ಸಾಹಿತ್ಯ

ಜಾತಿ ಒಂದು ಧರ್ಮ ಒಂದು ದೇವರು ಒಬ್ಬನೇ

ಹದಿನೆಂಟು, ಹತ್ತೊಂಭತ್ತನೇ ಶತಮಾನಗಳಲ್ಲಿ ಕೇರಳದ ಸಮಾಜ ಅಜ್ಞಾನ, ಅಂಧಶ್ರದ್ಧೆಗಳ ಅಂಧಕಾರದಲ್ಲಿ ಮುಳುಗಿತ್ತು. ಕೆಳವರ್ಗದವರಿಗೆ ಮೇಲ್ವರ್ಗದವರ ಹಿಂಸೆ, ಕಿರುಕುಳಗಳಿಂದಾಗಿ ಬದುಕುವುದೇ ಕಷ್ಟವಾಗಿತ್ತು. ಆ ಕಾಲದ ಜಾತಿ ವ್ಯವಸ್ಥೆಯ ಕ್ರೂರತೆಯಿಂದ ಪಾರಾಗಲು ದಲಿತರು ಮತಾಂತರಕ್ಕೆ ಮುಂದಾಗುತ್ತಿದ್ದರು. ಅಂತಹ ವಿಲಕ್ಷಣ ಕಾಲಘಟ್ಟದಲ್ಲಿ ಜನ್ಮತಾಳಿದ ನಾರಾಯಣ ಗುರು ಎಳವೆಯಲ್ಲೇ ಸಮಾಜದಲ್ಲಿ ಬೇರೂರಿರುವ ಅಸ್ಪೃಶ್ಯತೆ, ಅಜ್ಞಾನ, ಮೂಢನಂಬಿಕೆಗಳನ್ನು ಕಂಡು ಮರುಗುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ದೀನದಲಿತರ ಸೇವೆ, ಶುಶ್ರೂಷೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ತಮ್ಮ ತಾಯಿ-ತಂದೆ ನಿಧನರಾದ ಮೇಲೆ ಹುಟ್ಟಿದೂರಿಗೆ ವಿದಾಯ ಹೇಳಿ ಪರಿವ್ರಾಜಕರಾಗಿ ಸಂಚಾರಕ್ಕೆ ತೊಡಗುವ ಗುರು, […]

Read More

ದಿ| ವಿಶುಕುಮಾರ್ : ಬದುಕು-ಸಾಧನೆ

ಕರಾವಳಿ ಕಂಡ ಧೀಮಂತ ಪ್ರತಿಭಾಶಾಲಿಗಳ ಸಾಲಿನ ಮಿನುಗು ನಕ್ಷತ್ರವಾದ ವಿಶುಕುಮಾರ್ ದಂತಕತೆಯಾದ ವ್ಯಕ್ತಿ. ತುಳುವಿನ ಉಸಿರು, ಕನ್ನಡದ ಶಕ್ತಿ, ಸಮಾಜದ ಸ್ಫೂರ್ತಿ, ಚೆಲುವಿನ ಮೂರ್ತಿಯಾಗಿದ್ದ ವಿಶುಕುಮಾರ್ ಒಂದು ಕಾಲದ ಪ್ರತಿಭಾವಂತ ನಟ, ನಿರ್ದೇಶಕ, ಕಾದಂಬರಿಕಾರ, ಪತ್ರಕರ್ತ, ಸಂಘಟಕ, ಸಿನಿಮಾ ನಿರ್ದೇಶಕರಾಗಿ, ಶ್ರೇಷ್ಠ ಸಾಧನೆಗಳನ್ನು ಮಾಡಿದವರು, ಇನ್ನೆಷ್ಟೋ ಉಪಯುಕ್ತ ಕೊಡುಗೆಗಳನ್ನು ನೀಡಲಿರುವ ಭರವಸೆಯ ಅಕಾಲದಲ್ಲೇ ಅಗಲಿ ಹೋದವರು. 1797 ರಲ್ಲಿ ಟಿಪ್ಪುಸುಲ್ತಾನ್ ಸಮರ ಕಾಲದಲ್ಲಿ ಮಂಗಳೂರು ಬೋಳೂರಿನ ಕಡಲತೀರದಲ್ಲಿ ಕಟ್ಟಿಸಿದ ಕೋಟೆ ಸುಲ್ತಾನ್ ಬತ್ತೇರಿ, ಇಂದು ಪ್ರವಾಸಿಗರ ರಮ್ಯ ತಾಣ, […]

