ಮೂಲ್ಕಿ ಯುವವಾಹಿನಿಯ ಪದಗ್ರಹಣ,ಪ್ರತಿಭಾ ಪುರಸ್ಕಾರ
14-06-2017, 9:10 AM
11-06-2017, 2:02 PM
ಬಿಲ್ಲವರು ತಮ್ಮದೇ ಆದ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಈ ತುಳುನಾಡಿನ ಮೂಲ ಜನಾಂಗಗಳಲ್ಲಿ ಒಬ್ಬರಾಗಿ ಸಂಪ್ರದಾಯಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ”. ಈ ಸಂಸ್ಕೃತಿಯನ್ನು ಉಳಿಸುವಲ್ಲಿ ಯುವವಾಹಿನಿಯೂ ಸಹ ಅವಿರತವಾಗಿ 30 ವರ್ಷಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದು ಶೈಲು ಬಿರ್ವ ಅಗತ್ತಾಡಿ ತಿಳಿಸಿದರು. ಅವರು ದಿನಾಂಕ 11.06.2017 ರಂದು ಅಡ್ವೆ ಆನಂದಿ ಸಭಾ ಭವನದಲ್ಲಿ ಜರುಗಿದ ಯುವವಾಹಿನಿ ಅಡ್ವೆ ಘಟಕದ ಪದಗ್ರಹಣದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷರಾದ […]
15-05-2017, 7:19 AM
ಯುವವಾಹಿನಿ (ರಿ) ಯಡ್ತಾಡಿ ಘಟಕದ 2017-18 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 15.05.2017 ರಂದು ಜರುಗಿತು.ಬಿಲ್ಲವ ಒಕ್ಕೂಟ ಕೋಟ ಹೋಬಳಿಯ ಪೂರ್ವಾಧ್ಯಕ್ಷರಾದ ರತ್ನಾ ಜೆ.ರಾಜ್ ದೀಪ ಪ್ರಜ್ವಲನೆ ಮಾಡುವ ಮೂಲಕ ಸಮಾರಂಭ ಉದ್ಗಾಟಿಸಿದರು.ಕರ್ನಾಟಕ ಸರಕಾರದ ಮಾಜಿ ಸಚಿವರು ವಿದಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಸಾಫ್ಟವೇರ್ ಇಂಜಿನಿಯರ್ ಸತೀಶ್ ಪೂಜಾರಿ, ಮಾಧವ ಪೂಜಾರಿ,ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ಅಚ್ಚುತ ಪೂಜಾರಿ, ಕೋಟ ಹೋಬಳಿಯ ಬಿಲ್ಲವ ಒಕ್ಕೂಟದ ಅಧ್ಯಕ್ಷರಾದ ಶೇಖರ ಪೂಜಾರಿ, […]
30-04-2017, 10:35 AM
ದಿನಾಂಕ 30.04.2017ನೇ ಆದಿತ್ಯವಾರ ಸುಳ್ಯ ಕಾಯರ್ತೋಡಿ ಮಹಾವಿಷ್ಣುವಿನ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ (ರಿ) ಸುಳ್ಯ ಘಟಕದ 2017-18 ನೇ ಸಾಲಿನ ಪದಾದಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು ಯುವವಾಹಿನಿ ಕೇಂದ್ರ ಸಮಿತಿಯ 25ನೇ ಘಟಕ ಯುವವಾಹಿನಿ (ರಿ) ಸುಳ್ಯ ಘಟಕದ ನೂತನ ಅದ್ಯಕ್ಷರಾಗಿ ಶಿವಪ್ರಸಾದ್.ಕೆ.ವಿ ಹಾಗೂ ಇತರ 16 ಕಾರ್ಯಕಾರಿ ಸಮಿತಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಸುಳ್ಯ ತಾಲೂಕು ಸಂಘಟನಾ ಕಾರ್ಯದರ್ಶಿ ಮಹೇಶ್ಚಂದ್ರ ಬಿ.ಟಿ. ನೂತನ ಪದಾದಿಕಾರಿಗಳ ಆಯ್ಕೆ ಪ್ರಕಟಿಸಿದರು. ಯುವವಾಹಿನಿ […]
