ಕೂಳೂರು : ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ ಶಿವಗಿರಿ ಮಠ ಕೇರಳ ಇವರ ಮಾರ್ಗದರ್ಶನದೊಂದಿಗೆ ಹರೀಶ್ ಪೂಜಾರಿ ಮಂಗಳೂರು ಇವರ ಸಹಕಾರದಿಂದ ಶಿವಗಿರಿ ತೀರ್ಥ ಯಾತ್ರೆ ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದ ಹಾಗೂ ಗುರುಹಿರಿಯರ ಆಶೀವಾ೯ದ ದೊಂದಿಗೆ 50 ಮಂದಿ ಸದಸ್ಯರು, ಬಂಧುಮಿತ್ರರು ಒಟ್ಟಾಗಿ ದಿನಾಂಕ 28-9-2024 ನೇ ಶನಿವಾರ ಸಂಜೆ 5.30ಕ್ಕೆ ಮಾವೇಲಿ ಎಕ್ಸ್‌ಪ್ರೆಸ್ ನಲ್ಲಿ ಪ್ರಯಾಣ ಆರಂಭವಾಯಿತು.
ರಾತ್ರಿ ರೈಲಿನಲ್ಲಿ ರುಚಿಯಾದ ಊಟವನ್ನು ಮಾಡಿ, ಮಾರನೇ ದಿನ ಬೆಳಿಗ್ಗೆ 29-09-2024 ಬೆಳಗ್ಗೆ 5.30ಕ್ಕೆ ಶಿವಗಿರಿ ರೈಲ್ವೇ ಸ್ಟೇಶನ್ ತಲುಪಿ, ಅಲ್ಲಿಂದ ಬಸ್ಸಿನಲ್ಲಿ ಯಾತ್ರಿ ನಿವಾಸಕ್ಕೆ ತೆರಳಿದರು. ಸ್ನಾನಾದಿಗಳನ್ನು ಮುಗಿಸಿ, ಶುಚೀಭೂ೯ತರಾಗಿ ಶಾರದಾ ಪೀಠ ದರ್ಶನ, ಯಜ್ಜ ಮಂಟಪ, ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಮೂಲ ಸ್ಥಳ ದರ್ಶನ ಮಾಡಿ, ಬೆಳಗ್ಗಿನ ಉಪಾಹಾರವನ್ನು ಮುಗಿಸಿ, ಸುಮಾರು 9.00ಗಂಟೆಗೆ ಪ್ರಯಾಣ ಬ್ರಹ್ಮಶ್ರೀ ನಾರಾಯಣ ಗುರುಗಳ ಜನುಮಸ್ಥಳ ಚೆಂಬಳಂತಿಯಲ್ಲಿ ಸತ್ಯಾನಂದ ಸ್ವಾಮಿಗಳು ಬ್ರಹ್ಮ ಶ್ರೀ ನಾರಾಯಣ ಗುರುಗಳ ಬಗ್ಗೆ ಸವಿವರವಾಗಿ ಹೇಳಿದರು.
ಅಲ್ಲಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಲುಪಿದೆವು. ಸ್ವಾಮೀಜಿಯವರು ಸ್ಥಳದ ಮಹಿಮೆಯನ್ನು ವಣಿ೯ಸಿದರು. ಮಧ್ಯಾಹ್ನ ಸವಿರುಚಿ ಭೋಜನವನ್ನು ಮುಗಿಸಿ, ಸ್ವಲ್ಪ ಹೊತ್ತು ಅಲ್ಲಿ ಇಲ್ಲಿ ತಿರುಗಾಡಿ ಅಲ್ಲಿಂದ ಅರಿವಿಪುರಂಗೆ ಹೊರಟರು. ಅಲ್ಲಿ ಸ್ವಾಮೀಜಿ ಯವರು ಶ್ರೀ ನಾರಾಯಣ ಗುರುಗಳು ಶಿವಲಿಂಗವನ್ನು ಸ್ಥಾಪಿಸಿರುವುದರ ಬಗ್ಗೆ ತುಂಬಾ ವಿವರವಾಗಿ ತಿಳಿಸಿದರು. ಸಂಜೆ ಬಿಸಿ ಚಾ ಹಾಗೂ ತಿಂಡಿಯನ್ನು ಸವಿದು, ನಾರಾಯಣ ಗುರುಗಳು ಪ್ರತಿಷ್ಠಾಪಿಸಿದ ಶಿವಲಿಂಗದ ಪೂಜೆಯ ನಂತರ ಕನ್ಯಾಕುಮಾರಿಗೆ ಪ್ರಯಣ ಬೆಳೆಸಿದರು.
