ಘಟಕಗಳು

ಅಂಚೆ ಇಲಾಖೆ – ಮಾಹಿತಿ ಕಾರ್ಯಕ್ರಮ

ಮಂಗಳೂರು: ಯುವವಾಹಿನಿ(ರಿ.) ಕೂಳೂರು ಘಟಕದ ವತಿಯಿಂದ ದಿನಾಂಕ 03-07-2024 ರಂದು ನಡೆದ ಅಂಚೆ ಇಲಾಖೆಯ ಸೇವೆ ಹಾಗೂ ವಿಮಾ ಸೌಲಭ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮವು ನಡೆಯಿತು. ಯತೀನ್ ಕುಮಾರ್ ಡೆವಲಪ್ಮೆಂಟ್ ಆಫೀಸರ್ ಅಂಚೆ ಇಲಾಖೆ ಮಂಗಳೂರು ಇವರು ಮಾಹಿತಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಅಂಚೆ ಇಲಾಖೆಯ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಅಂಚೆ ಇಲಾಖೆ ಈಗ ಹಿಂದಿನಂತಿಲ್ಲ. ಆಧುನಿಕ ಜಗತ್ತಿಗೆ ಸರಿಯಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಪೈಪೋಟಿ ನೀಡುತ್ತಿದೆ. ಇವುಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ, ಪೋಸ್ಟ್ ಆಫೀಸ್ ಠೇವಣಿ […]

Read More

ಮಾಹಿತಿ ಕಾರ್ಯಾಗಾರ

ಉಡುಪಿ: ಯುವವಾಹಿನಿ(ರಿ.) ಉಡುಪಿ ಘಟಕದ ಸಭಾಂಗಣದಲ್ಲಿ 01-07-2024 ರಿಂದ 02-07-2024 ರವರೆಗೆ ನಡೆದ ಎರಡು ದಿನದ ಆರ್ಟಿಸನ್ ಕಾರ್ಡ್ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ಈ ಶುಭ ಸಂದರ್ಭದಲ್ಲಿ ಉಡುಪಿ ಘಟಕದ ನಿಕಟ ಪೂರ್ವ ಅಧ್ಯಕ್ಷರು ಮಹಾಬಲ ಅಮೀನ್ ದೀಪ ಬೆಳಗಿಸಿ ಚಾಲನೆ ನೀಡಿದರು. ಮಾಹಿತಿ ಕಾರ್ಯಾಗಾರದಲ್ಲಿ ಒಟ್ಟು 33 ಮಂದಿ ಮಹಿಳೆಯರು ಭಾಗವಹಿಸಿ, ಉಚಿತ ತರಬೇತಿ ಪಡೆದು, ಸಂಪನ್ಮೂಲ ವ್ಯಕ್ತಿಗಳ ಮೂಲಕ ಆರ್ಟಿಸನ್ ಕಾರ್ಡಿಗೆ ಅರ್ಜಿ ಸಲ್ಲಿಸಿದರು. 01-07-2024 ರಂದು ಆಕಾಂಕ್ಷಿಗಳಿಗೆ ಕಾರ್ಡು ಕುರಿತು ಹರಿಣ ಜೆ ರಾವ್ […]

