ಬಪ್ಪನಾಡು ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಯುವವಾಹಿನಿ ಸೇವೆ
22-03-2018, 2:06 AM
ಯುವವಾಹಿನಿ (ರಿ) ಮುಲ್ಕಿ ಘಟಕದ ಸದಸ್ಯರು ದಿನಾಂಕ 22.03.2018 ರಂದು ಮುಲ್ಕಿ ಬಪ್ಪನಾಡು ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದರು
22-03-2018, 2:06 AM
ಯುವವಾಹಿನಿ (ರಿ) ಮುಲ್ಕಿ ಘಟಕದ ಸದಸ್ಯರು ದಿನಾಂಕ 22.03.2018 ರಂದು ಮುಲ್ಕಿ ಬಪ್ಪನಾಡು ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದರು
18-03-2018, 2:42 PM
ವರುಷಕ್ಕೊಂದು ಮನೆ ಹರುಷಕ್ಕೊಂದು ನೆಲೆ ಎಂಬ ಘೋಷ ವಾಕ್ಯದ ಮೂಲಕ ಕಳೆದ ವರ್ಷ ಯುವವಾಹಿನಿ ಬಂಟ್ವಾಳ ತಾಲೂಕು ಘಟಕವು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಅಜಕಳ ನಿವಾಸಿ ಅಕ್ಕಮ್ಮ ಎಂಬ ಬಡ ಕುಟುಂಬಕ್ಕೆ ಸುಮಾರು ಐದು ಲಕ್ಷ ವೆಚ್ಚದ ಮನೆ ನಿರ್ಮಿಸಿ ಹಸ್ತಾಂತರ ಮಾಡಿದೆ. ಈ ಸಾಲಿನಲ್ಲಿ ಬಂಟ್ವಾಳ ಮೂಡ ಗ್ರಾಮದ ನಂದಬೆಟ್ಟು ಎಂಬಲ್ಲಿನ ಪ್ರೇಮ ಎಂಬ ಬಡ ಕುಟುಂಬಕ್ಕೆ ಮನೆ ನಿರ್ಮಾಣದ ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ದಿನಾಂಕ 18.03.2018 ರಂದು ನಾಟಿ ಕೇಶವ ಶಾಂತಿ […]
15-03-2018, 1:37 AM
ದಿನಾಂಕ 15.03.2018 ರಂದು ದಿ. ಸೋಮಪ್ಪ ಸುವರ್ಣ ರವರ ಸ್ಮರಣಾರ್ಥ ವಾಗಿ ಯುವವಾಹಿನಿ (ರಿ ) ಮುಲ್ಕಿ ಘಟಕದದಿಂದ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ (ಬೋರ್ಡ್ ಶಾಲೆ) ಗೆ ರೂ 5000/ – ಧನಸಹಾಯ ನೀಡಲಾಯಿತು . ಈ ಸಂದರ್ಭದಲ್ಲಿ ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷರಾದ ರಕ್ಷಿತಾ ಕೋಟ್ಯಾನ್ ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಕುಬೆವೂರು , ಹರೀಂದ್ರ ಸುವರ್ಣ, ಉದಯ ಅಮೀನ್ ಮಟ್ಟು . ಪ್ರಕಾಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು
09-03-2018, 2:35 PM
