ನಾಗಾ ಶಿರೂರ್ - ರಜತ ರಶ್ಮಿ -2012

ನಾ ಮೆಚ್ಚಿದ ವಿಶುಕುಮಾರರ ಎರಡು ಚಿತ್ರ ಲೇಖನಗಳು

ಹಿನ್ನೋಟ

ಕುಂದಾಪುರದ ಬಸ್‌ಸ್ಟ್ಯಾಂಡ್ ಭಿಕ್ಷುಕ ಮತ್ತು ಬೊಬ್ಬರ್ಯ ಕಟ್ಟೆ

ದಿವಂಗತ ವಿಶುಕುಮಾರ್‌ರವರನ್ನು ಆಳವಾಗಿ ಅಭ್ಯಸಿಸಿದರೆ ಅವರ ಸಾಹಿತ್ಯಿಕ ಸಂಬಂಧ ಹೆಚ್ಚು ಪ್ರಸಿದ್ಧಿ ಪಡೆದದ್ದು ಅವರು ಕುಂದಾಪುರದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಇನ್ಸ್‌ಪೆಕ್ಟರ್ ಆಗಿದ್ದಾಗ ಎನ್ನಬಹುದು. ಆಗ ನಾನು ಕುಂದಾಪುರ ಭಂಡಾರ್‌ಕಾರ್‍ಸ್ ಕಾಲೇಜಿನಲ್ಲಿ ಓದುತ್ತಿದ್ದುದರಿಂದ ಅವರ ಲೇಖನಗಳು ಉದಯವಾಣಿಯಲ್ಲಿ ಬರುತ್ತಿರುವುದನ್ನು ಓದುವವರಲ್ಲಿ ನಾನೂ ಒಬ್ಬನಾಗಿದ್ದೆ. ಹೆಚ್ಚಾಗಿ ಚಿತ್ರ- ಲೇಖನ (Feature Articles) ಗಳನ್ನು ಬರೆಯಲು ಇಚ್ಚಿಸುತ್ತಿದ್ದ ಇವರು, ನಾವು ದಿನನಿತ್ಯ ನೋಡುವ ವಿಷಯಗಳನ್ನು ಆಯ್ದು ಬರೆಯುತ್ತಿದ್ದರು. ಆಗಿನ ಕಾಲದಲ್ಲಿ ಈಗಿನಂತೆ ಸಂಪೂರ್ಣ ಆಟೋಮ್ಯಾಟಿಕ್, ಮೊಬೈಲ್ ಕ್ಯಾಮರ ಇಲ್ಲದಿರುವುದರಿಂದ ಇದಕ್ಕಾಗಿ ಅವರು ಕುಂದಾಪುರದ ಉಷಾ ಸ್ಟುಡಿಯೊದವರ ನೆರವು ಪಡೆಯುತ್ತಿದ್ದರು. ಉಷಾ ಸ್ಟುಡಿಯೊದಲ್ಲಿ ಆಗ ಕೆಲಸ ಮಾಡುತ್ತಿದ್ದ ಗೋವಿಂದಣ್ಣ, ಒಳ್ಳೆ ಎಳೆ ಪ್ರಾಯದ ಹುಡುಗನಾದುದರಿಂದ ಇವರಿಗೆ ಸಾತ್ ನೀಡುತ್ತಿದ್ದರು. ಮುಂದೆ ನನಗೂ ಅವರ ಪರಿಚಯ ಆದರೂ ನಾನು ಉದ್ಯೋಗ ನಿಮಿತ್ತ ಹಲವಾರು ಊರು ತಿರುಗಬೇಕಾಗಿ ಬಂದಿದ್ದರಿಂದ, ಮತ್ತೆ ಕುಂದಾಪುರದ ನಂಟೇ ಬಿಟ್ಟುಹೋಯಿತು.

