
15-09-2025, 3:24 PM
ಅದೆಷ್ಟೋ ಬಲಿದಾನ, ನಿರಂತರ ಹೋರಾಟದ ಪ್ರತಿಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು, ಸ್ವಾತಂತ್ರ್ಯೋತ್ಸವ ಆಚರಣೆ ಯ ಸಂದರ್ಭದಲ್ಲಿ ಅಂಥ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮುಲ್ಕಿ ಬಿಲ್ಲವ ಸಂಘದ ಉಪಾಧ್ಯಕ್ಷೆ ಸೀತಾ ಗೋಪಾಲ್ ಹೇಳಿದರು. ಘಟಕದ ಆಶ್ರಯದಲ್ಲಿ ಯೂನಿಯನ್ ಕ್ಲಬ್ ನಲ್ಲಿ ನಡೆದ 79 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷ ವಿನಯ್ ಕುಮಾರ್ ಮಟ್ಟು ವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಯೋಧ ಹಾಗೂ ಘಟಕದ ಮಾಜಿ ಅಧ್ಯಕ್ಷ ಮಾಧವ್ […]
Read More

14-09-2024, 4:33 PM
ಮುಲ್ಕಿ : ದಿನಾಂಕ 14 -09-2024 ರಂದು ಶನಿವಾರ ಸಂಜೆ 5:30ಕ್ಕೆ ಮುಲ್ಕಿಯ ಬ್ರಹ್ಮಶ್ರೀ ನಾರಾಯಣ ಗುರು ವರ್ಯರ ಸಾನಿಧ್ಯದಲ್ಲಿ ಮಂದಿರದ ಅರ್ಚಕರಾದ ಕೃಷ್ಣನ್ ಶಾಂತಿಯವರ ನೇತೃತ್ವದಲ್ಲಿ ಶ್ರೀಗುರುವರ್ಯರಿಗೆ ವಿಶೇಷ ಪ್ರಾರ್ಥನೆ ಯನ್ನು ಸಲ್ಲಿಸಿ, ಘಟಕದ ಅಧ್ಯಕ್ಷರಾದ ರಿತೇಶ್ ಅಂಚನ್ ಇವರ ಮನೆಯಲ್ಲಿ ಭಜನಾ ಸಂಕೀರ್ತನೆ ಜರಗಿತು. ಘಟಕದ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಪಾಲ್ಗೊಂಡರು. ಈ ಕಾರ್ಯಕ್ರಮದ ನೆನಪಿಗಾಗಿ ಬ್ರಹ್ಮಶ್ರೀ ಗುರುವರ್ಯರ ಚರಿತ್ರೆಯ ಪುಸ್ತಕವನ್ನು ಘಟಕದ ವತಿಯಿಂದ ನೀಡಲಾಯಿತು.
Read More

09-08-2024, 3:50 AM
ಮುಲ್ಕಿ : ಕಳೆದ 22 ವರ್ಷದ ಹಿಂದೆ ಆರಂಭಗೊಂಡ ಆಟಿಡೊಂಜಿ ದಿನ ಕಾರ್ಯಕ್ರಮ ಇಂದು ವಿಶ್ವವ್ಯಾಪಿಯಾಗಿದ್ದು ವಿಶೇಷವಾಗಿದೆ ಎಂದು ಭಾರತ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಹೇಳಿದರು. ಅವರು ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ (ರಿ) ಮುಲ್ಕಿ ಘಟಕದ 22ನೇ ವರ್ಷದ ಆಟಿದೊಂಜಿ ದಿನ ಕಾರ್ಯಕ್ರಮದ ವೇದಿಕೆಯಲ್ಲಿ ನಿರ್ಮಿಸಿದ ಬಾವಿಯಿಂದ ನೀರು ಸೇದುವ ಮೂಲಕ ವಿಶೇಷವಾಗಿ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷರು ರಿತೇಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಗತಿಪರ […]
Read More

