31-07-2016, 11:16 AM
ಸಾಧಕಿ ಸಾಧಿಸುವ ಛಲ, ನಿರಂತರ ಪರಿಶ್ರಮ, ನಿರ್ದಿಷ್ಟ ಗುರಿ, ಆತ್ಮ ವಿಶ್ವಾಸದೊಂದಿಗೆ ಏನನ್ನಾದರೂ ಸಾಧಿಸಬಹುದೆನ್ನುವುದಕ್ಕೆ ಬಿಲ್ಲವ ಕುವರಿ ಸುಪ್ರೀತಾ ಪೂಜಾರಿ ಒಂದು ನಿದರ್ಶನ. ಪವರ್ ಲಿಫ್ಟಿಂಗ್‌ನಂತಹ ಕಠಿಣ ತರಬೇತಿ ಬೇಡುವ ಕ್ರೀಡೆಯಲ್ಲಿ ಸಾಧನೆಯ ಹಾದಿಯಲ್ಲಿದ್ದಾರೆ ನಮ್ಮ ಹೆಮ್ಮೆಯ ಸುಪ್ರೀತಾ ಪೂಜಾರಿ. ಒಂದೆಡೆ ಚಿಕ್ಕಂದಿನಿಂದಲೇ ಅಂಟಿಕೊಂಡು ಬಂದ ಬಡತನ, ಇನ್ನೊಂದೆಡೆ ಕ್ರೀಡೆಯ ಬಗ್ಗೆ ಆಸಕ್ತಿ, ಇವೆರಡನ್ನೂ ಜೊತೆ ಜೊತೆಯಾಗಿಯೇ ಅನುಭವಿಸಿ ಕೊನೆಗೂ ತಾನು ಅಂದುಕೊಂಡಿದ್ದನ್ನು ಸಾಧಿಸುವ ಹಾದಿಯಲ್ಲಿದ್ದಾರೆ ಈ ನಮ್ಮ ವಿಶಿಷ್ಟ ಸಾಧಕಿ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ […]
Read More
31-07-2016, 6:13 AM
ದಿಕ್ಸೂಚಿ ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಕಾಣಿಸಲಾದ ತಲೆಮಾರುಗಳ ಅಂತರ ವಿಶ್ಲೇಷಣೆ: ’ಹಿಂದೆ ಮೂವತ್ತು ವರ್ಷಗಳ ಕಾಲಾವಧಿಯಲ್ಲಿ ತಲೆಮಾರುಗಳ ಭಿನ್ನತೆ-ವ್ಯತ್ಯಾಸ. ಆದರೆ ಈಗ? ಕೇವಲ ಒಂದು ವರ್ಷದ ಅಂತರದವರೊಳಗೂ ಜನರೇಶನ್ ಗ್ಯಾಪ್-ತಲೆಮಾರು ಅಂತರದ ಮಿಂಚು ಕಾಣಿಸುತ್ತಿದೆ ಎಂಬ ವಿಚಾರ. ಇದು ವಾಸ್ತವವೇ, ಅಸ್ವಾಭಾವಿಕವೇ ಎನ್ನುವುದು ತರ್ಕದ ಪ್ರಶ್ನೆ. ಇಂದಿನ ತಲೆಮಾರಿಗೂ ಹಿಂದಿನ ತಲೆಮಾರಿಗೂ ಸವಾಲುಗಳೇನು, ಇಂದಿನ ಸಾಮರ್ಥ್ಯಗಳೇನು? ನಮ್ಮ ಒಟ್ಟು ಬದುಕೇ ಆಧುನಿಕತೆಯ ಸ್ಥಿತ್ಯಂತರದೊಂದಿಗೆ ಸಾಗಿದೆ. ಬದುಕು ಸದಾ ಚಲಿಸುತ್ತಿರುವುದು ಸಹಜ ಪ್ರಕ್ರಿಯೆ. ಆದರೆ […]
Read More
