ಕು| ನಿಧಿಶಾ-ಕರ್ನಾಟಕದ ಪ್ರೌಢ ಶಿಕ್ಷಣ ಮಂಡಳಿ ಕಳೆದ 2016 ಮಾರ್ಚ್‌ನಲ್ಲಿ ನಡೆಸಿದ SSLC ಪರೀಕ್ಷೆಯಲ್ಲಿ 625 ಕ್ಕೆ ನಂಬಲಸಾಧ್ಯವಾದ 620 ಅಂಕಗಳಿಂದ ಕಲಿತ ಶಾಲೆಯ ಅಧ್ಯಾಪಕರು, ಪೋಷಕರು ಮತ್ತು ಬಿಲ್ಲವ ಸಮುದಾಯವೇ ಹೆಮ್ಮೆ ಪಡುವ ಸಾಧನೆ ಮಾಡಿರುತ್ತಾರೆ.
ಈ ಬೆಲೆ ಕಟ್ಟಲಾಗದ ನಿಧಿ ಬರೀ ಕಲಿಕೆಗೇ ಸೀಮಿತಗೊಂಡಿಲ್ಲ. ಸಾಮಾನ್ಯವಾಗಿ ಕಲಿಕೆಯಲ್ಲಿ ಮುಂಚೂಣಿಯಲ್ಲಿರಬೇಕಾದಲ್ಲಿ ಬರೀ, ಪುಸ್ತಕ-ಓದು ಇಷ್ಟಕ್ಕೆ ಸೀಮಿತವಿರಬೇಕೆಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ ನಿಧಿಶಾಳ ಪೋಷಕ ಲೋಕನಾಥ್-ಚಿತ್ರಕಲಾ ದಂಪತಿಗಳು ತಮ್ಮ ಮಗಳು ಇತರ ಸಾಧನೆಯನ್ನು ಮಾಡಲೂ ಪ್ರೋತ್ಸಾಹಿಸಿರುವುದು ಸಂತಸದ ವಿಚಾರ.
ಪ್ರಬಂಧ ಸ್ಪರ್ಧೆಯಲ್ಲಿ ತನ್ನ ಅಸಾಧಾರಣ ಪ್ರತಿಭೆಯಿಂದ ಈಕೆ ಜ್ಯೋತಿ ಸೈಕಲ್ಸ್ ಮಂಗಳೂರು ಇವರು ನಡೆಸಿದ ಸ್ಪರ್ಧೆಯಲ್ಲಿ ಭಾಗವಹಿಸಿ ರೂ.10,000/- ಮೌಲ್ಯದ Firefox Bicycle ನ್ನೂ ತನ್ನದಾಗಿಸಿಕೊಂಡ ಕೀರ್ತಿವಂತೆ. ಜಿಲ್ಲಾ ಮಟ್ಟದಲ್ಲಿ ಪರಿಸರ ದಿನ 2014 ರಲ್ಲಿ ನಡೆದ ಪ್ರಬಂಧ ಸ್ಫರ್ಧೆಯಲ್ಲಿ 3 ನೆಯ ಬಹುಮಾನ ಗಳಿಸಿದ್ದು ಈಕೆಯಲ್ಲಿ ಹೆಚ್ಚಿನ ಪ್ರತಿಭೆ ಇದೆ ಎಂದು ಸಾಬೀತುಗೊಂಡಿದೆ.
ಶಾಲಾ ದಿನಗಳಲ್ಲಿ ವಿದ್ಯಾರ್ಥಿ ನಾಯಕಿಯಾದ ಈಕೆ ಮುಂದೊಂದು ದಿನ ಸಮಾಜದ ಶ್ರೇಷ್ಠ ನಾಯಕಿಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾಳೆ.
ಯುವವಾಹಿನಿಯಿಂದ ಅತ್ಯಂತ ಗೌರವಕ್ಕೆ ಪಾತ್ರಳಾದ ಈಕೆಯನ್ನೂ ’ಅಕ್ಷರ ಪುರಸ್ಕಾರ’ ನೀಡಿ ನಾವೆಲ್ಲ ಅಭಿನಂದಿಸೋಣ.
Congratulations Nidhisha! Keep up the good work! 🙂