ಬಂಟ್ವಾಳ : ಗುರುಗಳ ಸಂದೇಶದ ತತ್ವಾದರ್ಶಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಆದರ್ಶ ಬದುಕಿನಲ್ಲಿ ಹೆಜ್ಜೆಹಾಕಿದಾಗ ಅದಕ್ಕಿಂತ ದೊಡ್ಡದಾದ ಗುರುಪೂಜೆ ಮತ್ತೊಂದಿಲ್ಲ . ಆರಾಧನೆಯ ಜೊತೆಗೆ ಗುರುಗಳ ಆದರ್ಶಗಳನ್ನು ಅಪ್ಪಿಕೊಳ್ಳುವ ಮನಸ್ಸು ನಮ್ಮದಾಗಬೇಕು ಎಂದು ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪ್ರೇಮನಾಥ ಕೆ ಅಭಿಪ್ರಾಯಪಟ್ಟರು.
ಅವರು 170ನೇ ನಾರಾಯಣ ಗುರುಜಯಂತಿ ಆಚರಣೆಯ ಸಲುವಾಗಿ ಬಿ.ಸಿ.ರೋಡ್ ಯುವವಾಹಿನಿ ಕಛೇರಿಯಲ್ಲಿ ದಿನಾಂಕ 31-08-2024 ರಂದು ನಡೆದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದರು.
ಮಾಜಿ ಅಧ್ಯಕ್ಷರು ರಾಮಚಂದ್ರ ಸುವರ್ಣ ದೀಪ ಬೆಳಗಿ ಉದ್ಘಾಟಿಸಿದರು.
ರೀಲ್ಸ್ ಸ್ಪರ್ಧೆಯ ವಿಜೇತರಾದ ಪ್ರಥಮ ಆದೇಶ್, ದ್ವಿತೀಯ ಸಹನಾ ಹಾಗೂ ಮೂವರಿಗೆ ಪ್ರೋತ್ಸಾಹಕ ಬಹುಮಾನ ನೀಡಿಲಾಯಿತು.
ಮಾಜಿ ಅಧ್ಯಕ್ಷರಾದ ರಾಜೇಶ್ ಸುವರ್ಣ, ನಾಗೇಶ್ ಪೊನ್ನೋಡಿ, ಹರೀಶ್ ಕುದನೆ, ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ , ಪ್ರಚಾರ ನಿರ್ದೇಶಕ ಶ್ರವಣ್ ಅಗ್ರಬೈಲ್ ಉಪಸ್ಥಿತರಿದ್ದರು.
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು ಪ್ರಜಿತ್ ಅಮಿನ್ ಏರಮಲೆ ಪ್ರಾರ್ಥನೆಗೈದರು.
ದಿನೇಶ್ ಸುವರ್ಣ ಅಧ್ಯಕ್ಷತೆ ವಹಿಸಿ ಗುರುಸ್ಮರಣೆಯ ಅಗತ್ಯತೆಯ ಬಗ್ಗೆ ಪ್ರಾಸ್ತಾಪನೆಗೈದು ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.