ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 170ನೇ ಜಯಂತಿಯ ಪ್ರಯುಕ್ತ ಶ್ರೀ ಗುರುಸ್ಮರಣೆ ಕಾರ್ಯಕ್ರಮವು ದಿನಾಂಕ 22-09-2024ರ ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.00ರ ವರೆಗೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಕಾಟಿಪಳ್ಳದಲ್ಲಿ ನಡೆಯಿತು.
ಬೆಳಿಗ್ಗೆ 8.30 ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಂದಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಜನಾ ಸ್ಪರ್ಧೆಯನ್ನು ಪ್ರಾರಂಭ ಮಾಡಲಾಯಿತು.
ತೀರ್ಪುಗಾರರಾಗಿ ಶ್ರೀ ದೀನ್ ರಾಜ್ ಪೆರ್ಮುದೆ ಮತ್ತು ಕುಮಾರಿ ವೈಶಾಲಿ ಡಿ ಬಂಗೇರ ಉಡುಪಿ ಉಪಸ್ಥಿತರಿದ್ದರು. ಉತ್ತಮ ತೀರ್ಪು ನೀಡಿದ ಇವರಿಗೆ ಹೂ, ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಂಗಳೂರು ಮಹಿಳಾ ಘಟಕದ ವತಿಯಿಂದ ನಡೆದ ಕುಣಿತ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ 3ನೇ ಸ್ಥಾನ ಬಹುಮಾನ ಪಡೆದ ನಮ್ಮ ಘಟಕದ ಯುವ ತಂಡವನ್ನು ಹೂ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬೆಳಿಗ್ಗೆ 11 ರಿಂದ ಕುಮಾರಿ ಆದ್ಯ ಇವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ಸಭಾಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಮುಖ್ಯ ಅತಿಥಿಗಳನ್ನು ಹೂ, ಶಾಲು, ಸ್ಮರಣಿಕೆ ನೀಡಿ ಸ್ವಾಗತಿಸುವುದರ ಮೂಲಕ ಸ್ವಾಗತ ಭಾಷಣ ಮಾಡಿದರು .
ಉದ್ಘಾಟಕರಾಗಿ ಶ್ರೀ ದೇವೇಂದ್ರ ಡಿ.ಕೋಟ್ಯಾನ್ ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕಾಟಿಪಳ್ಳ ಇವರು ಗುರುಗಳ ಬಗ್ಗೆ ಸಂದೇಶ ಮತ್ತು ಯುವವಾಹಿನಿ ಸಂಘಟನೆ ಇನ್ನಷ್ಟು ಯುವಕರಿಗೆ ಸ್ಫೂರ್ತಿಯಾಗಲಿ ಎಂದು ಉದ್ಘಾಟಕರ ಮಾತಲ್ಲಿ ತಿಳಿಸಿದರು.
