ಭಾರತ ಸರಕಾರದ CBSE 10ನೆಯ ತರಗತಿಯಲ್ಲಿ ಈಕೆ 10 ಕ್ಕೆ 10 ಅಂಕ ಗಳಿಸಿ ತನ್ನ ಕಲಿಕಾ ಸಾಮರ್ಥ್ಯ ಯಾರಿಗೇನೂ ಕಡಿಮೆ ಇಲ್ಲ ಎಂದು ನಿರೂಪಿಸಿದ್ದಾಳೆ! ಶಹಬ್ಬಾಸ್! ಎನ್ನಬೇಕಲ್ಲ ನಾವು ನೀವೆಲ್ಲ?
ತಂದೆ ಸತೀಶ್ ಮತ್ತು ತಾಯಿ ಅಮಿತಾ-ಪುತ್ರಿ ಶಮಿತಾ-ವಾಹ್! ದೈಹಿಕ ಕ್ಷಮತೆಯ ಪುರಾತನ ಆತ್ಮ ರಕ್ಷಣಾ ಕಲೆ ಕರಾಟೆಯಲ್ಲಿ ಹಲವು ಹತ್ತು ಪ್ರಶಸ್ತಿ ಗಳಿಸಿದ ಶಮಿತಾ ಬಿಲ್ಲವ ಸಮಾಜದ ಕರಾಟೆ ಕಿಡ್ ಎನಿಸುವುದು ನಿಸ್ಸಂಶಯ. ಕರಾಟೆ ಕಲೆಯಲ್ಲಿ ತನ್ನನ್ನು ಪರಿಪೂರ್ಣವಾಗಿ ಪಳಗಿಸಿಕೊಂಡು ಪಡೆದ ಯಶಸ್ಸಿನ ಸಾಕ್ಷಿ ಯುವವಾಹಿನಿ ಸಂಸ್ಥೆಗೆ ಆಕೆ ಸಲ್ಲಿಸಿದ ಬರೋಬ್ಬರಿ 20 ಸರ್ಟಿಫಿಕೇಟುಗಳು ತಾನು ವಿವಿಧ ಸ್ಪರ್ಧೆಯಲ್ಲಿ ಜಯಿಸಿದ ಸಾಕ್ಷಿ ಪತ್ರಗಳು!
ಹಾಗಾದರೆ ಭಾರತೀಯ ಪರಂಪರೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ನಿರಾಯುಧ ಯುದ್ಧ ಕಲೆ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪೂರಕವೆ? ಇದನ್ನು ಹೌದು ಎಂದು ಸಾಬೀತು ಪಡಿಸಿದ ಶಮಿತಾ ಕಲಿಕೆಯಲ್ಲೂ ಶೇಕಡಾ 100 ಸಾಧನೆ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಅಕ್ಷರ ಪುರಸ್ಕಾರಕ್ಕೆ ಅಕ್ಷರಶಃ ಅರ್ಹ ಈಕೆಗೆ ನಮ್ಮೆಲ್ಲರ ಆಶೀರ್ವಾದಗಳು, ಅಭಿನಂದನೆಗಳು.