20-05-2017, 1:17 PM
ಸಮಯ ಬೆಳಗ್ಗಿನ ಹೊತ್ತು: ಸ್ಥಳ: ಮದರಾಸ್ ನ ಹೋಟೆಲ್ ಪಾಮ್ ಗ್ರೋನ ಸ್ವಾಗತ ಕಚೇರಿ. ವಿಶುಕುಮಾರ್ ಸೋಫಾದ ಮೇಲೆ ಕುಳಿತು ಪೇಪರು ಓದುತ್ತಿದ್ದರು. ಆಗ ತಾನೇ ಮೈಸೂರಿನಿಂದ ಬಂದ ಆಲನಹಳ್ಳಿ ಶ್ರೀಕೃಷ್ಣ ರೂಂ ಬುಕ್ ಮಾಡಲು ರಿಸೆಪ್ಷನ್ ಕೌಂಟರ್ ಕಡೆ ಹೋದರು. ವಿಶುಕುಮಾರ್ ಪೇಪರ್ ನ ಎಡೆಯಲ್ಲೇ ಶ್ರೀಕೃಷ್ಣನನ್ನು ನೋಡಿದರು. ಮುಖದಲ್ಲಿ ಕುಶಿ ಕಂಡಿತು. ಕೃಷ್ಣ ಅವರು ರಿಜಿಸ್ಟರ್ ಬುಕ್ ನಲ್ಲಿ ಹೆಸರನ್ನು ನಮೂದಿಸಿ – ಕೀ ಹಿಡಿದುಕೊಂಡು ಒಂದು ಸುತ್ತು ಕಣ್ಣಾಡಿಸಿದರು. ವಿಶುಕುಮಾರ್ ಕುಳಿತಿರುವುದು ಅವರಿಗೆ […]
Read More
15-05-2017, 2:44 PM
” ನೀವು ಬ್ರಾಹ್ಮಣ ಅಲ್ಲ …!” ” ವಿಶುಕುಮಾರ್ – ಅಷ್ಟು ಸುಲಭವಾಗಿ ನಮ್ಮನ್ನು ಒಪ್ಪಿಕೊಳ್ಳಲು ತಯಾರಿಲ್ಲ” ಎಂದು ಹೇಳಿದ್ದೆ. ಅಗಲ ಫ್ರೇಮಿನ ಕನ್ನಡಕದ ಒಳಗಡೆ ತೀಕ್ಷಣ ಕಣ್ಣುಗಳು ನಮ್ಮನ್ನು ಅಳೆಯುವಂತಿದ್ದವು. ” ರೂಂಗೆ ಬಾ ನಿಮ್ಮೊಡನೆ ಸ್ವಲ್ಪ ಮಾತಾಡಬೇಕು” ಎಂದು ನನ್ನನ್ನು ಅವರ ರೂಂಗೆ ಕರೆದೊಯ್ದರು. ನಾನು ಅವರನ್ನು ಹಿಂಬಾಲಿಸಿದೆ . ಆದರೆ ರೂಂನ ಒಳಗಡೆ ಮತ್ತೊಬ್ಬ ವ್ಯಕ್ತಿ ಕುಳಿತಿದ್ದರು. ಅವರನ್ನು ವಿಶುಕುಮಾರ್ ಪರಿಚಯಿಸಿದರು. ” ಇವರು ಆರ್. ನರಸಿಂಹ. ನಮ್ಮ ಸ್ನೇಹಿತರು. ನಾವು ” […]
Read More
10-04-2017, 4:06 AM
ಮದರಾಸಿನ ’ಚಂದಮಾಮ’ ಪಬ್ಲಿಕೇಶನ್‌ರವರು ಕನ್ನಡದಲ್ಲಿ ’ವಿಜಯಚಿತ್ರ’ ಸಿನೀಮ ಮಾಸಿಕ ಮತ್ತು ವನಿತಾ ಮಹಿಳಾ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರು. ರವಿರಾಜ ಅಜ್ರಿಯವರು 1978 ರಲ್ಲಿ ಈ ಪತ್ರಿಕೆಗಳಿಗೆ ಕೆಲಸಕ್ಕೆ ಸೇರಿ 1983 ರ ತನಕ ಅಲ್ಲಿ ಸೇವೆ ಸಲ್ಲಿಸಿದರು. 