31-07-2016, 6:03 AM
ಪ್ರವಾಸಾನುಭವ ’ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ತತ್ವವನ್ನಿರಿಸಿಕೊಂಡು ಹಲವು ಚಿಕ್ಕ-ದೊಡ್ಡ ಪ್ರವಾಸಗಳನ್ನು ಏರ್ಪಡಿಸುತ್ತ ಬಂದಿರುವ ಯುವವಾಹಿನಿ ಮಂಗಳೂರು ಘಟಕವು ಈ ಬಾರಿ ದಕ್ಷಿಣ ಭಾರತ ಪ್ರವಾಸವನ್ನು ಏರ್ಪಡಿಸಿತ್ತು. 2014 ರಲ್ಲಿ ಉತ್ತರ ಭಾರತ ಮತ್ತು ನೇಪಾಳದ 10 ದಿನಗಳ ಪ್ರವಾಸದಲ್ಲಿ ಭಾಗಿಯಾಗಿದ್ದ ನಾನು 2015 ರ ಉತ್ತರ ಭಾರತ ಪ್ರವಾಸ (ವಾರಣಾಸಿ, ಹೃಷಿಕೇಶ, ಹರಿದ್ವಾರ, ವೈಷ್ಣೋದೇವಿ, ದೆಹಲಿ, ಅಮೃತಸರ್, ವಾಘಾ ಬೋರ್ಡರ್ ಇತ್ಯಾದಿ ಸ್ಥಳಗಳಿಗೆ)ಕ್ಕೆ ಹೋಗಲಾಗಲಿಲ್ಲ. ಈ ಬಾರಿ ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳದ ಆಯ್ದ […]
Read More
31-07-2016, 5:47 AM
ಚಿಂತನ ಗುಣವತಿ ರಮೇಶ್, ಸುರತ್ಕಲ್ ಶ್ರೇಷ್ಠವಾದ ಮಾನವ ಜನ್ಮವನ್ನು ಪಡೆದಿರುವ ಎಲ್ಲರೂ ತಮ್ಮ ಜೀವನ ಸುಖಮಯವಾಗಿರಬೇಕೆಂದು ಹರಸಾಹಸ ಮಾಡುತ್ತಾರೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ಗಾದೆ ಮಾತಿತ್ತು. ಆದರೆ ಇಂದು ಹುಟ್ಟು ಸಾವಿನ ನಡುವಿನ ಜೀವನದ ಸುಖಕ್ಕಾಗಿ ಪ್ರಪಂಚದಾದ್ಯಂತ ಎಂತೆಂತಹ ಘನಕಾರ್‍ಯಗಳು ನಡೆಯುತ್ತವೆ ಎಂದು ಆಲೋಚಿಸಿದರೆ ಅಬ್ಬಾ ಎಂಥಾ ಕಾಲವಪ್ಪ, ಎಂದೆನಿಸುತ್ತದೆ. ಆದರೆ ನಮ್ಮ ಪೂರ್ವಿಕರು ಹೊಲ, ಗದ್ದೆ, ಗುಡ್ಡ, ತೋಟ ಹೀಗೆ ಬೆವರು ಸುರಿಸಿ ದುಡಿದು, ಇದ್ದದ್ದನ್ನು ತುಂಬು ಕುಟುಂಬದಲ್ಲಿದ್ದ ಎಲ್ಲರೂ ಹಂಚಿಕೊಂಡರು […]
Read More
31-07-2016, 5:45 AM
