26-02-2026, 9:00 PM
ವಿವೇಕಪುರ (ನರಿಕೊಂಬು): “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಠರಾಗಿ” ಎಂಬ ಮಂತ್ರದೊಂದಿಗೆ ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು, ಮಾನವ ಕುಲದ ಸಂಘಟನೆಯೇ ಬಲಿಷ್ಠ ಸಮಾಜದ ಅಡಿಪಾಯವೆಂದು ಸಾರಿದರು ಎಂದು ಶಿಕ್ಷಕ ಮಧುಸೂದನ್ ಸುವರ್ಣ ತಿಳಿಸಿದರು. ಫೆಬ್ರವರಿ 26ರಂದು ನರಿಕೊಂಬು ಮೊಗರ್ನಾಡು ವಿವೇಕಪುರದ ರಂಜಿತ್ ಪೂಜಾರಿ ಅವರ ‘ಬೃಂದಾವನ’ ನಿವಾಸದಲ್ಲಿ ನಡೆದ ‘ಗುರುತತ್ವವಾಹಿನಿ ಭಜನಾ ಸಂಕೀರ್ತನೆ-68’ ಕಾರ್ಯಕ್ರಮದಲ್ಲಿ ಅವರು ಗುರುಸಂದೇಶ ನೀಡಿದರು. ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಸಮಾನತೆ ಮತ್ತು ಶೈಕ್ಷಣಿಕ ಪ್ರಗತಿಯ ಮೂಲಕ ಸಮಾಜದಲ್ಲಿ ಮಹತ್ತರ […]
Read More
21-02-2026, 12:50 PM
ಕೊಲ್ಯ : ಬ್ರಹ್ಮಶ್ರೀ ನಾರಾಯಣಗುರುಗಳು ಮಂಗಳೂರಿನ ಕುದ್ರೋಳಿಯಲ್ಲಿ 1912 ಫೆಬ್ರವರಿ 21 ರಂದು ಶಿವಲಿಂಗ ಪ್ರತಿಷ್ಠಾಪಿಸಿದ ಐತಿಹಾಸಿಕ ದಿನದ ಪವಿತ್ರ ಸ್ಮರಣೆಗಾಗಿ ಹಮ್ಮಿಕೊಳ್ಳಲಾಗಿದ್ದ “ನಮ್ಮ ನಡಿಗೆ ಶ್ರೀ ಗುರುವಿನೆಡೆಗೆ” ಎಂಬ ಸಂಕಲ್ಪದ ಕುದ್ರೋಳಿ ತೀರ್ಥಾಟನೆ ಮೆರವಣಿಗೆಯಲ್ಲಿ ಯುವವಾಹಿನಿ (ರಿ.) ಕೊಲ್ಯ ಘಟಕದ ಸದಸ್ಯರು ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಭಾಗವಹಿಸಿದರು. ಶ್ರೀ ಗುರುಗಳ ತತ್ವ ಮತ್ತು ಆದರ್ಶಗಳನ್ನು ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ನಡೆದ ಈ ಮೆರವಣಿಗೆಯಲ್ಲಿ ಕೊಲ್ಯ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ […]
Read More
21-02-2026, 12:47 PM
ಕಡಬ/ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ ಪವಿತ್ರ ಸ್ಮರಣೆಗಾಗಿ ಹಮ್ಮಿಕೊಳ್ಳಲಾಗಿದ್ದ “ನಮ್ಮ ನಡಿಗೆ – ಶ್ರೀಗುರುವಿನೆಡೆಗೆ” ಎಂಬ ಸಂಕಲ್ಪದ ಕುದ್ರೋಳಿ ತೀರ್ಥಾಟನೆಯಲ್ಲಿ ಯುವವಾಹಿನಿ (ರಿ.) ಕಡಬ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು. ದಿನಾಂಕ 21-02-2026ರಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಆಗಮಿಸಿದ ಶಿವಗಿರಿ ಪೀಠಾಧಿಪತಿಗಳನ್ನು ಅತ್ಯಂತ ಭವ್ಯವಾಗಿ ಬರಮಾಡಿಕೊಳ್ಳುವ ಮೂಲಕ ತೀರ್ಥಾಟನೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಆರಂಭಗೊಂಡ ಭಕ್ತಿಪೂರ್ವಕ ಮೆರವಣಿಗೆಯೂದ್ದಕ್ಕೂ ಕಡಬ […]
Read More
21-02-2026, 12:42 PM