ಪ್ರಸ್ತಾವನೆ ಶ್ರೀ ಪದ್ಮನಾಭ್ ಸಾಲ್ಯಾನ್ ನೆರವೇರಿಸಿದರು. ಗುರು ಸಂದೇಶವನ್ನು ಉಪನ್ಯಾಸಕರು ಶ್ರೀ ಅರುಣ್ ಉಳ್ಳಾಲ್ ಸೈಂಟ್ ಆಗ್ನೇಸ್ ಕಾಲೇಜು ಮಂಗಳೂರು ಸಮಾಜದಲ್ಲಿ ಆಗುವಂತಹ ಬದಲಾವಣೆಗಳನ್ನು ಸರಿಪಡಿಸಿ ನಮ್ಮ ಹಿಂದೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯ ಮಕ್ಕಳಿಗೆ ಉಳಿಸಿ ಕೊಡುವಲ್ಲಿ ಪೋಷಕರು ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಮನವರಿಕೆ ಮಾಡುವುದರ ಮೂಲಕ ಉತ್ತಮ ಮಾಹಿತಿಗಳನ್ನು ಸಭೆಯಲ್ಲಿ ಹಂಚಿ ಕೊಂಡರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ. ಪೂಜಾರಿಯವರು ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿದರು. ಶ್ರೀ ರಾಜಾರಾಮ್ ಸಾಲ್ಯಾನ್ ಮಾಲಕರು ಧನಲಕ್ಷ್ಮೀ ಕನ್ಸ್ಟ್ರಕ್ಷನ್ MRPL ಶುಭ ಹಾರೈಕೆ ಮಾಡಿದರು. ಶ್ರೀ ಸಂತೋಷ್ ಜೆ ಶೆಟ್ಟಿ ಅಗರಮೇಲು ಮಾಲಕರು ಸ್ವಯಂವರ ಸಿಲ್ಕ್ಸ್ ಸುರತ್ಕಲ್ ಶುಭಾಶಯ ತಿಳಿಸಿದರು. ಶ್ರೀ ಲೋಕೇಶ್ ಬೊಳ್ಳಾಜೆ ಮ.ನ. ಪಾ ಸದಸ್ಯರು ವಾರ್ಡ್ 3 ಕಾಟಿಪಳ್ಳ ಘಟಕಕ್ಕೆ ಶುಭ ಹಾರೈಸಿದರು.
ಶ್ರೀ ದೀಕ್ಷಿತ್ ಸಿ. ಎಸ್. ಕುಳೂರ್ ಕೇಂದ್ರದ ಸಂಘಟನಾ ಕಾರ್ಯದರ್ಶಿ, ಶ್ರೀ ಮೋಹನ್ ಮಾಡೂರ್ ಗುರುತತ್ವ ಪ್ರಚಾರಕರು ಕೇಂದ್ರ ಸಮಿತಿ, ಶ್ರೀಮತಿ ಸುಲತ ಪೂಜಾರಿ ಕಾರ್ಯದರ್ಶಿ ಮತ್ತು ಸಂಚಾಲಕರಾದ ಶ್ರೀಮತಿ ಮಾಲತಿ ಪದ್ಮನಾಭ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ SSLC/PUC ಯಲ್ಲಿ ಸಾಧನೆಗೈದ ಒಟ್ಟು 17 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಕಂಬಳ ವಿಭಾಗದಲ್ಲಿ ಸಾಧಕರಾದ ಶ್ರೀ ಯೋಗೀಶ್ ಕರಿಯ ಪೂಜಾರಿ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಅನೇಕ ಮಕ್ಕಳಿಗೆ ಆಶ್ರಯ ನೀಡಿರುವ ಆಶಾಕಿರಣ ಸಂಸ್ಥೆಯ ಶ್ರೀಮತಿ ಪುಷ್ಪ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಘಟಕದ ಸದಸ್ಯರಿಂದ ಸಾಂಸ್ಕೃತಿಕ ಸ್ಕೃತಿಕ ಕಾರ್ಯಕ್ರಮ, ಅರ್ಹ ಪ್ರತಿಭಾವಂತ 15 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಕಾರ್ಯಕ್ರಮದ ಪ್ರಯುಕ್ತ ಮಹಿಳೆಯರಿಗೆ ಭಜನಾ ಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಗೆ ಆನ್ಲೈನ್ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶ್ರೀ ಯೋಗೀಶ್ ಸನಿಲ್ ಬಹುಮಾನ ವಿತರಿಸಿದರು.
ನಿರೂಪಣೆ ಶ್ರೀಮತಿ ಗಾಯತ್ರಿ ಸತೀಶ್, ಭಾಸ್ಕರ್ ಸಾಲ್ಯಾನ್ ಮತ್ತು ಶ್ರೀ ಸತೀಶ್ ಕೋಟ್ಯಾನ್ ನಡೆಸಿಕೊಟ್ಟರು. ಸಂಚಾಲಕರಾದ ಶ್ರೀಮತಿ ಮಾಲತಿ ಪದ್ಮನಾಭ್ರವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.