ಕೂಳೂರು : ಬ್ರಹ್ಮಶ್ರೀ ನಾರಾಯಣ ಗುರು ವರ್ಯರ 170 ನೇ ಜನುಮ ದಿನದ ಪ್ರಯುಕ್ತ ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ಸಮಾಜ ಸೇವಾ ನಿರ್ದೇಶಕರು ಜಯಲಕ್ಷ್ಮಿ ಇವರ ಸಂಚಾಲಕತ್ವದಲ್ಲಿ ದಿನಾಂಕ 20-08-2024 ರಂದು ಸಂಜೆ ಚಿರಂತನ ಚಾರಿಟೇಬಲ್ ಟ್ರಸ್ಟ್ ಇಡ್ಯಾ ಸುರತ್ಕಲ್ ಇಲ್ಲಿಗೆ ಭೇಟಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಇಂದಿರಾ ಸುರೇಶ್ ವಹಿಸಿದ್ದರು. ನಾರಾಯಣ ಗುರುಗಳ ಭಾವಚಿತ್ರಕ್ಕೆ ಆಶ್ರಮದ ಹಿರಿಯರು ದಯಾನಂದ ಮೆಂಡನ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಘಟಕದ ಮಾಜಿ ಅಧ್ಯಕ್ಷರು ಭಾಸ್ಕರ್ ಕೋಟ್ಯಾನ್ ರವರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಸಂದೇಶ ಹಾಗೂ ತತ್ವಗಳ ಬಗ್ಗೆ ಮಾಹಿತಿ ನೀಡಿ ಘಟಕದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಚಿರಂತನ ಚಾರಿಟೇಬಲ್ ಟ್ರಸ್ಟ್ ಇದರ ಮ್ಯಾನೇಜಿಂಗ್ ಟ್ರಸ್ಟಿ ಭಾರವಿ ದೇರಾಜೆ ಮಾತನಾಡಿ ಗುರುಗಳ ಜನುಮ ದಿನವನ್ನು ತಮ್ಮ ಸಂಸ್ಥೆಯಲ್ಲಿ ಆಚರಿಸಿದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಯುವವಾಹಿನಿ ಕೂಳೂರು ಘಟಕ ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂದು ಶುಭ ಕೋರಿದರು.
ಅಧ್ಯಕ್ಷರು ಇಂದಿರಾ ಸುರೇಶ್ ಮಾತನಾಡಿ ಗುರುಗಳ ಜನುಮ ದಿನವನ್ನು ಪ್ರತೀ ವರ್ಷ ಇದೇ ರೀತಿ ಬೇರೆ ಬೇರೆ ಆಶ್ರಮದಲ್ಲಿ ಆಚರಿಸಿಕೊಂಡು ಬಂದಿರುತ್ತೇವೆ ಎಂದು ಹೇಳಿ ಇಂದು ಈ ಕಾರ್ಯಕ್ರಮ ಇಲ್ಲಿ ನಡೆಸಿಕೊಡಲು ಅನುವು ಮಾಡಿಕೊಟ್ಟ ಟ್ರಸ್ಟ್ ನ ಎಲ್ಲರಿಗೂ ವಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಯುವವಾಹಿನಿ (ರಿ.) ಕೂಳೂರು ಘಟಕದ ಕಾರ್ಯದರ್ಶಿ ನಯನ ಕೋಟ್ಯಾನ್, ಕಾರ್ಯಕ್ರಮದ ಸಂಚಾಲಕರು ಸಮಾಜ ಸೇವಾ ನಿರ್ದೇಶಕರು ಜಯಲಕ್ಷ್ಮಿ, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ವಿಮಲಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಘಟಕದ ನಿಕಟಪೂರ್ವ ಅಧ್ಯಕ್ಷರು ಯಶವಂತ್ ಪೂಜಾರಿ, ಮಾಜಿ ಅಧ್ಯಕ್ಷರು ಲೋಕೇಶ್ ಕೋಟ್ಯಾನ್, ನಯನ ರಮೇಶ್, ದೀಕ್ಷಿತ್ ಸಿ ಎಸ್, ಘಟಕದ ಮಾರ್ಗದರ್ಶಕರು ಚಂದಪ್ಪ ಸನಿಲ್, ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಹಿರಿಯರಿಗೆ ಆಟಗಳನ್ನು ಆಡಿಸಿ ಮನೋರಂಜಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಶ್ರಮದ ಹಿರಿಯರಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆಗಾಗಿ ರೂ. 5000/- ಚೆಕ್ ಅನ್ನು ನೀಡಲಾಯಿತು. ಎಲ್ಲರಿಗೂ ಫಲವಸ್ತು ವಿತರಿಸಲಾಯಿತು.
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು ಮಧುಶ್ರೀ ಪ್ರಶಾಂತ್ ಪ್ರಾರ್ಥಿಸಿದರು. ಅಧ್ಯಕ್ಷರು ಸ್ವಾಗತಿಸಿದರು. ಮಾಜಿ ಅಧ್ಯಕ್ಷರು ಭಾಸ್ಕರ್ ಕೋಟ್ಯಾನ್ ನಿರೂಪಿಸಿದರು. ಕಾರ್ಯದರ್ಶಿ ನಯನ ಕೋಟ್ಯಾನ್ ವಂದಿಸಿದರು.