
13-11-2026, 9:00 PM
ಕೊಡಂಬೆಟ್ಟು ನ 13 : ಅಜ್ಞಾನದ ಕತ್ತಲೆಯನ್ನು ಜ್ಞಾನದ ಬೆಳಕಿನಿಂದ ದೂರಮಾಡಿ, ಜಾತಿ-ಮತಗಳ ಭೇದಭಾವವಿಲ್ಲದ ಸಮಾನತೆಯ ಸಮಾಜವನ್ನು ನಿರ್ಮಿಸುವುದೇ ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯವಾಗಿತ್ತು. ಗುರುಗಳ ತತ್ವಾದರ್ಶಗಳು ಕೇವಲ ಉಪದೇಶಗಳಿಗೆ ಸೀಮಿತವಾಗದೆ, ನಮ್ಮ ಬದುಕಿನ ನಡವಳಿಕೆ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ಪ್ರತಿಫಲಿಸಬೇಕು ಎಂದು ಆಳ್ವಾಸ್ ಕಾಲೇಜಿನ ಮನೋರೋಗ ವಿಭಾಗದ ಆಪ್ತ ಸಮಾಲೋಚಕರಾದ ಲೋಹಿತ್ ಕನಪಾದೆ ಹೇಳಿದರು. ಅವರು ನವೆಂಬರ್ 13ರಂದು ಅಲೆಪ್ಪಾಡಿ ಕೊಡಂಬೆಟ್ಟು ಗ್ರಾಮದ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ […]
Read More

08-11-2026, 8:00 PM
ಸುಳ್ಯ ನ 08 : ಬ್ರಹ್ಮಶ್ರೀ ನಾರಾಯಣ ಗುರುಗಳಂತಹ ಮಹಾತ್ಮರನ್ನು ಗುಡಿ ಕಟ್ಟಿ ಆರಾಧನೆಗೆ ಮಾತ್ರ ಸೀಮಿತಗೊಳಿಸದೆ, ಅವರ ಚಿಂತನೆ ಮತ್ತು ಆದರ್ಶಗಳನ್ನು ಮನನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು. ಅವರು ನವೆಂಬರ್ 8ರಂದು ಸುಳ್ಯ ತಾಲೂಕು ಯುವವಾಹಿನಿ ಘಟಕದ ವತಿಯಿಂದ ಸುಳ್ಯದ ಕಾನತ್ತಿಲದಲ್ಲಿರುವ ಸುಂದರ ಪೂಜಾರಿಯವರ ಮನೆಯಲ್ಲಿ ಆಯೋಜಿಸಲಾದ ‘ಗುರುಸ್ಫೂರ್ತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾರಾಯಣ ಗುರುಗಳ ತತ್ವಚಿಂತನೆ, ಸಾಮಾಜಿಕ ಪರಿವರ್ತನೆಯ ಸಂದೇಶ ಹಾಗೂ ಯುವವಾಹಿನಿ ಸಂಸ್ಥೆಯ […]
Read More

05-11-2026, 8:00 PM
ಮಂಗಳೂರು ನ 05 : ದೇವರನ್ನು ದೇವಾಲಯಗಳಲ್ಲಿ ಮಾತ್ರ ಹುಡುಕದೆ, ಮನುಷ್ಯನಲ್ಲಿರುವ ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಮಾನವೀಯತೆಯಲ್ಲಿಯೇ ದೈವತ್ವವನ್ನು ಕಾಣುವ ವಿಶಿಷ್ಟ ತತ್ವವನ್ನು ಜಗತ್ತಿಗೆ ಸಾರಿದವರು ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಯುವವಾಹಿನಿ (ರಿ.) ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಮೋಹನ್ ಮಾಡೂರು ಹೇಳಿದರು. ನಾರಾಯಣಗುರುಗಳ ಚಿಂತನೆ ಕೇವಲ ಧಾರ್ಮಿಕ ಸುಧಾರಣೆಗೆ ಸೀಮಿತವಾಗಿರದೆ, ಮನುಷ್ಯನ ಅಂತರಂಗದ ಪರಿವರ್ತನೆ ಹಾಗೂ ಸಮಾಜದ ಸಮಗ್ರ ಉನ್ನತಿಯನ್ನು ಗುರಿಯಾಗಿಸಿಕೊಂಡಿತ್ತುಜಾತಿ, ಮತ, ವರ್ಗಗಳ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ […]
Read More

