ವಿದ್ಯಾರ್ಥಿಯೊಬ್ಬರ ಸತತ ಪರಿಶ್ರಮದ ಸಾಧನೆಯ ಮಾನದಂಡ ಆತ/ ಆಕೆ ಗಳಿಸುವ ಶೇಕಡಾವಾರು ಅಂಕ. ಈ ನಿಟ್ಟಿನಲ್ಲಿ ಈ ಬಾರಿ SSLC ಪರೀಕ್ಷೆಯಲ್ಲಿ 625 ಕ್ಕೆ 622 ಅಂಕಗಳಸಿ ಶೇ. 99.52 % ಸಾಧನೆ ಮಾಡಿದ ಕು| ರಕ್ಷಾ ಡಿ ಅಂಚನ್ ನೋಡುವವರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಶ್ರೀ ದೇವಿಪ್ರಸಾದ್ ಹಾಗೂ ಶ್ರೀಮತಿ ವಿನೋದಾ ದಂಪತಿಗಳ ಈ ಹೆಮ್ಮೆಯ ಕುವರಿ. ಉಚ್ಚಿಲದ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದಾಳೆ.
ಕನ್ನಡದಲ್ಲಿ 125 ಕ್ಕೆ 125, ಹಿಂದಿ, ಗಣಿತ ಹಾಗೂ ವಿಜ್ಞಾನದಲ್ಲಿ 100 ಕ್ಕೆ 100 ಅಂಕ ಗಳಿಸಿ ತಾನೋರ್ವ ಪ್ರತಿಭಾನ್ವಿತೆ ಎಂದು ಸಾಬೀತು ಪಡಿಸಿದ್ದಾಳೆ. ಪರಿಸರದಲ್ಲಿ ಏನೇ ನಡೆಯುತ್ತಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಸಮಚಿತ್ತತೆಯಿಂದ ಓದಿನ ಬಗ್ಗೆ ತನ್ನ ಗಮನವನ್ನು ಕೇಂದ್ರೀಕರಿಸಿ ಸತತ ಅಭ್ಯಾಸದಿಂದ ಪರಿಸ್ರಮದಿಂದ ಕಲಿತು ಈ ಸಾಧನೆ ಮಾಡಿದ ಈಕೆ ನಮ್ಮ ಸಮಾಜದ ಹೆಮ್ಮಗೆ ಪಾತ್ರಳಾಗಿದ್ದಾಳೆ.
ಕು| ರಕ್ಷಾ ಇದೋ ನಿನಗೆ ಯುವವಾಹಿನಿಯ ಅಭಿಮಾನದ ಅಭಿನಂದನೆಗಳು ಹಾಗೂ ’ಅಕ್ಷರ ಪುರಸ್ಕಾರ’ ನಿನಗಾಗಿ.