19-03-2017, 5:19 AM
ಯುವವಾಹಿನಿ ಮುಲ್ಕಿ ಘಟಕದ ಕುಟುಂಬ ಸದಸ್ಯರ ಸ್ನೇಹ ಮಿಲನವು ದಿನಾಂಕ 19-03-2017 ರಂದು ಪ್ರಕೃತಿಯ ರಮಣೀಯ ಸ್ಥಳ ಮೂಲ್ಕಿ ಸಮೀಪದ ಮಟ್ಟು ನದಿ ತೀರದಲ್ಲಿ ಯಶಸ್ವಿಯಾಗಿ ಜರುಗಿತು. ತೆಂಗಿನಕಾಯಿ ಒಡೆಯುವ ಮೂಲಕ ಸ್ನೇಹ ಮಿಲನದ ಉದ್ಘಾಟನೆ ವಿಶಿಷ್ಟವಾಗಿ ನಡೆಯಿತು. ಈ ಸಂದರ್ಭದಲ್ಲಿ ಘಟಕದ ಸದಸ್ಯರಿಗೆ ವಿವಿದ ಮನೋರಂಜನಾ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆಗಳು ಆಯೇೂಜಿಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಿ ಔತಣಕೂಟದೊಂದಿಗೆ ಸ್ನೇಹ ಮಿಲನ ಸಮಾಪ್ತಿಯಾಯಿತು.
Read More
19-03-2017, 5:01 AM
ಯುವವಾಹಿನಿ ಉಪ್ಪಿನಂಗಡಿ ಘಟಕದ ಸದಸ್ಯರು ದಿನಾಂಕ 19.03.2017ರಂದು ಸಂಪರ್ಕದ ದೃಷ್ಟಿಯಿಂದ ಏಕದಿನ ಪ್ರವಾಸ ಕಾರ್ಯಕ್ರಮ ಜರುಗಿತು. ಅಂದು ಬೆಳಗ್ಗೆ 7 ರಿಂದ ಪ್ರವಾಸ ಆರಂಭಗೊಂಡಿತು. ಪುನರುಸ್ಥಾನಗೊಳ್ಳುತ್ಥಿರುವ ವೀರ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಾನ ಗೆಜ್ಜೆಗಿರಿ ನಂದನಬಿತ್ತಲ್ ಇಲ್ಲಿಗೆ ಭೇಟಿ ನೀಡಿ ಜನ್ಮಸ್ಥಾನದ ಅಭಿವೃದ್ಧಿ ಕಾರ್ಯಗಳು ಹಾಗೂ ಕ್ಷೇತ್ರದ ಇತಿಹಾಸದ ಬಗ್ಗೆ ಸ್ಥಳೀಯರಾದ ಮಹಾಬಲ ಇವರು ವಿವರ ನೀಡಿದರು, ನಂತರ ಹನುಮಗಿರಿ ಆಂಜನೇಯ ದೇವಸ್ಥಾನ, ಕಾಸರಗೋಡು ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು. ಕೇರಳದ […]
Read More
15-03-2017, 5:36 AM
ಕಾಂತಬಾರೆ ಬೂದಬಾರೆ ಜನ್ಮಕ್ಷೇತ್ರ ಕೊಲ್ಲೂರು ಇದರ ಚತುಷ್ಪವಿತ್ರ ನಾಗಬ್ರಹ್ಮಮಂಡಲ ಸೇವೆಯ ಪ್ರಯುಕ್ತ ಒಂಬತ್ತು ಮಾಗಣೆಯ ಭಕ್ತಾಧಿಗಳಿಂದ ದಿನಾಂಕ 15-03-2017ರಂದು ಹೊರೆಕಾಣಿಕೆ ಸಮರ್ಪಿಸಲಾಯಿತು. ಈ ಸಂಧರ್ಭದಲ್ಲಿ ಮೂಲ್ಕಿ ಯುವವಾಹಿನಿಯ ವತಿಯಿಂದ ಹೊರೆಕಾಣಿಕೆಯನ್ನು ಸಮರ್ಪಿಸಿ ಶ್ರೀ ಕ್ಷೇತ್ರದಲ್ಲಿ ಮೂಲ್ಕಿ ಯುವವಾಹಿನಿ ಸದಸ್ಯರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
Read More
12-03-2017, 12:34 PM
ದಿನಾಂಕ 12.03.2017 ನೇ ಆದಿತ್ಯವಾರ ಮಂಗಳೂರು ಕೊಟ್ಟಾರ ಚೌಕಿಯಲ್ಲಿರುವ ಮೆ.ಐಡಿಯಲ್ ಎರೇಂಜರ್ಸ್ ವಠಾರದಲ್ಲಿ ಜರುಗಿದ ಯುವವಾಹಿನಿ(ರಿ) ಮಂಗಳೂರು ಘಟಕದ 2017-18ನೇ ಪದಗ್ರಹಣ ಸಮಾರಂಭ ಜರುಗಿತು. 2017-18 ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ ಅದ್ಯಕ್ಷ : ರವೀಶ್ ಕುಮಾರ್ ಉಪಾಧ್ಯಕ್ಷ : ನವೀನ್ ಚಂದ್ರ ಕಾರ್ಯದರ್ಶಿ : ಪ್ರವೀಣ್ ಕುಮಾರ್ ಕಿರೋಡಿ ಜತೆ ಕಾರ್ಯದರ್ಶಿ : ಯತೀಶ್ ಬಳಂಜ ಕೋಶಾಧಿಕಾರಿ : ಸದಾನಂದ ಕುಳಾಯಿ ಸಂಘಟನಾ ಕಾರ್ಯದರ್ಶಿ : ಜೈ ಕುಮಾರ್ ನಿರ್ದೇಶಕರು ನಾರಾಯಣಗುರು ತತ್ವ ಪ್ರಚಾರ : […]
