
16-04-2017, 12:35 PM
ಮಹಿಳೆಯರು ಪುರುಷರಿಗಿಂತ ಮಾನಸಿಕವಾಗಿ ದೈಹಿಕವಾಗಿ ಬಲಾಡ್ಯರು ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಯಶಸ್ಸು ಗಳಿಸಲು ಸಾಧ್ಯವಾಗಿದೆ. ಮಾನವ ಧನಾತ್ಮಕ ಮತ್ತು ಋಣಾತ್ಮಕವೂ ಆದ ಚಿಂತನೆ ಮತ್ತು ಗುಣಗಳ ವಿಭಿನ್ನ ರೀತಿಯ ಸಂಕೇತ ತನ್ನಲ್ಲಿರುವ ಕೆಟ್ಟದ್ದನ್ನು ತ್ಯಜಿಸಿ ಒಳ್ಳೆಯದನ್ನು ಮೈಗೂಡಿಸಿಕೊಂಡು ಬಂದಂತೆಲ್ಲಾ ಗೌರವ ಪಡೆದುಕೊಳ್ಳುತ್ತಾರೆ. ಇಂತಹ ಗುಣವಂತರನ್ನು ಸಮಾಜ ಅರಸಿಕೊಂಡು ಬರುತ್ತದೆ, ಆದ್ದರಿಂದ ಮನಸ್ಸು ಮನಸ್ಸುಗಳ ಮಧ್ಯೆ ಸೇತುವೆ ನಿರ್ಮಾಣದ ಕಾರ್ಯ ನಾವು ಮಾಡಬೇಕಾಗಿದೆ ಎಂದು ಬೆಳ್ತಂಗಡಿ DKRDS ಯೋಜನಾಧಿಕಾರಿ ಶೈಲು ಬಿರ್ವ ಅಗತ್ತಾಡಿ ಅಭಿಪ್ರಾಯಪಟ್ಟರು. ಅವರು 16.04.2017 […]
Read More

16-04-2017, 4:16 AM
ವಿದ್ಯೆ ಉದ್ಯೋಗ ಸಂಪರ್ಕ ಎಂಬ ಮೂರು ಮುಖ್ಯ ಉದ್ದೇಶಗಳೊಂದಿಗೆ ಹಳೆಯಂಗಡಿ ಯುವವಾಹಿನಿಯ ಸಮಾಜಮುಖಿ ಕಾರ್ಯ ಶ್ಲಾಘನೀಯವಾದುದು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ತಿಳಿಸಿದರು. ಅವರು ದಿನಾಂಕ 16.04.2017 ನೇ ಆದಿತ್ಯವಾರ ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಜರುಗಿದ ಯುವವಾಹಿನಿ (ರಿ) ಹಳೆಯಂಗಡಿ ಘಟಕದ 2017-18 ನೇ ಸಾಲಿನ ನೂತನ ಪದಾದಿಕಾರಿಗಳ ಪದಪ್ರಧಾನ ನೆರವೇರಿಸಿ ಮಾತನಾಡಿದರು. ಕಟೀಲು ಮೇಳದ ಸುಪ್ರಸಿದ್ಧ ಯಕ್ಷಗಾನ ಕಲಾವಿದ ರಾಮಚಂದ್ರ ಮುಕ್ಕ ಇವರು ಯಕ್ಷಗಾನ ತರಬೇತಿ ತರಗತಿಯನ್ನು ಉದ್ಘಾಟಿಸಿ, ಜಿಲ್ಲೆಯ […]
Read More

09-04-2017, 10:09 AM
ಉಪ್ಪಿನಂಗಡಿ ಯುವವಾಹಿನಿಯ ಮಾಸಿಕ ಸಭೆಯು ದಿನಾಂಕ 09-04-2017 ರಂದು ಉಪ್ಪಿನಂಗಡಿಯ ಸಹಸ್ರ ಕೋಚಿಂಗ್ ಸೆಂಟರ್ನಲ್ಲಿ ನಡೆಯಿತು. ಸಭೆಯಲ್ಲಿ ಯುವವಾಹಿನಿಯ ಧ್ಯೇಯೋದ್ದೇಶ ಮತ್ತು ಸಂಘಟನೆ ಹಾಗೂ ನಾಯಕತ್ವ ಈ ವಿಚಾರಗಳ ಕುರಿತು ಮಾಹಿತಿ ಕಾರ್ಯಾಗಾರ ಜರುಗಿತು . ಯುವವಾಹಿನಿಯ ದ್ಯೇಯ ಉದ್ದೇಶಗಳು ಹಾಗೂ ನೀತಿ ನಿಬಂಧನೆಗಳ ಕುರಿತು ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಕುಂದರ್ ಮಾಹಿತಿ ನೀಡಿದರು. ಸಂಘಟನೆಯ ಮತ್ತು ನಾಯಕತ್ವದ ಬಗ್ಗೆ ಡಾ.ರಾಜರಾಮ್ ತರಬೇತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಯುವವಾಹಿನಿಯ ಅಧ್ಯಕ್ಷರಾದ ಅಶೋಕ್ […]
Read More