Read More

ಗುರುತತ್ವವಾಹಿನಿ ಯಶಸ್ಸಿನ ಮೆಟ್ಟಿಲಾಗಲಿ: ಹರೀಶ್ ಕೆ. ಪೂಜಾರಿ

ಮಂಗಳೂರು: ಗುರುತತ್ವವಾಹಿನಿ ಎಂಬ ಪರಿಕಲ್ಪನೆಯ ಮೂಲಕ ಮನೆ ಮನೆ ಭಜನೆ ಹಾಗೂ ಗುರುಸಂದೇಶದ ಗುರುತತ್ವವಾಹಿನಿ ಕಾರ್ಯಕ್ರಮವು ಬಂಟ್ವಾಳ ಘಟಕದ ನೂತನ ತಂಡದ ಯಶಸ್ಸಿನ‌ ಮೆಟ್ಟಿಲಾಗಲಿ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ತಿಳಿಸಿದರು. ಅವರು ದಿನಾಂಕ 01-07-2024ನೇ ಸೋಮವಾರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರ ಮನೆ ಭಜನೆಯ ಪರಿಕಲ್ಪನೆಯ ಗುರುತತ್ವವಾಹಿನಿ ಎಂಬ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುಪೀಠದ ಸಮ್ಮುಖದಲ್ಲಿ ಯುವವಾಹಿನಿ ಸದಸ್ಯರಿಂದ […]

Read More

ಕೆಸರ್ದ ಕಂಡೊಡು ಗೊಬ್ಬು

ಕೊಲ್ಯ: ಅಂದು ರವಿವಾರ, ಮೂಡಣದ ಆಗಸದ ತುಂಬಾ ಕರಿಮುಗಿಲು ಮುಸುಕಿತ್ತು. ಬಾನ ಭಾಸ್ಕರ ಮೋಡಗಳ ಮರೆಯಲ್ಲಿ ಎಲ್ಲೋ ಮರೆಯಾಗಿದ್ದ. ಧೋ….ಎಂದು ಸುರಿಯುತ್ತ ವರುಣ ದೇವ ವಸುಂಧರೆಯ ಮಡಿಲಿನಲ್ಲಿ ಜೋರಾಗಿ ಆರ್ಭಟಿಸುತ್ತಿದ್ದ. ಕೆಸರುಗದ್ದೆಯಲ್ಲಿ ಆಡಲು ಅಣಿಯಾಗಿದ್ದ ಯುವವಾಹಿನಿ ಸದಸ್ಯರು ಹಾಗೂ ಸದಸ್ಯರ ಮಕ್ಕಳಲ್ಲಿ ವರ್ಷಧಾರೆ ನಿಲ್ಲಬಹುದೆ ಎನ್ನುವ ಒಂದು ರೀತಿಯ ಆತಂಕ ಮನೆಮಾಡಿತ್ತು. ಕೊನೆಗೂ ಹತ್ತು ಗಂಟೆಯ ನಂತರ ವರುಣದೇವ ಶಾಂತನಾಗಿ ನಮ್ಮೆಲ್ಲರಲ್ಲೂ ಭರವಸೆಯ ಆಶಾಕಿರಣ ಮೂಡಿಸಿದ. ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ದಿನಾಂಕ 30/06/2024 ಭಾನುವಾರದಂದು […]

Read More

ಮನೆ‌ಮನೆ‌ ಭಜನೆ

ಕಡಬ: ಕಡಬ ಘಟಕ ಇದರ ಭಜನಾ ತಂಡದ ವತಿಯಿಂದ ದಿನಾಂಕ 29-06-2024 ನೇ ಶನಿವಾರ ಸಂಜೆ 6.30 ರಿಂದ ಮನೆ‌ಮನೆ‌ ಭಜನೆ ಎಂಬ ಕಾರ್ಯಕ್ರಮವನ್ನು ಬೇರಿಕೆ-ಬಲ್ಯ ಸಮಾಜ ಬಾಂಧವರ 6 ಮನೆಗಳಲ್ಲಿ ಆರಂಭಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 6 ಜನ ಭಜಕರು ಭಾಗಿಯಾಗಿ, ಬಿಲ್ಲವ ಗ್ರಾಮ ಸಮಿತಿ ಬಲ್ಯ ಇದರ ಅಧ್ಯಕ್ಷರಾದ ಹರೀಶ್ ಡಿ. ಎಚ್ ಹಾಗೂ ಬೇರಿಕೆ-ಬಲ್ಯದ ಸಮಾಜ ಬಾಂಧವರ ಸಂಪೂರ್ಣ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿದೆ, ಇವರಿಗೆ ಯುವವಾಹಿನಿ ಭಜನಾ ತಂಡದ ವತಿಯಿಂದ ತುಂಬು ಹೃದಯದ ಧನ್ಯವಾದಗಳು, […]

