
26-10-2026, 8:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 26-10-2026 ರಂದು ಸಂಜೆ ನಡೆಯಿತು. ಇಂದಿನ ಭಜನಾ ಸೇವೆಯು ಯುವವಾಹಿನಿ (ರಿ.) ಗ್ರಾಮಚಾವಡಿ ಘಟಕ ಕೊಣಾಜೆ ಇವರ ಸಹಯೋಗದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರ ಮನ ತುಂಬುವ ರಾಗ ತಾಳಗಳಿಂದ ದೇವರ ನಾಮ ಸ್ಮರಣೆಯ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು. […]
Read More

25-10-2026, 11:00 AM
102 ಯೂನಿಟ್ ರಕ್ತ ಸಂಗ್ರಹ | 150ಕ್ಕೂ ಅಧಿಕ ಮಂದಿಗೆ ಆರೋಗ್ಯ ತಪಾಸಣೆ | 62 ಮಂದಿಗೆ ಉಚಿತ ಕನ್ನಡಕ | 20 ಮಂದಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಬೆಳ್ತಂಗಡಿ ಅ 25 : ರಕ್ತದಾನ, ಆರೋಗ್ಯ ತಪಾಸಣೆ ಹಾಗೂ ಅಗತ್ಯವಿರುವವರಿಗೆ ವೈದ್ಯಕೀಯ ನೆರವು ಒದಗಿಸುವ ಮೂಲಕ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಬೃಹತ್ ರಕ್ತದಾನ ಹಾಗೂ ವೈದ್ಯಕೀಯ ಶಿಬಿರವು ಅಕ್ಟೋಬರ್ 25ರಂದು ಗುರುವಾಯನಕೆರೆಯ N.E.T. […]
Read More

23-10-2026, 9:00 PM
ವಾಮದಪದವು ಅ 23 : ನಾರಾಯಣಗುರುಗಳು ಸರ್ವೇಶ್ವರನ ಅವತಾರ ಪುರುಷರಾಗಿ ಮಾನವಕುಲದ ಉದ್ಧಾರಕ್ಕಾಗಿ ಜನಿಸಿದ ಮಹಾನ್ ದಾರ್ಶನಿಕರು. ಮನುಷ್ಯನಲ್ಲಿರುವ ದೈವತ್ವವನ್ನು ಗುರುತಿಸಿ, ಜಾತಿ-ಮತಗಳ ಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ಸತ್ಯವನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ನಾರಾಯಣಗುರುಗಳು ಎಂದು ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶಿವರಾಜ್ ಗಟ್ಟಿ ಹೇಳಿದರು. ನಾರಾಯಣಗುರುಗಳ ಆಧ್ಯಾತ್ಮಿಕ ಚಿಂತನೆ ಮತ್ತು ಸಮಾಜ ಸುಧಾರಣೆಯ ಕಾರ್ಯಗಳನ್ನು ವಿವರಿಸಿದ ಅವರು, ದೇವರನ್ನು ದೇವಾಲಯಗಳಲ್ಲಿ ಮಾತ್ರ ಹುಡುಕದೆ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ದೈವತ್ವವನ್ನು ಕಾಣುವ ವಿಶಾಲ ದೃಷ್ಟಿಕೋನವನ್ನು […]
Read More

22-10-2026, 8:00 PM
ಉಡುಪಿ, ಅ. 22: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಗುರು ಸತ್ಸಂಗ ಕಾರ್ಯಕ್ರಮವು ದಿನಾಂಕ 22-10-2026ರ ಗುರುವಾರ ಸಂಜೆ 6:30ಕ್ಕೆ ಘಟಕದ ಪ್ರಚಾರ ನಿರ್ದೇಶಕರಾದ ಶಕುಂತಲಾ ಸುಕೇಶ್ ಅವರ ಮನೆಯಲ್ಲಿ ಭಕ್ತಿಭಾವದಿಂದ ನಡೆಯಿತು. ಮನೆಯವರೆಲ್ಲರೂ ಸೇರಿ ಗುರುಗಳಿಗೆ ದೀಪ ಬೆಳಗಿಸಿ, ಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಂದಿನ ಯುವಜನತೆಗೆ ಪ್ರೇರಣೆ ನೀಡುವ ಹಾಗೂ ಮನಮುಟ್ಟುವ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಘಟಕದ ಸಂಘಟನಾ ಕಾರ್ಯದರ್ಶಿ ಮಹೇಶ್ ಮಲ್ಪೆ ಅವರು ಗುರು ಸತ್ಸಂಗ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಘಟಕದ […]
Read More

22-10-2026, 7:00 PM
ಮಂಗಳೂರು ಅ 22 : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಆಡಳಿತ ಕಛೇರಿಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು. ಮಂಗಳೂರು ದಸರಾ ಮಹೋತ್ಸವ–2026ರ ಯಶಸ್ಸಿಗಾಗಿ ಕ್ಷೇತ್ರದಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಜರುಗಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಜೈರಾಜ್ ಎಚ್. ಸೋಮಸುಂದರಂ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) […]
Read More