Read More
12-03-2017, 12:31 PM
ಮಂಗಳೂರು ಯುವವಾಹಿನಿಯ 2017-18 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 12.03.2017 ನೇ ಆದಿತ್ಯವಾರ ಮಂಗಳೂರು ಕೊಟ್ಟಾರ ಮೆ. ಐಡಿಯಲ್ ಎರೇಂಜರ್ಸ್ ವಠಾರದಲ್ಲಿ ಜರುಗಿತು. ಈ ಶುಭ ಸಂದರ್ಭದಲ್ಲಿ ಮಂಗಳೂರು ಯುವವಾಹಿನಿ ಸದಸ್ಯರಾದ ಸಮಾಜ ಸೇವಕ ಸಂಘಟಕರು ದೇವೇಂದ್ರ ಕೋಟ್ಯಾನ್, ಉದ್ಯಮಿ ಸಂಘಟಕರು ಸಾಧಕ ಉಮಾನಾಥ, ನಿಸ್ವಾರ್ಥ ಸೇವಕ ಶ್ರೀಕಾಂತ್ ಇವರುಗಳ ಸಾಧನೆಯನ್ನು ಗುರುತಿಸಿ ಗೌರವಿಸಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಬಿಲ್ಲವರ ಸಹಾಯಕ ಸಂಘದ ಗೌರವ ಅದ್ಯಕ್ಷ ಪ್ರಭಾಕರ್ ಎಸ್. ಪೂಜಾರಿ, […]
Read More
12-03-2017, 12:28 PM
ಕಣ್ಣು ಸರಿಯಾಗಿದ್ದಲ್ಲಿ ಜಗತ್ತನ್ನು ಪ್ರೀತಿಸಬಹುದು, ಆದರೆ ನಾಲಿಗೆ ಸರಿಯಾಗಿದ್ದಲ್ಲಿ ಜಗತ್ತು ನಮ್ಮನ್ನು ಪ್ರೀತಿಸುತ್ತದೆ. ದುಶ್ಚಟಗಳನ್ನು ತೊರೆದು ಜ್ಞಾನದ ಮಾರ್ಗದಲ್ಲಿ ನಡೆದಾಗ ಮನೆ ಮನೆಯಲ್ಲೂ ದೇವಸ್ಥಾನದ ನಿರ್ಮಾಣ ಸಾಧ್ಯ. ಅವಮಾನಗಳ ಹಿಂದಿರುವ ನೋವಿನಿಂದ ನಮ್ಮ ಹಿರಿಯರು ಸಂಘಟನೆಗಳ ರಚನೆ ಮಾಡಿದರು. ಮನಸ್ಸು ಮನಸ್ಸುಗಳನ್ನು ಬೆಸೆಯುವ ಆದರ್ಶ, ಸಂವಿಧಾನ ಬದ್ದ ಸಂಘಟನೆ ಯುವವಾಹಿನಿ ಎಂದು ಮಂಗಳೂರು ಸಂತ ಎಲೋಶಿಯಸ್ ಕಾಲೇಜ್ ಉಪನ್ಯಾಸಕ ಡಾ. ಗಣೇಶ್ ಅಮೀನ್ ಸಂಕಮಾರ್ ತಿಳಿಸಿದರು. ಅವರು ದಿನಾಂಕ 12.03.2017 ನೇ ಆದಿತ್ಯವಾರ ಮಂಗಳೂರು ಕೊಟ್ಟಾರ ಚೌಕಿಯಲ್ಲಿರುವ ಮೆ.ಐಡಿಯಲ್ ಎರೇಂಜರ್ಸ್ […]
Read More
12-03-2017, 11:50 AM
ಯುವವಾಹಿನಿ ಕೂಳೂರು ಘಟಕದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಅಭಿವ್ಯಕ್ತಿ – ಅಭಿಪ್ರಾಯಗಳ ನಿರೂಪಣೆ ಕಾರ್ಯಕ್ರಮವು ದಿನಾಂಕ 12.03.2017 ನೇ ಆದಿತ್ಯವಾರ ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದಲ್ಲಿ ಜರುಗಿತು. ಅಭಿಪ್ರಾಯಗಳ ನಿರೂಪಣೆ ಮಾಡಿದ ಸಹನಾ ಕುಂದರ್ – ಈ ಜಗತ್ತು ಗಂಡು ಹೆಣ್ಣು ಇಬ್ಬರನ್ನೂ ಅವಲಂಬಿಸಿದೆ. ಟಿವಿ ಸೀರಿಯಲ್ಗಳ ಭ್ರಮೆಯಿಂದ ಮಹಿಳೆಯರು ಹೊರ ಬರಬೇಕು. ನಮ್ಮ ರಕ್ತದಲ್ಲಿ ನಮ್ಮ ಸಂಸ್ಕೃತಿ ಅಡಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಗೆ ನಾವು ಬಲಿಯಾಗಿದ್ದೇವೆ. ಮಹಿಳೆಯರು ಸಂಸ್ಕೃತಿ ಸಂಸ್ಕಾರದ ಬಗ್ಗೆ ಜಾಗೃತರಾದಾಗ […]
