15-08-2019, 4:26 AM
ಮಂಗಳೂರು : ಯುವವಾಹಿನಿ ಸಭಾಂಗಣದಲ್ಲಿ ಪ್ರಪ್ರಥಮ ಬಾರಿಗೆ ಯುವವಾಹಿನಿ ಘಟಕದ ಸದಸ್ಯರಿಂದ 73ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು. ಘಟಕದ ಅಧ್ಯಕ್ಷರಾದ ಕೆ.ಆರ್. ಲಕ್ಷ್ಮೀನಾರಾಯಣರವರು ಧ್ವಜಾರೋಹಣ ಮಾಡಿದರು. ಮಾಜಿ ಅಧ್ಯಕ್ಷರಾದ ಶ್ರೀಧರ ಪೂಜಾರಿ, ಕಾರ್ಯದರ್ಶಿ ಗಣೇಶ್ ವಿ. ಕೋಡಿಕಲ್ ಹಾಗೂ ರಾಜೇಶ್ ಅಮೀನ್ ರವರು ಉಪಸ್ಥಿತರಿದ್ದರು. ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಘಟಕದ ಸದಸ್ಯರು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಗೀತೆಯ ನಂತರ ಎಲ್ಲರಿಗೂ ಸಿಹಿತಿಂಡಿ ಹಂಚಲಾಯಿತು. ಅನಾಥ ಮಹಿಳೆಯರ ಸೇವಾಶ್ರಮ ಬೆಲ್ಮಕ್ಕೆ ತೆರಳಿದ ಘಟಕದ ಸದಸ್ಯರು, ಆಶ್ರಮದ ಸದಸ್ಯರೊಂದಿಗೆ ಸಿಹಿ ಹಂಚಿ […]
Read More
15-08-2019, 4:20 AM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ ವತಿಯಿಂದ ದಿನಾಂಕ 15/08/2019ರಂದು ದೇರಳಕಟ್ಟೆ ಬೆಲ್ಮ ಸೇವಾಶ್ರಮಕ್ಕೆ ಭೇಟಿ ಕೊಡಲಾಯಿತು. ಅಲ್ಲಿಯ ವೃದ್ಧರೊಂದಿಗೆ ವಿವಿಧ ಆಟೋಟ, ಮನೋರಂಜನಾ ಕಾರ್ಯಕ್ರಮ, ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಮಂಗಳೂರು ಘಟಕದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಬೌದ್ಧಿಕ ನೀಡಿದರು. ಘಟಕದ ವತಿಯಿಂದ 50kg ಅಕ್ಕಿ ನೀಡಲಾಯಿತು.. ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಉಮಾ ಶ್ರೀಕಾಂತ್, ಸಲಹೆಗಾರರಾದ ಜಿತೇಂದ್ರ ಜೆ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
Read More
31-07-2019, 5:19 AM
ಕೂಳೂರು : ಯುವವಾಹಿನಿಯಂತಹ ಸಂಘಟನೆ ಇರುವುದರಿಂದ ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರು ಅಮರರಾಗುತ್ತಾರೆ. ನಾನು ಸತ್ತರೆ ಸೈನಿಕನಾಗಿಯೇ ಸಾಯುತ್ತೇನೆ ಎಂದು ಲೆಫ್ಟಿನೆಂಟ್ ಕರ್ನಲ್ ಗ್ರೇಶಿಯಸ್ ಸಿಕ್ವೇರ ಹೇಳಿದರು. ಅವರು ದಿನಾಂಕ 31.07.19 ರಂದು ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು. ಇನ್ನೋರ್ವ ಅತಿಥಿ ಸುಬೇದಾರ್ ಜೋಧಾ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ […]
Read More
28-07-2019, 1:58 PM