ವಿಶುಕುಮಾರ್‌ರವರ ಬರವಣಿಗೆ ಶೈಲಿಯಲ್ಲಿ ಒಂದು ವಿಶೇಷತೆ ಏನೆಂದರೆ, ಹೆಚ್ಚಿನ ಅವರ ಲೇಖನಗಳು ಪತ್ರಿಕಾ ವರದಿಯಂತೆ ಇದ್ದು ಅದಕ್ಕೆ ಸಾಹಿತ್ಯಿಕ ಒಗ್ಗರಣೆ ಇರುತ್ತಿತ್ತು. ಅವರ ಬರವಣಿಗೆಯಲ್ಲಿ ಒಂದು ವಿಶೇಷ ಏನೆಂದರೆ, ಅವರು ತನ್ನ ಸುತ್ತ- ಮುತ್ತ ಇರುವ ವಸ್ತುಸ್ಥಿತಿಯನ್ನೆ ಹೆಚ್ಚು ಆಯ್ದುಕೊಳ್ಳುತ್ತಿದ್ದರು. ಬಹುಶಃ ಕರಾವಳಿ ಹಾಗೂ ಪ್ರಜಾಪ್ರಭುತ್ವ ಕಾದಂಬರಿಗಳು ಇದೇ ವಾಸ್ತವಿಕತೆಯನ್ನು ಹೊರಸೂಸಿವೆ ಎನ್ನಬಹುದು. 1971 ರಲ್ಲಿ ಉದಯವಾಣಿ ಹೊಸತಾಗಿ ಆರಂಭವಾಗಿ , ಕರಾವಳಿ ಜಿಲ್ಲೆ ಉದ್ದಕ್ಕೂ ಎಲ್ಲರ ಮನಸೆಳೆದು ಅಂದದ ಸುಂದರ ಪ್ರಿಂಟ್, ವಿನ್ಯಾಸಕ್ಕೆ ಹೆಸರಾಗಿತ್ತು. ಅದರೊಟ್ಟಿಗೆ ವಿಶುಕುಮಾರರ ಚಿತ್ರ- ಲೇಖನ ಬರವಣಿಗೆಗಳು ಅದಕ್ಕೆ ಇನ್ನಷ್ಟು ಮೆರುಗು ಕೊಡುತ್ತಿದ್ದವು. ಪ್ರತೀ ವಾರ, ಹೆಚ್ಚಾಗಿ ರವಿವಾರ ಒಂದಲ್ಲ ಒಂದು ವರದಿ ಲೇಖನಗಳನ್ನು ಬರೆಯುತ್ತಿದ್ದ ಅವರು ಪತ್ರಿಕೆಯ ಓದುಗರಲ್ಲಿ ವ್ಯಾಪಕವಾಗಿ ಆಸಕ್ತಿ ಮೂಡಿಸಿದ್ದರು. ಅಂತಹ ಲೇಖನಗಳು ಇಂದಿನ ಪತ್ರಿಕಾರಂಗದಲ್ಲಿ ಮಾಯವಾಗುತ್ತಿರುವುದು ನಿಜಕ್ಕೂ ಬೇಸರದ ವಿಷಯ.

