ಮುಲ್ಕಿ: ನಿರಂತರ ಅಭ್ಯಾಸ, ಆತ್ಮವಿಶ್ವಾಸ, ಏಕಾಗ್ರತೆಯ ಮೂಲಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ ಎಂದು ತರಬೇತುದಾರರಾದ ಜಯಶ್ರೀ ತಿಳಿಸಿದರು.
ಅವರು ಯುವವಾಹಿನಿ(ರಿ.) ಮುಲ್ಕಿ ಘಟಕದ ಆಶ್ರಯದಲ್ಲಿ ಮುಲ್ಕಿ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 28-01-2024 ರಂದು ಮುಲ್ಕಿ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೆ ಜರುಗಿದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು.
ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಸಂಚಾಲಕರಾದ ಹರಿಂದ್ರ ಸುವರ್ಣರವರು ದೀಪ ಬೆಳಗಿಸಿ ಕಾರ್ಯಾಗಾರ ಉದ್ಘಾಟಿಸಿದರು. ಯುವವಾಹಿನಿ(ರಿ.) ಮುಲ್ಕಿ ಘಟಕದ ಉಪಾಧ್ಯಕ್ಷ ವಿನಯ್ ಮಟ್ಟು ಅಧ್ಯಕ್ಷತೆ ವಹಿಸಿದ್ದರು, ಶಾಲಾ ಕಾರ್ಯದರ್ಶಿ ಬಾಲಚಂದ್ರ ಸನಿಲ್, ಮುಖ್ಯೋಪಾಧ್ಯಾಯರಾದ ಮಂಜುಳಾ, ಪ್ರಾಂಶುಪಾಲ ಯದೀಶ್ ಅಮೀನ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಒಟ್ಟು 103 ವಿದ್ಯಾರ್ಥಿಗಳು ಈ ಕಾರ್ಯಾಗಾರದ ಪ್ರಯೋಜನ ಪಡೆದರು.
ವಿನಯ್ ಮಟ್ಟು ಸ್ವಾಗತಿಸಿದರು, ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಯದೀಶ್ ಅಮೀನ್ ವಂದಿಸಿದರು, ಉದಯ್ ಅಮೀನ್ ಮಟ್ಟು ನಿರೂಪಿಸಿದರು.