02-11-2026, 8:00 PM
ಮಂಗಳೂರು ನ 02 : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 02-11-2026 ರಂದು ಸಂಜೆ ನಡೆಯಿತು. ಈ ವಾರದ ಭಜನಾ ಸೇವೆ ಸ್ಪೂರ್ತಿ ಮಹಿಳಾ ಭಜನಾ ಮಂಡಳಿ, ಪದವಿನಂಗಡಿ ಇವರ ಸಹಯೋಗದಲ್ಲಿ ನೆರವೇರಿತು. ಭಕ್ತಿ ಪೂರ್ವಕವಾಗಿ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು. ಸಂಜೆ 7 ಗಂಟೆಗೆ ಸರಿಯಾಗಿ ಕ್ಷೇತ್ರದ ನಾರಾಯಣ […]
Read More

29-10-2026, 9:00 PM
ನಗ್ರಿ, ಅ. 29: ಶ್ರೀ ನಾರಾಯಣಗುರುಗಳು ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆ, ಸ್ವಾಭಿಮಾನ ಮತ್ತು ಸಮಾನತೆಯ ಪ್ರಮುಖ ಸಾಧನವಾಗಿ ಪ್ರತಿಪಾದಿಸಿದರು. ಜಾತಿ-ಧರ್ಮದ ಭೇದಭಾವಗಳನ್ನು ಮೀರಿ ಮನುಷ್ಯರೆಲ್ಲರೂ ಸಮಾನರು ಎಂಬ ಮಾನವೀಯ ಸಂದೇಶವನ್ನು ಸಾರಿದ ಅವರು, ಜ್ಞಾನದ ಮೂಲಕ ಅಜ್ಞಾನ ಮತ್ತು ಸಾಮಾಜಿಕ ಅಸಮಾನತೆಗಳನ್ನು ನಿವಾರಿಸಲು ಕರೆ ನೀಡಿದರು ಎಂದು ನಿರೂಪಕ ರಾಜೇಶ್ ಬಲ್ಯ ತಿಳಿಸಿದರು. ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳು ಒಂದಕ್ಕೊಂದು ಪೂರಕವಾದಾಗ ಮಾತ್ರ ಸಮಾನತೆ, ಸಹಬಾಳ್ವೆ ಹಾಗೂ ಸಾಮಾಜಿಕ ನ್ಯಾಯ ನೆಲೆಸಲು ಸಾಧ್ಯ. ನಾರಾಯಣಗುರುಗಳ ಚಿಂತನೆಗಳು ಇಂದಿನ […]
Read More

26-10-2026, 8:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 26-10-2026 ರಂದು ಸಂಜೆ ನಡೆಯಿತು. ಇಂದಿನ ಭಜನಾ ಸೇವೆಯು ಯುವವಾಹಿನಿ (ರಿ.) ಗ್ರಾಮಚಾವಡಿ ಘಟಕ ಕೊಣಾಜೆ ಇವರ ಸಹಯೋಗದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರ ಮನ ತುಂಬುವ ರಾಗ ತಾಳಗಳಿಂದ ದೇವರ ನಾಮ ಸ್ಮರಣೆಯ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು. […]
Read More

26-10-2026, 10:00 AM
53 ಮಂದಿ ಸದಸ್ಯರಿಂದ ನಾರಾಯಣ ಗುರುಗಳ ಜನ್ಮಸ್ಥಳ, ಶಿವಗಿರಿ ಮಠ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಮಂಗಳೂರು ಅ 26 : ಬ್ರಹ್ಮಶ್ರೀ ನಾರಾಯಣ ಗುರುದೇವರ ತತ್ವಾದರ್ಶಗಳನ್ನು ಅರಿತು, ಅವರ ಜೀವನ ಸಂದೇಶವನ್ನು ಅನುಭವಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಆಯೋಜಿಸಲಾದ ಶಿವಗಿರಿ–ರಾಮೇಶ್ವರ ಸೇರಿದಂತೆ ಪ್ರಮುಖ ಪುಣ್ಯಕ್ಷೇತ್ರಗಳ ಆಧ್ಯಾತ್ಮಿಕ ಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಘಟಕದ ಸದಸ್ಯರು ಸೇರಿದಂತೆ ಒಟ್ಟು 53 ಮಂದಿ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಅಕ್ಟೋಬರ್ 24ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ […]
Read More