ಬೆಳ್ತಂಗಡಿ : ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು. ಸಮಾಜದಲ್ಲಿ ಅವಕಾಶ ವಂಚಿತ ಕಟ್ಟ ಕಡೆಯ ವ್ಯಕ್ತಿಯನ್ನು ಹುಡುಕಿ ಸಾಧನೆ ಮಾಡಲು ಇಂತಹ ಸಂಘಟನೆಗಳ ಮೂಲಕ ಪ್ರೋತ್ಸಾಹ ನೀಡಬೇಕು ಇಂದಿನ ಪ್ರಥಮ ಹೆಜ್ಜೆಯೆ ಪ್ರೋತ್ಸಾಹದ ಸಾವಿರ ಸಾವಿರ ಹೆಜ್ಜೆಯಾಗಿ ಮುನ್ನಡೆಯಲಿ ಎಂದು ಮಂಗಳೂರಿನ ಅಬಕಾರಿ ನಿರೀಕ್ಷಕರು ಗೀತಾ ಪಿ ಹೇಳಿದರು. ಅವರು ದಿನಾಂಕ 28/07/2019ನೇ ಭಾನುವಾರ ಬೆಳ್ತಂಗಡಿ ಸುವರ್ಣ ಅರ್ಕೆಡ್ ನಲ್ಲಿ ನಡೆದ ಯುವವಾಹಿನಿ(ರಿ.)ಬೆಳ್ತಂಗಡಿ ಘಟಕದ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ ಪ್ರಥಮ ಹೆಜ್ಜೆ ಇಡುವ […]
Read More
26-07-2019, 4:58 PM
ಮಾಣಿ : ಸರಕಾರಿ ಶಾಲೆ ಉಳಿಯಲಿ,ಬೆಳೆಯಲಿ ಎಂಬ ಆಶಯದೊಂದಿಗೆ ಯುವವಾಹಿನಿ(ರಿ.)ಮಾಣಿ ಘಟಕಕ್ಕೆ ಮತ್ತೊಂದು ಸರಕಾರಿ ಶಾಲೆಯ ಅವಶ್ಯಕತೆಯನ್ನು ಸಾಕಾರಗೊಳಿಸುವ ಅವಕಾಶಯೊಂದು ಇಂದು ಒದಗಿಬಂತು.. ದಿನಾಂಕ .26-07-2019ರಂದು ಸ.ಹಿ.ಪ್ರಾ.ಶಾಲೆ ಮಲ್ಲಡ್ಕ, ಪೆರ್ನೆ ಇದರ ಶಾಲಾ ಮಕ್ಕಳಿಗೆ ಊಟದ ತಟ್ಟೆಗಳನ್ನು ಘಟಕದ ವತಿಯಿಂದ ನೀಡಲಾಯಿತು.ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಹರೀಶ್ ಬಾಕಿಲ ತಟ್ಟೆಗಳನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.ಜೊತೆಯಲ್ಲಿ ಕಾರ್ಯದರ್ಶಿ ಸುಜಿತ್ ಅಂಚನ್,ನಿ.ಪೂ ಅಧ್ಯಕ್ಷರು ರಾಜೇಶ್ ಬಾಬನಕಟ್ಟೆ, ಜೊತೆ ಕಾರ್ಯದರ್ಶಿ ಜನಾರ್ದನ ಕೊಡಂಗೆ,ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರು ಚೇತನ್ […]
Read More
14-07-2019, 9:13 AM
ಮಂಗಳೂರು : ನಗರಕ್ಕೆ ಹಸಿರು ಮೆರುಗು ನೀಡುವ ಸಂಘಟನೆಗಳ ಕಾರ್ಯ ಶ್ಲಾಘನೀಯವಾದುದು,ಇದೊಂದು ಸಮಾಜಮುಖಿ ಕಾರ್ಯಕ್ರಮ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕರಾದ ಶಶಿಧರ್ ಹೆಗ್ಡೆ ತಿಳಿಸಿದರು. ಅವರು ದಿನಾಂಕ 14/07/2019ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ ಹಾಗೂ SPYSS ಕರ್ನಾಟಕ ನೇತ್ರಾವತಿ ವಲಯ ಮಂಗಳೂರು, ಮಹಾಲಿಂಗೇಶ್ವರ ಉಪವಲಯದ ಆಶ್ರಯದಲ್ಲಿ ಮಂಗಳೂರಿನ ಕೊಟ್ಟರಚೌಕಿಯಿಂದ ಕೊಟ್ಟಾರದವರೆಗೆ ರಸ್ತೆ ವಿಭಜಕದಲ್ಲಿ ಹೂ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಜ್ಞಾನೋದಯ ಭಜನಾ […]
Read More
30-06-2019, 8:25 AM
ವೇಣೂರು: ಯುವವಾಹಿನಿ ಘಟಕ ವೇಣೂರು ಇದರ ಆಶ್ರಯದಲ್ಲಿ ಗ್ರಾ.ಪಂ. ವೇಣೂರು, ಹಿಂದೂ ರುದ್ರಭೂಮಿ ಅನುಷ್ಠಾನ ಸಮಿತಿ ಬಜಿರೆ, ಅರಣ್ಯ ಇಲಾಖೆ ವೇಣೂರು ಇದರ ಸಹಕಾರದಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮವು ರವಿವಾರ ಬಜಿರೆ ಹಿಂದೂರುದ್ರಭೂಮಿ ಮೋಕ್ಷ ಧ್ವಾರ ಇಲ್ಲಿ ಜರಗಿತು. ವೇಣೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಪಚ್ಚೇರಿ ಅಧ್ಯಕ್ಷತೆ ವಹಿಸಿದ್ದರು. ವೇಣೂರು ಗ್ರಾ.ಪಂ. ಉಪಾಧ್ಯಕ್ಷ […]
