ಮೂಲ್ಕಿ ಚಿತ್ರಾಪಿನ ಶ್ರೀಮತಿ ಭಾರತಿ ಹಾಗೂ ಶ್ರೀ ಭಾಸ್ಕರ ಕೋಟ್ಯಾನ್ ದಂಪತಿಗಳು ತಮ್ಮ ಮಗಳು ಕು|ರಿಶಿಕಾ ಬೆಳೆದು ಶೈಕ್ಷಾಣಿಕ ಸಾಧನೆಯಿಂದ ಪಠ್ಯೇತರ ಸಾಧನೆಯಿಂದ ತಮಗೆ ಉತ್ತಮ ಹೆಸರು ತರಬಹುದೆಂದು ತಿಳಿದಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಲ್ಲವಸಮುದಾಯದ ಇತ್ತೀಚಿನ ಸಮಾಜೋನ್ನತಿ ಕಾರ್ಯಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡು ಯುವವಾಹಿನಿ ಎಂಬ ಸಂಸ್ಥೆಯ ಕಣ್ಣಿಗೆ ಬಿದ್ದ ಈ ಪ್ರತಿಭೆ ಇದೀಗ ಕಲಿಕೆ ಮತ್ತು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ನೃತ್ಯ ಪ್ರಾಕಾರವಾದ ಭರತ ನಾಟ್ಯ ಹೀಗೆ ಎರಡರಲ್ಲೂ ಹೆಸರುಗಳಿಸಿದ್ದು ಉಲ್ಲೇಖನೀಯ ಅಂಶ. ಖ್ಯಾತ ತುಳುನಾಡ ವೈಭವ, ಕಾರ್ಯಕ್ರಮದ ಕಲಾವಿದೆಯಾದ ಈಕೆ ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾಳೆ.
ರಾಷ್ಟ್ರಮಟ್ಟದ CBSE 10 ನೇ ತರಗತಿ ಪರೀಕ್ಷೆಯಲ್ಲಿ 10ಕ್ಕೆ 10 ಅಂಕಗಳಿಸಿ ತನ್ನ ಪೋಷಕರಿಗೆ ಕಲಿತ ವಿದ್ಯಾ ಸಂಸ್ಥೆಗೆ ಮತ್ತು ಬಿಲ್ಲವ ಸಮುದಾಯಕ್ಕೆ ಹೆಸರು ತಂದುಕೊಟ್ಟ ಈಕೆ ಓರ್ವ ಅಸಾಮಾನ್ಯ ಪ್ರತಿಭೆ ನಿಸ್ಸಂಶಯ.
ಕಲಿಕೆಯೊಂದಿಗೆ ತನ್ನ ಅಸಕ್ತಿಯ ಕ್ಷೇತ್ರ ಭರತನಾಟ್ಯದಲ್ಲಿ ಜ್ಯೂನಿಯರ್ ಹಾಗೂ ಸೀನಿಯರ್ ಗ್ರೇಡ್‌ಗಳೆರಡರಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ತಾನೋರ್ವ ಅಪ್ರತಿಮ ಸಾಧಕಿ ಎಂದು ಸಾಬೀತು ಪಡಿಸಿದ್ದಾರೆ. ಕು| ರಿಶಿಕಾ ಇವರಿಗೆ ಯುವವಾಹಿನಿಯು ಅಕ್ಷರ ಪುರಸ್ಕಾರ ನೀಡಿ ಅಭಿನಂದಿಸುತ್ತಿದೆ.