ಯುವವಾಹಿನಿ(ರಿ) ಕಂಕನಾಡಿ ಘಟಕದ 2017-18 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 26.03.2017 ನೇ ಆದಿತ್ಯವಾರ ಉಜ್ಜೋಡಿ ಶ್ರೀ ಮಹಾಕಾಳಿ ದೈವಸ್ಥಾನದ ಸಭಾಂಗಣದಲ್ಲಿ ಜರುಗಿತು.
ಗೋಪಾಲ ಪೂಜಾರಿ ನೇತೃತ್ವದ 21 ಸದಸ್ಯರ ತಂಡವು ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸುವ ಬಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.
2017-18 ನೇ ಸಾಲಿನ ಕಾರ್ಯಕಾರಿ ಸಮಿತಿ :
ಅಧ್ಯಕ್ಷರು : ಗೋಪಾಲ ಪೂಜಾರಿ
ಉಪಾಧ್ಯಕ್ಷರು : ಭವಿತ್ ರಾಜ್
ಕಾರ್ಯದರ್ಶಿ : ಮೋಹನ್ ಜಿ.ಅಮೀನ್
ಜತೆ ಕಾರ್ಯದರ್ಶಿ : ಶ್ರೀಮತಿ ನಯನಾ
ಕೋಶಾಧಿಕಾರಿ : ಶ್ರೀಮತಿ ಸುಮಾ ವಸಂತ್
ನಿರ್ದೇಶಕರು :
ಕ್ರೀಡೆ ಮತ್ತು ಆರೋಗ್ಯ : ರಾಹುಲ್ ಮತ್ತು ಜಯರಾಜ್ ಕೋಟ್ಯಾನ್
ವಿದ್ಯಾರ್ಥಿ ಸಂಘಟನೆ : ಸುವಾನ್
ಕಲೆ ಮತ್ತು ಸಾಹಿತ್ಯ : ಪ್ರಥ್ವೀರಾಜ್ ಮತ್ತು ಜೇಷ್ಮಾ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಸುರೇಶ್ ಎಮ್.ಎಸ್
ವ್ಯಕ್ತಿತ್ವ ವಿಕಸನ : ರೋಹಿತ್ ಕುಮಾರ್
ಸಮಾಜ ಸೇವೆ : ಸುರೇಖಾ ಮೋಹನ್
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ಜನಾರ್ಧನ
ಪ್ರಚಾರ ಸಮಿತಿ : ಗೌತಮ್ ಜಪ್ಪಿನಮೊಗರು
ಶೈಕ್ಷಣಿಕ ದತ್ತು ನಿಧಿ : ದಿವ್ಯ ಪ್ರಸಾದ್
ಪ್ರವಾಸ ಸಮಿತಿ : ಅರುಣ್ ಕುಮಾರ್ ಮತ್ತು ಕೃಪಾ ಹರೀಶ್
ಸಂಘಟನಾ ಕಾರ್ಯದರ್ಶಿಗಳು : ಪ್ರೀತಮ್ ಕುಂದರ್, ಲೋಕೇಶ್ ಅಮೀನ್, ಪ್ರಶಾಂತ್
ಈ ಸಂದರ್ಭದಲ್ಲಿ ಬೆಂಗಳೂರಿನ ಖ್ಯಾತ ವಕೀಲರಾದ ನವನೀತ ಡಿ.ಹಿಂಗಾಣಿ, ಉಜ್ಜೋಡಿ ಶ್ರೀ ಮಹಾಕಾಳಿ ಸೇವಾ ಸಮಿತಿಯ ಅದ್ಯಕ್ಷರಾದ ಶ್ರೀ ಕೆ.ಶ್ರೀನಿವಾಸ ಬಂಗೇರ, ಮಂಗಳೂರು ಫಾದರ್ ಮಲ್ಲರ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ರೋಶನ್ ಎಂ.ನೆಕ್ಕೆರೆಮಾರ್, ಉದ್ಯಮಿ ನಾಗೇಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಭವಿತ್ ರಾಜ್ 2016-17 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ಪದಪ್ರದಾನ ಮಾಡಿದರು.
ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಕಂಕನಾಡಿ ಯುವವಾಹಿನಿಯ 2016-17 ನೇ ಸಾಲಿನ ಅದ್ಯಕ್ಷರಾದ ಶ್ರೀ ಹರೀಶ್ ಕೆ.ಸನಿಲ್ ಸ್ವಾಗತಿಸಿದರು ಮತ್ತು ಕಳೆದ ಒಂದು ವರ್ಷದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ರಾಕೇಶ್ ಕುಮಾರ್ ಪ್ರಸ್ತಾವನೆ ಮಾಡಿದರು. ನೂತನ ಕಾರ್ಯದರ್ಶಿ ಮೋಹನ್ ಜಿ.ಅಮೀನ್ ಧನ್ಯವಾದ ನೀಡಿದರು. ಸಭಾ ಕಾರ್ಯಕ್ರಮದ ಮೊದಲು ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಉಪನ್ಯಾಸಕ ರಾಕೇಶ್ ಕುಮಾರ್, ಕಂಕನಾಡಿ ಯುವವಾಹಿನಿಯ ಸುವಾನ್ ಮತ್ತು ಜೇಷ್ಮಾ ಕಾರ್ಯಕ್ರಮ ನಿರೂಪಿಸಿದರು.