Read More

ವಿಶುಕುಮಾರ್- ತಾತ್ವಿಕ ನಿಲುವುಗಳು

ಅಧ್ಯಯನ ವಿಶುಕುಮಾರ್ ಕಾಲವಾಗಿ (1989) ಇದೀಗ 26 ವರ್ಷಗಳು ಪೂರ್ಣವಾಗುತ್ತಿದೆ. ಆದರೆ ಅವರು ಬಿಟ್ಟು ಹೋದ ಸಾಹಿತ್ಯ ಕೃತಿಗಳು, ನಾಟಕ, ಸಿನೆಮಾಗಳು ಇಂದಿಗೂ ನಮ್ಮನ್ನು ಕಾಡಿಸುತ್ತವೆ; ಯೋಚನೆಗೆ ಹಚ್ಚುತ್ತವೆ. ವಿಶುಕುಮಾರ್ ತಮ್ಮ ಕೃತಿಗಳಲ್ಲಿ ಆಯ್ದುಕೊಂಡ ವಸ್ತುಗಳು, ಸಾಮಾಜಿಕ ಸಮಸ್ಯೆಗಳು, ಸಂಘರ್ಷಗಳು, ಇವತ್ತಿಗೂ ಪ್ರಸ್ತುತವೆನಿಸುತ್ತವೆ. ವಿಶುಕುಮಾರ್ ಭಿನ್ನವಾಗಿ ಆಲೋಚಿಸುವ ಮನೋಧರ್ಮದವರು. ಹಾಗಾಗಿ ಕೆಲವೊಮ್ಮೆ ಅವರು ವಿವಾದಾತ್ಮಕ ವ್ಯಕ್ತಿಯೂ ಆದರು. ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ಯಶಸ್ಸನ್ನು, ಪ್ರಸಿದ್ಧಿಯನ್ನು ಪಡೆಯುವುದನ್ನು ನಾವು ಕಾಣುತ್ತೇವೆ. ಆದರೆ ವಿಶುಕುಮಾರ್ ತಾವು ಪ್ರವೇಶಿಸಿದ ಎಲ್ಲಾ […]

Read More

ಬಿಲ್ಲವರ ಎರಡು ಮುಖ

ಸ್ಥಿತಿ-ಗತಿ – ವಿಶುಕುಮಾರ್ (1979 ರಲ್ಲಿ ಬೆಳ್ತಂಗಡಿ ಬಿಲ್ಲವ ಸಂಘವು ಹೊರತಂದ  ’ಕೋಟಿ- ಚೆನ್ನಯ’ ಎಂಬ ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡ  ಖ್ಯಾತ ಸಾಹಿತಿ ದಿ| ವಿಶುಕುಮಾರ್ ಅವರ ಇಂದಿಗೂ ಪ್ರಸ್ತುತವೆನಿಸುವ ಒಂದು ಲೇಖನ…) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಜನಾಂಗಕ್ಕೆ ಬಿಲ್ಲವ, ಪೂಜಾರಿ, ಬೈದ, ಹಳೇಪೈಕ ಇತ್ಯಾದಿ ಹೆಸರುಗಳು. ಉತ್ತರ ಕನ್ನಡದಲ್ಲಿ ನಾಮಧಾರಿಗಳು. ಶಿವಮೊಗ್ಗ, ಸಾಗರ ಕಡೆ ದೀವರು. ಹಳೇ ಮೈಸೂರು ಕಡೆ ಈಡಿಗರು. ಗುಲ್ಬರ್ಗ, ಬೀದರ್ ಕಡೆ ಈಳಿಗರು, ಕೇರಳದಲ್ಲಿ ತೀಯಾ, ತಮಿಳ್‌ನಾಡಿನಲ್ಲಿ ನಾಡಾರ್ ಹೀಗೆ ಬೇರೆ […]