09-04-2017, 6:32 AM
ಸಂಘಟನೆಯ ಮೂಲಕ ಸಮಾಜವನ್ನು ಕಟ್ಟಿ ಯುವಕರನ್ನು ಒಗ್ಗೂಡಿಸುವ ಶ್ರೇಷ್ಠ ಕಾರ್ಯ ಯುವವಾಹಿನಿ ಮಾಡುತ್ತಿದೆ. ಕ್ರೀಡಾಕೂಟದ ಮೂಲಕ ಯುವ ಮನಸ್ಸುಗಳನ್ನು ಬೆಸೆದು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕಾರ್ಯವನ್ನು ಯುವವಾಹಿನಿಯಂತಹ ಯುವಕರ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮೂಲ್ಕಿ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ನಿವೃತ್ತ ಎಸ್ ಪಿ ಪೀತಾಂಬರ ಹೇರಾಜೆ ಹೇಳಿದರು. ಅವರು ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ದಿನಾಂಕ. 09.04.2017 ನೇ ಆದಿತ್ಯವಾರ ವೇಣೂರು ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬಿಲ್ಲವ ಸಮಾಜ ಭಾಂದವರಿಗಾಗಿ ಜರುಗಿದ ಕ್ರಿಕೆಟ್ ಪಂದ್ಯ ಯುವವಾಹಿನಿ […]
Read More

04-04-2017, 4:39 AM
ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ದಿನಾಂಕ 25.04.2017 ನೇ ಮಂಗಳವಾರದಂದು ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿ ಕಛೇರಿಯಲ್ಲಿ ಸಂಚಾರಿ ನಿಯಮಗಳ ಮಾಹಿತಿ ಕಾರ್ಯಾಗಾರ ಜರುಗಿತು. ಮಂಗಳೂರು ಉತ್ತರ ವಲಯದ ಟ್ರಾಫಿಕ್ ಇನ್ಸ್ಪೆಕ್ಟರ್ ಮಂಜುನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು ಸಂಚಾರಿ ನಿಯಮಗಳ ಪಾಲನೆ,ಅನಾಹುತಗಳನ್ನು ತಡೆಗಟ್ಟುವ ಮುಂಜಾಗೃತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು ಯುವವಾಹಿನಿ ಮಂಗಳೂರು ಘಟಕದ ವಾರದ ಸಾಪ್ತಾಹಿಕ ಸಭೆಯಲ್ಲಿ ಜರುಗಿದ ಈ ಮಾಹಿತಿ ಕಾರ್ಯಾಗಾರದಲ್ಲಿ ಸುಮಾರು 75ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ […]
Read More

03-04-2017, 4:39 AM
ಯುವವಾಹಿನಿ (ರಿ) ಪಣಂಬೂರು ಘಟಕದ ವತಿಯಿಂದ ಕಿಡ್ನಿ ವೈಫಲ್ಯ, ಕಿಡ್ನಿ ಸಂಬಂಧಿ ರೋಗಗಳು ಹಾಗೂ ತಡೆಗಟ್ಟುವರೇ ಮುಂಜಾಗ್ರತಾ ಕ್ರಮಗಳು – ಇದರ ಬಗ್ಗೆ ಆರೋಗ್ಯ ಮಾಹಿತಿ ಶಿಬಿರವು ದಿನಾಂಕ 03/04/2017 ಸೋಮವಾರ ಸಂಜೆ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕುಳಾಯಿಯಲ್ಲಿ ಜರುಗಿತು. ನಿರಂತರ. ಒತ್ತಡದಿಂದ ಕೂಡಿದ ಕೆಲಸ ಕಾರ್ಯಗಳು, ಆಧುನಿಕ ಜೀವನ ಕ್ರಮದಿಂದ ಶರೀರಕ್ಕೆ ಸಿಗದ ಸರಿಯಾದ ವ್ಯಾಯಾಮ ಹಾಗೂ ಆಹಾರ ಸೇವನಾ ಕ್ರಮ, ಇಂತಹ ಕಾರಣಗಳಿಂದ ಕಿಡ್ನಿ ವೈಫಲ್ಯ, ಕಿಡ್ನಿಯಲ್ಲಿ ಕಲ್ಲು ಇಂತಹ ಸಮಸ್ಯೆಗಳು […]
Read More

