IAS ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು, IISC ಬೆಂಗಳೂರಿನಲ್ಲಿ ಕಲಿಯುವುದು ಇದು ಹೆಚ್ಚಿನ ಜನರಿಗೆ ನನಸಾಗದ ಕನಸು. ಯುವ ಜನರಿಗಂತೂ ಇದು ಕನಸಿನ ಲೋಕದ ಸಾಧನೆ. ಸುಲಭದಲ್ಲಿ ನಿಲುಕುವಂಥದಲ್ಲ. ಆದರೆ ಇಂದು ಬಿಲ್ಲವ ಸಮುದಾಯ ಇಡೀ ಅಭಿಮಾನಪಡತಕ್ಕ ಸಾಧನೆಯ ಹಾದಿಯಲ್ಲಿದೆ. ಬಿಲ್ಲವ ಕುವರಿ ಪುತ್ತೂರಿನ ಏಳ್ಮುಡಿ ಮನೆ ಶ್ರೀ ರಮೇಶ್ ಪೂಜಾರಿ ಶ್ರೀಮತಿ ಯಶೋಧ ದಂಪತಿಗಳ ಸುಪುತ್ರಿ ಕು| ವರ್ಷಾ ಪಿ.
ಪಿ.ಯು.ಸಿಯಲ್ಲಿ ಎಲ್ಲ 4 ಐಚ್ಚಿಕ ವಿಷಯಗಳಲ್ಲಿ 100% (ಒಟ್ಟು 600/591) ಅಂಕ ಗಳಿಸಿ ಕರ್ನಾಟಕದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಇಂಜಿನಿಯರಿಂಗ್ ವಿಭಾಗಕ್ಕೆ ರಾಜ್ಯಕ್ಕೆ 244ನೇ ರ್‍ಯಾಂಕ್, ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 202ನೆ ರ್‍ಯಾಂಕ್ ಗಳಿಸಿ, ISMHನಲ್ಲಿ 96ನೇ ರ್‍ಯಾಂಕ್, B.Sc ಕೃಷಿಯಲ್ಲಿ 41ನೇ ರ್‍ಯಾಂಕ್ ಪಡೆದ ಮಹೋನ್ನತ ಸಾಧನೆ ಮೆರೆದ ವರ್ಷ ನಮ್ಮ ಸಮುದಾಯಕ್ಕೆ ಇಡೀ ಅವಿಭಜಿತ ದ.ಕ ಜಿಲ್ಲೆಗೆ ಹರ್ಷಧಾರೆಯ ಸಿಂಚನವನ್ನು, ಸಂತಸದ ಸಂಚಲನವನ್ನುಂಟು ಮಾಡಿದ್ದಾರೆ.
ಒಂದೋ ಐ.ಎ.ಎಸ್ ಅಧಿಕಾರಿಯಾಗಬೇಕು ಇಲ್ಲವೇ Indian Institute of Scienceನಲ್ಲಿ ವಿಜ್ಞಾನಿಯಾಗಬೇಕೆಂಬ ಹಂಬಲದಿಂದ ಇವರು ಸದ್ಯಕ್ಕೆ ಬೆಂಗಳೂರಿನ Indian Institute of Scienceನಲ್ಲಿ ಕಲಿಯುತ್ತಿದ್ದಾರೆ. ಓIಖಿಏ,NITK, BMS(Bangalore)ನಂತಹ ಪ್ರತಿಷ್ಠಿತ ರಾಷ್ಟ್ರಮಟ್ಟದ ವೃತ್ತಿ ಶಿಕ್ಷಣದ ಸಂಸ್ಥೆಗಳಿಗೆ ಅರ್ಹತೆ ಪಡೆದಿದ್ದರೂ IISCಯಲ್ಲಿ ವಿದ್ಯಾಭ್ಯಾಸ ಮಂದುವರಿಸಿ ಅದರೊಂದಿಗೆ ತನ್ನ ಕನಸಿನ IAS ಹುದ್ದೆಗೆ ಬೇಕಾದ ತಯಾರಿಯನ್ನೂ ಮಾಡಿಕೊಂಡಿದ್ದಾರೆ ಕು| ವರ್ಷಾ ಪಿ.
ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ KVPYಯಲ್ಲಿ ರಾಷ್ಟ್ರಮಟ್ಟದಲ್ಲಿ 577ನೇ ರ್‍ಯಾಂಕ್ ಗಳಿಸಿದ ವರ್ಷಾ ಅವರು ಭಾರತೀಯ ವಿಜ್ಞಾನ ಸಂಸ್ಥೆ- Indian Institute of Science(TATA Institute)ನಲ್ಲಿ ವ್ಯಾಸಂಗಕ್ಕೆ ಅರ್ಹತೆ ಪಡೆದು ಇದೀಗ ಅಲ್ಲೇ ತನ್ನ ಸಾಧನೆಯನ್ನು ಮುಂದುವರೆಸಿದ್ದಾರೆ.
ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಉಳ್ಳವರಿಗೆ ಕು| ವರ್ಷಾ ಅವರು 1 ರಿಂದ 7ನೇ ತರಗತಿಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಎಂಬುದು ಗಮನಿಸತಕ್ಕ ವಿಚಾರ. SSLCಯಲ್ಲಿ 625 ಕ್ಕೆ 614 ಅಂಕ ಗಳಿಸಿ ತಾಲೂಕಿನಲ್ಲಿ 2 ವರ್ಷದ ಹಿಂದೆ ಪ್ರಥಮ ಸ್ಥಾನವನ್ನು ಕು| ವರ್ಷಾರವರು ಗಳಿಸಿರುವುದನ್ನು ಇಲ್ಲಿ ಗಮನಿಸಬಹುದು.
ಮುಂದಿನ ದಿನಗಳಲ್ಲಿ ಕು| ವರ್ಷಾ ಅವರ ಸಾಧನೆ ಇದೇ ರೀತಿ ಮುಂದುವರಿಯಲಿ, ಆಕೆಯ IAS ಅಧಿಕಾರಿಯಾಗುವ ಕನಸು ನನಸಾಗಲಿ, ಆ ಮೂಲಕ ಬಿಲ್ಲವ ಸಮುದಾಯಕ್ಕೆ ಇನ್ನೊರ್ವ IAS ಅಧಿಕಾರಿ ಸಿಗಲಿ ಎಂಬುದು ಯುವವಾಹಿನಿಯ ಎಲ್ಲ ಸದಸ್ಯರ, ಪದಾಧಿಕಾರಿಗಳ ಆಶಯ. ಅದರೊಂದಿಗೆ ವಿಶೇಷ ಅಕ್ಷರ ಪುರಸ್ಕಾರದೊಂದಿಗೆ ಅಭಿನಂದನೆ.
All the best Varsha, we are proud of your achievements.