27-08-2016, 5:28 AM
ದಿನಾಂಕ 27-8-2016ರಂದು ವೇಣೂರಿನಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರವು ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಅಧ್ಯಕ್ಷತೆಯಲ್ಲಿ ಜರಗಿತು. ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಳದಂಗಡಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಶಾಂತ್ ಕುಮಾರ್‌ರವರು ಶಿಬಿರವನ್ನು ನಡೆಸಿಕೊಟ್ಟರು. ಮಹಾಮಾನವತವಾದಿ ನಾರಾ ಯಣ ಗುರುಗಳು ಎಂಬ ವಿಷಯದ ಬಗ್ಗೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ರಕ್ಷಾ ಪ್ರಥಮ ಸ್ಥಾನವನ್ನು ಪಡೆದರು. ಅಂದಿನ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ನಿಶಾ, ನೀರಿಕ್ಷಾ ಎನ್. ನಾವರ, ಆಕೃತಿ […]
Read More
27-08-2016, 5:22 AM
ಮಂಗಳೂರು ಘಟಕದ ವತಿಯಿಂದ ದಿನಾಂಕ 27-08-2016 ರಂದು ಗೋಕರ್ಣನಾಥ ಕಾಲೇಜ್‌ನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿ ಯರಿಗೆ ನಾಯಕತ್ವ ತರಬೇತಿ ಶಿಬಿರ ನಡೆಯಿತು. 27 ಈ ತರಬೇತಿ ಶಿಬಿರದಲ್ಲಿ ಸುಮಾರು 10 ಕಾಲೇಜುಗಳಿಂದ 48 ವಿದ್ಯಾರ್ಥಿಗಳು ಭಾಗವಹಿಸಿರುವರು. ಶಿಬಿರದ ಉದ್ಘಾಟನೆಯನ್ನು ಬಿ.ಜಿ.ಎಸ್. ಕಾಲೇಜಿನ ಪ್ರಾಧ್ಯಾಪಕ ಕೇಶವ ಕಟೀಲು ನೆರವೇರಿಸಿದರು. ಅಡ್ಯಾರು ಸಹ್ಯಾದ್ರಿ ಎಂ.ಬಿ.ಎ. ಕಾಲೇಜಿನ ಪ್ರಾಧ್ಯಾಪಕ ಪದ್ಮನಾಭರವರು ತರಬೇತಿಯನ್ನು ನಡೆಸಿಕೊಟ್ಟರು. ವಕೀಲರಾದ ನವನೀತ್ ಡಿ. ಹಿಂಗಾಣಿಯವರು ಬಿಲ್ಲವ ಸಂಘಟನೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನಂತರ ನರೇಶ್ ಸಸಿಹಿತ್ಲು ಯುವವಾಹಿನಿ […]
Read More
21-08-2016, 5:49 AM
ದಿನಾಂಕ 21-08-2016ರಂದು ಮಂಗಳೂರು ಮಹಿಳಾ ಘಟಕದ ವತಿಯಿಂದ ಮಂಗಳೂರಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ‘ಕರಾವಳಿ ಸಭಾಭವನ’ದಲ್ಲಿ ‘ಸೋಣ ಸಂಭ್ರಮ’ಕಾರ್ಯಕ್ರಮ ಜರಗಿತು. ಕಾರ್ಯಕ್ರಮ ಸಂತ ಅಲೋಶಿಯಸ್ ಕಾಲೇಜಿನ ಪ್ರಾಚಾರ್ಯರಾದ ಡಾ| ಗಣೇಶ್ ಅಮೀನ್ ಸಂಕಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಇದರ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಚಿತಾ ನಂದಗೋಪಾಲ್, ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಘಟಕದ ಸಲಹೆಗಾರರಾದ ಅಶೋಕ್ ಕುಮಾರ್ ಮತ್ತು ಸಾಧು ಪೂಜಾರಿ ಮೊದಲಾದವರು ಭಾಗವಹಿಸಿದ್ದರು. ಘಟಕದ ಅಧ್ಯಕ್ಷೆ […]
Read More
20-08-2016, 5:27 AM
ಸುರತ್ಕಲ್ ಘಟಕದ ವತಿಯಿಂದ ಗುರುಜಯಂತಿ ಪ್ರಯುಕ್ತ ತಾ. 20-8-2016 ರಂದು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.