1983 ರಲ್ಲಿ ಖ್ಯಾತ ಪತ್ರಕರ್ತ ದಿ| ಎಸ್ ವಿಜಯಶೀಲ ರಾವ್ ಅವರ ’ಮುಂಜಾನೆ’ ಕನ್ನಡ ದಿನ ಪತ್ರಿಕೆಗೆ ಸೇರಿದರು. ಇದು ಸಿನೀಮ ಪತ್ರಿಕೆಯಾಗಿದ್ದು ಇಲ್ಲಿ ಸುಮಾರು ಮೂರು ವರ್ಷ ಕೆಲಸ ನಿರ್ವಹಿಸಿದರು. ಚಂದಮಾಮ ಪಬ್ಲಿಕೇಶನ್‌ನ ಮಾಲಕ ವಿಶ್ವನಾಥ ರೆಡ್ಡಿಯವರು ’ವಿಜಯಚಿತ್ರ’ ಪತ್ರಿಕೆಯ ಕಚೇರಿಯನ್ನು ಬೆಂಗಳೂರಿನ […]
Read More
01-02-2017, 11:28 AM
ಈ ಜಗತ್ತೆಂಬ ಮಾಯಲೋಕವು ಶತಕೋಟಿ ಜೀವರಾಶಿಗಳಿಂದ ತುಂಬಿ ತುಳುಕುತ್ತಿದ್ದರೂ, ಈ ಎಲ್ಲಾ ಜೀವರಾಶಿಗಳಿಗಿಂತ ಶ್ರೇಷ್ಠವಾದ ಹಾಗೂ ಭಿನ್ನವಾದ ಜೀವಿ ಮಾನವ. ಆಲೋಚನಾ ಶಕ್ತಿ ಮನುಷ್ಯ ಪ್ರಾಣಿಗೆ ಬಿಟ್ಟು ಇನ್ನಾವುದೇ ಪ್ರಾಣಿಗಳಿಗಿಲ್ಲ ಎಂಬ ಸತ್ಯ ನಮಗೆಲ್ಲಾ ತಿಳಿದಿದೆ. ಉಳಿದ ಪ್ರಾಣಿಗಳಿಗಿಂತ ತನ್ನ ಭಾವನೆಗಳನ್ನು ಇತರರೊಂದಿಗೆ ಭಾಷೆಯ ಮೂಲಕ, ಮಾತಿನಿಂದ ಸಂವಹನ ರೂಪದಲ್ಲಿ ವ್ಯಕ್ತಪಡಿಸುವ ವಿಶೇಷ ಸಾಮರ್ಥ್ಯ ಗಳಿಸಿದಂತ ಮಾನವ ವರ್ಗದಲ್ಲಿ ಜನಿಸಿದ ನಾವೇ ಧನ್ಯರು. ಪರಶುರಾಮ ಸೃಷ್ಠಿಯ ಈ ತುಳುನಾಡಿನಲ್ಲಿ ಬೈದ್ಯ ಅಂದರೆ ವೈದ್ಯ, ಬಿರುವ ಅಂದರೆ ವೀರ […]
Read More
25-12-2016, 11:18 AM
ದಿನಾಂಕ 25-12-2016 ರಂದು ಸಾಬರ ಕಟ್ಟೆಯ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಯಡ್ತಾಡಿ ಘಟಕದ ವತಿಯಿಂದ ಜರಗಿದ ಕೋಟ ಹೋಬಳಿ ಮಟ್ಟದ ಬಿಲ್ಲವರ 6ನೇ ಸಾಹಿತ್ಯಿಕ-ಸಾಂಸ್ಕೃತಿಕ ಸಮ್ಮೇಳನ ’ದೀವಿಗೆ-2016’ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿಯವರು ಭಾಷಣ ಮಾಡುತ್ತಿರುವುದು.
