Yuvavahini

ಮಂಗಳೂರು ಮಹಿಳಾ

ಅಭೂತಪೂರ್ವ ಸ್ಪಂದನೆಯಲ್ಲಿ ಸಾಕಾರಗೊಂಡ ಬಿಲ್ಲವ ವಧೂವರರ ಸಮಾವೇಶ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಟ್ಟಿಗೆ ಅಪೂರ್ವವಾದ, ಬಿಲ್ಲವ ಸಮಾಜದ ’ವಧೂವರರ ಸಮಾವೇಶ’ ಬಿಲ್ಲವ ಸಮಾಜ ಬಾಂಧವರ ಅಭೂತಪೂರ್ವ ಸ್ಪಂದನೆಯೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಯುವವಾಹಿನಿ ಮಹಿಳಾ ಘಟಕದ ಸಾಮಾಜಿಕ ಕಳಕಳಿಯ ವೈಶಿಷ್ಟ್ಯಪೂರ್ಣ ಪರಿಕಲ್ಪನೆಯೊಂದಿಗೆ ಯುವವಾಹಿನಿ (ರಿ) ಕೇಂದ್ರ ಸಮಿತಿ ಮತ್ತು ಇತರ ಘಟಕಗಳ ಸಹಕಾರದೊಂದಿಗೆ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ದಿನಾಂಕ 18-12-2016 ರಂದು ಜರಗಿದ ಸಮಾವೇಶವು ಯುವವಾಹಿನಿಯ ಚಟುವಟಿಕೆಗಳಲ್ಲಿ ಒಂದು ಮೈಲುಗಲ್ಲಾಗಿ ಇತಿಹಾಸ ನಿರ್ಮಿಸಿತು. ಒಂದು ಮಹತ್ವಪೂರ್ಣ ಯೋಚನೆ, ಯೋಜನೆಯೊಂದಿಗೆ ಬಹಳಷ್ಟು […]

Read More

ಮಂಗಳೂರು ಮಹಿಳಾ ಯುವವಾಹಿನಿಯ ಸಾಂಸ್ಕೃತಿಕ ಲೋಕ ಅನಾವರಣ

ಯುವವಾಹಿನಿಯ ವರ್ಷದ ಪ್ರತಿಷ್ಠಿತ ಕಾರ್ಯಕ್ರಮ ಯುವವಾಹಿನಿ ಅಂತರ ಘಟಕ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಯುವವಾಹಿನಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ 20 ನವಂಬರ್ 2016 ನೇ ಆದಿತ್ಯವಾರ ಜರಗಿತು. ಯುವವಾಹಿನಿ ಮಂಗಳೂರು ಮಹಿಳಾ  ಘಟಕದ ಆಶ್ರಯದಲ್ಲಿ ಜರಗಿದ ಸಾಂಸ್ಕೃತಿಕ ಕಲಾ ರೂಪಕ ಸರ್ವರ ಪ್ರಶಂಸೆಗೆ ಪಾತ್ರವಾಯಿತು.

Read More

ಮಂಗಳೂರು ಮಹಿಳಾ ಘಟಕದ ವಿವಿಧ ಕಾರ್ಯಕ್ರಮಗಳು

ತಾ. 3-9-2016 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ಸದಸ್ಯರಿಗೆ ಫಿನಾಯಿಲ್ ಹಾಗೂ ಲಿಕ್ವಿಡ್ ಸೋಪ್ ತಯಾರಿಸುವುದರ ಬಗ್ಗೆ ಜರಗಿದ ಮಾಹಿತಿ ಶಿಬಿರ. ತಾ. 16-9-2016 ರಂದು ಗುರುಜಯಂತಿ ಪ್ರಯುಕ್ತ ಲೇಡಿಹಿಲ್ ವೃತ್ತದಿಂದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದವರೆಗೆ ಜರಗಿದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು. ತಾ. 16-9-2016 ರಂದು ಗುರುಜಯಂತಿ ಪ್ರಯುಕ್ತ ವೆನ್‌ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಹಾಯಕರಿಗೆ (ಮನೆಯವರಿಗೆ) ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಯುವವಾಹಿನಿ ಮಂಗಳೂರು ಮಹಿಳಾ ಘಟಕದಿಂದ ಏರ್ಪಡಿಸಲಾಗಿತ್ತು. […]

