ಜಾತಿಯ ಸುಮಾರು 100 ಗಿಡಗಳನ್ನು […]

Read More

ಯುವವಾಹಿನಿ ಎಂಬುದು ದೇಗುಲ : ಜಯಾನಂದ

ಉಡುಪಿ : ಸಾಮೂಹಿಕ ಪ್ರಯತ್ನದಿಂದ ಮಾತ್ರ ಮಾದರಿ ಸಂಘಟನೆ ನಿರ್ಮಾಣ ಸಾಧ್ಯ, ಹಾಗೂ ಯುವವಾಹಿನಿ ಎಂಬ ದೇವಾಲಯದಲ್ಲಿ ಅಧ್ಯಕ್ಷರು ಅರ್ಚಕರಾಗಿ ಸದಸ್ಯರು ಭಕ್ತಾದಿಗಳೆಂಬ ಪರಿಕಲ್ಪನೆಯಲ್ಲಿ ಯುವವಾಹಿನಿ ಸಾಗುತ್ತಿರುವುದು ಶ್ಲಾಘನೀಯ ಎಂದು ಮೆಸ್ಕಾಮ್ ಕಾರ್ಯಪಾಲಕ‌ ಇಂಜಿನಿಯರ್ ಜಯಾನಂದ ಎಮ್ ತಿಳಿಸಿದರು ಅವರು ದಿನಾಂಕ 10.06.2018 ರಂದು ಉದ್ಯಾವರ ಬಲಾಯಿಪಾದೆ ಯುವವಾಹಿನಿ ಸಭಾಭವನದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ 2018-19 ನೇ ಸಾಲಿನ‌ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಗಣೇಶ್ ಕುಮಾರ್ […]

Read More

ಯುವವಾಹಿನಿಯಿಂದ ಯುವಜನತೆಗೆ ಜಾಗೃತಿ : ರಮೇಶ್ ಅಂಚನ್

ಪಡುಬಿದ್ರಿ : ಸಮಾಜದಲ್ಲಿ ಯುವಜನಾಂಗವು ದಾರಿ ತಪ್ಪುತ್ತಿರುವ ಸಂದರ್ಭದಲ್ಲಿ ಸಂಘಟನೆಗಳ ಮೂಲಕ ಜಾಗೃತಿ ಮೂಡಿಸುವುದು ಅನಿವಾರ್ಯ. ಹಲವಾರು ಸಮಸ್ಯೆಗಳ ನಿವಾರಣೆಗೆ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಬಿಲ್ಲವರ ಯೂನಿಯನ್, ಕುದ್ರೊಟ್ಟು, ಬ್ರಹ್ಮ ಬೈದರ್ಕಳ ಗರಡಿ ಎರ್ಮಾಳ್ ಬಡಾದ ಕಾರ್ಯದರ್ಶಿ ರಮೇಶ್ ಅಂಚನ್ ತಿಳಿಸಿದರು.   ಅವರು ಪಡುಬಿದ್ರಿ ಬಿಲ್ಲವ ಸಂಘದ ಸಭಾ ಭವನದಲ್ಲಿ ಜರಗಿದ ಯುವವಾಹಿನಿ ಪಡುಬಿದ್ರಿ ಘಟಕದ 2018 ನೇ ಸಾಲಿನ ಪದಗ್ರಹಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!