Read More
10-10-2016, 5:09 AM
ಬಹುಶಃ ಬಲು ತಡವಾಗಿ ಒಂದು ಪ್ರಶ್ನೆ ನನ್ನ ಮನದ ಮುಂದೆ ಸುಳಿದಾಡುತ್ತಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಮಾಜಿಕ ಅವಘಡಗಳಿಗೆ ಬಲಿಯಾಗುತ್ತಿರುವವರ ನಡುವೆ ಬಿಲ್ಲವ ಯುವ ಸಮುದಾಯದ ಪಾಲು ಅಧಿಕ ಎನ್ನುವುದನ್ನು ನಾವು ಒಪ್ಪಬೇಕಾದ ಸತ್ಯ. ನಾನಾ ಕಾರಣದಿಂದ ಮನೆ ತೊರೆಯುವುದರಿಂದ ಹಿಡಿದು ಜೈಲು ಸೇರುವವರೆಗೆ ನಮ್ಮವರ ಪಾಲು ಹಿರಿದು ಎನ್ನಬಹುದು. ಲೋಕಕ್ಕೆ ಶಾಂತಿ ಮಂತ್ರವನ್ನು ಪ್ರತಿಪಾದಿಸಿದ ಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುವರ್ಯರ ಆದರ್ಶದಡಿಯಲ್ಲಿ ಜನಿಸಿದ ನಮಗೆ ಅವರ ತತ್ವಾದರ್ಶಗಳೇ ಅರ್ಥವಾಗದೇ ಇರುವುದು ದುರಂತವೇ ಸರಿ. ಲೋಕಕ್ಕೆ ಶಾಂತಿ ಮಂತ್ರ […]
Read More
01-10-2016, 5:14 AM
ತುಳುನಾಡಿನ ಪರಂಪರೆ, ದೈವಾರಾಧನೆಯ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 88 ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿ ಬಿಲ್ಲವ ಸಂಘ ಮತ್ತು ಯುವವಾಹಿನಿ ಪಡುಬಿದ್ರಿ ಘಟಕವು ಜಂಟಿಯಾಗಿ ನಡೆಸಿದ ಕೊಡಿಯಡಿತ ಸತ್ಯೊಲು ಎಂಬ ವಿಚಾರಗೋಷ್ಟಿಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿ ಪುರಾತನ ಕಾಲದಲ್ಲಿ ಕೂಡು ಕುಟುಂಬದಲ್ಲಿ ಮಹಿಳೆಯರೇ ದೈವಗಳಿಗೆ ದೀಪವಿಡುವ ಪರಿಕ್ರಮವಿದ್ದು ಕಾಲಾನಂತರ ಮಹಿಳೆಯರನ್ನು […]
Read More
06-09-2016, 5:31 AM
(ಬ್ರಹ್ಮಶ್ರೀ ನಾರಾಯಣ ಗುರುವರ್ಯರ 162ನೇ ಜಯಂತಿಯ ಸಂದರ್ಭದಲ್ಲಿ ಸಕಾಲಿಕವಾಗಿ ಈ ಲೇಖನ) ಮನುಕುಲದ ಉದ್ಧಾರಕ್ಕಾಗಿ ಜಗತ್ತಿನಲ್ಲಿ ಅನೇಕ ಸಂತರು, ಮಹಾಂತರು, ಶರಣರು, ದಾರ್ಶನಿಕರು, ತತ್ವಜ್ಞಾನಿಗಳು ಅವತರಿಸಿ ತಮ್ಮ ತಪಸ್ಸು, ಚಿಂತನೆ, ಸಾಧನೆಗಳ ಪ್ರಭಾವದಿಂದ ಜನರಲ್ಲಿ ಜಡ್ಡುಗಟ್ಟಿದ್ದ ಮೂಢನಂಬಿಕೆಗಳನ್ನು ನಿವಾರಣೆ ಮಾಡಿದರು. ವೇದ ಉಪನಿಷತ್ತುಗಳ ತವರೂರಾದ ನಮ್ಮ ಭಾರತ ದೇಶದಲ್ಲಿಯೂ ಬುದ್ಧ, ಶಂಕರ, ಚೈತನ್ಯ, ಮಾಧವ, ರಾಮಾನುಜ, ಜಿನ, ಬಸವಣ್ಣ ಮೊದಲಾದ ಮತ ಸ್ಥಾಪಕರೂ ನಾಮದೇವ, ಜ್ಞಾನದೇವ, ತುಕಾರಾಮ, ಕಬೀರ, ಪುರಂದರದಾಸ, ಕನಕದಾಸ ಮೊದಲಾದ ಸಾಧುಸಂತರೂ ಅವರವರ ಕಾಲದಲ್ಲಿ […]
Read More