Yuvavahini

ನಾರಾಯಣ ಗುರು

ಗುರುತತ್ವ ಸಾರಿದ ಗುರುಸ್ಪೂರ್ತಿ

ಸುಳ್ಯ: ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಮೂರನೇ ಗುರುಸ್ಫೂರ್ತಿ ಕಾರ್ಯಕ್ರಮವನ್ನು ಯುವವಾಹಿನಿ ಸುಳ್ಯ ಘಟಕದ ಕೋಶಾಧಿಕಾರಿಯಾದ ಹರೀಶ್ ದೋಳ ಅವರ ಮನೆಯಲ್ಲಿ ದಿನಾಂಕ 22.03.2026 ಭಕ್ತಿಭಾವದಿಂದ ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಮನೆಯ ಯಜಮಾನರಾದ ಹೊನ್ನಪ್ಪ ಪೂಜಾರಿ ದಂಪತಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಮಹೇಶ್ ಕಲ್ಲಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜೇಶ್ ರೆಂಜಾಳ ಅವರು ಗುರುಸ್ಫೂರ್ತಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ಅನುಷ್ಟಾನ […]

Read More

ಬಳ್ಪದಲ್ಲಿ ‘ಗುರುಸ್ಫೂರ್ತಿ’ ಸಂಪನ್ನ

ಕಡಬ: ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಆದರ್ಶಗಳನ್ನು ಮನೆಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಯುವವಾಹಿನಿ (ರಿ.) ಕಡಬ ಘಟಕದ ಆಶ್ರಯದಲ್ಲಿ ಎರಡನೇ ಹಂತದ ‘ಗುರುಸ್ಫೂರ್ತಿ’ ಕಾರ್ಯಕ್ರಮವು ದಿನಾಂಕ 28-02-2026ರ ಶನಿವಾರದಂದು ಬಳ್ಪದ ತುಳಸಿ ನಾಗೇಶ್ ಪಡ್ಕಿಲಾಯ ಅವರ ನಿವಾಸದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ​ಬಳ್ಪ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾದ ಚಿನ್ನಪ್ಪ ಪೂಜಾರಿ ಕೊರಪ್ಪಣೆ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶಿಕ್ಷಕಿ ರೇಣುಕಾ ಕಣಿಯೂರು ಅವರು […]

Read More

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದರ್ಶನ ಸಮಾನತೆಯ ಸಮಾಜಕ್ಕೆ ಮುನ್ನುಡಿ: ಮಧುಸೂದನ್ ಸುವರ್ಣ

ವಿವೇಕಪುರ (ನರಿಕೊಂಬು): “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಠರಾಗಿ” ಎಂಬ ಮಂತ್ರದೊಂದಿಗೆ ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು, ಮಾನವ ಕುಲದ ಸಂಘಟನೆಯೇ ಬಲಿಷ್ಠ ಸಮಾಜದ ಅಡಿಪಾಯವೆಂದು ಸಾರಿದರು ಎಂದು ಶಿಕ್ಷಕ ಮಧುಸೂದನ್ ಸುವರ್ಣ ತಿಳಿಸಿದರು. ​ಫೆಬ್ರವರಿ 26ರಂದು ನರಿಕೊಂಬು ಮೊಗರ್ನಾಡು ವಿವೇಕಪುರದ ರಂಜಿತ್ ಪೂಜಾರಿ ಅವರ ‘ಬೃಂದಾವನ’ ನಿವಾಸದಲ್ಲಿ ನಡೆದ ‘ಗುರುತತ್ವವಾಹಿನಿ ಭಜನಾ ಸಂಕೀರ್ತನೆ-68’ ಕಾರ್ಯಕ್ರಮದಲ್ಲಿ ಅವರು ಗುರುಸಂದೇಶ ನೀಡಿದರು. ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಸಮಾನತೆ ಮತ್ತು ಶೈಕ್ಷಣಿಕ ಪ್ರಗತಿಯ ಮೂಲಕ ಸಮಾಜದಲ್ಲಿ ಮಹತ್ತರ […]

