ಕುಳಾಯಿ : ಮಹಿಳಾ ಮಂಡಲ (ರಿ) ಕುಳಾಯಿ ಮತ್ತು ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕದ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇದರ ಸಹಯೋಗದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ಡಾಕ್ ಚೌಪಾಲ್-ಅಂಚೆ ಜನ ಸಂಪರ್ಕ ಅಭಿಯಾನ ಮೂಲಕ ಆಧಾರ್ ನೋಂದಣಿ ಹಾಗೂ ತಿದ್ದುಪಡಿ, ಪಾನ್ ಕಾರ್ಡ್, ಪಾಸ್ ಪೋರ್ಟ್, ಅಪಘಾತ ವಿಮಾ ಹಾಗೂ ಅಂಚೆ ಉಳಿತಾಯ ಯೋಜನೆಯ ಶಿಬಿರವು ಮಹಿಳಾ ಮಂಡಲ ಕುಳಾಯಿ ಸಭಾಂಗಣದಲ್ಲಿ 02-10-2024ರಂದು ಬುಧವಾರ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರು ಹರೀಶ್ .ಕೆ. ಪೂಜಾರಿ ದೀಪ ಬೆಳಗಿಸಿ ನೆರವೇರಿಸಿದರು. ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಪ್ರಯುಕ್ತ, ಕುಳಾಯಿ ಪರಿಸರದ ಜನರಿಗೆ ಅಂಚೆ ಇಲಾಖೆಯಿಂದ ದೊರೆಯುವ ಸೌಲಭ್ಯವನ್ನು ಆಯೋಜಿಸಿದ್ದು, ಕುಳಾಯಿ ವ್ಯಾಪ್ತಿಯ ಎಲ್ಲರಿಗೂ ಇದರ ಪ್ರಯೋಜನ ಸಿಗುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಪಿ ಸಂತೋಷ್ ಐತಾಳ್ ವಕೀಲರು ಕಾರ್ಯಕ್ರಮವನ್ನು ಶ್ಲಾಘಿಸುತ್ತಾ, ಕಾರ್ಯಕ್ರಮದ ಬಗ್ಗೆ ತಾನೇ ರಚಿಸಿದ ಕವನವನ್ನು ರಚಿಸಿ ಹಾಡುವ ಮೂಲಕ ಶುಭ ಹಾರೈಸಿದರು.
ಹಿರಿಯ ಅಂಚೆ ಅಧೀಕ್ಷಕರು ಶ್ರೀ ಎಂ ಸುಧಾಕರ ಮಲ್ಯ ಅಂಚೆ ಇಲಾಖೆಯಿಂದ ದೊರೆಯುವ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಲ ಕುಳಾಯಿ ಇದರ ಅಧ್ಯಕ್ಷರು ರೇವತಿ ನವೀನ್ ವಹಿಸಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಕುಳಾಯಿ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರು ಶೇಖರ್ ದೇವಾಡಿಗ, ಉತ್ತರ ಉಪ ವಿಭಾಗದ ಅಂಚೆ ನಿರೀಕ್ಷಕರು ಪ್ರದೀಪ್ ಭಂಡಾರಿ, ಕಾರ್ಯಕ್ರಮದ ಸಂಚಾಲಕಿ ಯಶಸ್ವಿನಿ, ಮಹಿಳಾ ಮಂಡಲದ ಕಾರ್ಯದರ್ಶಿ ಕುಮಾರಿ ವಾಣಿ ಉಪಸ್ಥಿತರಿದ್ದರು.
ಕುಳಾಯಿ ವ್ಯಾಪ್ತಿಯ 200 ಕ್ಕೂ ಹೆಚ್ಚು ಜನರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳು ಸುರೇಶ್ ಪೂಜಾರಿ ಸಂಯೋಜಿಸಿ, ಸಂಜೀವ ಸುವರ್ಣ ಮತ್ತು ರಾಜೇಶ್ವರಿ ನಿರೂಪಿಸಿದರು. ಘಟಕದ ಅಧ್ಯಕ್ಷೆ ಮನಿಷಾ ರೂಪೇಶ್ ವಂದಿಸಿದರು.