ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಕಾನೂನು, ರಾಜಕೀಯ, ಮನಶಾಸ್ತ್ರ, ವಿಚಾರವಾದ ಕುರಿತಾದ ಯುವ ಮನಸುಗಳ ಸಂವಾದ ಕಾರ್ಯಕ್ರಮ ದಿನಾಂಕ 30-09-2024 ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ಜಿಲ್ಲಾಧಿಕಾರಿ ಶ್ರೀ ಮುಲೈ ಮುಹಿಲನ್ ಎಂ.ಪಿ ನೆರವೇರಿಸಿ, ವಿದ್ಯಾರ್ಥಿಗಳು ಇತಿಹಾಸವನ್ನು ಅರಿತುಕೊಳ್ಳಬೇಕು ಮತ್ತು ಇತಿಹಾಸ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಸತ್ಯ ಮತ್ತು ಸುಳ್ಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ನುಡಿದರು.
ರಾಜಕೀಯ ಮನೆಯಿಂದಲೇ ಆರಂಭವಾಗುತ್ತದೆ. ಪ್ರತಿಯೊಂದು ಅವಕಾಶವು ರಾಜಕೀಯ, ವಿಚಾರವಾದ, ಕಾನೂನು ಮೂಲಕ ಬಂದಿದೆ. ಅವಕಾಶ ಪಡೆಯಲು ನಮ್ಮ ಗುರುಹಿರಿಯರು ಹೋರಾಟ ನಡೆಸಿದ್ದಾರೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ಸರಸ್ವತಿ ಎಸ್. ಕೆ ಇವರು ಪ್ರಸ್ತಾವನೆಗೈದರು.
ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶುಭ ರಾಜೇಂದ್ರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಕಾರ್ಯದರ್ಶಿ ಶ್ರೀಮತಿ ಅಮಿತ ಗಣೇಶ್ ಅವರು ವಂದಿಸಿದರು.
ಶ್ರೀ ದಯಾನಂದ್ ಉಗ್ಗೆಲ್ ಬೆಟ್ಟು ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಾನೂನು ವಿಭಾಗದಲ್ಲಿ ಪೊಲೀಸ್ ಉಪ ಆಯುಕ್ತ ಬಿ.ಪಿ.ದಿನೇಶ್ ಕುಮಾರ್, ಸಹಾಯಕ ಪೋಲಿಸ್ ಆಯುಕ್ತರಾದ ಗೀತಾ ಡಿ.ಕುಲಕರ್ಣಿ, ಮನಃಶಾಸ್ತ್ರದಲ್ಲಿ ಮನೋವೈದ್ಯರಾದ ಡಾ.ರವೀಶ್ ತುಂಗಾ, ಡಾ.ಅರುಣಾ ಯಡಿಯಾಳ್, ರಾಜಕೀಯ ವಿಭಾಗದಲ್ಲಿ ನಿವೃತ್ತ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರ್, ಪ್ರಾಧ್ಯಾಪಕ ಪ್ರೊ.ರಾಜಾರಾಮ್ ತೋಳ್ಪಾಡಿ, ವಿಚಾರವಾದದಲ್ಲಿ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು, ಭಾಗವಹಿಸಿದ್ದರು.
ವಿಚಾರವಾದದ ವಿಷಯದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ವೈಚಾರಿಕವಾಗಿ ಗಟ್ಟಿಯಾಗದಿದ್ದರೆ, ಸತ್ಯ ಹೇಳುವ ತಾಕತ್ತು ನೀವು ಪ್ರದರ್ಶಿಸದಿದ್ದರೆ ಜೀವನದಲ್ಲಿ ಸೋಲು ಅನುಭವಿಸುವ ಸಾಧ್ಯತೆಯೇ ಅಧಿಕ. ವಿದ್ಯಾರ್ಥಿಗಳು ಗಾಂಧೀಜಿ, ವಿವೇಕಾನಂದ, ಅಂಬೇಡ್ಕರ್, ನಾರಾಯಣಗುರುಗಳ ಜೀವನ ಚರಿತ್ರೆ ಓದಿ, ಅರಗಿಸಿಕೊಳ್ಳಿ ಎಂದರು.
ಡಿಸಿಪಿ ದಿನೇಶ್ ಕುಮಾರ್, ಎ ಸಿ ಪಿ ಗೀತಾ ಕುಲಕರ್ಣಿ ಅವರು ಕಾನೂನಾತ್ಮಕ ವಿಚಾರದ ಬಗ್ಗೆ ಬೆಳಕು ಚೆಲ್ಲಿದರು.
ವಿಶ್ರಾಂತ ಪ್ರಾಂಶುಪಾಲ ಡಾ। ಉದಯ್ ಕುಮಾರ್ ಇರ್ವತ್ತೂರು ಹಾಗೂ ಪ್ರೊ| ರಾಜಾರಾಮ್ ತೋಳಾಡಿ ರಾಜಕೀಯ ವಿಚಾರದಲ್ಲಿ ಮಾತನಾಡಿದರು. ರಾಜಕೀಯದ ವಿಸ್ತಾರವನ್ನು ಅರಿಯುವಲ್ಲಿ ನಾವು ಎಡವಿದ್ದೇವೆ. ಅದನ್ನು ಕೆಟ್ಟ ರೀತಿಯಲ್ಲಿ ನಾವು ಅರ್ಥ ಮಾಡಿಕೊಂಡಿದ್ದೇವೆ. ಕೇವಲ ಸರಕಾರ, ರಾಜಕೀಯ ಪಕ್ಷಗಳು, ಚುನಾವಣೆ ಇವಿಷ್ಟೇ ರಾಜಕಾರಣವಲ್ಲ, ಅರಿಸ್ಟಾಟಲ್ ಹೇಳುವ ಪ್ರಕಾರ ರಾಜಕಾರಣವೆನ್ನುವುದು ಎಲ್ಲವನ್ನು ಒಳಗೊಂಡ ವಿದ್ಯುನ್ಮಾನ ಎಂದು ರಾಜರಾಮ್ ತೊಲ್ಪಾಡಿ ತಿಳಿಸಿದರು.
ನರೇಶ್ ಕುಮಾರ್ ಸಸಿಹಿತ್ಲು ನಿರೂಪಿಸಿದರು.
ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ನೋಂದಾವಣೆ ಮಾಡಿದ್ದಕ್ಕಾಗಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಹಾಗೂ ಗೋಕರ್ಣನಾಥ ಕಾಲೇಜಿಗೆ ನಗದು ಬಹುಮಾನ ನೀಡಲಾಯಿತು.
ಉತ್ತಮ ಪ್ರಶ್ನೆಗಾಗಿ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿನಿ ಮಿಂಚಿತ ರವರಿಗೆ ಬಹುಮಾನ ನೀಡಲಾಯಿತು.
ಸುಮಾರು 1300 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.