BGS Institute Kavoor ಇಲ್ಲಿ C.B.S.E. ಪಠ್ಯಕ್ರಮದಲ್ಲಿ 10 ನೇಯ ತರಗತಿ ಕಲಿತು ಅತ್ಯುನ್ನತ CPGA Grade Point 10 ಅಂಕ ಗಳಿಸಿದ ಕು| ಶ್ರಾವ್ಯ ಕೆ. ಪಂಜಿಮೊಗರು ನಿವಾಸಿ ಶ್ರೀ ಶ್ರೀಧರ ಪೂಜಾರಿ- ಡಾ| ವಿದ್ಯಾ ಶ್ರೀಧರ್ ದಂಪತಿಗಳ ಸುಪುತ್ರಿ.
ಸಾಮಾನ್ಯವಾಗಿ ಮಕ್ಕಳು ಕಲಿಕೆಯಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೆತ್ತವರಿಗೆ ಸಹಜ. ಆದರೆ ಬೋಧನೇತರ ಚಟುವಟಿಕೆಗಳಲ್ಲಿ ಸಾಧಿಸುವುದೂ ಅಷ್ಟೇ ಮುಖ್ಯ ಎಂಬ ತಿಳಿವಳಿಕೆಯುಳ್ಳ ಪೋಷಕರು ಈಗ ಹೆಚ್ಚಾಗಿದ್ದಾರೆ ಅದೇನೇ ಇರಲಿ. ಶ್ರಾವ್ಯ ಕೆ. ಕಲಿಕೆ ಹೊರತು ಪಡಿಸಿ ರಂಗೋಲಿ, ಹೂ ಜೋಡಣೆ, ಪ್ರಬಂಧ, ನೃತ್ಯ ಮತ್ತು ಚಿತ್ರಕಲೆಯಲ್ಲಿ ಪಳಗಿರುವುದು ತುಂಬಾ ಅಭಿಮಾನದ ವಿಚಾರ.
1ನೇ ತರಗತಿಯಿಂದ 10 ನೇ ತರಗತಿವರೆಗೆ ವಾರ್ಷಿಕ ಪರೀಕ್ಷೆಗಳಲ್ಲಿ ನಿರಂತರ ಪ್ರಥಮ ಸ್ಥಾನ ಗಿಟ್ಟಿಸಿಕೊಂಡ ಈಕೆಯನ್ನು ಯುವವಾಹಿನಿಯು ಹೆಮ್ಮೆಯಿಂದ ಅಕ್ಷರ ಪುರಸ್ಕಾರ ನೀಡಿ ಅಭಿನಂದಿಸುತ್ತಿದೆ.