Read More

ಸೋಣ ಸಂಭ್ರಮ

ದಿನಾಂಕ 21-08-2016ರಂದು ಮಂಗಳೂರು ಮಹಿಳಾ ಘಟಕದ ವತಿಯಿಂದ ಮಂಗಳೂರಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ‘ಕರಾವಳಿ ಸಭಾಭವನ’ದಲ್ಲಿ ‘ಸೋಣ ಸಂಭ್ರಮ’ಕಾರ್ಯಕ್ರಮ ಜರಗಿತು. ಕಾರ್ಯಕ್ರಮ ಸಂತ ಅಲೋಶಿಯಸ್ ಕಾಲೇಜಿನ ಪ್ರಾಚಾರ್ಯರಾದ ಡಾ| ಗಣೇಶ್ ಅಮೀನ್ ಸಂಕಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಇದರ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಚಿತಾ ನಂದಗೋಪಾಲ್, ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಘಟಕದ ಸಲಹೆಗಾರರಾದ ಅಶೋಕ್ ಕುಮಾರ್ ಮತ್ತು ಸಾಧು ಪೂಜಾರಿ ಮೊದಲಾದವರು ಭಾಗವಹಿಸಿದ್ದರು. ಘಟಕದ ಅಧ್ಯಕ್ಷೆ […]

Read More

ಆಶ್ರಮದ ಮಕ್ಕಳಿಗೆ ಕ್ಷೌರ ಸೇವೆ

ಮಂಗಳೂರು ಮಹಿಳಾ ಘಟಕದ ವತಿಯಿಂದ ದಿನಾಂಕ 30-07-2016 ರಂದು ಬಲ್ಮಠದ ಶ್ರದ್ಧಾನಂದ ಆಶ್ರಮದ ಮಕ್ಕಳಿಗೆ ಕ್ಷೌರ ಸೇವೆಯನ್ನು (hair cutting) ಘಟಕದ ಕೆಲವು ಸೌಂದರ್ಯ ತಜ್ಞೆಯರಿಂದ ನಡೆಸಿಕೊಡಲಾಯಿತು. ಮಕ್ಕಳಿಗೆ ಸ್ವೀಟ್, ಬಿಸ್ಕೆಟ್, ಪೆನ್, ಪೆನ್ಸಿಲ್‌ಗಳನ್ನು ನೀಡಲಾಯಿತು. ಸುಮಾರು 35 ಮಕ್ಕಳು ಇವುಗಳ ಪ್ರಯೋಜನ ಪಡೆದರು.

Read More

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ವಿವಿಧ ಕಾರ್ಯಕ್ರಮಗಳು

ಘಟಕದ ವತಿಯಿಂದ ತಾ. 16-7-2016 ರಂದು ಕೋಡಿಕಲ್ ದ.ಕ. ಜಿಲ್ಲಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಣೆ, ಸಸಿ ವಿತರಣೆ ಹಾಗೂ ಶಾಲೆಯ 30 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿರುತ್ತದೆ. ಕಾರ್ಯಕ್ರಮವನ್ನು ಕೋಡಿಕಲ್ ಬಿಲ್ಲವ ಸಂಘ ಇದರ ಅಧ್ಯಕ್ಷೆ ಶ್ರೀಮತಿ ಲೋಲಾಕ್ಷಿ ದೇವೇಂದ್ರ ಕೋಟ್ಯಾನ್‌ರವರು ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಯ ಜಯಪ್ಪ ಅದ್ಯಪಾಡಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವೀಣಾ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿದ್ಯಾ ರಾಕೇಶ್, ಘಟಕದ ಸಲಹೆಗಾರರ ಸಾಧು ಪೂಜಾರಿ ಹಾಗೂ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!