Read More

ಕುದ್ರೋಳಿ ತೀರ್ಥಾಟನೆ ಮೆರವಣಿಗೆಯಲ್ಲಿ ಯುವವಾಹಿನಿ ಕೊಲ್ಯ ಘಟಕದ ಸಕ್ರಿಯ ಸಹಭಾಗಿತ್ವ

ಕೊಲ್ಯ : ಬ್ರಹ್ಮಶ್ರೀ ನಾರಾಯಣಗುರುಗಳು ಮಂಗಳೂರಿನ ಕುದ್ರೋಳಿಯಲ್ಲಿ 1912 ಫೆಬ್ರವರಿ 21 ರಂದು ಶಿವಲಿಂಗ ಪ್ರತಿಷ್ಠಾಪಿಸಿದ ಐತಿಹಾಸಿಕ ದಿನದ ಪವಿತ್ರ ಸ್ಮರಣೆಗಾಗಿ ಹಮ್ಮಿಕೊಳ್ಳಲಾಗಿದ್ದ “ನಮ್ಮ ನಡಿಗೆ ಶ್ರೀ ಗುರುವಿನೆಡೆಗೆ” ಎಂಬ ಸಂಕಲ್ಪದ ಕುದ್ರೋಳಿ ತೀರ್ಥಾಟನೆ ಮೆರವಣಿಗೆಯಲ್ಲಿ ಯುವವಾಹಿನಿ (ರಿ.) ಕೊಲ್ಯ ಘಟಕದ ಸದಸ್ಯರು ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಭಾಗವಹಿಸಿದರು. ಶ್ರೀ ಗುರುಗಳ ತತ್ವ ಮತ್ತು ಆದರ್ಶಗಳನ್ನು ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ನಡೆದ ಈ ಮೆರವಣಿಗೆಯಲ್ಲಿ ಕೊಲ್ಯ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ […]

Read More

ಕುದ್ರೋಳಿ ತೀರ್ಥಾಟನೆ: ಯುವವಾಹಿನಿ ಕಡಬ ಘಟಕದ ಸದಸ್ಯರಿಂದ ಭಕ್ತಿಪೂರ್ವಕ ಸಹಭಾಗಿತ್ವ

​ಕಡಬ/ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ ಪವಿತ್ರ ಸ್ಮರಣೆಗಾಗಿ ಹಮ್ಮಿಕೊಳ್ಳಲಾಗಿದ್ದ “ನಮ್ಮ ನಡಿಗೆ – ಶ್ರೀಗುರುವಿನೆಡೆಗೆ” ಎಂಬ ಸಂಕಲ್ಪದ ಕುದ್ರೋಳಿ ತೀರ್ಥಾಟನೆಯಲ್ಲಿ ಯುವವಾಹಿನಿ (ರಿ.) ಕಡಬ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು. ​ದಿನಾಂಕ 21-02-2026ರಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಆಗಮಿಸಿದ ಶಿವಗಿರಿ ಪೀಠಾಧಿಪತಿಗಳನ್ನು ಅತ್ಯಂತ ಭವ್ಯವಾಗಿ ಬರಮಾಡಿಕೊಳ್ಳುವ ಮೂಲಕ ತೀರ್ಥಾಟನೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಆರಂಭಗೊಂಡ ಭಕ್ತಿಪೂರ್ವಕ ಮೆರವಣಿಗೆಯೂದ್ದಕ್ಕೂ ಕಡಬ […]

Read More

ಕುದ್ರೋಳಿ ತೀರ್ಥಾಟನೆ: ಯುವವಾಹಿನಿ ಮಂಗಳೂರು ಘಟಕದಿಂದ ಭಕ್ತಿಪೂರ್ವಕ ಸಹಭಾಗಿತ್ವ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ ಪವಿತ್ರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ “ನಮ್ಮ ನಡಿಗೆ – ಶ್ರೀಗುರುವಿನೆಡೆಗೆ” ಕುದ್ರೋಳಿ ತೀರ್ಥಾಟನೆಯಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಸದಸ್ಯರು ಅತ್ಯಂತ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ದಿನಾಂಕ 21-02-2026ರಂದು ಬೆಳಿಗ್ಗೆ 9.30ಕ್ಕೆ ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಆರಂಭಗೊಂಡ ಈ ಭವ್ಯ ಯಾತ್ರೆಯುದ್ದಕ್ಕೂ ಗುರುಗಳ ಜ್ಞಾನದ ಸಂಕೇತವಾದ ಹಳದಿ ವರ್ಣದ ಬಾವುಟ ಹಾಗೂ ವಸ್ತ್ರಧಾರಿ ಭಕ್ತರಿಂದ ಇಡೀ ಪರಿಸರವು ಹಳದಿಮಯವಾಗಿ ಕಂಗೊಳಿಸುತ್ತಿತ್ತು. “ಓಂ ಶ್ರೀ ನಾರಾಯಣ […]

