02-06-2024, 2:55 PM
ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ, ಸ್ವಾಮಿ ವಿವೇಕಾನಂದರ ಚಿಂತನಾಧಾರೆ ಮತ್ತು ಅಂಬೇಡ್ಕರ್ ಅವರ ಪ್ರಾಯೋಗಿಕ ಬದುಕಿನಿಂದ ಯುವವಾಹಿನಿ ಸಂಘಟನೆಯು ಪ್ರೇರಣೆ ಪಡೆದು, ಮುನ್ನಡೆದರೆ ಸಮಾಜದಲ್ಲಿ ಇನ್ನಷ್ಟು ಸುಧಾರಣೆ ಕಾಣಲು ಸಾಧ್ಯ ಎಂದು ಮಂಗಳೂರು ಕುದ್ರೋಳಿ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಹೇಳಿದರು. ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯ ನಾಗಪುರ ವಾರ್ಡ್ ಡಾ.ರಾಜ್‌ಕುಮಾರ್ ಸಭಾಭವನದಲ್ಲಿ ಜೂ.2 ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಬೆಂಗಳೂರು ಘಟಕದ 2024-25ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ […]
Read More
02-06-2024, 2:32 PM
ಕಂಕನಾಡಿ: ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ರೆಸಾರ್ಟ್ ನಲ್ಲಿ ಒಂದು ದಿನದ ಕಿರುಪ್ರವಾಸ ಕಾರ್ಯಕ್ರಮವನ್ನು ದಿನಾಂಕ 02-06-2024ರ ಆದಿತ್ಯವಾರ ಹಮ್ಮಿಕೊಳ್ಳಲಾಗಿತ್ತು. ಪ್ರವಾಸ ಸಂಚಾಲಕರಾದ ಹರಿಣಿ ಹಾಗೂ ಬೇಬಿ ಗೋಪಾಲ್ ಇವರ ಮಾರ್ಗದರ್ಶನದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಯುತ ಲೋಕೇಶ್ ಅಮೀನ್, ಕಾರ್ಯದರ್ಶಿ ಮಮತಾ ತೇಜ್ ಪಾಲ್ ಇವರುಗಳ ಮುಂದಾಳತ್ವದಲ್ಲಿ ಸದಸ್ಯರು ತಮ್ಮ ಕುಟುಂಬದ ಜೊತೆಗೂಡಿ ಒಟ್ಟು 51 ಮಂದಿ ಪ್ರವಾಸಿಗರು ಬಸ್ಸಿನಲ್ಲಿ ಪ್ರಯಾಣ ಹೊರಟು ರೆಸಾರ್ಟ್ ತಲುಪಿ ಅಲ್ಲಿ ಉಪಾಹಾರವನ್ನು ಸೇವಿಸಿ ನಂತರ ಬೋಟಿನಲ್ಲಿ ಪ್ರಯಾಣಿಸಿ ಸುತ್ತಲೂ ನೀರಿನಿಂದ […]
Read More
02-06-2024, 2:18 PM
ಪಡುಬಿದ್ರಿ: ಯುವವಾಹಿನಿ ಯುವ ಮನಸ್ಸುಗಳ ಶಕ್ತಿಯಾಗಿದ್ದು ಇಲ್ಲಿ ಅಧಿಕಾರ, ಅವಧಿಗಳು ಮುಖ್ಯವಲ್ಲ. ನಮ್ಮವರು ಎಂಬ ಭಾವನೆಯ ಜೊತೆಗೆ ನಮ್ಮ ಸಂಸ್ಥೆ ಎನ್ನುವ ಅಭಿಮಾನವಿದೆ. ಸಮಾಜಕ್ಕಾಗಿ ದುಡಿಯುವ ಸಂಕಲ್ಪಿತ ಆಶಯವಿದೆ. ಕುಟುಂಬ ಕಲರವದಂತಹ ಕಾರ್ಯಕ್ರಮಗಳು