ಮೂಡುಬಿದಿರೆ : ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯ ಉದ್ದೇಶವನ್ನು ಇಟ್ಟುಕೊಂಡ ಯುವವಾಹಿನಿ (ರಿ.) ಮೂಡುಬಿದರೆ ಘಟಕವು ಪ್ರಾರಂಭಿಸಿದ ಮದ್ಯ ಮುಕ್ತ ಮೆಹಂದಿ ಕಾರ್ಯಕ್ರಮದ ಅಡಿಯಲ್ಲಿ ಯುವವಾಹಿನಿಯ 34 ನೇ ಘಟಕ ಗ್ರಾಮಚಾವಡಿ ಕೊಣಾಜೆ ಇದರ ಅಧ್ಯಕ್ಷರಾದ ಹರೀಶ್ ಪೂಜಾರಿ ಇವರ ಧರ್ಮಪತ್ನಿಯ ತಮ್ಮನಾದ ಪಾಲಡ್ಕದ ಪೂಜಾರಿಬೆಟ್ಟು ನಿವಾಸಿ ಗ್ರಾಮಚಾವಡಿ ಘಟಕದ ಸದಸ್ಯ ಸುಕೇಶ್ ಪೂಜಾರಿ ಇವರು ತನ್ನ ಮದುವೆಯ ಮೆಹಂದಿ ಕಾರ್ಯಕ್ರಮವನ್ನು ತನ್ನ ಹುಟ್ಟೂರಾದ ಪಾಲಡ್ಕದ (ಮೂಡುಬಿದಿರೆ) ಮನೆಯಲ್ಲಿ ಬಹಳ ಸಾಂಪ್ರದಾಯಕವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು ಮತ್ತು ಪ್ರಸ್ತುತ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ. ಹಾಗೂ ಸಾಮಾಜಿಕ ಜಾಲತಾಣ ಸಂಪಾದಕರಾದ ನವಾನಂದ ಮೂಡುಬಿದರೆ ಗ್ರಾಮಚಾವಡಿ ಘಟಕದ ಅಧ್ಯಕ್ಷ ಹರೀಶ್ ಪೂಜಾರಿ, ಉಪ್ಪಿನಂಗಡಿ ಘಟಕದ ನಿಕಟಪೂರ್ವ ಅಧ್ಯಕ್ಷರು ಮನೋಹರ್ ಪೂಜಾರಿ, ಘಟಕದ ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ಹಾಗೂ ಜೊತೆ ಕಾರ್ಯದರ್ಶಿ ವಿನೀತ್ ಕೋಟೆಬಾಗಿಲ್, ಸದಸ್ಯ ಹರೀಶ್ ಕುಶಲ ಪಾಲಡ್ಕ ಇವರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ. ಇವರು ಈ ಸಂದರ್ಭದಲ್ಲಿ ಮದ್ಯಮುಕ್ತ ಮೆಹಂದಿ ಕಾರ್ಯಕ್ರಮದ ಉದ್ದೇಶ ಏನು ಮತ್ತು ಮದ್ಯಯುಕ್ತ ಮೆಹೆಂದಿ ಅದರಿಂದ ಸಮಾಜದಲ್ಲಿ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು. ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ಇವರು ಮದುಮಗ ಸುಕೇಶ್ ಪೂಜಾರಿ ಇವರಿಗೆ ನಾರಾಯಣ ಗುರುಗಳ (ಭಾವಚಿತ್ರ ) ಫೋಟೋ ನೀಡಿ ಶುಭ ಹಾರೈಸಿದರು.
ಗ್ರಾಮಚವಾಡಿ ಘಟಕದ ಸದಸ್ಯೆ ಶ್ರೀಮತಿ ಸುರೇಖಾ ಹರೀಶ್ ಪೂಜಾರಿ ಇವರು ಕಾರ್ಯಕ್ರಮ ನಿರೂಪಿಸಿದರು.