Read More

ಯುವವಾಹಿನಿ ಮಹಿಳಾ ಘಟಕದಿಂದ ಕುದ್ರೋಳಿ ತೀರ್ಥಾಟನೆ: ಭಕ್ತಿಪೂರ್ವಕ ‘ನಮ್ಮ ನಡಿಗೆ – ಶ್ರೀಗುರುವಿನೆಡೆಗೆ’

ಮಂಗಳೂರು: ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ “ನಮ್ಮ ನಡಿಗೆ – ಶ್ರೀಗುರುವಿನೆಡೆಗೆ” ಎಂಬ ವಿಶೇಷ ಸಂಕಲ್ಪದೊಂದಿಗೆ ಶನಿವಾರದಂದು ತೀರ್ಥಾಟನೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಯೋಜಿಸಲಾಯಿತು. ​ಭವ್ಯ ಸ್ವಾಗತ ಮತ್ತು ಮೆರವಣಿಗೆ: ದಿನಾಂಕ 21-02-2026ರಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಆಗಮಿಸಿದ ಶಿವಗಿರಿ ಪೀಠಾಧಿಪತಿಗಳನ್ನು ಮಹಿಳಾ ಘಟಕದ ವತಿಯಿಂದ ಭವ್ಯವಾಗಿ ಬರಮಾಡಿಕೊಳ್ಳಲಾಯಿತು. ಅಲ್ಲಿಂದ ಪೀಠಾಧಿಪತಿಗಳ ನೇತೃತ್ವದಲ್ಲಿ ಯಾತ್ರೆಯು ಕುದ್ರೋಳಿ ಕ್ಷೇತ್ರದತ್ತ ಸಾಗಿತು.​ಧಾರ್ಮಿಕ ಕಾರ್ಯಕ್ರಮಗಳು: ಕ್ಷೇತ್ರಕ್ಕೆ ಆಗಮಿಸಿದ ಯಾತ್ರಿಗಳು […]

Read More

ಕುದ್ರೋಳಿ ತೀರ್ಥಾಟನೆ: ಮಂಗಳೂರಿನ ಬೀದಿಗಳಲ್ಲಿ ಹರಿದ ಭಕ್ತಿಯ ಹೊನಲು; ಯುವವಾಹಿನಿ ಸದಸ್ಯರ ಅಭೂತಪೂರ್ವ ನಡಿಗೆ

ಮಂಗಳೂರು: ಅಧ್ಯಾತ್ಮದ ಕಾಶಿ ಎಂದೇ ಪ್ರಸಿದ್ಧವಾದ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಶಿವಲಿಂಗ ಪ್ರತಿಷ್ಠಾಪಿಸಿದ ಪವಿತ್ರ ಸ್ಮರಣೆಗಾಗಿ ಹಮ್ಮಿಕೊಳ್ಳಲಾಗಿದ್ದ ‘ಕುದ್ರೋಳಿ ತೀರ್ಥಾಟನೆ’ ಇಂದು ನಗರದಲ್ಲಿ ಹೊಸದೊಂದು ಆಧ್ಯಾತ್ಮಿಕ ಇತಿಹಾಸ ಬರೆಯಿತು. ಈ ಪಾದಯಾತ್ರೆಯಲ್ಲಿ ಯುವವಾಹಿನಿಯ ಹಲವಾರು ಘಟಕಗಳ ಸದಸ್ಯರು ಭಾಗವಹಿಸಿ ತೀರ್ಥಾಟನೆಯ ಅಂದವನ್ನು ಹೆಚ್ಚಿಸಿದರು. ​ನಗರದಾದ್ಯಂತ ಹಳದಿ ಸಾಗರ:ಬೆಳಿಗ್ಗೆಯಿಂದಲೇ ಮಂಗಳೂರಿನ ರಸ್ತೆಗಳು ಹಳದಿ ಶಾಲನ್ನು ಧರಿಸಿದ ಭಕ್ತಾದಿಗಳಿಂದ ತುಂಬಿಹೋಗಿದ್ದವು. ಸಹಸ್ರಾರು ಭಕ್ತರ ಕಂಠದಿಂದ ಹೊರಹೊಮ್ಮಿದ ಮಂತ್ರಘೋಷ ಮತ್ತು ನಾರಾಯಣ ಗುರುಗಳ ತತ್ವದ […]