Read More
23-06-2019, 3:59 PM
ವೇಣೂರು: ಆರೋಗ್ಯ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡುವ ವೇಣೂರು ಯುವವಾಹಿನಿ ಘಟಕದ ಕಾರ್ಯವೈಖರಿಯೇ ವಿಶಿಷ್ಟ. ಯುವ ಮನಸ್ಸುಗಳಿಂದ ನಿಶ್ವಾರ್ಥವಾಗಿ ನಡೆಯುವ ಇಂತಹ ಸೇವೆಯಿಂದ ಸಂಘಟನೆ ಜನಸಾಮಾನ್ಯರಿಗೆ ಹತ್ತಿರವಾಗುತ್ತಿದೆ. ಇಂತಹ ಸಮಾಜಸೇವೆಯ ಪರಿಕಲ್ಪನೆ ಎಲ್ಲೆಡೆ ಫಸರಿಸಲಿ ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು. ಯುವವಾಹಿನಿ ವೇಣೂರು ಘಟಕದ ವತಿಯಿಂದ ರವಿವಾರ ವೇಣೂರು ಲಯನ್ಸ್ ಕ್ಲಬ್ ಸಭಾಭವನದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಆಸರೆ ಎಂಬ […]
Read More
16-06-2019, 4:29 PM
ಮೂಡುಬಿದಿರೆ : ಯುವವಾಹಿನಿ .ರಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ದಿನಾಂಕ 16-6-2019ನೇ ಆದಿತ್ಯವಾರದಂದು “ಯುವಸ್ಪಂದನ” ಸೇವಾ ಯೋಜನೆಯ ಉದ್ಘಾಟನೆ ಹಾಗೂ ವಿದ್ಯಾರ್ಥಿ ವೇತನ” ದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು “ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ. ರಿ ಮೂಡುಬಿದಿರೆಯಲ್ಲಿ ಜರಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಬಿದಿರೆ ಯುವವಾಹಿನಿ ಘಟಕದ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ ಕೆ ವಹಿಸಿದ್ದರು. ಯುವಸ್ಪಂದನ ಸೇವಾಯೋಜನೆಯ ಉದ್ಘಾಟನೆಯನ್ನು ಮುಲ್ಕಿ-ಮೂಡಬಿದಿರೆಯ ಜನಪ್ರಿಯ ಶಾಸಕರಾದ […]
Read More
13-06-2019, 2:39 PM
ಕೂಳೂರು : ಯುವವಾಹಿನಿ ಕೂಳೂರು ಘಟಕದ ವತಿಯಿಂದ ಕಿಟ್ಟೆಲ್ ಪ್ರೌಢಶಾಲೆ ಗೋರಿಗುಡ್ಡೆ ಇಲ್ಲಿಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ದಿನಾಂಕ 13.06.19 ರಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಶಾಲೆಯಲ್ಲಿ ನಡೆಯಿತು. ಶಾಲಾ ಪ್ರಾಂಶುಪಾಲರು ವಿಠ್ಠಲ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ ಯುವವಾಹಿನಿ ಎಂಬುದು ಅತ್ಯುತ್ತಮ ಸಂಘಟನೆಯಾಗಿದ್ದು, ಅತ್ಯುತ್ತಮ ಸಮಾಜಮುಖಿ ಕಾರ್ಯಗಳ ಮೂಲಕ ಯುವಜನತೆಯಲ್ಲಿ ಸ್ಪೂರ್ತಿ ನೀಡಿದೆ. ಹಾಗೂ ಶಾಲಾ ಮಕ್ಕಳಿಗೆ ಮಾದರಿಯಾಗಿದೆ ಎಂದರು.ಮುಂದಿನ ದಿನಗಳಲ್ಲಿ ಯುವವಾಹಿನಿ ಕೂಳೂರು ಘಟಕವು ಸಾಧನೆಯ […]
Read More