ಪಡುಬಿದ್ರೆ : ಬಿಲ್ಲವ ಸಮಾಜ ಸೇವಾ ಸಂಘ (ರಿ) ಪಡುಬಿದ್ರೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕ ಇದರ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 21 ಶನಿವಾರ ಬ್ರಹ್ಮಶ್ರೀ ನಾರಾಯಣಗುರುಗಳ 96ನೇ ಪುಣ್ಯ ತಿಥಿಯಂದು ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಭಾ ಗ್ರಹದಲ್ಲಿ ತುಳುವೆರೆ ಬದ್ಕ್ (ಕೂಡುಕಟ್ -ಕಟ್ ಪಾಡ್) ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು.
ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷರು ಹರೀಶ್.ಕೆ.ಪೂಜಾರಿ ಉದ್ಘಾಟಿಸಿದರು. ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘ (ರಿ) ಅಧ್ಯಕ್ಷರಾದ ವೈ ಸುದೀರ್ ಕುಮಾರ್ ಸ್ವಾಗತಿಸಿದರು.
ತುಳುವರಿಗೆ ಭಾಷೆ ಸಂಸ್ಕೃತಿ ಬಗ್ಗೆ ಅಭಿಮಾನವಿದೆ ಇಂದು ಸಾಂಸ್ಕೃತಿಕ ಸಂಘರ್ಷದಲ್ಲಿ ನಾವಿದ್ದೇವೆ ಕೂಡುಕಟ್ಟು ಸಮಾಜವನ್ನು ಅವಮಾನಿಸುವಂತಿರಬಾರದು. ಬದಲಾವಣೆಗೆ ಹೋಗಿ ಮೂಲ ಸ್ವರೂಪದಲ್ಲಿ ಅಳವಡಿಸಲಾಗದಿದ್ದರು ಪಾಲಿಸೋಣ ಎಂದು ಮೂಡುಬಿದ್ರೆ ಆಳ್ವಾಸ್ ಕಾಲೇಜ್ ಪ್ರಾಧ್ಯಾಪಕ ಯೋಗೀಶ್ ಕೈರೋಡಿ ಹೇಳಿದರು . ಜಾನಪದ ಚಿಂತಕ ಜಯ ಎಸ್ ಶೆಟ್ಟಿ ಪದ್ರ ವಿಚಾರ ಮಂಡಿಸಿ ದ್ರಾವಿಡ ಮೂಲದ ತುಳುವರ ಬದುಕು ಕೃಷಿ ಆಧಾರಿತವಾಗಿತ್ತು ಕೃಷಿ ಹಿಂದುಳಿಯಲು ಕೌಟುಂಬಿಕತೆಯೆ ಕಾರಣ ಬದುಕಿನಲ್ಲಿ ದೈವತ್ವ ಕಂಡವರು ತುಳುವರು ಎಂದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣದ ಸ್ನಾತಕೋತರ ವಿಷಯದಲ್ಲಿ ಆರನೇ ಸ್ಥಾನ ಗಳಿಸಿದ ಡಾ. ಐಶ್ವರ್ಯ.ಸಿ. ಅಂಚನ್ ಅವರನ್ನು ಸನ್ಮಾನಿಸಲಾಯಿತು. ನಾರಾಯಣ ಗುರು ಮಂದಿರದ ಪ್ರಧಾನ ಅರ್ಚಕ ಚಂದ್ರಶೇಖರ್ ಶಾಂತಿ ಪಡುಬಿದ್ರೆ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಭಾಸ್ಕರ್ ಏನ್ ಅಂಚನ್ ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷ್ಮಣ್ ಡಿ ಪೂಜಾರಿ ಯುವವಾಹಿನಿ ಘಟಕದ ಕಾರ್ಯದರ್ಶಿ ಸುಜಾತ ಪ್ರಸಾದ್ ಉಪಸ್ಥಿತರಿದ್ದರು.
ಸುಜಿತ್ ಕುಮಾರ್ ಪ್ರಾಸ್ತವಿಕ ಮಾತಾಡಿದರು. ರವಿರಾಜ್ ಕೋಟ್ಯಾನ್ , ಐಶ್ವರ್ಯ.ಸಿ. ಅಂಚನ್ ನಿರೂಪಿಸಿದರು. ಭಾಸ್ಕರ್ ಎನ್ ಅಂಚನ್ ವಂದಿಸಿದರು. ನಾರಾಯಣ ಗುರು ಮಂದಿರದಲ್ಲಿ ಭಜನಾ ಸೇವೆ ವಿಶೇಷ ಪೂಜೆ ಜರಗಿತು.