ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ 28ನೇ ಸ್ವಚ್ಛತಾ ಅಭಿಯಾನವು ಗಾಂಧಿ ಜಯಂತಿ ಪ್ರಯುಕ್ತ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪರಪಾದೆ ಆಕಾಶಭವನ ಇಲ್ಲಿ ದಿನಾಂಕ 02-10-2024 ಬುಧವಾರದಂದು ಬೆಳಿಗ್ಗೆ 8.30ಕ್ಕೆ ಸರಿಯಾಗಿ ಪ್ರಾರಂಭಗೊಂಡಿತು.
ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ದೀಕ್ಷಿತ್ ಸಿ ಎಸ್, ನಿಕಟ ಪೂರ್ವ ಅಧ್ಯಕ್ಷರಾದ ಯಶವಂತ್ ಪೂಜಾರಿ, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಪ್ರಥಮ ಉಪಾಧ್ಯಕ್ಷರಾದ ಲತೀಶ್ ಪೂಜಾರಿ, ಕಾರ್ಯದರ್ಶಿ ಶ್ರೀಮತಿ ನಯನ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಮುಕೇಶ್, S.D.M.C.ಅಧ್ಯಕ್ಷರು ಶ್ರೀಮತಿ ಮೈಮುನ, ಮುಖ್ಯ ಶಿಕ್ಷಕಿ ಶ್ರೀಮತಿ ರೇಖಾ, S.D.M.C. ಸದಸ್ಯರು, ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಬೆಳಿಗ್ಗೆ 8.30 ರಿಂದ 10.30ರ ವರೆಗೆ ಶಾಲೆಯ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ಶಾಲೆಯ ಆಡಳಿತ ಮಂಡಳಿ ವತಿಯಿಂದ ಸಮಾರೋಪ ಸಮಾರಂಭ ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶ್ರೀಮತಿ ರೇಖಾ, ಮುಖ್ಯ ಶಿಕ್ಷಕರು ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು ಮಾತನಾಡಿ ಘಟಕವು ನಡೆದು ಬಂದ ಹಾದಿ ಹಾಗೂ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿರುವ ವಿಚಾರವನ್ನು ಪ್ರಸ್ತಾಪಿಸಿ ಕೂಳೂರು ಘಟಕವು ಪ್ರತಿ ವರುಷ ಗಾಂಧಿ ಜಯಂತಿ ಪ್ರಯುಕ್ತ ಶಾಲಾ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು ಈ ವರುಷ ಈ ಕಾರ್ಯಕ್ರಮವನ್ನು ನಡೆಸಲು ಅನುವು ಮಾಡಿ ಕೊಟ್ಟ ಶಾಲಾ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು. ಮುಖ್ಯ ಶಿಕ್ಷಕರು ಮಾತನಾಡಿ ಯುವವಾಹಿನಿ(ರಿ.) ಕೂಳೂರು ಘಟಕವು ನಮ್ಮ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿರುವುದು ತುಂಬಾ ಸಂತೋಷವಾಗಿದೆ.ಎಲ್ಲರೂ ಒಟ್ಟಾಗಿ ಈ ಕೆಲಸದಲ್ಲಿ ಕೈಜೋಡಿಸಿ ನಮಗೆ ಸಹಕಾರ ನೀಡಿರುವಿರಿ ಎಂದು ಘಟಕದ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಮಕ್ಕಳಿಗೆ ಹಾಗೂ ನೆರೆದಿರುವ ಎಲ್ಲರಿಗೂ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಿಕ್ಷಕರಾದ ಶ್ರೀಮತಿ ಅನಿತಾ ಫಿಲೋಮಿನಾ, ಕಾರ್ಯಕ್ರಮ ನಿರೂಪಿಸಿದರು. ಮಕ್ಕಳು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಬಗ್ಗೆ ಭಾಷಣ ಮಾಡಿದರು. ಶಾಲೆಯ ಮಕ್ಕಳು ದೇಶಭಕ್ತಿ ಗೀತೆ ಹಾಡಿದರು. ಸಂಚಾಲಕರಾದ ಮುಕೇಶ್ ಬಂದಿರುವ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಕೊನೆಯದಾಗಿ ರಾಷ್ಟ್ರಗೀತೆ ಹಾಡಲಾಯಿತು. ಕಾರ್ಯಕ್ರಮದ ಕೊನೆಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.