Read More

ಕೃಷಿ ಮಾಹಿತಿ ಕಾರ್ಯಾಗಾರ

ಉಡುಪಿ: ಯುವವಾಹಿನಿ(ರಿ.) ಉಡುಪಿ ಘಟಕದ ಸಭಾಂಗಣದಲ್ಲಿ ದಿನಾಂಕ 29-06-2024 ರಂದು ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಮಾಜಿ ಮಹಿಳಾ ಸಂಚಾಲಕಿ, ಸಮಾಜ ಸೇವಕಿ ಹಾಗೂ ಮಂಗಳೂರು ಮಹಿಳಾ ಘಟಕದ ಮಾಜಿ ಅಧ್ಯಕ್ಷೆಯಾದ ವಿದ್ಯಾ ರಾಕೇಶ್ ಹಾಗೂ ತಂಡದವರಾದ ಡಾ. ರಾಕೇಶ್ ಕುಮಾರ್, ಹರೀಶ್ ಅಡ್ಕ ಹಾಗೂ ಶ್ರೀ ಶ್ರೀಧರ್ ಕುಂಬಳೆ ಇವರು ತಾರಸಿ ತೋಟ ಹಾಗೂ ಅಣಬೆ ಕೃಷಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ದೀಪ ಪ್ರಜ್ವಲನೆ ಹಾಗೂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಯಾವುದೇ ಔಪಚಾರಿಕ ಸಭಾ […]

Read More

ವನಮಹೋತ್ಸವ

ಕುಪ್ಪೆಪದವು: ಯುವವಾಹಿನಿ(ರಿ.) ಕುಪ್ಪೆಪದವು ಮತ್ತು ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆ ಕುಪ್ಪೆಪದವು ಜಂಟಿ ಆಶ್ರಯದಲ್ಲಿ ದಿನಾಂಕ 24-06-2024 ಸೋಮವಾರದಂದು ಅರಮನೆ ಸರಕಾರಿ ಪ್ರೌಢಶಾಲಾ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕುಪ್ಪೆಪದವು ಘಟಕದ ಅಧ್ಯಕ್ಷರು ಅಕ್ಷಿತ್ ಕುಮಾರ್ ಮತ್ತು ಶಾಲಾ ನಾಯಕಿ ಸಾನ್ವಿ ಶಾಲಾ ಪರಿಸರದಲ್ಲಿ ಹಣ್ಣಿನ ಗಿಡವನ್ನು ನೆಡುವುದರ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕರು ಮಾರ್ಕ್ ಮೆಂಡೊನ್ಸಾ, ಕಾರ್ಯಕ್ರಮದ ಉದ್ದೇಶ ಮತ್ತು ಅವಶ್ಯಕತೆಯನ್ನು ತಿಳಿ ಹೇಳಿದರು. ನಮ್ಮ ಮತ್ತು ಪರಿಸರ ಸಂಬಂಧ ಗಟ್ಟಿಗೊಳಿಸಿದಾಗ ಪ್ರಕೃತಿಯ […]