ವೈಚಾರಿಕ – ಅಮಿತಾಂಜಲಿ ಕೆ., ಉಡುಪಿ ಬಾಲ್ಯವೆಲ್ಲಾ ಕ್ರಿಶ್ಚಿಯನ್ ಒಡನಾಡಿಗಳೊಂದಿಗೇ ಆಡಿ ಬೆಳೆದವಳು ನಾನು. ಮುಸ್ಲಿಂ ಬಾಂಧವರ ಜೊತೆ ಬಾಂಧವ್ಯದ ಸುಖವನ್ನು ಕಂಡವಳು ನಾನು. ಅಪ್ಪ ಸ್ವಂತ ಮನೆ ಕಟ್ಟುವವರೆಗೂ ಕ್ರಿಶ್ಚಿಯನ್ನರ ಒಕ್ಕಲು ಮನೆಗಳಲ್ಲೇ ಬಾಡಿಗೆಗಿದ್ದೆವು. ಅಜ್ಜಿ ಮನೆಗೆ ಹೋದಾಗಲೆಲ್ಲ ಅಜ್ಜಿಯ ಒಡಹುಟ್ಟಿದಂತಿದ್ದ ನೆರೆಮನೆಯ ನಮ್ಮ ’ಸಣ್ಣಜ್ಜಿ’ ಜಾಕಿಯಾಬಿ ನಮ್ಮ ಮೇಲೆ ಪ್ರೀತಿಯ ಮಳೆಯನ್ನೇ ಹರಿಸುತ್ತಿದ್ದರು. ಯಾವತ್ತೂ ಅವರಲ್ಲಿ ಯಾರೂ ನಮ್ಮನ್ನು ಹಿಂದೂಗಳೆಂದು ಹಂಗಿಸಿದ್ದಿಲ್ಲ. ಅವರು ಬೇರೆ ಧರ್ಮೀಯರೆಂಬ ಕಾರಣಕ್ಕೆ ನಾವವರನ್ನು ದ್ವೇಷಿಸಿದ್ದಿಲ್ಲ. ಆತ್ಮೀಯ ಬಾಂಧವ್ಯ ನಮ್ಮೊಳಗಿತ್ತು. […]
Read More
31-07-2016, 5:42 AM
ಆಶಯ ಕೆ. ರಾಜೀವ ಪೂಜಾರಿ ಈ ಸೃಷ್ಟಿಯ ಸೌಂದರ್ಯವೇ ಬದುಕಿನ ಆಂತರ್ಯ. ತೇಲುವ ಮೋಡಗಳಲ್ಲಿ, ಹರಿಯುವ ನದಿಯ ಜಲದಲ್ಲಿ. ಹಸುರಿನ ಸಿರಿಯಲ್ಲಿ, ಹೂಗಳ ವರ್ಣದಲ್ಲಿ…ಮಂದಹಾಸದಲ್ಲಿರುವುದು ಅನಂತ ಚೈತನ್ಯದ ಒಂದು ರೂಪವೇ ಎನ್ನುವುದು ಸನಾತನೀಯ ಸಚ್ಚಿಂತನೆ. ನಮ್ಮದು ಸನಾತನ ಚಿಂತನೆಯನ್ನು ಗೌರವಿಸುವ ದೇಶ. ಮಾನವೀಯ ಮೌಲ್ಯಗಳನ್ನು ಮಾನ್ಯ ಮಾಡುವ ಮಹನೀಯರುಗಳು ಈಗಲೂ ಈ ನೆಲದಲ್ಲಿರುವರು. ಇಲ್ಲಿನ ಮಣ್ಣಿನ ಗುಣವೇ ದೈವಿಕ ಭಾವದಿಂದ ಕೂಡಿರುವುದು. ಅನೇಕ ಸಂತ ಮಹಂತರುಗಳು ಈ ನೆಲದಲ್ಲಿ ಬಾಳಿ ಹೋಗಿದ್ದಾರೆ. ಅವರ ನುಡಿಗಳು ಮನುಕುಲಕ್ಕೆ ದಾರಿದೀಪಗಳಾಗಿವೆ. […]
Read More
10-08-2014, 5:14 AM