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ ಪವಿತ್ರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ “ನಮ್ಮ ನಡಿಗೆ – ಶ್ರೀಗುರುವಿನೆಡೆಗೆ” ಕುದ್ರೋಳಿ ತೀರ್ಥಾಟನೆಯಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಸದಸ್ಯರು ಅತ್ಯಂತ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ದಿನಾಂಕ 21-02-2026ರಂದು ಬೆಳಿಗ್ಗೆ 9.30ಕ್ಕೆ ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಆರಂಭಗೊಂಡ ಈ ಭವ್ಯ ಯಾತ್ರೆಯುದ್ದಕ್ಕೂ ಗುರುಗಳ ಜ್ಞಾನದ ಸಂಕೇತವಾದ ಹಳದಿ ವರ್ಣದ ಬಾವುಟ ಹಾಗೂ ವಸ್ತ್ರಧಾರಿ ಭಕ್ತರಿಂದ ಇಡೀ ಪರಿಸರವು ಹಳದಿಮಯವಾಗಿ ಕಂಗೊಳಿಸುತ್ತಿತ್ತು. “ಓಂ ಶ್ರೀ ನಾರಾಯಣ […]
Read More
21-02-2026, 12:38 PM
ಮಂಗಳೂರು: ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ “ನಮ್ಮ ನಡಿಗೆ – ಶ್ರೀಗುರುವಿನೆಡೆಗೆ” ಎಂಬ ವಿಶೇಷ ಸಂಕಲ್ಪದೊಂದಿಗೆ ಶನಿವಾರದಂದು ತೀರ್ಥಾಟನೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಯೋಜಿಸಲಾಯಿತು. ಭವ್ಯ ಸ್ವಾಗತ ಮತ್ತು ಮೆರವಣಿಗೆ: ದಿನಾಂಕ 21-02-2026ರಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಆಗಮಿಸಿದ ಶಿವಗಿರಿ ಪೀಠಾಧಿಪತಿಗಳನ್ನು ಮಹಿಳಾ ಘಟಕದ ವತಿಯಿಂದ ಭವ್ಯವಾಗಿ ಬರಮಾಡಿಕೊಳ್ಳಲಾಯಿತು. ಅಲ್ಲಿಂದ ಪೀಠಾಧಿಪತಿಗಳ ನೇತೃತ್ವದಲ್ಲಿ ಯಾತ್ರೆಯು ಕುದ್ರೋಳಿ ಕ್ಷೇತ್ರದತ್ತ ಸಾಗಿತು.ಧಾರ್ಮಿಕ ಕಾರ್ಯಕ್ರಮಗಳು: ಕ್ಷೇತ್ರಕ್ಕೆ ಆಗಮಿಸಿದ ಯಾತ್ರಿಗಳು […]
Read More
21-02-2026, 9:00 AM
ಮಂಗಳೂರು: ಅಧ್ಯಾತ್ಮದ ಕಾಶಿ ಎಂದೇ ಪ್ರಸಿದ್ಧವಾದ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಶಿವಲಿಂಗ ಪ್ರತಿಷ್ಠಾಪಿಸಿದ ಪವಿತ್ರ ಸ್ಮರಣೆಗಾಗಿ ಹಮ್ಮಿಕೊಳ್ಳಲಾಗಿದ್ದ ‘ಕುದ್ರೋಳಿ ತೀರ್ಥಾಟನೆ’ ಇಂದು ನಗರದಲ್ಲಿ ಹೊಸದೊಂದು ಆಧ್ಯಾತ್ಮಿಕ ಇತಿಹಾಸ ಬರೆಯಿತು. ಈ ಪಾದಯಾತ್ರೆಯಲ್ಲಿ ಯುವವಾಹಿನಿಯ ಹಲವಾರು ಘಟಕಗಳ ಸದಸ್ಯರು ಭಾಗವಹಿಸಿ ತೀರ್ಥಾಟನೆಯ ಅಂದವನ್ನು ಹೆಚ್ಚಿಸಿದರು. ನಗರದಾದ್ಯಂತ ಹಳದಿ ಸಾಗರ:ಬೆಳಿಗ್ಗೆಯಿಂದಲೇ ಮಂಗಳೂರಿನ ರಸ್ತೆಗಳು ಹಳದಿ ಶಾಲನ್ನು ಧರಿಸಿದ ಭಕ್ತಾದಿಗಳಿಂದ ತುಂಬಿಹೋಗಿದ್ದವು. ಸಹಸ್ರಾರು ಭಕ್ತರ ಕಂಠದಿಂದ ಹೊರಹೊಮ್ಮಿದ ಮಂತ್ರಘೋಷ ಮತ್ತು ನಾರಾಯಣ ಗುರುಗಳ ತತ್ವದ […]
Read More
19-02-2026, 8:00 PM