Read More
14-08-2016, 5:47 AM
ದಿನಾಂಕ 14-08-2016ರ ಆದಿತ್ಯವಾರ ಅಡ್ವೆ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮ ಉದ್ಘಾಟನೆಯನ್ನು ಬ್ರಹ್ಮ ಬೈದರ್ಕಳ ಸೇವಾ ಸಮಿತಿ ಅಧ್ಯಕ್ಷ ಸುಂದರ ಯು. ಸುವರ್ಣರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್‌ಕುಮಾರ್, ಸಾಹಿತಿ ಉಗ್ಗಪ್ಪ ಪೂಜಾರಿ ಬೆದ್ರ, ಚಿತ್ರನಟ ಭೋಜರಾಜ ವಾಮಂಜೂರು, ಅಥನಿ ಕಂಪೆನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಆಳ್ವ, ನವೀನ್‌ಚಂದ್ರ ಸುವರ್ಣ, ಸುರೇಶ್ ಶೆಟ್ಟಿ ಮೂಡುಗುತ್ತು, ತ್ಯಾಂಪಣ್ಣ ಶೆಟ್ಟಿ ಮತ್ತು ಮನೋಜ್ ಕರ್ಕೇರ ಮೊದಲಾದವರು ಭಾಗವಹಿಸಿದ್ದರು. ಹಿರಿಯರಾದ ಸುಧಾಕರ ಡಿ. […]
Read More
14-08-2016, 5:37 AM
ಘಟಕದ ವಾರ್ಷಿಕ ಮಹಾಸಭೆಯು ದಿನಾಂಕ 14-08-2016ರಂದು ಘಟಕದ ಉಪಾಧ್ಯಕ್ಷ ಯೋಗೀಶ್ ಮಜಿಕುಡೇಲು ಇವರ ಅಧ್ಯಕ್ಷತೆಯಲ್ಲಿ ಸುವರ್ಣ ಆರ್ಕೆಡ್ ಸಂತೆಕಟ್ಟೆ ಇಲ್ಲಿ ಜರಗಿತು. ಸಭೆಯಲ್ಲಿ 2015-16ನೇ ಸಾಲಿನ ವಾರ್ಷಿಕ ವರದಿ ಮಂಡನೆ ಜಮಾ-ಖರ್ಚಿನ ವಿವರ ಮಂಡನೆ, 2016-17ನೇ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿಯ ಪರಿಶೀಲನೆ, 2016-17ನೇ ಸಾಲಿನ ನಿರ್ದೇಶಕರ ಆಯ್ಕೆ ನಡೆಯಿತು. ಪ್ರಾರಂಭದಲ್ಲಿ ರಘುನಾಥ್ ಶಾಂತಿ ಪ್ರಾರ್ಥಿಸಿ, ಅಶ್ವತ್ ಕುಮಾರ್‌ರವರು ಸ್ವಾಗತಿಸಿ, ಸ್ಮಿತೇಶ್ ಎಸ್. ಬಾರ್ಯ ವಂದಿಸಿದರು. ನಿರ್ದೇಶಕರ ಸಭೆ ದಿನಾಂಕ 14-8-2016ರಂದು ಘಟಕದ ನೂತನ ನಿರ್ದೇಶಕರ ಪ್ರಥಮ […]
Read More
12-08-2016, 5:40 AM
ತೀರಾ ಅನಾರೋಗ್ಯದಿಂದ ಬಳಲುತ್ತಿರುವ ಆರಂಬೋಡಿ ಗ್ರಾಮದ ನೆಲ್ಲಿಗುಡ್ಡೆ ಮನೆ ಪದ್ಮ ಪೂಜಾರಿಯವರ ಮನೆಗೆ ದಿನಾಂಕ 12-8-2016ರಂದು ಘಟಕದ ಪದಾಧಿಕಾರಿಗಳು, ನಿರ್ದೇಶಕರು, ಸಲಹೆಗಾರರು ಭೇಟಿ ನೀಡಿ ಚಿಕಿತ್ಸಾ ವೆಚ್ಚಕ್ಕಾಗಿ ರೂ. 10,000/- ಮೊತ್ತದ ಸಹಾಯಧನವನ್ನು ನೀಡಿದರು.