14-06-2024, 5:07 PM
ಮೂಲ್ಕಿ: ಯುವವಾಹಿನಿ(ರಿ.) ಮೂಲ್ಕಿ ಘಟಕದ 2024-25 ರ ಸಾಲಿನ ನೂತನ ಕಾರ್ಯಕಾರಿ ಸಮಿತಿ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಿ 14-06-2024 ರಂದು ಮೂಲ್ಕಿ ಬಿಲ್ಲವ ಸಂಘದಲ್ಲಿ ಜರಗಿತು. ಮೂಲ್ಕಿ ಯುವವಾಹಿನಿ(ರಿ.) ಘಟಕದ ನೂತನ ಅಧ್ಯಕ್ಷರು ರಿತೇಶ್ ಅಂಚನ್ ಅವರ ನೂತನ ತಂಡಕ್ಕೆ ಪ್ರತಿಜ್ಞಾ ವಿಧಿ ಭೋದಿಸಿ, ಯುವವಾಹಿನಿ(ರಿ) ಕೇಂದ್ರ ಸಮಿತಿ ಅಧ್ಯಕ್ಷರು ಹರೀಶ್ ಕೆ. ಪೂಜಾರಿ ಮೂಲ್ಕಿ ಘಟಕವು ಶೈಕ್ಷಣಿಕ, ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ಒತ್ತು ನೀಡುತ್ತಿರುವುದು ಶ್ಲಾಘನಿಯ ಎಂದು […]
Read More

19-03-2024, 3:13 PM
ಮೂಲ್ಕಿ: ಯುವವಾಹಿನಿ ಸದಸ್ಯ ರೊಳಗೆ ಬಾಂಧವ್ಯ ವೃದ್ಧಿಸಲು ಹಾಗೂ ಘಟಕದ ಸದಸ್ಯರ ಕುಟುಂಬ ದೊಂದಿಗೆ ಬೆರೆಯಲು ದಿನಾಂಕ 19/08/2023 ರಿಂದ 09/03/2024 ರವರೆಗೆ ಮನೆ ಮನೆ ಭಜನೆ ಭಜನಾ ಸಂಕೀರ್ತನೆ ಜರಗಿತು.ಒಟ್ಟು 24 ಸದಸ್ಯರುಗಳ ಮನೆಯಲ್ಲಿ ಭಜನಾ ಸಂಕೀರ್ತನೆ ನಡೆಸಿ ಸಮಾರೋಪವಾಗಿ ದಿನಾಂಕ 14/03/2024 ರಂದು ಮೂಲ್ಕಿ ಬಿಲ್ಲವ ಸಂಘದ ಗುರು ಮಂದಿರದಲ್ಲಿ ಭಜನೆ ಹಾಗೂ ವಿಶೇಷ ಗುರುಪೂಜೆ ನಡೆಯಿತು. ಅರ್ಚಕರಾದ ಕೃಷ್ಣ ಶಾಂತಿರವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಅನ್ನಪ್ರಸಾದ ವಿತರಿಸಲಾಯ್ತು.ಈ ಸಂದರ್ಭದಲ್ಲಿ ಮೂಲ್ಕಿ ಬಿಲ್ಲವ […]
Read More

10-03-2024, 5:24 PM
ಮೂಲ್ಕಿ : ಯುವವಾಹಿನಿ (ರಿ.) ಮೂಲ್ಕಿ ಘಟಕದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಅರೋಗ್ಯಮಾಹಿತಿ ಕಾರ್ಯಕ್ರಮ ದಿನಾಂಕ 10-3-2024 ರಂದು ಶ್ರೀ ಆದಿ ಜನಾರ್ದನ ದೇವಸ್ಥಾನದ ವಠಾರದಲ್ಲಿ ಜರಗಿತು. ಕೊಳಚಿಕಂಬಳ ಶ್ರೀ ಜಾರಂದಾಯ ಮಹಿಳಾ ಮಂಡಳಿದ ಅಧ್ಯಕ್ಷರು ಲತಾ ಶೇಖರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ (ರಿ.) ಮೂಲ್ಕಿ ಘಟಕದ ಅಧ್ಯಕ್ಷರು ಮಾಧವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರು ಹರೀಶ್ ಕೆ. ಪೂಜಾರಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಹಿರಿಯ ಕೃಷಿಕೆ ಕಮಲ […]
Read More

09-03-2024, 5:49 AM
ಮೂಲ್ಕಿ : ಯುವವಾಹಿನಿ ಸದಸ್ಯರೊಳಗೆ ಬಾಂಧವ್ಯ ವೃದ್ಧಿಸಲು ಹಾಗೂ ಘಟಕದ ಸದಸ್ಯರ ಕುಟುಂಬದೊಂದಿಗೆ ಬೆರೆಯಲು ಯುವವಾಹಿನಿ(ರಿ) ಮುಲ್ಕಿ ಘಟಕ ಹಮ್ಮಿಕೊಂಡ ಮನೆ ಮನೆ ಭಜನೆ ಕಾರ್ಯಕ್ರಮ ದಿನಾಂಕ 09-03-2024 ಶನಿವಾರ ಘಟಕದ ಮಾಜಿ ಅಧ್ಯಕ್ಷರಾದ ಸತೀಶ್ ಕಿಲ್ಪಾಡಿಯವರ ಮನೆಯಲ್ಲಿ ಭಜನಾ ಸಂಕೀರ್ತನೆ ನಡೆಯಿತು. ಈ ಕಾರ್ಯಕ್ರಮದ ನೆನಪಿಗಾಗಿ ಘಟಕದ ವತಿಯಿಂದ ಶ್ರೀ ನಾರಾಯಣ ಗುರು ಚರಿತ್ರೆ ಪುಸ್ತಕವನ್ನು ನೀಡಲಾಯಿತು. ಭಜನಾ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Read More