Read More

ವಿಶುಕುಮಾರ್ ದತ್ತಿ ನಿಧಿ-2012

ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠ ಕತೆಗಾರರಾಗಿ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ಅಂಕಣ ಬರಹಗಾರರಾಗಿ, ಕನ್ನಡ, ತುಳು ಚಿತ್ರಗಳ ನಿರ್ದೇಶಕರಾಗಿ ಹೆಸರು ಮಾಡಿ ತಮ್ಮ ಅಲ್ಪ ಆಯುಷ್ಯದಲ್ಲಿಯೇ ಸಂದು ಹೋದ ನಮ್ಮ ನಾಡಿನ, ಬಿಲ್ಲವರ ಹೆಮ್ಮೆಯ ಕಣ್ಮಣಿ, ಧೀಮಂತ ಸಾಹಿತಿ ದಿ| ವಿಶುಕುಮಾರ್‌ರವರ ಸ್ಮರಣಾರ್ಥ ಯುವವಾಹಿನಿ (ರಿ) ಕೇಂದ್ರ ಸಮಿತಿಯು ‘ವಿಶುಕುಮಾರ್ ಪ್ರಶಸ್ತಿ’ ಯನ್ನು ಹುಟ್ಟುಹಾಕಿ ಕಳೆದ ಹತ್ತು ವರ್ಷಗಳಿಂದ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ನಮ್ಮ ಸಾಹಿತಿ ಮಿತ್ರರುಗಳ ಒತ್ತಾಸೆ, ಸಲಹೆಗಾರರ ಮಾರ್ಗದರ್ಶನದಲ್ಲಿ ’ವಿಶುಕುಮಾರ್ ದತ್ತಿನಿಧಿ’ಯನ್ನು ಸ್ಥಾಪಿಸಿ […]

Read More

ಬಿಲ್ಲವರ ಗುತ್ತು,  ಗುರಿಕಾರ ಮನೆತನಗಳ ಇತಿಹಾಸ

ಬಿಲ್ಲವರ ಚರಿತ್ರೆಯ ಗುತ್ತು, ಬರ್ಕೆ, ಗುರಿಕಾರ ಮನೆತನಗಳ ಕುರಿತ ಅಧ್ಯಯನವು ಕಳೆದ 2-3 ವರ್ಷಗಳಿಂದ ಮುಂಬಯಿ ’ಗುರುತು’ ಮಾಸಿಕ ಸಂಪಾದಕ, ಸಂಶೋಧಕ ಶ್ರೀ ಬಾಬು ಶಿವ ಪೂಜಾರಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಾ ಬಂದಿದೆ. ಬಿ.ಎಂ.ರೋಹಿಣಿ, ಮುದ್ದು ಮೂಡುಬೆಳ್ಳೆ ಹಾಗೂ ರಮಾನಾಥ್ ಕೋಟೆಕಾರ್‌ರ ತಂಡ ಕ್ಷೇತ್ರಾಧ್ಯಯನ ನಡೆಸುತ್ತಾ ಬಂದಿದೆ. ಅದರಲ್ಲಿ ಒಂದು ಗುತ್ತುಮನೆ ಅಧ್ಯಯನದ ಮಾದರಿ ಇಲ್ಲಿದೆ: ಸಾಂತ್ಯ ಗುತ್ತು ಸಾಂತ್ಯ ಬಂಟ್ವಾಳ ತಾಲೂಕಿನಲ್ಲಿದೆ. ಬಿ.ಸಿ.ರೋಡ್, ಪುತ್ತೂರು ಮಾರ್ಗದಲ್ಲಿ ಮಾಣಿ ಕಳೆದು, ಕರುವೇಲ್‌ಲ್ಲಿ ಶಾಲಾ ಬಳಿ ಉತ್ತರದ ಮಣ್ಣಿನ ರಸ್ತೆಯಲ್ಲಿ ಮುಂದುವರಿದು […]