01-04-2017, 1:10 PM
ಆಧುನಿಕ ವೈದ್ಯಕೀಯ ಕ್ಷೇತ್ರವು ತುಂಬಾ ಮುಂದುವರಿದಿದ್ದು ಆರಂಬಿಕ ಹಂತದಲ್ಲೇ ಗುರುತಿಸಿದರೆ ಕ್ಯಾನ್ಸರ್ ಸಂಪೂರ್ಣ ಗುಣಪಡಿಸಬಹುದು. ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿ, ಹಾಗೂ ಆರೋಗ್ಯದ ಮೇಲೆ ಇರುವ ನಿರ್ಲಕ್ಷತನದಿಂದ ಸ್ತನ ಕ್ಯಾನ್ಸರ್ ವ್ಯಾಪಕವಾಗಿ ಹಬ್ಬಿದೆ ಎಂದು ಡಾ.ವೆಂಕಟೇಶ ಸಂಜೀವ ಅಭಿಪ್ರಾಯ ಪಟ್ಟರು. ಅವರು ಮಂಗಳೂರು ರಥಬೀದಿಯ ಮಹಿಳಾ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಮಹಿಳಾ ವೇದಿಕೆ ಹಾಗೂ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 01.04.2017 ರಂದು ಜರುಗಿದ ಮಹಿಳಾ ಆರೋಗ್ಯ ಮತ್ತು ಸ್ತನ ರೋಗಗಳ […]
Read More

26-03-2017, 11:33 AM
ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಪ್ರತಿಷ್ಠಾ ವರ್ದತ್ಯುತ್ಸವದ ಪ್ರಯುಕ್ತ ದಿನಾಂಕ 26.03.2017 ಬೆಳಗ್ಗೆ 10.00 ರಿಂದ ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಶಿವಭಕ್ತ ವೀರಮಣಿ – ಯಕ್ಷಗಾನ ತಾಳಮದ್ದಳೆ ಜರುಗಿತು. ಪುತ್ತೂರು ಬಿಲ್ಲವ ಸಂಘದ ಅದ್ಯಕ್ಷರಾದ ಜಯಂತ ನಡುಬೈಲು ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಯುವವಾಹಿನಿ ಅದ್ಯಕ್ಷ ಜಯಂತ ಪೂಜಾರಿ, ಕಾರ್ಯದರ್ಶಿ ಉದಯ ಕೊಲಾಡಿ, ಶಶಿಧರ ಕಿನ್ನಿಮಜಲು,ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Read More

26-03-2017, 10:35 AM
ಯುವವಾಹಿನಿ(ರಿ) ಕಂಕನಾಡಿ ಘಟಕದ 2017-18 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 26.03.2017 ನೇ ಆದಿತ್ಯವಾರ ಉಜ್ಜೋಡಿ ಶ್ರೀ ಮಹಾಕಾಳಿ ದೈವಸ್ಥಾನದ ಸಭಾಂಗಣದಲ್ಲಿ ಜರುಗಿತು. ಗೋಪಾಲ ಪೂಜಾರಿ ನೇತೃತ್ವದ 21 ಸದಸ್ಯರ ತಂಡವು ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸುವ ಬಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. 2017-18 ನೇ ಸಾಲಿನ ಕಾರ್ಯಕಾರಿ ಸಮಿತಿ : ಅಧ್ಯಕ್ಷರು : ಗೋಪಾಲ ಪೂಜಾರಿ ಉಪಾಧ್ಯಕ್ಷರು : ಭವಿತ್ ರಾಜ್ ಕಾರ್ಯದರ್ಶಿ : ಮೋಹನ್ ಜಿ.ಅಮೀನ್ ಜತೆ ಕಾರ್ಯದರ್ಶಿ : ಶ್ರೀಮತಿ ನಯನಾ ಕೋಶಾಧಿಕಾರಿ […]
Read More

26-03-2017, 10:24 AM
ಆಧುನಿಕ ಸಮಾಜದಲ್ಲಿ ಬದಲಾಗುತ್ತಿರುವ ಜೀವನ ಕ್ರಮದಲ್ಲಿ ಯುವವಾಹಿನಿ ಸಮಾಜಕ್ಕೆ ಅನಿವಾರ್ಯವಾಗಿದೆ. ಕಳೆದ 30 ವರ್ಷಗಳಿಂದ ಯುವವಾಹಿನಿ ಬಿಲ್ಲವ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದೆ ಎಂದು ಬೆಂಗಳೂರಿನ ಖ್ಯಾತ ವಕೀಲರಾದ ನವನೀತ ಡಿ.ಹಿಂಗಾಣಿ ತಿಳಿಸಿದರು. ಅವರು ಉಜ್ಜೋಡಿ ಶ್ರೀ ಮಹಾಕಾಳಿ ದೈವಸ್ಥಾನದ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ(ರಿ) ಕಂಕನಾಡಿ ಘಟಕ 2017-18 ನೇ ಸಾಲಿನ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವ್ಯಕ್ತಿತ್ವ ವಿಕಸನ, ಸಾಮಾಜಿಕ ಸ್ಥಾನಮಾನ, ನಾಯಕತ್ವದ ಬೆಳವಣಿಗೆ ಹಾಗೂ ಸಹಸ್ರಾರು ಜನರ ವ್ಯಕ್ತಿತ್ವವನ್ನು ರೂಪಿಸುವಂತಹ ಕಾರ್ಯವನ್ನು ಯುವವಾಹಿನಿ […]
Read More