30-04-2017, 10:17 AM
ಯುವವಾಹಿನಿಯು ಕೇವಲ ಸಾಮಾಜಿಕ ಸಂಘಟನೆಯಲ್ಲ ಪ್ರೀತಿ,ವಿಶ್ವಾಸ, ಮಾನವೀಯತೆಯನ್ನು ಪರಸ್ಪರ ಬೆಸೆಯುವ ಸಂಸ್ಥೆ, ಯುವವಾಹಿನಿಯು ನಾಯಕತ್ವ, ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ರೂಪಿಸಿ ಬಿಲ್ಲವ ಸಮಾಜದಲ್ಲಿ ಆದರ್ಶ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅದ್ಯಕ್ಷ ಸಂಪತ್ ಬಿ.ಸುವರ್ಣ ತಿಳಿಸಿದರು ದಿನಾಂಕ 30.04.2017 ಆದಿತ್ಯವಾರ ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ (ರಿ) ಸುಳ್ಯ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಗಿ ಭಾಗವಹಿಸಿ ಮಾತನಾಡಿದರು ಸುಳ್ಯ ತಾಲೂಕು ಬ್ರಹ್ಮಶ್ರೀ ಗುರುನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ […]
23-04-2017, 3:20 PM
ಯುವವಾಹಿನಿಯ 29 ನೇ ವಾರ್ಷಿಕ ಸಮಾವೇಶ ದಾಖಲೆಯ ಪುಟ ಸೇರುವ ಮೂಲಕ ಉಡುಪಿ ಯುವವಾಹಿನಿಯ ಶಕ್ತಿ ಅನಾವರಣಗೊಂಡಿದೆ. ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಮೂಲಕ ಉಡುಪಿ ಯುವವಾಹಿನಿ ಪುಣ್ಯದ ಕಾರ್ಯ ಮಾಡುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 23.042017 ನೇ ಆದಿತ್ಯವಾರ ಉಡುಪಿಯ ಜಗನ್ನಾಥ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ (ರಿ) ಉಡುಪಿ ಘಟಕದ 2017-18 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ನೆರವೇರಿಸಿ ಮಾತನಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ […]
16-04-2017, 12:35 PM
ಮಹಿಳೆಯರು ಪುರುಷರಿಗಿಂತ ಮಾನಸಿಕವಾಗಿ ದೈಹಿಕವಾಗಿ ಬಲಾಡ್ಯರು ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಯಶಸ್ಸು ಗಳಿಸಲು ಸಾಧ್ಯವಾಗಿದೆ. ಮಾನವ ಧನಾತ್ಮಕ ಮತ್ತು ಋಣಾತ್ಮಕವೂ ಆದ ಚಿಂತನೆ ಮತ್ತು ಗುಣಗಳ ವಿಭಿನ್ನ ರೀತಿಯ ಸಂಕೇತ ತನ್ನಲ್ಲಿರುವ ಕೆಟ್ಟದ್ದನ್ನು ತ್ಯಜಿಸಿ ಒಳ್ಳೆಯದನ್ನು ಮೈಗೂಡಿಸಿಕೊಂಡು ಬಂದಂತೆಲ್ಲಾ ಗೌರವ ಪಡೆದುಕೊಳ್ಳುತ್ತಾರೆ. ಇಂತಹ ಗುಣವಂತರನ್ನು ಸಮಾಜ ಅರಸಿಕೊಂಡು ಬರುತ್ತದೆ, ಆದ್ದರಿಂದ ಮನಸ್ಸು ಮನಸ್ಸುಗಳ ಮಧ್ಯೆ ಸೇತುವೆ ನಿರ್ಮಾಣದ ಕಾರ್ಯ ನಾವು ಮಾಡಬೇಕಾಗಿದೆ ಎಂದು ಬೆಳ್ತಂಗಡಿ DKRDS ಯೋಜನಾಧಿಕಾರಿ ಶೈಲು ಬಿರ್ವ ಅಗತ್ತಾಡಿ ಅಭಿಪ್ರಾಯಪಟ್ಟರು. ಅವರು 16.04.2017 […]