ಸರಕಾರ ಮಾಡುವ ಕೆಲಸವನ್ನು ಯುವವಾಹಿನಿ ಮಾಡುತ್ತಿದೆ, ಉಚಿತ ವಿದ್ಯುತ್ ಕಲ್ಪಿಸುವ ಮೂಲಕ ಬಡವರ ಬಾಳಿಗೆ ಬೆಳಕು ನೀಡಿದಂತಾಗಿದೆ, ಎಂದು ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು. ಅವರು ದಿನಾಂಕ 09.03.2018 ರಂದು ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ ಮುಲ್ಕಿಯ ಚಿತ್ರಾಪು ನಿವಾಸಿ ದೇವದಾಸ್ ಮನೆಯ ಉಚಿತ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷರಾದ ರಕ್ಷಿತಾ […]
07-01-2018, 1:06 PM
ಮಂಗಳೂರು: ಅಭಿವೃದ್ಧಿ ಆಗಿದ್ದೇವೆ ಪರಿವರ್ತನೆ ಆಗಿದೆ ಎಂದು ನಾವೆಷ್ಟೇ ಅಂದುಕೊಂಡರೂ ಸಮಾಜದಲ್ಲಿ ಇಂದಿಗೂ ಸಮಸ್ಯೆಗಳು ಇವೆ, ಜನರ ಈ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡಿದಾಗ ಜನ ಸಂಘಟನೆಗೆ ಹತ್ತಿರವಾಗುತ್ತಾರೆ ಮತ್ತು ಗೌರವಿಸುತ್ತಾರೆ, ಯುವವಾಹಿನಿಯ ಈ ಸಾರ್ಥಕ ಕೆಲಸಗಳಿಂದಲೇ ಅದು ಜನ ಮಾನಸದಲ್ಲಿ ನೆಲೆ ಕಂಡುಕೊಂಡಿದೆ ಎಂದು ಉದ್ಯಮಿ ಸಂತೋಷ್ ಕುಮಾರ್ ಉಗ್ಗೆಲ್‍ಬೆಟ್ಟು ತಿಳಿಸಿದರು. ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಹಕಾರದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಬಿಲ್ಲವ ವಧುವರರ ಅನ್ವೇಷಣಾ ಕಾರ್ಯಕ್ರಮದಲ್ಲಿ ಮುಖ್ಯ […]
10-12-2017, 8:40 AM
ಕೂಳೂರು: ಯುವವಾಹಿನಿ (ರಿ) ಕೂಳೂರು ಘಟಕ ಇದರ ವತಿಯಿಂದ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ದಿನಾಂಕ 10-12-2017 ರಂದು ಕೂಳೂರು ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಮಂದಿರ ಮುಖ್ಯ ರಸ್ತೆಯಿಂದ ಆರಂಭಗೊಂಡು ಧೂಮಾವತಿ ಧೈವಸ್ಥಾನದಲ್ಲಿ ಮುಕ್ತಾಯಗೊಂಡಿತು. ಈ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರ ಕೂಳೂರು ಇದರ ಅಧ್ಯಕ್ಷರಾದ ಶ್ರೀಯುತ ಜಯಾನಂದ್ ಅಮೀನ್ ಪುನ್ಕಮಾರ್ ಇವರು ಚಾಲನೆ ನೀಡಿದರು. ಸ್ಥಳೀಯ ಕಾರ್ಪೊರೇಟರ್ ದಯಾನಂದ ಶೆಟ್ಟಿ ಹಾಗೂ ಯುವವಾಹಿನಿ( ರಿ) ಕೂಳೂರು ಘಟಕದ ಅಧ್ಯಕ್ಷರಾದ […]
26-11-2017, 3:56 PM
ದಿನಾಂಕ 26.11.2017 ರಂದು ಅಡ್ವೆ ಬೈಲು ತೋಟ ಬಳಿಯ ಹೊಳೆಯ ಅಣೆಕಟ್ಟಿಗೆ ಪರಿಸರದ ಅಂತರ್ಜಲದ ವೃಧ್ಧಿಗಾಗಿ ಶ್ರಮದಾನದ ಮೂಲಕ ಹಲಗೆ ಅಳವಡಿಸುವ ಕಾರ್ಯವನ್ನು ಯುವವಾಹಿನಿ(ರಿ) ಅಡ್ವೆ ಘಟಕದ ಸದಸ್ಯರು ಮಾಡಿದರು ಈ ಮೂಲಕ ಅಡ್ವೆ ಪರಿಸರದ ಜನರ ನೀರಿನ ಅಗತ್ಯತೆಗೆ ಸಹಕಾರಿಯಾಗಿದೆ.
