ಕೂಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ) , ಶ್ರೀ ಕೃಷ್ಣ ಭಜನಾ ಮಂದಿರ ಹಾಗೂ ಶ್ರೀ ಶಾರದೊತ್ಸವ ಸೇವಾ ಟ್ರಸ್ಟ್ ರಿ., ಹಿಂದೂ ಯುವ ಸೇನೆ ವಿದ್ಯಾ ಶಾಖೆ ವಿದ್ಯಾನಗರ, ಯುವವಾಹಿನಿ (ರಿ) ಕೂಳೂರು ಘಟಕ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇದರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಏನೋಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ, ಏನೋಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ನುರಿತ ತಜ್ಞ ವೈದ್ಯ ತಂಡದವರಿಂದ ವೈದ್ಯಕೀಯ ನೇತ್ರ ತಪಾಸಣಾ ಮತ್ತು ದಂತ ತಪಾಸಣೆ ಚಿಕಿತ್ಸಾ ಶಿಬಿರವು ದಿನಾಂಕ 22-09-2024 ರಂದು ಬೆಳಗ್ಗೆ 9.30 ಕ್ಕೆ ಸರಿಯಾಗಿ ಶಾರದಾ ನಿಕೇತನ ಶ್ರೀ ಕೃಷ್ಣ ಭಜನಾ ಮಂದಿರ ವಿದ್ಯಾನಗರ ಇಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಂಜಿಮೊಗರು ವಾಡ್೯ನ ಕಾರ್ಪೋರೇಟರ್ ಅನಿಲ್ ಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್ ಉಪಸ್ಥಿತರಿದ್ದರು. ಇವರು ಕಾರ್ಯಕ್ರಮವನ್ನು ಕುರಿತು ಈಗಿನ ದಿನಗಳಲ್ಲಿ ಧಾವಂತದ ಬದುಕಿನಲ್ಲಿ ನಾವು ನಮ್ಮ ಆರೋಗ್ಯದ ಕಡೆ ಗಮನ ಕೊಡುವುದು ಅತಿ ಅಗತ್ಯ ಈಗ ಮಧುಮೇಹ ಅಧಿಕ ರಕ್ತದೊತ್ತಡ ಮುಂತಾದವು ಹೆಚ್ಚಾಗಿ ಕಂಡು ಬರುವುದು ಹಾಗಾಗಿ ಇಂತಹ ಕಾಯ೯ಕ್ರಮಗಳನ್ನು ಮಾಡುವ ಮೂಲಕ ಜನರು ಆರೋಗ್ಯ ತಪಾಸಣೆಯನ್ನು ಮಾಡಿ ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದರು. ತನಗೆ ಈ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಿದ ಆತ್ಮಶಕ್ತಿ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ ಇವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಚಿತ್ತರಂಜನ್ ಬೋಳಾರ್ ಮಾತನಾಡಿ ಕಳೆದ 8 ವಷ೯ಗಳಿಂದ ಆರೋಗ್ಯ ಶಿಬಿರವನ್ನು ಆಯೋಜಿಸುತ್ತಾ ಬಂದಿರುವೆವು. ಅದಕ್ಕಾಗಿ ಯುವವಾಹಿನಿ (ರಿ) ಕೂಳೂರು ಘಟಕ ಹಾಗೂ ವಿವಿಧ ಸಂಸ್ಥೆಗಳು ಸಹಕಾರ ನೀಡಿರುವುದು ತುಂಬಾ ಸಂತೋಷ ಎಂದರು.
ಕಾಯ೯ಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ , ಭಾಸ್ಕರ್ ಕೋಟ್ಯಾನ್, ಶ್ರೀಮತಿ ನಯನ ರಮೇಶ್, ದೀಕ್ಷಿತ್ ಸಿ ಎಸ್, ಪ್ರಥಮ ಉಪಾಧ್ಯಕ್ಷರಾದ ಲತೀಶ್ ಪೂಜಾರಿ, ದ್ವಿತೀಯ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ವಸಂತ್, ಆರೋಗ್ಯ ನಿದೇ೯ಶಕರು ಶ್ರೀಮತಿ ಮಮತಾ ಪುಷ್ಪರಾಜ್, ಕಾರ್ಯದರ್ಶಿ ಶ್ರೀಮತಿ ನಯನ ಕೋಟ್ಯಾನ್ , ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.