ಶಕ್ತಿನಗರ : ದಿನಾಂಕ : 22-08-2024 ರಂದು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕುಂಟಲ್ಪಾಡಿ ಇಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು.
ಪೂಜೆಯ ಮುಂದಾಳತ್ವವನ್ನು ಯುವ ವಾಹಿನಿ (ರಿ) ಶಕ್ತಿನಗರ ಘಟಕದ ನಾರಾಯಣ ಗುರುತತ್ವ ಪ್ರಚಾರಕರಾದ ಶ್ರೀ ಯೋಗೀಶ್ ಸುವರ್ಣ ಇವರು ವಹಿಸಿಕೊಂಡಿದ್ದರು.
ಮೊದಲಿಗೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕುಂಟಾಲ್ಪಾಡಿ ಇಲ್ಲಿ ಮುಂಜಾನೆ ಗಣಹೋಮವನ್ನು ನಡೆಸಿ ಮಂದಿರವನ್ನು ಶುದ್ಧೀಕರಿಸಲಾಯಿತು. ನಂತರ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ ಇವರ ಮನೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ 2 ಗಂಟೆಯಿಂದ ಭಜನೆ ಸತ್ಸಂಗ ಕಾರ್ಯಕ್ರಮ ನಡೆಯಿತು.
ನಾಲ್ಕು ಗಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪೂಜೆಯನ್ನು ನಡೆಸಿ ಬಂದಂತಹ ಎಲ್ಲ ಭಕ್ತರಿಗೂ ಪ್ರಸಾದವನ್ನು ವಿತರಿಸಿ ನಂತರ ಅಲ್ಲಿಂದ ಗುರುಗಳ ಮೂರ್ತಿಯನ್ನು ಟ್ಯಾಬ್ಲೋ ಮುಖಾಂತರ ಶಕ್ತಿನಗರ ಮಹಾಕಾಳಿ ರಸ್ತೆಗೆ ಕೊಂಡೊಯ್ದು ನಂತರ ಅಲ್ಲಿ ಕಾಲ್ನಡಿಗೆಯಿಂದ ಬೃಹತ್ ಶೋಭಾ ಯಾತ್ರೆಯನ್ನು ನಡೆಸಲಾಯಿತು.
ಈ ಶೋಭಾ ಯಾತ್ರೆಯಲ್ಲಿ 40 ಮಕ್ಕಳ ಕುಣಿತ ಭಜನೆ ತಂಡ ಹಾಗೂ ಚಂಡೆ ತಾಳದೊಂದಿಗೆ ಬಹಳ ಅದ್ದೂರಿಯಿಂದ ಶೋಭಾ ಯಾತ್ರೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ನಮ್ಮೊಂದಿಗೆ ಶೋಭಾ ಯಾತ್ರೆಯಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಹಾಗೂ ಪದವು ವಾರ್ಡ್ ಕಾರ್ಪೊರೇಟರ್ ಆದ ಶ್ರೀ ಕಿಶೋರ್ ಕೊಟ್ಟಾರಿ ಹಾಗೂ ಶಕ್ತಿನಗರ ವಾರ್ಡ್ ಕಾರ್ಪೊರೇಟರ್ ಆದ ವನಿತಾ ಪ್ರಸಾದ್ ಮತ್ತು ಗುಂಡಲಿಕೆ ವಾರ್ಡ್ ಕಾರ್ಪೊರೇಟರ್ ಆದ ಶ್ರೀಮತಿ ಶಕೀಲಾ ಕಾವಾ ಹಾಗೂ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್.ಕೆ.ಪೂಜಾರಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಶ್ರೀ ದೀಕ್ಷಿತ್ ಸಿ.ಎಸ್ ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರಕರಾದ ಮೋಹನ್ ಮಾಡೂರ್ ಪಾಲ್ಗೊಂಡಿದ್ದರು.
ಶೋಭಾ ಯಾತ್ರೆಯು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿ ಇಲ್ಲಿ ಆಗಮಿಸಿದ ನಂತರ ಮಹಾಮಂಗಳಾರತಿಯನ್ನು ನಡೆಸಿ ಬಂದಂತಹ ಅತಿಥಿಗಳಿಗೆ ಗುರುಗಳ ಪ್ರಸಾದವನ್ನು ನೀಡಿ ಯುವವಾಹಿನಿ (ರಿ) ಶಕ್ತಿನಗರ ಘಟಕದ ಅಧ್ಯಕ್ಷರಾದ ಗಣೇಶ್ ಕೆ ಮಹಾಕಾಳಿಯವರು ಶಾಲು ಹೊದಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಗಣೇಶ್ ಕೆ ಮಹಾಕಾಳಿ, ಒಂದನೇ ಉಪಾಧ್ಯಕ್ಷರಾದ ತುಕಾರಾಂ ಕುಂಟಲ್ಪಾಡಿ, ಎರಡನೇ ಉಪಾಧ್ಯಕ್ಷರಾದ ಸುಜಾತ ನವೀನ್ , ಕಾರ್ಯದರ್ಶಿಗಳಾದ ಅಕ್ಷತಾ ಚರಣ್ ಕೋಶಾಧಿಕಾರಿಗಳಾದ ನವೀನ್ ಕುಮಾರ್ ಹಾಗೂ ಮಾಜಿ ಅಧ್ಯಕ್ಷರುಗಳಾದ ಶ್ರೀನಿವಾಸ್ ಪೂಜಾರಿ, ಭಾರತಿ ಗಣೇಶ್, ಜಯರಾಮ್ ಪೂಜಾರಿ, ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಗುರು ಪೂಜೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಪಾಲ್ಗೊಂಡು ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದವನ್ನು ಪಡೆದು ಅನ್ನ ಪ್ರಸಾದವನ್ನು ಸ್ವೀಕರಿಸಿ ಗುರುಗಳ ಕೃಪೆಗೆ ಪಾತ್ರರಾದರು.