ಕನ್ಯಾಕುಮಾರಿಯಲ್ಲಿ ದೇವಿಯ ದರ್ಶನ ಬಹಳ ಚೆನ್ನಾಗಿ ಆಯಿತು. ನಂತರ ಮರುತ್ವ ಮಲೆ ಆಶ್ರಮದಲ್ಲಿ ಊಟ ಮುಗಿಸಿ ರಾತ್ರಿ ವಿಶ್ರಾಂತಿ ಪಡೆದರು.
30-09-2024 ಸೋಮವಾರ ಬೆಳಿಗ್ಗೆ 3.50 ಗಂಟೆಗೆ ಸ್ನಾನಾಧಿಗಳನ್ನು ಮಾಡಿ, 5.00 ಗಂಟೆಗೆ ಗುರು ಪೂಜೆಯ ನಂತರ “ಮರುತ್ವ ಮಲೆ” ಗುಹೆ ದರ್ಶನಕ್ಕೆ ಪ್ರಯಾಣ ಕೈಗೊಂಡರು. ಮರುತ್ವಮಲೆಗೆ ಹೋಗಲು ಸಾಧ್ಯವಿರದವರು ಆಶ್ರಮದಲ್ಲೇ ಉಳಕೊಂಢರು.
ಗುಹೆ ದರ್ಶನ ಮಾಡಿ 9.30ಕ್ಕೆ ಬೆಳಗ್ಗಿನ ಉಪಹಾರ ಆಶ್ರಮದಲ್ಲಿ ಮಾಡಿ ನಂತರ ವಿವೇಕಾನಂದ ಸ್ಮಾರಕ ವೀಕ್ಷಿಸಿ, ಅಲ್ಲಿ ಕೆಲವು ಛಾಯಾಚಿತ್ರಗಳನ್ನು ತೆಗೆದು ಅಲ್ಲಿಂದ ಪುನಃ ಮರುತ್ವಮಲೆಗೆ ಪಯಣ.
ಮಧ್ಯಾಹ್ನದ ಊಟ ಮುಗಿಸಿ ಸುಮಾರು 2.30ಗಂಟೆಗೆ ತಿರುವನಂತಪುರಕ್ಕೆ ಪ್ರಯಾಣ ಮುಂದುವರಿಸಿದರು. ಬಸ್ಸಿನಲ್ಲಿ ಸ್ವಲ್ಪ ಅಂತ್ಯಾಕ್ಷರಿ ಹಾಗೂ ದೇವರ ನಾಮಗಳನ್ನು ಹಾಡಿಕೊಂಡು,
ಸಂಜೆ 5.30ಕ್ಕೆ ಅನಂತ ಪದ್ಮನಾಭ ದೇವರ ದರ್ಶನ ಪಡೆದು, ರೈಲು ನಿಲ್ದಾಣಕ್ಕೆ 7.00 ಗಂಟೆಗೆ ಬಂದು ತಲುಪಿ ರಾತ್ರಿ 7.20ಕ್ಕೆ ಮಾವೇಲಿ ರೈಲಲ್ಲಿ ನಮ್ಮ ಪ್ರಯಾಣ ಊರಿನ ಕಡೆ ಆರಂಭವಾಯಿತು. ರಾತ್ರಿಯ ಸೊಗಸಾದ ಭೋಜನವನ್ನು ಸವಿದು ಮಂಗಳವಾರ 01-10-24ರ ಬೆಳಿಗ್ಗೆ 8.00ಗಂಟೆಗೆ ಮಂಗಳೂರಿಗೆ ತಲುಪಿ ಎಲ್ಲ ಬಂಧುಗಳು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಈ ಶಿವಗಿರಿ ಯಾತ್ರೆಯಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ನಯನಾ ರಮೇಶ್ ಹಾಗೂ ಜವಾಬ್ದಾರಿಯನ್ನು ವಹಿಸಿದ ದೀಕ್ಷಿತ್ ಸಿ ಎಸ್, ಕೋಶಾಧಿಕಾರಿ ವಿಘ್ನೇಶ್ ಬೋಳೂರು, ಮಾಗ೯ದಶ೯ಕರಾದ ಚಂದಪ್ಪ ಸನಿಲ್, ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಬಂಧುಮಿತ್ರರು ಜೊತೆಗಿದ್ದರು.
ಜವಾಬ್ದಾರಿ ವಹಿಸಿದ ಮಾಜಿ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ಇವರು ಅಧ್ಯಕ್ಷರಿಗೆ, ಸ್ವಾಮೀಜಿ ಯವರಿಗೆ , ನಮ್ಮೊಂದಿಗಿದ್ದ ಹರೀಶ್ ಪೂಜಾರಿ ಇವರಿಗೂ ಬಂದಂತಹ ಯುವವಾಹಿನಿ ಸದಸ್ಯರ ಬಂಧು ಮಿತ್ರರಿಗೆ ಸಂಚಾಲಕರಾದ ವಿಮಲಾ ರಾಜೇಶ್ ಇವರಿಗೂ ಹಾಗೂ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.