
04-04-2025, 10:33 AM
ಪ್ರಸ್ತುತ ಸನ್ನಿವೇಶಗಳಿಗೆ ಅಗತ್ಯವಿರುವಂತೆ ಯುವವಾಹಿನಿ ಜಾಲತಾಣ ಬದಲಾವಣೆಗೊಂಡಿದ್ದು ಈ ಬಗ್ಗೆ ಎಲ್ಲಾ ಘಟಕದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಗಳಿಗೆ ಮಾಹಿತಿ ನೀಡಲಾಯಿತು… ದಿನಾಂಕ 30/03/2025 ರಂದು ಮದ್ಯಾಹ್ನ 2.15 ಕ್ಕೇ ಯುವವಾಹಿನಿ ಸಭಾಂಗನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಎಲ್ಲರನ್ನೂ ಸ್ವಾಗತಿಸಿದರು…ಕೇಂದ್ರ ಸಮಿತಿ ಜಾಲತಾಣ ಸಂಪಾದಕರಾದ ಉದಯ ಕುಮಾರ್ ಕೋಲಾಡಿ ಬದಲಾವಣೆಯ ಅಗತ್ಯತೆಯನ್ನು ತಿಳಿಸಿ ಮುಂದಿನ ದಿನಗಳಲ್ಲಿ ಸದಸ್ಯತನ,ರಶೀದಿ,ರಕ್ತದಾನ ಮತ್ತು ಉದ್ಯೋಗ ದ ಮಾಹಿತಿಯಿಂದಾಗಿ ಎಲ್ಲಾ ಸದಸ್ಯರಿಗೆ ಜಾಲತಾಣ ಒಂದು ಅವಿಭಾಜ್ಯ ಅಗತ್ಯತೆ […]
Read More

28-01-2025, 4:36 PM
ವಿಶ್ವ ಬಿಲ್ಲವ ಸಮುದಾಯದ ಯುವಶಕ್ತಿಯ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿ ಬೆಳೆದು ನಿಂತಿರುವ ಯುವವಾಹಿನಿ ಸಂಘಟನೆ, ದೇಶದ ಯಾವುದೇ ಸಾಮುದಾಯಿಕ ಚೌಕಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಗಳಲ್ಲೇ ಮುಂಚೂಣಿಯಲ್ಲಿರುವ ಬಲಿಷ್ಠ ಮತ್ತು ಶಿಸ್ತುಬದ್ಧ ಸಂಸ್ಥೆಯೆಂಬ ಕೀರ್ತಿಗೆ ಭಾಜನವಾಗಿದೆ. ವಿದ್ಯೆ – ಉದ್ಯೋಗ- ಸಂಪರ್ಕ ಎಂಬ ಉದಾತ್ತ ಧ್ಯೇಯವಾಕ್ಯವನ್ನಿಟ್ಟುಕೊಂಡು ನಮ್ಮ ಹಿರಿಯರು 1987 ರಲ್ಲಿ ಸ್ಥಾಪಿಸಿದ ಯುವ ವಾಹಿನಿ ಪ್ರಸ್ತುತ 35 ಶಾಖೆಗಳ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲೂ ಹಬ್ಬಿ ನಿಂತಿದೆ. ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಕೀರ್ತಿ ಶಿಖರವಾಗಿ ಬೆಳಗುತ್ತಿರುವ ಯುವವಾಹಿನಿ […]
Read More

13-01-2025, 7:20 AM
ಯುವವಾಹಿನಿಯ ಸಾಮಾಜಿಕ ಜಾಲತಾಣದ ಸಂಪಾದಕರಾಗಿ ಆಯ್ಕೆಯಾದಾಗ ಭಯ ಹಾಗೂ ಸವಾಲು ಇತ್ತು. ಸ್ಥಬ್ದವಾಗಿದ್ದ ವೆಬ್ಸೈಟ್ಗೆ ವೀಕ್ಷಕರನ್ನು ಗಳಿಸುವ ಸವಾಲು, ಓದುಗರಿಗೆ ಬೋರ್ ಆಗದ ವರದಿ ತಯಾರಿಸಿ ಅಪ್ಲೋಡ್ ಮಾಡುವ ಭಯ… ಆದರೆ ಈ ಸಮಯದಲ್ಲಿ ನನಗೆ ಧೈರ್ಯ ತುಂಬಿ, ಇಡೀ ವರ್ಷ ಸಹಕಾರ ನೀಡಿದ ವೆಬ್ಸೈಟ್ ಸ್ಥಾಪಕ ಸಂಪಾದಕ ರಾಜೇಶ್ ಸುವರ್ಣ ಬಂಟ್ವಾಳ, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಇವರಿಗೆ ಮೊದಲಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಘಟಕದ ವರದಿಗಳಿಗೆ ನಿರ್ದಿಷ್ಟ ರೂಪ ನೀಡಿ ಸಹಕರಿಸಿದ ಅರ್ಚನ.ಎಂ.ಬಂಗೇರ […]
Read More