Read More

ಅಶಕ್ತರ ಸೇವೆ ಮತ್ತು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹವೇ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಸಲ್ಲಿಸುವ ನಿಜವಾದ ಪೂಜೆ: ದಯಾನಂದ ಬಿ. ಕಿದಿಯೂರು

​ಕಾರ್ಕಳ: “ಸಮಾಜದಲ್ಲಿರುವ ಅಶಕ್ತರಿಗೆ ಆಸರೆಯಾಗುವುದು ಮತ್ತು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರೋತ್ಸಾಹಿಸುವುದು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ನಾವು ಸಲ್ಲಿಸುವ ನಿಜವಾದ ಪೂಜೆ. ಗುರುಗಳ ತತ್ವ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕಟಿಬದ್ಧರಾಗಬೇಕು,” ಎಂದು ಉಡುಪಿಯ ನಿವೃತ್ತ ಉಪನ್ಯಾಸಕರಾದ ದಯಾನಂದ ಬಿ. ಕಿದಿಯೂರು ಅವರು ಕರೆ ನೀಡಿದರು.​ಅವರು ಯುವವಾಹಿನಿ (ರಿ.) ಕಾರ್ಕಳ ಘಟಕದ ನೇತೃತ್ವದಲ್ಲಿ, ಕಾಂತಾವರ ಬಿಲ್ಲವ ಸಂಘದ ಆತಿಥ್ಯದಲ್ಲಿ ದಿನಾಂಕ 19.02.2026 ರಂದು ನಡೆದ “ಗುರುಭ್ಯೋ […]

Read More

ನಾರಾಯಣಗುರುಗಳು ಸಾರಿದ ಸಮಾನತೆ ಮತ್ತು ಮಾನವತೆಯ ಮೂಲಕ ಸಮಾಜ ಬಲಿಷ್ಠವಾಗಲಿ

ಸಿದ್ದಕಟ್ಟೆ : ಸಮಾನತೆ ಮತ್ತು ಮಾನವತೆಯ ಸಂದೇಶವನ್ನು ಸಾರಿದ ನಾರಾಯಣಗುರುಗಳ ಚಿಂತನೆಗಳು ಸಮಾಜವನ್ನು ಒಂದೇ ಸೂತ್ರದಲ್ಲಿ ಕಟ್ಟುವ ಶಕ್ತಿಯಾಗಿದೆ. ಮನುಷ್ಯನ ಮೌಲ್ಯವು ಅವನ ಜನ್ಮದಲ್ಲಲ್ಲ, ಅವನ ಮಾನವೀಯ ಗುಣಗಳಲ್ಲಿ ಇದೆ ಎಂಬುದು ಅವರ ತತ್ತ್ವದ ಸಾರವಾಗಿದೆ. ಪರಸ್ಪರ ಗೌರವ, ಪ್ರೀತಿ ಮತ್ತು ಸಹಕಾರದಿಂದ ಬದುಕಿದಾಗ ಮಾತ್ರ ಸಮಾಜ ನಿಜವಾದ ಅರ್ಥದಲ್ಲಿ ಬಲಿಷ್ಠವಾಗುತ್ತದೆ. ನಾರಾಯಣಗುರುಗಳ ಆದರ್ಶಗಳು ಇಂದು ಸಹ ಸಮಾನತೆ, ಸಹೋದರತೆ ಮತ್ತು ಮಾನವತೆಯ ದೀಪವನ್ನು ಬೆಳಗಿಸುತ್ತಿವೆ. ಎಂದು ಪೆರಿಯಾವು ಗುತ್ತು ಶಿವರಾಜ್ ಗಟ್ಟಿ ಹೇಳಿದರು. ಅವರು ಫೆಬ್ರವರಿ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!