ಹೀಗೆ ನಾನು ಉದಯವಾಣಿ ಓದುಗನಾಗಿ ಅಂದು ನನ್ನನ್ನು ಗಮನ ಸೆಳೆದ ಎರಡು ಚಿತ್ರ ಲೇಖನಗಳು ನನಗೆ ಅತೀ ಖುಷಿ ಕೊಟ್ಟವು. ಅವುಗಳಲ್ಲಿ ಒಂದು ಕುಂದಾಪುರದ ಅಂದಿನ ಬಸ್‌ಸ್ಟಾಂಡ್‌ನಲ್ಲಿ (ಈಗಿನ ಹಳೆಸ್ಟ್ಯಾಂಡ್) ದಿನಾಲೂ ಕೈಯಲ್ಲೊಂದು ಆಲ್ಯೂಮಿನಿಯಂ ತಟ್ಟೆ ಹಿಡಿದುಕೊಂಡು ಕಪ್ಪು ಶಾಲು ಹಾಕಿ ಬೇಡುತ್ತಿದ್ದ ಭಿಕ್ಷುಕನ ಬಗ್ಗೆ ಬರೆದ ಲೇಖನ. ಇನ್ನೊಂದು ಕುಂದಾಪುರದ ಬಸ್ರೂರು ಮೂರುಕೈ ಸಮೀಪ ಇರುವ ಬೊಬ್ಬರ್ಯ ಕಟ್ಟೆಯ ಬಗ್ಗೆ ಬರೆದ ಚಿತ್ರ- ಲೇಖನಗಳು. ಒಂದರಲ್ಲಿ ಓ, ಅಯ್ಯಾ ಏನಾದರೂ ಕೊಡಿ ಎಂದು ತಟ್ಟೆ ಅಲ್ಲಾಡಿಸುತ್ತ ಭಿಕ್ಷೆಯನ್ನು ಬೇಡುತ್ತಾ, ಬಸ್ಸಿನಿಂದ ಬಸ್ಸಿಗೆ ಹೋಗುವ ಆ ಕುರುಡ ಭಿಕ್ಷುಕನ ದೈನಂದಿನ ಜೀವನದ ಬಗ್ಗೆ ಅವರು ಬರೆದ ಚಿತ್ರ- ವರದಿ ನಿಜಕ್ಕೂ ಮನೋಜ್ಞವಾಗಿತ್ತು. ದಿನ ನಿತ್ಯ ನೂರಾರು ಮಂದಿ ಜನರು, ಪ್ರಯಾಣಿಕರು ಅವನನ್ನು (ಆತನ ಹೆಸರು ಈಗ ಮರೆತಿದೆ) ನೋಡುತ್ತಿದ್ದರೂ, ಅವನ ಕಾಯಕವನ್ನು ಜನರಿಗೆ ಪತ್ರಿಕೆ ಮೂಲಕ ಅವರು ಪರಿಚಯ ಮಾಡಿದ ರೀತಿ ಎಂತವರಿಗೂ ಅವನ ಮೇಲೆ ಕರುಣೆ ಬರುವಂತೆ ವಿಶುಕುಮಾರ್‌ರವರು ಬರೆದಿದ್ದರು. ಇದು ವೃತ್ತಿ ಪರ ವರದಿಗಾರನಿಗೂ ಅಷ್ಟೊಂದು ಬರದು. ಯಾಕೆಂದರೆ ತುಂಬಾ ಕೆಳ ಮಟ್ಟದ ಒಬ್ಬ ವ್ಯಕ್ತಿಯ ಬದುಕನ್ನು ಆಯ್ದು, ಒಬ್ಬ ಲೇಖಕ ಬರೆಯಬೇಕೆಂದರೆ ಅವನಿಗೆ ಆ ಆಕರ್ಷಣೆ ಇದ್ದರೇನೆ ಸಾಧ್ಯ. ಉದಯವಾಣಿಯಲ್ಲಿ ಅಂಧ ಭಿಕ್ಷುಕನ ಬಗ್ಗೆ ಬರೆದ ಆ ಲೇಖನ, ಎಷ್ಟೊಂದು ಓದುಗರ ಮನ ಸೆಳೆಯಿತು ಎಂದರೆ, ಕಾಲೇಜು ಹುಡುಗ, ಹುಡುಗಿಯರಿಂದ ಹಿಡಿದು, ದಿನನಿತ್ಯ ಬಸ್ ಪ್ರಯಾಣ ಮಾಡುವವರು, ನೋಡಿ, ಇವನೆ, ಇವನ ಬಗ್ಗೆ ಉದಯವಾಣಿಯಲ್ಲಿ ವಿಶುಕುಮಾರರವರು ಬರೆದದ್ದು ಅನ್ನುತ್ತಿದ್ದರು. ದಿನ ಬೆಳಗಾಗುವುದರೊಳಗೆ ಈಗಿನ ಸೆಲಬ್ರಿಟಿಗಳಂತೆ ಆ ಕುರುಡ ಭಿಕ್ಷುಕನ ಪರಿಚಯ ಎಲ್ಲರಿಗಾಗಿತ್ತು. ದಿನ ನಿತ್ಯ ಎಲ್ಲರು ಕುಂದಾಪುರ ಬಸ್‌ಸ್ಟ್ಯಾಂಡಿನಲ್ಲಿ ಕಾಣುವ ಭಿಕ್ಷುಕನ ಜೀವನ ಹೇಗೆ ನಡೆಯುತ್ತಿದೆ ಎಂದು ಜನರಿಗೆ ತಿಳಿಹೇಳಿದ ಅವನ ಭಾವಚಿತ್ರ ಸಹಿತದ ಲೇಖನ, ಸಾಹಿತ್ಯಿಕವಾಗಿ ನನ್ನನ್ನು ಆಕರ್ಷಿಸಿದ ಅವರ ಬರವಣಿಗೆಗಳಲ್ಲಿ ಒಂದು. ಇದರ ಹಿಂದೆ ವಿಶ್ಲೇಷಣೆ ಮಾಡುವಂತಹದ್ದು ಬಹಳಷ್ಟಿದೆ.