Read More

ಯುವವಾಹಿನಿಗೆ ಅಭಿನಂದನೆಗಳು

ಯುವವಾಹಿನಿ ಸಂಘಟನೆಯು ಅಮೃತವಾಹಿನಿಯಾಗಿ ಹರಿಯುತ್ತಾ ಬಂದು ಇದೀಗ ರಜತ ಮಹೋತ್ಸವಕ್ಕೆ ಕಾಲಿರಿಸಿದ ಈ ಶುಭ ಸಮಯದಲ್ಲಿ ನನ್ನ ಮನದಾಳದ ಮಾತನ್ನು ಅಕ್ಷರ ರೂಪದಲ್ಲಿ ಬರೆಯುವಾಗ ಮನತುಂಬಿ ನಿಲ್ಲುತ್ತದೆ. ಉಕ್ಕೇರುವ ಸಂತಸದಿಂದ ಲೇಖನಿ ಒಂದು ಕ್ಷಣ ನಿಂತು ಮತ್ತೆ ಮುನ್ನಡೆಯುತ್ತಿದೆ. ಅಂದರೆ ಸಂಘಟನೆ ಒಂದು ಸಾಮಾಜಿಕ ಶಕ್ತಿ ಹೌದು. ಆದರೆ ಒಂದು ಸಂಘಟನೆ ಇಪ್ಪತ್ತೈದು ವರ್ಷದ ಯೌವನಕ್ಕೆ ಕಾಲಿರಿಸುವುದೆಂದರೆ ಅದು ಅಷ್ಟು ಸುಲಭದ ಮಾತೇನೂ ಅಲ್ಲ. ಅಷ್ಟೊಂದು ಸಾಮಾಜಿಕ ಚಿಂತನೆಯ ಮನಸ್ಸು, ನಿಷ್ಠೆ, ಒಗ್ಗಟ್ಟು, ಆತ್ಮಬಲ, ಮಾನವೀಯ ಗುಣ […]

Read More

ಗ್ರಾಮೀಣ ಸಂಸ್ಕೃತಿ ಮತ್ತು ಆಧುನಿಕತೆ

ಆಧುನಿಕತೆಯನ್ನು ನಾವು ಪರಿಭಾವಿಸುವ ಬಗೆಯೇ ಸಂಕೀರ್ಣವಾದುದು. ಆಧುನಿಕತೆ ಎಂದರೇನು ಎಂಬುದನ್ನು ವ್ಯಾಖ್ಯಾನದ ಚೌಕಟ್ಟಿನ ಒಳಗೆ ತರುವ ಪ್ರಯತ್ನ ಚಿಂತಕ ವಲಯದಲ್ಲಿ ಸಾಕಷ್ಟು ನಡೆದಿವೆ. ಸರಳವಾಗಿ ನಾವು ’ಆಧುನಿಕತೆ’ ಎಂಬ ಪರಿಕಲ್ಪನೆಯನ್ನು ಗ್ರಹಿಸುವಾಗ ವರ್ತಮಾನದಲ್ಲಿ ನಡೆಯುತ್ತಿರುವ ಸ್ಥಿತ್ಯಂತರಗಳು, ಪಲ್ಲಟಗಳು ನಮ್ಮ ಅರಿವಿಗೆ ಬರುತ್ತವೆ. ಆದರೆ ವಿಶಾಲವಾದ ಅರ್ಥದಲ್ಲಿ ’ಆಧುನಿಕತೆ’ ಎಂಬುದು ಎಲ್ಲಾ ಕಾಲಕ್ಕೂ ಸಂಬಂಧಿಸಿದ್ದು. ಕಲ್ಲಿನಿಂದ ಬೆಂಕಿಯ ಸೃಷ್ಠಿಯ ಸಾಧ್ಯತೆಯನ್ನು ಗುರುತಿಸಿದ್ದೂ ಒಂದು ಕಾಲದ ಆಧುನಿಕತೆಯಾಗಿದೆ. ಚಕ್ರದ ಸೃಷ್ಟಿಯಂತೂ ಆಧುನಿಕತೆಯ ಮೂಲ ಬೇರು. ಜೈವಿಕ ವಿಕಾಸದ ಜೊತೆಗೆ ಬೌದ್ಧಿಕ […]