ಕಾರ್ಕಳ: “ಸಮಾಜದಲ್ಲಿರುವ ಅಶಕ್ತರಿಗೆ ಆಸರೆಯಾಗುವುದು ಮತ್ತು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರೋತ್ಸಾಹಿಸುವುದು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ನಾವು ಸಲ್ಲಿಸುವ ನಿಜವಾದ ಪೂಜೆ. ಗುರುಗಳ ತತ್ವ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕಟಿಬದ್ಧರಾಗಬೇಕು,” ಎಂದು ಉಡುಪಿಯ ನಿವೃತ್ತ ಉಪನ್ಯಾಸಕರಾದ ದಯಾನಂದ ಬಿ. ಕಿದಿಯೂರು ಅವರು ಕರೆ ನೀಡಿದರು.ಅವರು ಯುವವಾಹಿನಿ (ರಿ.) ಕಾರ್ಕಳ ಘಟಕದ ನೇತೃತ್ವದಲ್ಲಿ, ಕಾಂತಾವರ ಬಿಲ್ಲವ ಸಂಘದ ಆತಿಥ್ಯದಲ್ಲಿ ದಿನಾಂಕ 19.02.2026 ರಂದು ನಡೆದ “ಗುರುಭ್ಯೋ […]
Read More
12-02-2026, 9:00 PM
ಸಿದ್ದಕಟ್ಟೆ : ಸಮಾನತೆ ಮತ್ತು ಮಾನವತೆಯ ಸಂದೇಶವನ್ನು ಸಾರಿದ ನಾರಾಯಣಗುರುಗಳ ಚಿಂತನೆಗಳು ಸಮಾಜವನ್ನು ಒಂದೇ ಸೂತ್ರದಲ್ಲಿ ಕಟ್ಟುವ ಶಕ್ತಿಯಾಗಿದೆ. ಮನುಷ್ಯನ ಮೌಲ್ಯವು ಅವನ ಜನ್ಮದಲ್ಲಲ್ಲ, ಅವನ ಮಾನವೀಯ ಗುಣಗಳಲ್ಲಿ ಇದೆ ಎಂಬುದು ಅವರ ತತ್ತ್ವದ ಸಾರವಾಗಿದೆ. ಪರಸ್ಪರ ಗೌರವ, ಪ್ರೀತಿ ಮತ್ತು ಸಹಕಾರದಿಂದ ಬದುಕಿದಾಗ ಮಾತ್ರ ಸಮಾಜ ನಿಜವಾದ ಅರ್ಥದಲ್ಲಿ ಬಲಿಷ್ಠವಾಗುತ್ತದೆ. ನಾರಾಯಣಗುರುಗಳ ಆದರ್ಶಗಳು ಇಂದು ಸಹ ಸಮಾನತೆ, ಸಹೋದರತೆ ಮತ್ತು ಮಾನವತೆಯ ದೀಪವನ್ನು ಬೆಳಗಿಸುತ್ತಿವೆ. ಎಂದು ಪೆರಿಯಾವು ಗುತ್ತು ಶಿವರಾಜ್ ಗಟ್ಟಿ ಹೇಳಿದರು. ಅವರು ಫೆಬ್ರವರಿ […]
Read More
26-01-2026, 8:00 AM
ಕೊಲ್ಯ : ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರುಗಳ ತಪೋಭೂಮಿ ಶಿವಗಿರಿ ಕ್ಷೇತ್ರ ದರ್ಶನ ಯಾತ್ರೆ ಭಕ್ತಿಭಾವ, ಶಿಸ್ತು ಹಾಗೂ ಆತ್ಮೀಯತೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.ಒಟ್ಟು 54 ಯಾತ್ರಾರ್ಥಿಗಳನ್ನು ಒಳಗೊಂಡ ತಂಡವು ದಿನಾಂಕ 23-01-2026 ಶುಕ್ರವಾರ ಸಂಜೆ 5.20ಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಶಿವಗಿರಿ ಕ್ಷೇತ್ರದತ್ತ ಪ್ರಯಾಣ ಆರಂಭಿಸಿತು. ದಿನಾಂಕ 24-01-2026 ಶನಿವಾರ ಬೆಳಿಗ್ಗೆ ನಿತ್ಯಕರ್ಮಗಳನ್ನು ಪೂರೈಸಿ ಶಿವಗಿರಿ ಮಠದಲ್ಲಿ ಗುರುಪೂಜೆ ಸಲ್ಲಿಸಿ, ಗುರುಗಳು ಹಾಗೂ ಶಾರದಾ ಮಾತೆಯ ಅನುಗ್ರಹ ಪಡೆದು […]
Read More
25-01-2026, 11:00 AM
ಉಡುಪಿ: ನಾರಾಯಣ ಗುರುಗಳು ವಿಶ್ವಕ್ಕೆ ಸಾರ್ವಕಾಲಿಕ ಸಂದೇಶ ನೀಡಿದ ಜಗದ್ಗುರುಗಳು. ಅವರ ಚಿಂತನೆಗಳು ಪ್ರಸ್ತುತ ಯುವ ಜನತೆಗೆ ಹೆಚ್ಚು ಪ್ರೇರಣೆಯಾಗಬೇಕು. ಜಾತಿ ಮತ ಧರ್ಮಗಳ ಸಾಮರಸ್ಯ ಸಾರಿದ ನಾರಾಯಣ ಗುರುಗಳ ತತ್ವಾದರ್ಶಗಳನ್ನು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಿರಂತರ ಸಂಘಟಿಸುವ ಮೂಲಕ ಯುವವಾಹಿನಿ ಉಡುಪಿ ಘಟಕವು ಗುರುತಿಸಿಕೊಂಡಿರುವುದು ಸ್ತುತ್ಯರ್ಹವೆಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟರು. ಶ್ರೀಯುತರು ಯುವವಾಹಿನಿ ಉಡುಪಿ ಘಟಕವು ಬನ್ನಂಜೆ ಬಿಲ್ಲವರ ಸೇವಾ ಸಂಘದ […]
Read More