ಪ್ರತಿ ಘಟಕಗಳಲ್ಲೂ ನಡೆಯಬೇಕಿದೆ ಎಂದು ಲಯನ್ಸ್ ಜಿಲ್ಲೆ 317ಡಿ, ಲಿಯೋ ಮಾಜಿ ಜಿಲ್ಲಾಧ್ಯಕ್ಷರಾದ ಕವನ್ ರಾಜ್ ಕುಬೆವೂರು ಹೇಳಿದರು. ಅವರು ಪಡುಬಿದ್ರಿ ಸುಜ್ಞಾನ್ ಕಾಲೋನಿಯ ಸಭಾಗೃಹದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ 02-06-2024 ರವಿವಾರದಂದು ಘಟಕದ ಸದಸ್ಯರಿಗಾಗಿ ಜರಗಿದ ಕುಟುಂಬ […]
Read More
01-06-2024, 2:25 PM
ಮಂಗಳೂರು: 01-06-2024 ರಂದು ಘಟಕದ ಸಭಾಂಗಣದಲ್ಲಿ ನಡೆದ ಟೆರೇಸಿ ಗಾರ್ಡನಿಂಗ್ ಉಚಿತ ಮಾಹಿತಿ ಕಾರ್ಯಾಗಾರವನ್ನು ಮಂಗಳೂರು ಮಹಿಳಾ ಘಟಕದ ಸದಸ್ಯೆಯವರಾದ ಶ್ರೀಮತಿ ವಿದ್ಯಾ ರಾಕೇಶ್ ಮತ್ತು ಅವರ ತಂಡ ಬಹಳ ಮಹತ್ವಪೂರ್ಣವಾಗಿ ನಡೆಸಿಕೊಟ್ಟರು. ಸಸಿ ನೆಡುವ ಹಾಗೂ ಕಸಿ ಕಟ್ಟುವ ವಿಧಾನದ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿ ಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಬಾಗವಹಿಸಿದ ಅರವತ್ತಕ್ಕೂ ಹೆಚ್ಚು ಮಂದಿಗೆ ಔಷದೀಯ ಗಿಡ, ಪಲಪುಷ್ಪದ ಗಿಡಗಳನ್ನು ಉಚಿತವಾಗಿ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ, ಕೇಂದ್ರ […]
Read More
30-05-2024, 2:54 PM
ಪುತ್ತೂರು: ಕರ್ನಾಟಕ ರಾಜ್ಯ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪುತ್ತೂರು ಘಟಕದ ವತಿಯಿಂದ 2023-24 ನೇ ಸಾಲಿನಲ್ಲಿ 625ಕ್ಕೆ 600ಕ್ಕಿಂತ ಅಧಿಕ ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪುತ್ತೂರು ತಾಲೂಕಿನ ಬಿಲ್ಲವ ಗ್ರಾಮ ಸಮಿತಿಗಳ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವು ದಿನಾಂಕ 30-05-2024 ರಂದು ಆಯಾಯ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅಭಿನಂದನೆ ಸಲ್ಲುಸುವ ಮೂಲಕ ವಿಶಿಷ್ಟವಾಗಿ ನಡೆಯಿತು. ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಶಾಂತಿಗೋಡಿನ ಪರಕಮೆ ನಿವಾಸಿಗಳಾದ ಶ್ರೀ ಸತೀಶ್ ಪೂಜಾರಿ ಪರಕಮೆ ಹಾಗೂ ಶ್ರೀಮತಿ […]