12-01-2025, 12:41 PM
ಮೂಡುಬಿದಿರೆ : ಯುವವಾಹಿನಿ (ರಿ) ಮೂಡುಬಿದಿರೆ ಘಟಕದ 2024-25 ನೇ ಸಾಲಿನ ತಂಡದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ 29-12-2024 ರ ಅಪರಾಹ್ನ ಜರಗಿತು. ಮೂಡುಬಿದಿರೆ ಘಟಕವು ಆರಂಭವಾದಾಗಿನಿಂದ ಇದರ ಪ್ರತಿಯೊಂದು ಕಾರ್ಯಕ್ರಮವನ್ನು ನೋಡುವ ಅವಕಾಶ ನನಗೆ ಸಿಕ್ಕಿದೆ. ಇದುವರೆಗೆ ಘಟಕದ ಚುಕ್ಕಾಣಿಯನ್ನು ಎತ್ತಿ ಹಿಡಿದ ಆರು ಅಧ್ಯಕ್ಷರುಗಳು ಕೂಡ ಘಟಕದ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ ಎಂದು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ […]
Read More

12-01-2025, 12:28 PM
ಪಣಂಬೂರು – ಕುಳಾಯಿ: ಯುವವಾಹಿನಿ (ರಿ) ಪಣಂಬೂರು- ಕುಳಾಯಿ ಘಟಕದ ನೂತನ ಕಾರ್ಯಕಾರಿ ಸಮಿತಿಯಪದಗ್ರಹಣ ಸಮಾರಂಭ 2024-25 ಮತ್ತು ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣಾ ಕಾರ್ಯಕ್ರಮವು ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಕುಳಾಯಿಯಲ್ಲಿ ಭಾನುವಾರ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಪಣಂಬೂರು – ಕುಳಾಯಿ ಘಟಕದ ಅಧ್ಯಕ್ಷೆಶ್ರೀಮತಿ ಮನೀಷಾರೂಪೇಶ್ವಹಿಸಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಅಧ್ಯಕ್ಷರಾದ ಶ್ರೀ ಕೇಶವ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಕರ್ನಾಟಕ […]
Read More

29-12-2024, 3:52 PM
ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ : ಉಮಾನಾಥ ಕೋಟ್ಯಾನ್ ಯುವವಾಹಿನಿಯ ಸಮಾವೇಶದ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ, ಶಿಸ್ತು, ಅಚ್ಚುಕಟ್ಟುತನ, ಹೊಸತನ ಇತರರಿಗೆ ಮಾದರಿಯಾಗಿದೆ ಎಂದು ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮುಲ್ಕಿ – ಮೂಡುಬಿದಿರೆ ಕ್ಷೇತ್ರದ ಶಾಸಕ […]
Read More

21-12-2024, 6:16 AM
ಉಪ್ಪಿನಂಗಡಿ : ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 21.12.2024ನೇ ಶನಿವಾರ, ಅಪರಾಹ್ನ ಗಂಟೆ 6.30ಕ್ಕೆ ಉಪ್ಪಿನಂಗಡಿ ಹೆಚ್ ಎಂ ಆಡಿಟೋರಿಯಂ ನಲ್ಲಿ ಘಟಕದ ಅಧ್ಯಕ್ಷರಾದ ಶ್ರೀ ಸೋಮಸುಂದರ್ ಕೊಡಿಪ್ಪಾನ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಘಟಕದ ಮಾಜಿ ಅಧ್ಯಕ್ಷರಾದ ಡಾ.ಸದಾನಂದ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕೆಡೆಂಜಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಸಾಮಾಜಿಕ ಕಳಕಳಿಯ ಸಂಘಟನೆ ಯೊಂದಿಗೆ […]
Read More

20-12-2024, 6:28 AM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ತಾಲೂಕು ಇದರ ಸಹಕಾರದೊಂದಿಗೆ ಮಲ್ಲಿಗೆ ಕೃಷಿ ತರಬೇತಿ ಕಾರ್ಯಗಾರವು ದಿ : 20.12.2024 ರಂದು ಮಧ್ಯಾಹ್ನ 2:30ಕ್ಕೆ ಯುವವಾಹಿನಿ ಸಭಾಂಗಣ ಊರ್ವ ಸ್ಟೋರ್ ಇಲ್ಲಿ ನಡೆಯಿತು. ಮೊದಲಿಗೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ತಾಲೂಕು ಇದರ ಕೃಷಿ ಅಧಿಕಾರಿ ಶ್ರೀಯುತ ಮೋಹನ್ ಕುಮಾರ್ ಇವರು ಉಪಸ್ಥಿತರಿದ್ದರು. ಸಂಪನ್ಮೂಲ […]
Read More

14-12-2024, 2:58 AM
ಪುತ್ತೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಪುತ್ತೂರು ಘಟಕದ 2024-25 ನೇ ಸಾಲಿನ ಪದಗ್ರಹಣ ಸಮಾರಂಭ ಕಾರ್ಯಕ್ರಮವು ದಿನಾಂಕ 14-12-2024 ನೇ ಶನಿವಾರ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನ ಬಪ್ಪಳಿಗೆ, ಪುತ್ತೂರು ಇಲ್ಲಿ ನಡೆಯಿತು. ಕಾರ್ಯಕ್ರಮವು ನಾರಾಯಣ ಗುರುಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸ್ವಾಗತವನ್ನು ಘಟಕದ ಉಪಾಧ್ಯಕ್ಷರಾದ ಅಣ್ಣಿ ಪೂಜಾರಿರವರು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಕೆಡೆಂಜಿ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜಯರಾಮ.ಬಿ.ಎನ್ ವಹಿಸಿದ್ದರು. ಮುಖ್ಯ […]
Read More