Read More

ಮಾನವ ಹಕ್ಕುಗಳ ರಕ್ಷಣಾ ಕಾನೂನು-1993

ಕಾನೂನು ಮಾಹಿತಿ ಮಾನವ ಹಕ್ಕುಗಳ ರಕ್ಷಣಾ ಕಾನೂನು – 1993 (Protection of Human Rights Act) 1994 ರಲ್ಲಿ ಜಾರಿಗೆ ಬಂತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗ ಅನುಷ್ಠಾನಕ್ಕೆ ಬಂದು ಮಾನವ ಹಕ್ಕುಗಳ ರಕ್ಷಣೆ ಹೊಣೆ ಹೊತ್ತು ಕೊಂಡಿತು. ಮಾನವ ಹಕ್ಕುಗಳು (Human Rights) ಒಬ್ಬ ಪ್ರಜೆಗೆ ಸಂವಿಧಾನದಲ್ಲಿ ಕೊಡ ಮಾಡಲ್ಪಟ್ಟ ಬದುಕುವ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು ಹಾಗೂ ಘನತೆಯ ಹಕ್ಕು ಇದಕ್ಕೆ ಮಾನವ ಹಕ್ಕು ಎನ್ನುತ್ತಾರೆ. […]

Read More

ಸಂಸ್ಕಾರಗಳ ಮಹತ್ವ

ಚಿಂತನ ಈ ವಿಶಾಲ ಜಗತ್ತು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹವಾಗುಣ, ಪ್ರಾಕೃತಿಕ ಲಕ್ಷಣ, ಮಣ್ಣಿನ ಗುಣ ಹೊಂದಿದೆ. ಹಾಗೆಯೇ ಈ ಜಗತ್ತಿನ ಸೃಷ್ಟಿಯಲ್ಲಿ ಮಾನವನ ಸೃಷ್ಟಿಯು ಅತ್ಯಂತ ಶ್ರೇಷ್ಟವಾದುದು. ಮಾನವ ಕುಲದ ವಿಕಾಸವಾದಂತೆ ಕಾಲಕ್ರಮೇಣ ನಾಗರಿಕತೆ ಬೆಳೆಯಿತು. ಮಾನವ ಅನ್ಯನ್ಯ ಕಾರಣಗಳಿಗಾಗಿ ತಂಡ ತಂಡವಾಗಿ ಬದುಕಲು ಆರಂಭಿಸಿದ. ವಿಭಿನ್ನ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿರುವ ಜಗತ್ತಿನಲ್ಲಿ ಮಾನವರು ಅವರವರು ಬದುಕುವ ನೆಲ ಜಲದ ಗುಣಗಳಿಗೆ ಅನುಗುಣವಾಗಿ ಬದುಕಬೇಕಾಯಿತು. ಇದರಿಂದ ವಿಭಿನ್ನ ಜೀವನ ರೀತಿ ಬೆಳೆಯಿತು. ಒಂದು […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!