22-10-2026, 12:30 PM
ಮಂಗಳೂರು, ಅ. 21: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನಡೆದ ಮಂಗಳೂರು ದಸರಾ ಮಹೋತ್ಸವದ ಅನ್ನದಾನ ಸೇವೆಗಾಗಿ ಯುವವಾಹಿನಿ ಸಂಸ್ಥೆಯ ವತಿಯಿಂದ ₹5,00,000 (ಐದು ಲಕ್ಷ ರೂಪಾಯಿ) ದೇಣಿಗೆಯನ್ನು ಸಮರ್ಪಿಸಲಾಯಿತು. ಯುವವಾಹಿನಿ ಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅನ್ನದಾನ ಸೇವೆಗಾಗಿ ಇಷ್ಟೊಂದು ಬೃಹತ್ ಮೊತ್ತದ ದೇಣಿಗೆಯನ್ನು ಸಂಗ್ರಹಿಸಿ ಸಮರ್ಪಿಸಿರುವುದು ವಿಶೇಷವಾಗಿದೆ. ಸಂಸ್ಥೆಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು-ಕುಳಾಯಿ, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರಿ, ಕಟಪಾಡಿ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಉಡುಪಿ, ಮುಲ್ಕಿ, […]
Read More

21-10-2026, 8:00 PM
ಮಂಗಳೂರು, ಅ. 21: ಮಂಗಳೂರು ದಸರಾ ಮಹೋತ್ಸವ–2026ರ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ಒಂದು ದಿನದ ಸ್ವಯಂಸೇವಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಘಟಕದ ಅಧ್ಯಕ್ಷ ಉಮೇಶ್ ಬಳ್ಪ ಅವರ ನೇತೃತ್ವದಲ್ಲಿ ಘಟಕದ ಸದಸ್ಯರು ಹಾಗೂ ಸಮಾಜದ ಬಂಧುಗಳ ಸಂಪೂರ್ಣ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಸ್ವಯಂಸೇವೆ ಸಲ್ಲಿಸಿ ಅನ್ನದಾನ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಗೆ ಘಟಕದ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಿದ ₹7,000 ಮೊತ್ತದ ದೇಣಿಗೆಯನ್ನು […]
Read More

21-10-2026, 7:00 PM
ಮಂಗಳೂರು, ಅ. 21: ಮಂಗಳೂರು ದಸರಾ ಮಹೋತ್ಸವ–2026ರ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ಒಂದು ದಿನದ ಸ್ವಯಂಸೇವಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ 110 ಸದಸ್ಯರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಸ್ವಯಂಸೇವೆ ಸಲ್ಲಿಸಿ ಅನ್ನದಾನ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಗೆ ಘಟಕದ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಿದ ₹30,000 ಮೊತ್ತದ ದೇಣಿಗೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ […]
Read More

21-10-2026, 7:00 PM
ಮಂಗಳೂರು ಅ 21 : ಕುದ್ರೋಳಿ ದಸರಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರು ಹಾಗೂ ಸಾರ್ವಜನಿಕರ ದಣಿವು ನಿವಾರಿಸಿ, ದಾಹ ತಣಿಸುವ ಸಾರ್ಥಕ ಸೇವಾ ಕಾರ್ಯವನ್ನು ಯುವವಾಹಿನಿ (ರಿ.) ಮಂಗಳೂರು ಘಟಕವು ಸತತ 12ನೇ ವರ್ಷವೂ ಯಶಸ್ವಿಯಾಗಿ ನೆರವೇರಿಸಿತು. ಘಟಕದ ಈ ಸೇವಾ ಕಾರ್ಯಕ್ಕೆ ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ಮಾಲೀಕ ರವೀಂದ್ರ ಶೇಟ್ ಅವರು ಶುಭ ಹಾರೈಸಿದರು. ಅಕ್ಟೋಬರ್ 21, 2026ರಂದು ಕುದ್ರೋಳಿ ದಸರಾ ಶೋಭಾಯಾತ್ರೆಯ ಪ್ರಯುಕ್ತ ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ಸ್ಥಳದಲ್ಲಿ ಮಂಗಳೂರು ಮಹಾನಗರ […]
Read More

20-10-2026, 8:00 PM
ಮಂಗಳೂರು, ಅ. 20: ಮಂಗಳೂರು ದಸರಾ ಮಹೋತ್ಸವ–2026ರ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ಒಂದು ದಿನದ ಸ್ವಯಂಸೇವಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕ್ರಮದ ಸಂಚಾಲಕರ ಸಂಪೂರ್ಣ ಸಹಕಾರದೊಂದಿಗೆ ಸದಸ್ಯರು ಕ್ಷೇತ್ರದಲ್ಲಿ ಸ್ವಯಂಸೇವೆ ಸಲ್ಲಿಸಿ ಅನ್ನದಾನ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಗೆ ಘಟಕದ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಿದ ₹75,001 (ಎಪ್ಪತ್ತೈದು ಸಾವಿರದ ಒಂದು ರೂಪಾಯಿ) ಮೊತ್ತದ ದೇಣಿಗೆಯನ್ನು […]
Read More