Read More
26-05-2024, 3:47 PM
ಮಂಗಳೂರು: 26-05-2024 ಮುಂಜಾನೆ ಪ್ರಾರ್ಥನೆಯೊಂದಿಗೆ ನಾರಾಯಣ ಗುರು ಸ್ವಾಮಿಗಳಿಗೆ ನಮಿಸಿ, ಯುವವಾಹಿನಿ(ರಿ.) ಶಕ್ತಿನಗರ ಘಟಕದ ವತಿಯಿಂದ ಒಂದು ದಿನದ ಕಿರು ಪ್ರವಾಸವನ್ನು ಹಮ್ಮಿಕೊಂಡೆದ್ದರು. ಘಟಕದ ಅಧ್ಯಕ್ಷ ಗಣೇಶ್ ಕೆ ಮಹಾಕಾಳಿ, ಉಪಾಧ್ಯಕ್ಷರುಗಳಾದ ತುಕರಾಮ್, ಸುಜಾತಾ ನವೀನ್, ಕಾರ್ಯದರ್ಶಿ ಅಕ್ಷತಾ ಚರಣ್ ಹಾಗೂ ಮಾಜಿ ಅಧ್ಯಕ್ಷರಾದ ಭಾರತಿ ಗಣೇಶ್ ರವರು ಮುಂದಾಳತ್ವ ವಹಿಸಿಕೊಂಡರು. 30 ಜನರೊಂದಿಗೆ ಕ್ಷೇತ್ರ ದರ್ಶನವನ್ನು ಮಾಡಿದೆವು ಮೊದಲಿಗೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಟು, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಉಪಹಾರವನ್ನು ಮುಗಿಸಿ ನಂತರ ಕಡಿಯಾಳಿ ದುರ್ಗಾಪರಮೇಶ್ವರಿ […]
Read More
26-05-2024, 2:56 PM
ಪಡುಬಿದ್ರಿ: ಯುವವಾಹಿನಿ(ರಿ.) ಪಡುಬಿದ್ರಿ ಘಟಕದ ವತಿಯಿಂದ, ಕೆಮುಂಡೇಲು ಪಾಂಡುರಂಗ ಭಜನಾ ಮಂದಿರದಲ್ಲಿ ನಡೆಯುತ್ತಿದ್ದ ಹನ್ನೆರಡು ದಿನಗಳವರೆಗಿನ ಅಹೋರಾತ್ರಿ ಭಜನಾ ನಾಮ ಸಂಕೀರ್ತನೆಯಲ್ಲಿ ಒಂದು ದಿನದ ಶ್ರಮದಾನ ಸೇವೆಯನ್ನು ದಿನಾಂಕ 26-05-2024 ಆದಿತ್ಯವಾರದಂದು ನೆರವೇರಿಸಲಾಯಿತು. ಘಟಕದ ಸದಸ್ಯರು ಬೆಳಗ್ಗಿನಿಂದ ಸಂಜೆಯವರೆಗೆ ಭಕ್ತಾದಿಗಳಿಗೆ ಊಟೋಪಚಾರ ವಿತರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು ಹಾಗೂ ಘಟಕದ ವತಿಯಿಂದ ರೂ. 5000/- ಧನ ಸಹಾಯವನ್ನು ನೀಡಲಾಯಿತು. ಕ್ಷೇತ್ರದ ಅರ್ಚಕರು ಹಾಗೂ ಪದಾಧಿಕಾರಿಗಳು ಘಟಕದ ಸೇವೆಯನ್ನು ಮೆಚ್ಚಿ ದೇವರಲ್ಲಿ ಪ್ರಾರ್ಥಿಸಿ ಪ್ರಸಾದವನ್ನು ವಿತರಿಸಿದರು. ಈ ಸಂದರ್ಭದಲ್ಲಿ […]
Read More
26-05-2024, 2:47 PM