Read More
12-03-2017, 5:54 AM
ಬೆಳ್ತಂಗಡಿ ಯುವವಾಹಿನಿ ಆಶ್ರಯದಲ್ಲಿ ಮೂಡುಕೋಡಿಯಲ್ಲಿ ದಿನಾಂಕ 12.03.2017 ನೇ ಆದಿತ್ಯವಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಬೆಳ್ತಂಗಡಿ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅದ್ಯಕ್ಷ. ಕೆ ವಸಂತ ಬಂಗೇರ ಮತ್ತು ಸುಜಿತಾ ವಿ ಬಂಗೇರ, ಗ್ರಾಮದ ಪ್ರಥಮ ಬಿಲ್ಲವ ಸಮಾಜದ ಪೊಲೀಸ್ ಕಾನ್ಸ್ಸ್ಟೇಬಲ್ ಶೈಲೇಂದ್ರ ಕೆ ಕೋಳಂಗಜೆಗುತ್ತು, ನ್ಯಾಯವಾದಿ ಹರೀಶ್ ಪಿ ಎನ್ ,ಝೀ ಟಿವಿ ಕಾಮಿಡಿ ಕಿಲಾಡಿ ಕಲಾವಿದ ಅನೀಶ್ ಅಮೀನ್, ಚರ್ಮವಾದ್ಯ ಪ್ರವೀಣ ಪ್ರಭಾಕರ್ ಪೂಜಾರಿ ಉರುಂಜಿಬೆಟ್ಟು, […]
Read More
12-03-2017, 5:43 AM
ಇಂದು ಬಡವರ ಮಕ್ಕಳು ಸಹ ಶಿಕ್ಷಣ ಪಡೆಯಲು ಅವಕಾಶ ಇದೆ. ಪೋಷಕರು ಇದನ್ನು ಮನಗಂಡು ಮಕ್ಕಳ ವಿದ್ಯೆಗೆ ಪ್ರಾಮುಖ್ಯ ನೀಡಬೇಕು ವಿದ್ಯಾರ್ಜನೆಯಿಂದ ವಂಚಿಸಿದರೆ ದೇವರ ಶಾಪಕ್ಕೆ ಗುರಿಯಾಗುವಿರಿ ಎಂದು ಬೆಳ್ತಂಗಡಿ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅದ್ಯಕ್ಷ ವಸಂತ ಬಂಗೇರ ತಿಳಿಸಿದರು. ಅವರು ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಮೂಡುಕೋಡಿ ಗ್ರಾಮದ ಬಿಲ್ಲವ ಭಾಂದವರಿಗೆ ನಾರಾಯಣಗುರು, ಕೋಟಿ ಚೆನ್ನಯ, ಕಿಮ್ಮಲೆ ನಾಗಬ್ರಹ್ಮರ ಉಚಿತ ಭಾವಚಿತ್ರ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ […]
Read More
05-03-2017, 11:28 AM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ತಾ 5-3-2017 ನೇ ಆದಿತ್ಯವಾರ ಯುವವಾಹಿನಿ ಅಂತರ್ ಘಟಕ ಮಹಿಳಾ “ದೇಯಿ ಬೈದ್ಯೆದಿ ಕ್ರೀಡಾಕೂಟ” ಕುದ್ರೋಳಿ ಶ್ರೀ ನಾರಾಯಣಗುರು ಕಾಲೇಜು ಮೈದಾನದಲ್ಲಿ ನಡೆಯಿತು. ಕ್ರೀಡೆಯು ಮಾನವೀಯ ಸಂಬಂಧ ಬೆಸೆದು ಸಾಮರಸ್ಯ ಮೂಡಿಸುತ್ತದೆ. ಯುವವಾಹಿನಿ ಮಹಿಳಾ ಘಟಕವು ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾದುದು ಎಂದು ಕುದ್ರೋಳಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮಲತಾ ಎನ್. ಸುವರ್ಣರವರು ಕ್ರೀಡಾಕೂಟ ಉದ್ಘಾಟಿಸಿ ತಿಳಿಸಿದರು. ಯುವವಾಹಿನಿ ಕೆಂದ್ರಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಮಹಿಳಾ ಘಟಕದ […]
Read More