Read More

ಪರಿಶ್ರಮ ಹಾಗೂ ಶಿಸ್ತುಬದ್ಧ ಜೀವನದಿಂದ ಸಾಧನೆ ಸಾಧ್ಯ: ತಾರಾನಾಥ ಪೂಜಾರಿ

ಮೂಡಬಿದ್ರೆ: ಗುರುಗಳ ಹಿಂಬಾಲಕರಾಗಿ ಬದುಕಿದರೆ ಸಾಲದು, ಅದರೊಂದಿಗೆ ಗುರುಗಳ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುವುದನ್ನು ಅರಿವುದು ಮುಖ್ಯ ಎಂದು ರಾಜ್ಯ ಹೈಕೋರ್ಟಿನ ನಿರ್ದೇಶಿತ ಹಿರಿಯ ನ್ಯಾಯವಾದಿ ಇರುವೈಲು ತಾರನಾಥ ಪೂಜಾರಿ ರವರು ಹೇಳಿದ್ದಾರೆ. ಅರಿವು – 2024, ಸನ್ಮಾನ, ಯುವಸಿರಿ ಪ್ರಶಸ್ತಿ ಪುರಸ್ಕಾರ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ಅನಿಸಿಕೆಯನ್ನು ನೀಡಿದರು. ವಿದ್ಯೆಯ ಮೇಲೆ ಹಿಡಿದ ಸಾಧಿಸಲು ಎಷ್ಟು ಬುದ್ಧಿವಂತರಾದರೂ ಪ್ರಯೋಜನವಿಲ್ಲ. ಅದಕ್ಕಿಂತ ಮುಖ್ಯವಾಗಿ ಪರಿಶ್ರಮ, ಶಿಸ್ತು , ಪ್ರಯತ್ನ ಅಗತ್ಯ […]

Read More

ಯುವವಾಹಿನಿ ಯುವಕರ ಸಾಧನೆಗಳ ಹಿಂದಿನ ಶಕ್ತಿಯಾಗಿದೆ : ಮಹೇಶ್ ಕರ್ಕೇರ

ಬಂಟ್ವಾಳ: ಯುವವಾಹಿನಿ ಯುವಕರ ಸಾಧನೆಗಳ ಹಿಂದಿನ ಶಕ್ತಿಯಾಗಿದೆ, ಎಂದು ಸಿದ್ದಕಟ್ಟೆ ಸರಕಾರಿ ಪ್ರೌಢಶಾಲಾ ಶಿಕ್ಷಕ ಮಹೇಶ್ ಕರ್ಕೇರ ಹೇಳಿದರು. ಅವರು ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಗಾಣದಪಡ್ಪು ಬಿ.ಸಿ ರೋಡ್ ಇಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಬಂಟ್ವಾಳ ತಾಲೂಕು ಘಟಕದ 2024-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಮ್ಮಲ್ಲಿ ಗುರು ಪರಂಪರೆಯ ಮೂಲಕ ಸಂಸ್ಕಾರ, ಸಂಸ್ಕೃತಿಯು ಅನುಷ್ಠಾನಗೊಳ್ಳುವ ಅಗತ್ಯವಿದೆ, ಶಿಕ್ಷಣದ ಮಹತ್ವದ ಕಡೆ ಸಂಘಟನೆಗಳ ಗಮನ […]

Read More

ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ

ಕೂಳೂರು: ಯುವವಾಹಿನಿ(ರಿ.) ಕೂಳೂರು ಘಟಕದ ವತಿಯಿಂದ ದಿನಾಂಕ 21-06-2024 ಶುಕ್ರವಾರದಂದು ಸಂಜೆ 6.00 ಗಂಟೆಗೆ ಸರಿಯಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆರೋಗ್ಯ ನಿರ್ದೇಶಕರಾದ ಶ್ರೀಮತಿ ಮಮತಾ ಇವರ ಸಂಚಾಲಕತ್ವದಲ್ಲಿ ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎನ್ನುವ ಕಾರ್ಯಕ್ರಮವನ್ನು ನಡೆಸಲಾಯಿತು. ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕರಾಗಿ ವಿಶು ಕುಮಾರ್ ಆಗಮಿಸಿದ್ದರು. ವೇದಿಕೆಯಲ್ಲಿ ಸಹ ಶಿಕ್ಷಕರಾಗಿ ಶ್ರೀಮತಿ ರೇಖಾ ಹಾಗೂ ಘಟಕದ ಸದಸ್ಯರಾದ ಜಗದೀಶ್ ಮತ್ತು […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!