15-10-2017, 4:16 PM
ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ದಿನಾಂಕ15.10.2017 ರಂದು ಮೂರು ಬಡ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ನೀಡಲಾಯಿತು ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ತುಕರಾಮ್ ಎನ್ ,ಕುಳೂರು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅಧ್ಯಕ್ಷರಾದ ಜಯನಂದ ಅಮೀನ್ ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಪುಷ್ಪ ರಾಜ್, ಸಂಚಾಲಕರಾದ ಪವಿತ್ರ ಕೆ ಹಾಗೂ ಯುವವಾಹಿನಿ ಕೂಳೂರು ಘಟಕದ ಸದಸ್ಯರು ಉಪಸ್ಥಿತರಿದ್ದರು.
01-10-2017, 12:33 PM
ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ . ನಾವು ದಾನ ಮಾಡುವ ರಕ್ತದಿಂದ ಜೀವ ಉಳಿಸಬಹುದಾಗಿದೆ ;ರಕ್ತದಾನದಿಂದ ಆರೋಗ್ಯವೂ ಉಲ್ಲಾಸಮಯವಾಗಿರುತ್ತದೆ . ಯುವವಾಹಿನಿ ಪುತ್ತೂರು ಘಟಕವು ಇಂತಹ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಾ ವರ್ಷ 365 ದಿನಗಳಲ್ಲಿ ಕೂಡ ರಕ್ತದ ಅವಶ್ಯಕತೆ ಇದ್ದವರಿಗೆ ಸೂಕ್ತವಾಗಿ ಸ್ಪಂದಿಸುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರು ಹಾಗೂ ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಅಧ್ಯಕ್ಷರಾದ ಜಯಂತ ನಡುಬೈಲ್ ತಿಳಿಸಿದರು ದಿನಾಂಕ 01.10.2017 ರಂದು ಯುವವಾಹಿನಿ (ರಿ ) ಪುತ್ತೂರು ಘಟಕದ ಆಶ್ರಯದಲ್ಲಿ […]
30-09-2017, 2:53 PM
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ನವರಾತ್ರಿ ಉತ್ಸವದ ಜಗದ್ವಿಖ್ಯಾತ ಮಂಗಳೂರು ದಸರಾ ಶೋಭಾ ಯತ್ರೆಯು ದಿನಾಂಕ 30.09.2017 ರಂದು ವೈಭವದಿಂದ ಸಂಪನ್ನಗೊಂಡಿತು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿದ ಮಂಗಳೂರು ದಸರಾ ಶೋಭಾಯಾತ್ರೆಗೆ ವಿವಿಧ ಸಂಘ ಸಂಸ್ಥೆಗಳ ಪ್ರವರ್ತಿತ ಧಾರ್ಮಿಕ ,ಸಾಂಸ್ಕೃತಿಕ, ಹುಲಿವೇಷ ನೃತ್ಯ ರೂಪಕಗಳು, ದೇಶದ ಪರಂಪರೆಯ ಟ್ಯಾಬ್ಲೋಗಳು, ತೃಶ್ಯೂರಿನ ಬಣ್ಣದ ಕೊಡೆಗಳು, ಕೇರಳದ ಚೆಂಡೆ ವಾದ್ಯ, ಕಲ್ಲಡ್ಕದ ಶಿಲ್ಪಾ ಬೊಂಬೆ ಬಳಗ, ಬೆಂಗಳೂರಿನ ಬ್ಯಾಂಡ್ ಬಳಗ, ಸೋಮನ ಕುಣಿತ, ಪೂಜಾ ಕುಣಿತಗಳು, ರಾಜ್ಯದ ವಿವಿಧ ಸಾಂಸ್ಕೃತಿಕ ಕಲಾ […]