Read More
10-08-2016, 7:42 AM
ಆಟಿ ತಿಂಗಳ ಆಚರಣೆಯು ಪರಿಪೂರ್ಣವಾದ ವೈಜ್ಞಾನಿಕ ವಿಷಯಗಳಿಂದ ಕೂಡಿದ್ದು, ಇದರ ಬಗ್ಗೆ ಜನರಲ್ಲಿರುವ ಮೌಢ್ಯವನ್ನು ಸೂಕ್ತ ತಿಳಿವಳಿಕೆ ನೀಡುವ ಮೂಲಕ ನಿವಾರಿಸ ಬೇಕು. ಅದರಲ್ಲಿರುವ ಉತ್ತಮ ಅಂಶಗಳನ್ನು ಬೆಳೆಸಿಕೊಂಡು ಬರುವುದು ಒಳಿತು ಎಂದು ಹಿರಿಯ ಶಿಕ್ಷಕ ಹಾಗೂ ಪತ್ರಕರ್ತ ವಾಮನ ಇಡ್ಯಾ ಹೇಳಿದರು. ಅವರು ಮೂಲ್ಕಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಜರಗಿದ 14 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಆಚರಣೆಯಲ್ಲಿ ಅಡಗಿರುವ ಮೌಢ್ಯಗಳ ಅಂಶಗಳನ್ನು ಸರಿಪಡಿಸಿಕೊಂಡು ಮುಖ್ಯವಾಗಿ ಯುವಜನರಲ್ಲಿ ತಿಳುವಳಿಕೆಯನ್ನು ಮೂಡಿಸಿ ತುಳು […]
Read More
31-07-2016, 1:01 PM
ಕ್ರೀಡಾ ಪಟುಗಳ ವಿಶ್ವದ ಅತ್ಯುನ್ನತ ವೇದಿಕೆ- ಒಲಿಂಪಿಕ್ಸ್ ಇದರಲ್ಲಿ ಭಾಗವಹಿಸಲು ಬೇಕಾದ ಅರ್ಹತೆಯನ್ನು ಗಳಿಸುವುದೇ ಅತ್ಯಂತ ಕಷ್ಟಕರ ಪ್ರಯಾಸಕರ ಸವಾಲು. ಕ್ರೀಡೆಯ ತನ್ನ ಆಸಕ್ತಿಗಳನ್ನು ಮಾರ್ಗದರ್ಶಕರಾದ ಶ್ರೀಯುತ ಅಬ್ಬಾಸ್ ಹಾಗೂ ಲಚ್ಚೇಂದ್ರ ರಿಂದ ಪೋಷಿಸಿಕೊಂಡು ನಂಬಲಸಾಧ್ಯ ಸಾಧನೆ- ಒಲಿಂಪಿಕ್‌ಗೆ ಆಯ್ಕೆಯ ಕನಸನ್ನು ನೆನಸಾಗಿಸಿದ ಕರ್ನಾಟಕದ ಹೆಮ್ಮೆಯ ಶ್ರೀ ಮನೀಷ್ ಪೂಜಾರಿ ಒಬ್ಬ ಧ್ರುವತಾರೆ. ಕರ್ನಾಟಕದ ಉಸೈನ್ ಬೋಲ್ಟ್ ಎಂದು ಕರೆಯಲ್ಪಡಲು ಅರ್ಹ ರಾಷ್ಟ್ರೀಯ ದಾಖಲೆಯುತ್ತ ಸಾಗುವ ಪ್ರಥಮಹಂತ, ರಾಜ್ಯ ದಾಖಲೆಯ 100ಮೀ. ಓಟದಲ್ಲಿ 10.5 ಸೆಕೆಂಡುಗಳಲ್ಲಿ ಹಾಗೂ 21.5 ಸೆ.ನಲ್ಲಿ […]
Read More
31-07-2016, 12:56 PM
ವಿದ್ಯಾರ್ಥಿಯೊಬ್ಬರ ಸತತ ಪರಿಶ್ರಮದ ಸಾಧನೆಯ ಮಾನದಂಡ ಆತ/ ಆಕೆ ಗಳಿಸುವ ಶೇಕಡಾವಾರು ಅಂಕ. ಈ ನಿಟ್ಟಿನಲ್ಲಿ ಈ ಬಾರಿ SSLC ಪರೀಕ್ಷೆಯಲ್ಲಿ 625 ಕ್ಕೆ 622 ಅಂಕಗಳಸಿ ಶೇ. 99.52 % ಸಾಧನೆ ಮಾಡಿದ ಕು| ರಕ್ಷಾ ಡಿ ಅಂಚನ್ ನೋಡುವವರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಶ್ರೀ ದೇವಿಪ್ರಸಾದ್ ಹಾಗೂ ಶ್ರೀಮತಿ ವಿನೋದಾ ದಂಪತಿಗಳ ಈ ಹೆಮ್ಮೆಯ ಕುವರಿ. ಉಚ್ಚಿಲದ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದಾಳೆ. ಕನ್ನಡದಲ್ಲಿ 125 ಕ್ಕೆ 125, ಹಿಂದಿ, ಗಣಿತ ಹಾಗೂ ವಿಜ್ಞಾನದಲ್ಲಿ 100 ಕ್ಕೆ 100 […]
Read More