ಪಾರೂ ಮೌನವಾಗಿ ಮನೆಕೆಲಸ ಮಾಡುತ್ತಿದ್ದಳು. ಕೈಗಳು ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದರೂ ಮನಸ್ಸಿನಲ್ಲಿ ನೂರೆಂಟು ಆಲೋಚನೆಗಳು. ’ದೇವರೇ ಏನು ಮಾಡಲಿ? ಯಾರನ್ನು ಕೇಳಲಿ…? ಈ ಮನೆಯೊಡತಿ ಊಟ, ತಿಂಡಿ, ಬಟ್ಟೆಬರೆ ಎಲ್ಲಾ ಕೊಟ್ಟೂ ಕೈ ತುಂಬಾ ಸಂಬಳ ನೀಡುತ್ತಿದ್ದುದರಿಂದ ಇಷ್ಟರವರೆಗೂ ತಾನು ಸುಖಿ. ಮನೆಯ ಯಜಮಾನಿ ಮಂಜುಳಾ ತನ್ನ ಕೆಲಸಕ್ಕೆ ಯಾವತ್ತೂ ಸಿಡಿಗುಟ್ಟಿದವರಲ್ಲ. ತಾನೂ ಅಷ್ಟೇ ಇಷ್ಟರವರೆಗೂ ಪ್ರಾಮಾಣಿಕವಾಗಿಯೇ ಕೆಲಸ ಮಾಡಿದವಳು. ಅಪರೂಪಕ್ಕೆ ರಜೆ ಮಾಡಿದಾಗ ಮಾತ್ರ ಸಿಟ್ಟಾಗುತ್ತಿದ್ದರೇ ವಿನಾಃ ಯಾವತ್ತೂ ತನ್ನ ಕೆಲಸದ ಮೇಲೆ ಕೋಪಿಸಿಕೊಂಡವರಲ್ಲ. ಆದರೂ […]
Read More
04-08-2013, 5:00 AM
ಮಾನವ ಜೀವನವನ್ನು ನಾಲ್ಕು ಭಾಗಗಳನ್ನಾಗಿ ನಮ್ಮ ಹಿರಿಯರು ಗುರುತಿಸಿದ್ದಾರೆ. ಅದೇ ಬಾಲ್ಯ, ಯೌವ್ವನ ಮತ್ತು ಗೃಹಸ್ಥಾಶ್ರಮ – ಆಯಾಯ ವಯಸ್ಸಿನಲ್ಲಿ ಮಾನವ ಮಾಡಬೇಕಾದ ಕೆಲಸವನ್ನು ಹೇಳಿದ್ದಾರೆ. ಬಾಲ್ಯದಲ್ಲಿ ಬ್ರಹ್ಮಚರ್ಯ, ಶಿಕ್ಷಣ, ಸಂಸ್ಕೃತಿ, ನಯ-ವಿನಯ ಮತ್ತು ಯಾವುದಾದರು ಒಂದು ವಿಚಾರದಲ್ಲಿ ಕುಶಲತೆ ಇರಲೇಬೇಕು. ಆಗ ಯೌವ್ವನ ಯಶಸ್ವಿಯಾಗುತ್ತದೆ. ಯೌವ್ವನದಲ್ಲಿ ಆತನು ಕಲಿತ ವಿದ್ಯೆಯಿಂದ ಕುಶಲತೆ ಹೊಂದಿರುವ ಒಂದು ಉದ್ಯೋಗ ಹೊಂದಿ ಗೃಹಸ್ಥಾಶ್ರಮ ಪಡೆದು, ಕುಟುಂಬದ ಹೊರೆಯನ್ನು ಹೊರಬೇಕಾಗಿದೆ. ಬಾಲ್ಯದ ಶಿಕ್ಷಣದ ತಯಾರಿ ಯೌವ್ವನದ ಕೆಲಸಕ್ಕೆ ಅನುಕೂಲ ಮಾಡಿ ಕೊಡುತ್ತದೆ. […]
Read More
04-08-2013, 4:58 AM