ಉಪ್ಪಿನಂಗಡಿ: ಯುವವಾಹಿನಿ(ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ರೆಸಾರ್ಟ್ ಗೆ ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು 26-05-2024ರ ಆದಿತ್ಯವಾರ ಹಮ್ಮಿಕೊಳ್ಳಲಾಗಿತ್ತು. ಪ್ರವಾಸ ಸಂಚಾಲಕರು ಗುಣಕರ ಅಗ್ನಾಡಿಯವರ ಮಾರ್ಗದರ್ಶನದಲ್ಲಿ ಘಟಕದ ಅಧ್ಯಕ್ಷರಾದ ಸೋಮಸುಂದರ್, ಪ್ರವಾಸ ನಿರ್ದೇಶಕರಾದ ನಾಣ್ಯಪ್ಪ ಪೂಜಾರಿ ಮತ್ತು ಕಾರ್ಯದರ್ಶಿ ಅನಿತಾ ಸತೀಶ್ ಇವರುಗಳು ಮುಂದಾಳತ್ವ ವಹಿಸಿಕೊಂಡಿದ್ದರು. ಸದಸ್ಯರುಗಳು ತಮ್ಮ ಕುಟುಂಬದ ಜೊತೆಗೂಡಿ ಒಟ್ಟು 66 ಮಂದಿ ಪ್ರವಾಸಿಗರು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಶುಭ ಲಕ್ಷ್ಮೀ ಹಾಲಿಡೇಸ್ ಲಕ್ಸುರಿ ಬಸ್ಸಿನಲ್ಲಿ ಹೊರಟು, ರೆಸಾರ್ಟ್ […]
Read More
25-05-2024, 3:55 PM
ಮಂಗಳೂರು: ಕೆಂಜಾರು – ಕರಂಬಾರು ಘಟಕದ ವತಿಯಿಂದ 2 ದಿವಸದ ಮಂತ್ರಾಲಯ ಕ್ಷೇತ್ರ ದರ್ಶನ ರಾಯರ ಕೃಪೆಯಿಂದ ಯಶಸ್ವಿಯಾಗಿ ನೆರವೇರಿತು. ದಿನಾಂಕ 25-05-2024 ಶನಿವಾರ 3 ಗಂಟೆಗೆ ಬಸ್ ನಲ್ಲಿ ಹೊರಟ ತಂಡ 26-05-24 ಆದಿತ್ಯವಾರ ಬೆಳಿಗ್ಗೆ ಕ್ಷೇತ್ರ ತಲುಪಿತು. ಮೊದಲೇ ಕಾಯ್ದಿರಿಸಿದ ವಸತಿ ಗೃಹಗಳಲ್ಲಿ ಸ್ನಾನ, ಶೌಚಾದಿಗಳನ್ನು ಮುಗಿಸಿ ರಾಯರ ದರ್ಶನ ಪಡೆದು, ಮಂಚಾಲಮ್ಮನಿಗೆ ಕೈ ಮುಗಿದು ಬೆಳಿಗ್ಗೆನ ಉಪಹಾರ ಮುಗಿಸಿ 35 ಅಡಿ ಎತ್ತರದ ಅಭಯಾಂಜನೇಯ ದೇವರಿಗೆ ಕೈ ಮುಗಿದು, ಪಂಚಮುಖಿ ಆಂಜನೇಯನ ದರ್ಶನ ಪಡೆದು, […]
Read More
19-05-2024, 3:52 PM
ಮೂಡುಬಿದಿರೆ: ಯುವವಾಹಿನಿಯ ತತ್ವ, ಉದ್ದೇಶಗಳನ್ನು ಸರಿಯಾಗಿ ಅರಿತು ನಮ್ಮ ಘಟಕದಿಂದ ಶಿಕ್ಷಣ ಆರೋಗ್ಯ, ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಕಳೆದ ಜನವರಿಯಿಂದ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ 13 ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ 83 ಹೊಸ ಸದಸ್ಯರು ಯುವವಾಹಿನಿಗೆ ಸೇರ್ಪಡೆಯಾಗಿದ್ಧಾರೆ ಎಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿಯ ಮೂಡುಬಿದಿರೆ ಘಟಕದ ವತಿಯಿಂದ ಹಂಡೇಲು ದೇವಸ ಮನೆಯಲ್ಲಿ ತುಳುನಾಡ ಸಂಸ್ಕೃತಿಯ ಪುನಾರವಲೋಕನ ಧ್ಯೇಯದೊಂದಿಗೆ […]
Read More