ಹಾಗೆಯೆ ಗಮನ ಸೆಳೆದ ಇನ್ನೊಂದು ಲೇಖನ ಇದೆ ೧೯೭೩-೭೪ರ ಸಮಯದಲ್ಲಿ ಉದಯವಾಣಿಯಲ್ಲಿ ಪ್ರಕಟವಾದದ್ದು, ಕುಂದಾಪುರದ ರಾಷ್ಟ್ರಿಯ ಹೆದ್ದಾರಿ 17 ರಲ್ಲಿ (ಈಗಿನ 66) ಕುಂದಾಪುರದಿಂದ ಮೂರು ಕಿ.ಮೀ. ದೂರ ಇರುವ ಬೊಬ್ಬರ್ಯ ಕಟ್ಟೆಯ ಬಗ್ಗೆ ಬರೆದ ಚಿತ್ರ-ಲೇಖನ ಅದು. ಈ ಬೊಬ್ಬರ್ಯ ಕಟ್ಟೆ ಈಗಲೂ ರಸ್ತೆ ಬದಿಯಲ್ಲಿದ್ದು, ಚತುಷ್ಪಥ ರಸ್ತೆ ಮಧ್ಯೆ ಇನ್ನೂ ಇದೆ. ಹೆಚ್ಚಿನ ಬಸ್ಸಿನವರು ಅಲ್ಲಿ ನಿಲ್ಲಿಸಿ, ಬೊಬ್ಬರ್ಯನಿಗೆ ಕಾಣಿಕೆ ಹಾಕಿ, ಪ್ರಸಾದ ತೆಗೆದು, ನಮಸ್ಕರಿಸುವುದು ಇಲ್ಲಿ ಸಂಪ್ರದಾಯ. ಉಡುಪಿ ಕಡೆಯಿಂದ ಬರುವಾಗ, ಬಸ್ಸು ಬೊಬ್ಬರ್ಯನ ಕಟ್ಟೆ ಹತ್ತಿರ ಬಂತೆಂದರೆ ಕುಂದಾಪುರ ಪಟ್ಟಣ ಬಂತು ಎಂದೇ ಲೆಕ್ಕ. ತಂತಮ್ಮ ಲಗ್ಗೇಜು ಎತ್ತಿಕೊಳ್ಳಲು ಶುರು ಮಾಡುತ್ತಾರೆ.

ದಿನನಿತ್ಯ ಸಾವಿರಾರು ಜನರು ಈ ಬೊಬ್ಬರ್ಯ ಕಟ್ಟೆಯನ್ನು ನೋಡುತ್ತಾರೆ. ಆದರೆ ವಿಶುಕುಮಾರರು ಒಂದು ಸಣ್ಣ ವಿಷಯವನ್ನು ಅದಕ್ಕೊಂದು ಜೀವ ಕೊಟ್ಟು, ಒಪ್ಪ ಓರಣ ನೀಡಿ, ಎಲ್ಲರೂ ಗಮನಿಸಿಯೂ, ಗಮನಿಸದಂತೆ ಇರುವ ಈ ಹೈವೇ ರಸ್ತೆ ಬದಿಯ ದೇವರನ್ನು ಐತಿಹಾಸಿಕವಾಗಿ, ಪೌರಾಣಿಕವಾಗಿ ಚೆನ್ನಾಗಿ ಬರೆದಿದ್ದರು. ಇಂತಹ ದೇವಸ್ಥಾನಗಳು, ರಸ್ತೆ ಉದ್ದಕ್ಕೂ ನಾವು ಇಂದು ಕಾಣುತ್ತೇವೆ. ಆದರೆ ವಿಶೇಷತೆ ಎಂದರೆ, ಕುಂದಾಪುರದ ಬೊಬ್ಬರ್ಯ ಕಟ್ಟೆ, ಬಾರಿ ಚೊಕ್ಕವಾಗಿ, ಸುಂದರ ಗುಡಿಯೊಂದಿಗೆ ಭಕ್ತರನ್ನು ಈಗಲೂ ಆಕರ್ಷಿಸುತ್ತಿದೆ. ಉದಯವಾಣಿಯಲ್ಲಿ ಆ ಚಿತ್ರ-ಲೇಖನ ಬಂದ ನಂತರ ಬೊಬ್ಬರ್ಯ ದೇವರು ಎಲ್ಲರನ್ನು ಇನ್ನಷ್ಟು ಹೆಚ್ಚು ಆಕರ್ಷಿಸಿದ್ದ. ಜನರಿಗೆ ಅದರ ಬಗ್ಗೆ ತಿಳಿಸುವ ಆ ಪ್ರಯತ್ನ ಅಂದು ಸಾಮಾನ್ಯ ಓದುಗನಾದ ನನ್ನ ಗಮನ ಸೆಳೆದಿತ್ತು. ಹೆಚ್ಚು ಕಡಿಮೆ ಸಮಕಾಲೀನ ಈ ಎರಡು ಚಿತ್ರ-ಲೇಖನಗಳು ಪತ್ರಿಕಾ ವರದಿಯಂತೆ ಕಂಡರೂ ಅದರಲ್ಲಿ ಸಾಹಿತ್ಯಿಕ ರುಚಿ ಇತ್ತು. ಸಾಮಾನ್ಯವಾಗಿ ರವಿವಾರ ಬರುವ ಅವರ ಇಂತಹ ಲೇಖನಗಳು ಓದುಗರಲ್ಲಿ ಚರ್ಚಿಸಲ್ಪಡುತ್ತಿದ್ದವು. ಇದುವೆ ದಿವಂಗತ ವಿಶುಕುಮಾರರ ಬರವಣಿಗೆಯ ಆಕರ್ಷಣೆಯಾಗಿತ್ತು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!