ನಾ ಮೆಚ್ಚಿದ ವಿಶುಕುಮಾರರ ಎರಡು ಚಿತ್ರ ಲೇಖನಗಳು
04-11-2012, 5:04 AM
ಹಿನ್ನೋಟ ಕುಂದಾಪುರದ ಬಸ್‌ಸ್ಟ್ಯಾಂಡ್ ಭಿಕ್ಷುಕ ಮತ್ತು ಬೊಬ್ಬರ್ಯ ಕಟ್ಟೆ ದಿವಂಗತ ವಿಶುಕುಮಾರ್‌ರವರನ್ನು ಆಳವಾಗಿ ಅಭ್ಯಸಿಸಿದರೆ ಅವರ ಸಾಹಿತ್ಯಿಕ ಸಂಬಂಧ ಹೆಚ್ಚು ಪ್ರಸಿದ್ಧಿ ಪಡೆದದ್ದು ಅವರು ಕುಂದಾಪುರದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಇನ್ಸ್‌ಪೆಕ್ಟರ್ ಆಗಿದ್ದಾಗ ಎನ್ನಬಹುದು. ಆಗ ನಾನು ಕುಂದಾಪುರ ಭಂಡಾರ್‌ಕಾರ್‍ಸ್ ಕಾಲೇಜಿನಲ್ಲಿ ಓದುತ್ತಿದ್ದುದರಿಂದ ಅವರ ಲೇಖನಗಳು ಉದಯವಾಣಿಯಲ್ಲಿ ಬರುತ್ತಿರುವುದನ್ನು ಓದುವವರಲ್ಲಿ ನಾನೂ ಒಬ್ಬನಾಗಿದ್ದೆ. ಹೆಚ್ಚಾಗಿ ಚಿತ್ರ- ಲೇಖನ (Feature Articles) ಗಳನ್ನು ಬರೆಯಲು ಇಚ್ಚಿಸುತ್ತಿದ್ದ ಇವರು, ನಾವು ದಿನನಿತ್ಯ ನೋಡುವ ವಿಷಯಗಳನ್ನು ಆಯ್ದು ಬರೆಯುತ್ತಿದ್ದರು. ಆಗಿನ ಕಾಲದಲ್ಲಿ […]