23-10-2026, 9:00 PM
ವಾಮದಪದವು ಅ 23 : ನಾರಾಯಣಗುರುಗಳು ಸರ್ವೇಶ್ವರನ ಅವತಾರ ಪುರುಷರಾಗಿ ಮಾನವಕುಲದ ಉದ್ಧಾರಕ್ಕಾಗಿ ಜನಿಸಿದ ಮಹಾನ್ ದಾರ್ಶನಿಕರು. ಮನುಷ್ಯನಲ್ಲಿರುವ ದೈವತ್ವವನ್ನು ಗುರುತಿಸಿ, ಜಾತಿ-ಮತಗಳ ಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ಸತ್ಯವನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ನಾರಾಯಣಗುರುಗಳು ಎಂದು ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶಿವರಾಜ್ ಗಟ್ಟಿ ಹೇಳಿದರು. ನಾರಾಯಣಗುರುಗಳ ಆಧ್ಯಾತ್ಮಿಕ ಚಿಂತನೆ ಮತ್ತು ಸಮಾಜ ಸುಧಾರಣೆಯ ಕಾರ್ಯಗಳನ್ನು ವಿವರಿಸಿದ ಅವರು, ದೇವರನ್ನು ದೇವಾಲಯಗಳಲ್ಲಿ ಮಾತ್ರ ಹುಡುಕದೆ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ದೈವತ್ವವನ್ನು ಕಾಣುವ ವಿಶಾಲ ದೃಷ್ಟಿಕೋನವನ್ನು […]
Read More

22-10-2026, 8:00 PM
ಉಡುಪಿ, ಅ. 22: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಗುರು ಸತ್ಸಂಗ ಕಾರ್ಯಕ್ರಮವು ದಿನಾಂಕ 22-10-2026ರ ಗುರುವಾರ ಸಂಜೆ 6:30ಕ್ಕೆ ಘಟಕದ ಪ್ರಚಾರ ನಿರ್ದೇಶಕರಾದ ಶಕುಂತಲಾ ಸುಕೇಶ್ ಅವರ ಮನೆಯಲ್ಲಿ ಭಕ್ತಿಭಾವದಿಂದ ನಡೆಯಿತು. ಮನೆಯವರೆಲ್ಲರೂ ಸೇರಿ ಗುರುಗಳಿಗೆ ದೀಪ ಬೆಳಗಿಸಿ, ಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಂದಿನ ಯುವಜನತೆಗೆ ಪ್ರೇರಣೆ ನೀಡುವ ಹಾಗೂ ಮನಮುಟ್ಟುವ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಘಟಕದ ಸಂಘಟನಾ ಕಾರ್ಯದರ್ಶಿ ಮಹೇಶ್ ಮಲ್ಪೆ ಅವರು ಗುರು ಸತ್ಸಂಗ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಘಟಕದ […]
Read More

11-10-2026, 9:00 PM
ನೇರಳಕಟ್ಟೆ: ಸಮಾಜದ ಪ್ರಗತಿಗೆ ಶಿಕ್ಷಣವೇ ಪ್ರಮುಖ ಸಾಧನವೆಂದು ಅರಿತಿದ್ದ ಬ್ರಹ್ಮಶ್ರೀ ನಾರಾಯಣಗುರುಗಳು, ವಿದ್ಯೆಗೆ ವಿಶೇಷ ಆದ್ಯತೆ ನೀಡುವ ಮೂಲಕ ಸಾಮಾಜಿಕ ಪರಿವರ್ತನೆಗೆ ಅಡಿಪಾಯ ಹಾಕಿದರು ಎಂದು ಶಿಕ್ಷಕ ಸಂತೋಷ್ ಎಸ್. ಸನಿಲ್ ಹೇಳಿದರು. ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ‘ಗುರುತತ್ವವಾಹಿನಿ’ ಮಾಲಿಕೆ 82ರಲ್ಲಿ ಅವರು ಗುರುಸಂದೇಶ ನೀಡಿದರು. ಸಮಾಜದಲ್ಲಿ ನೆಲೆಸಿದ್ದ ಅಜ್ಞಾನ, ಅಸಮಾನತೆ ಹಾಗೂ ಮೂಢನಂಬಿಕೆಗಳನ್ನು ದೂರಗೊಳಿಸಿ, ಜನರು ಸ್ವಾಭಿಮಾನದಿಂದ ಬದುಕಬೇಕಾದರೆ ಶಿಕ್ಷಣ ಅತ್ಯಗತ್ಯ ಎಂಬುದನ್ನು ನಾರಾಯಣಗುರುಗಳು ತಮ್ಮ ಕಾರ್ಯಗಳ ಮೂಲಕ ತೋರಿಸಿಕೊಟ್ಟರು. ಶಿಕ್ಷಣವು […]
Read More