ಯಾವುದೇ ಒಂದು ವಿಷಯವನ್ನು ವ್ಯಷ್ಠಿಯಾಗಿ ಅಥವಾ ಸಮಷ್ಠಿಯಾಗಿ ಜನಮಾನಸಕ್ಕೆ ತಲುಪಿಸುವ ಸೇತುವೆಯೇ ಮಾಧ್ಯಮ. ಹಿಂದಣ ದಿನಗಳಲ್ಲಿ ಪುರಾಣ ಕತೆಗಳನ್ನೋ ಮಹಾಕಾವ್ಯಗಳನ್ನೋ ಜನರಿಗೆ ತಲುಪಿಸಲು ಗಮಕ, ಪ್ರವಚನ, ಹರಿಕಥೆ, ಯಕ್ಷಗಾನ, ಬಯಲು ನಾಟಕ ಇತ್ಯಾದಿ ಪ್ರಕಾರಗಳು ಮಾಧ್ಯಮವಾಗಿ ಬಳಕೆಯಾಗುತ್ತಿದ್ದರೆ, ಒಂದೂರಿಂದ ಇನ್ನೊಂದೂರಿಗೆ ಸುದ್ದಿಗಳು ತಲುಪಬೇಕಾದರೆ ಬಹು ನಿಧಾನವಾಗಿ, ಎಷ್ಟೋ ಕಾಲದ ತರುವಾಯ ಬಹು ವಿಳಂಬಿತ ವ್ಯವಸ್ಥೆಯಿತ್ತು. ಹಲವಾರು ಸುದ್ದಿಗಳು ಗತಕಾಲದ ಇತಿಹಾಸವಾದ ನಂತರ ಕೆಲವರಿಗೆ ತಲುಪುತಿತ್ತು. ಬ್ರಿಟಿಷರ ಆಗಮನದ ತರುವಾಯ ನಮ್ಮ ದೇಶದಲ್ಲಿ ಅಂಚೆ ವ್ಯವಸ್ಥೆ ವ್ಯಾಪಕವಾಗಿ ಹರಡಿತು. […]
Read More
04-11-2012, 7:05 AM
ಹದಿನೆಂಟು, ಹತ್ತೊಂಭತ್ತನೇ ಶತಮಾನಗಳಲ್ಲಿ ಕೇರಳದ ಸಮಾಜ ಅಜ್ಞಾನ, ಅಂಧಶ್ರದ್ಧೆಗಳ ಅಂಧಕಾರದಲ್ಲಿ ಮುಳುಗಿತ್ತು. ಕೆಳವರ್ಗದವರಿಗೆ ಮೇಲ್ವರ್ಗದವರ ಹಿಂಸೆ, ಕಿರುಕುಳಗಳಿಂದಾಗಿ ಬದುಕುವುದೇ ಕಷ್ಟವಾಗಿತ್ತು. ಆ ಕಾಲದ ಜಾತಿ ವ್ಯವಸ್ಥೆಯ ಕ್ರೂರತೆಯಿಂದ ಪಾರಾಗಲು ದಲಿತರು ಮತಾಂತರಕ್ಕೆ ಮುಂದಾಗುತ್ತಿದ್ದರು. ಅಂತಹ ವಿಲಕ್ಷಣ ಕಾಲಘಟ್ಟದಲ್ಲಿ ಜನ್ಮತಾಳಿದ ನಾರಾಯಣ ಗುರು ಎಳವೆಯಲ್ಲೇ ಸಮಾಜದಲ್ಲಿ ಬೇರೂರಿರುವ ಅಸ್ಪೃಶ್ಯತೆ, ಅಜ್ಞಾನ, ಮೂಢನಂಬಿಕೆಗಳನ್ನು ಕಂಡು ಮರುಗುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ದೀನದಲಿತರ ಸೇವೆ, ಶುಶ್ರೂಷೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ತಮ್ಮ ತಾಯಿ-ತಂದೆ ನಿಧನರಾದ ಮೇಲೆ ಹುಟ್ಟಿದೂರಿಗೆ ವಿದಾಯ ಹೇಳಿ ಪರಿವ್ರಾಜಕರಾಗಿ ಸಂಚಾರಕ್ಕೆ ತೊಡಗುವ ಗುರು, […]
Read More