16-04-2017, 4:16 AM
ವಿದ್ಯೆ ಉದ್ಯೋಗ ಸಂಪರ್ಕ ಎಂಬ ಮೂರು ಮುಖ್ಯ ಉದ್ದೇಶಗಳೊಂದಿಗೆ ಹಳೆಯಂಗಡಿ ಯುವವಾಹಿನಿಯ ಸಮಾಜಮುಖಿ ಕಾರ್ಯ ಶ್ಲಾಘನೀಯವಾದುದು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ತಿಳಿಸಿದರು. ಅವರು ದಿನಾಂಕ 16.04.2017 ನೇ ಆದಿತ್ಯವಾರ ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಜರುಗಿದ ಯುವವಾಹಿನಿ (ರಿ) ಹಳೆಯಂಗಡಿ ಘಟಕದ 2017-18 ನೇ ಸಾಲಿನ ನೂತನ ಪದಾದಿಕಾರಿಗಳ ಪದಪ್ರಧಾನ ನೆರವೇರಿಸಿ ಮಾತನಾಡಿದರು. ಕಟೀಲು ಮೇಳದ ಸುಪ್ರಸಿದ್ಧ ಯಕ್ಷಗಾನ ಕಲಾವಿದ ರಾಮಚಂದ್ರ ಮುಕ್ಕ ಇವರು ಯಕ್ಷಗಾನ ತರಬೇತಿ ತರಗತಿಯನ್ನು ಉದ್ಘಾಟಿಸಿ, ಜಿಲ್ಲೆಯ […]
26-03-2017, 10:35 AM
ಯುವವಾಹಿನಿ(ರಿ) ಕಂಕನಾಡಿ ಘಟಕದ 2017-18 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 26.03.2017 ನೇ ಆದಿತ್ಯವಾರ ಉಜ್ಜೋಡಿ ಶ್ರೀ ಮಹಾಕಾಳಿ ದೈವಸ್ಥಾನದ ಸಭಾಂಗಣದಲ್ಲಿ ಜರುಗಿತು. ಗೋಪಾಲ ಪೂಜಾರಿ ನೇತೃತ್ವದ 21 ಸದಸ್ಯರ ತಂಡವು ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸುವ ಬಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. 2017-18 ನೇ ಸಾಲಿನ ಕಾರ್ಯಕಾರಿ ಸಮಿತಿ : ಅಧ್ಯಕ್ಷರು : ಗೋಪಾಲ ಪೂಜಾರಿ ಉಪಾಧ್ಯಕ್ಷರು : ಭವಿತ್ ರಾಜ್ ಕಾರ್ಯದರ್ಶಿ : ಮೋಹನ್ ಜಿ.ಅಮೀನ್ ಜತೆ ಕಾರ್ಯದರ್ಶಿ : ಶ್ರೀಮತಿ ನಯನಾ ಕೋಶಾಧಿಕಾರಿ […]
26-03-2017, 10:24 AM
ಆಧುನಿಕ ಸಮಾಜದಲ್ಲಿ ಬದಲಾಗುತ್ತಿರುವ ಜೀವನ ಕ್ರಮದಲ್ಲಿ ಯುವವಾಹಿನಿ ಸಮಾಜಕ್ಕೆ ಅನಿವಾರ್ಯವಾಗಿದೆ. ಕಳೆದ 30 ವರ್ಷಗಳಿಂದ ಯುವವಾಹಿನಿ ಬಿಲ್ಲವ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದೆ ಎಂದು ಬೆಂಗಳೂರಿನ ಖ್ಯಾತ ವಕೀಲರಾದ ನವನೀತ ಡಿ.ಹಿಂಗಾಣಿ ತಿಳಿಸಿದರು. ಅವರು ಉಜ್ಜೋಡಿ ಶ್ರೀ ಮಹಾಕಾಳಿ ದೈವಸ್ಥಾನದ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ(ರಿ) ಕಂಕನಾಡಿ ಘಟಕ 2017-18 ನೇ ಸಾಲಿನ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವ್ಯಕ್ತಿತ್ವ ವಿಕಸನ, ಸಾಮಾಜಿಕ ಸ್ಥಾನಮಾನ, ನಾಯಕತ್ವದ ಬೆಳವಣಿಗೆ ಹಾಗೂ ಸಹಸ್ರಾರು ಜನರ ವ್ಯಕ್ತಿತ್ವವನ್ನು ರೂಪಿಸುವಂತಹ ಕಾರ್ಯವನ್ನು ಯುವವಾಹಿನಿ […]