02-03-2024, 4:24 AM
ಯುವವಾಹಿನಿ ಸದಸ್ಯರೊಳಗೆ ಬಾಂಧವ್ಯ ವೃದ್ಧಿಸಲು ಹಾಗೂ ಘಟಕದ ಸದಸ್ಯರ ಕುಟುಂಬದೊಂದಿಗೆ ಬೆರೆಯಲು ನಾವು ಹಮ್ಮಿಕೊಂಡ ಮನೆ ಮನೆ ಭಜನೆ ಕಾರ್ಯಕ್ರಮ ದಿನಾಂಕ 02-03-2024 ಶನಿವಾರ ಘಟಕದ ಮಾಜಿ ಅಧ್ಯಕ್ಷರು ಯೋಗೀಶ್ ರಕ್ಷಿತಾ ಕೋಟ್ಯಾನ್ ರವರ ಮನೆಯಲ್ಲಿ ಭಜನಾ ಸಂಕೀರ್ತನೆ ನೆರವೇರಿತು. ಈ ಕಾರ್ಯಕ್ರಮದ ನೆನಪಿಗಾಗಿ ಘಟಕದ ವತಿಯಿಂದ ಶ್ರೀ ನಾರಾಯಣ ಗುರು ಚರಿತ್ರೆ ಪುಸ್ತಕವನ್ನು ನೀಡಲಾಯಿತು. ಭಜನಾ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು ,ಮಾಜಿ ಅಧ್ಯಕ್ಷರು ಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Read More

28-01-2024, 3:30 PM
ಮುಲ್ಕಿ: ನಿರಂತರ ಅಭ್ಯಾಸ, ಆತ್ಮವಿಶ್ವಾಸ, ಏಕಾಗ್ರತೆಯ ಮೂಲಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ ಎಂದು ತರಬೇತುದಾರರಾದ ಜಯಶ್ರೀ ತಿಳಿಸಿದರು. ಅವರು ಯುವವಾಹಿನಿ(ರಿ.) ಮುಲ್ಕಿ ಘಟಕದ ಆಶ್ರಯದಲ್ಲಿ ಮುಲ್ಕಿ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 28-01-2024 ರಂದು ಮುಲ್ಕಿ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೆ ಜರುಗಿದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು. ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಸಂಚಾಲಕರಾದ ಹರಿಂದ್ರ ಸುವರ್ಣರವರು ದೀಪ ಬೆಳಗಿಸಿ ಕಾರ್ಯಾಗಾರ ಉದ್ಘಾಟಿಸಿದರು. […]
Read More

27-01-2024, 2:30 PM
ಮುಲ್ಕಿ: ಯುವವಾಹಿನಿ ಸದಸ್ಯರೊಳಗೆ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮವು ದಿನಾಂಕ 27-01-2024 ಶನಿವಾರ ಸಂಜೆ 6 ರಿಂದ 7 ರ ವರೆಗೆ ಮುಲ್ಕಿ ಘಟಕದ ಮಾಜಿ ಅಧ್ಯಕ್ಷರಾದ ಜಯ ಕುಮಾರ್ ಕುಬೇವೂರುರವರ ಮನೆಯಲ್ಲಿ ಭಜನಾ ಸಂಕೀರ್ತನೆ ನಡೆಯಿತು.ಈ ಕಾರ್ಯಕ್ರಮದ ನೆನಪಿಗಾಗಿ ಘಟಕದ ವತಿಯಿಂದ ಶ್ರೀ ನಾರಾಯಣ ಗುರು ಚರಿತ್ರೆ ಪುಸ್ತಕವನ್ನು ನೀಡಲಾಯಿತು. ಭಜನಾ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಸದಸ್ಯರು ಹಾಗೂ ಸ್ಥಳೀಯರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.
Read More