ಪುತ್ತೂರು: ಕರ್ನಾಟಕ ರಾಜ್ಯ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪುತ್ತೂರು ಘಟಕದ ವತಿಯಿಂದ 2023-24 ನೇ ಸಾಲಿನಲ್ಲಿ 625ಕ್ಕೆ 600 ಹಾಗೂ ಪಿಯುಸಿಯಲ್ಲಿ 600 ಕ್ಕೆ 570ಕ್ಕಿಂತ ಅಧಿಕ ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪುತ್ತೂರು ತಾಲೂಕಿನ ಬಿಲ್ಲವ ಗ್ರಾಮ ಸಮಿತಿಗಳ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವು ದಿನಾಂಕ 18-08-2024 ರಂದು ಆಯಾಯ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅಭಿನಂದನೆ ಸಲ್ಲುಸುವ ಮೂಲಕ ವಿಶಿಷ್ಟವಾಗಿ ನಡೆಯಿತು.
ಕೊಡಿಪ್ಪಾಡಿ ಗ್ರಾಮ ಸಮಿತಿಯ ಶ್ರೀ ಹರಿಶ್ಚಂದ್ರ ಪೂಜಾರಿ ಹಾಗೂ ಶ್ರೀಮತಿ ತೇಜಾಕ್ಷಿ ದಂಪತಿಗಳ ಸುಪುತ್ರಿ ಕು! ಯಶಸ್ವಿ ಇವರು 606 ಅಂಕಗಳನ್ನು ಗಳಿಸಿದ್ದು ಇವರನ್ನು ಹೆತ್ತವರ ಹಾಗೂ ಬಂಧುಗಳ ಸಮ್ಮುಖದಲ್ಲಿ ಅವರ ಸ್ವಗೃಹದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕೊಡಿಪ್ಪಾಡಿ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾದ ಶ್ರೀ ಕೇಶವ ಸುವರ್ಣ ಪೆಲತ್ತಡಿ ಕೊಡಿಪ್ಪಾಡಿ ಉಪಸ್ಥಿತರಿದ್ದರು.
ಪುತ್ತೂರು ನಗರ ಬಿಲ್ಲವ ಸಮಿತಿಯ ಶ್ರೀ ಕೃಷ್ಣಪ್ಪ ಪೂಜಾರಿ ಹಾಗೂ ಶ್ರೀಮತಿ ಜಯಂತಿ ದಂಪತಿಗಳ ಸುಪುತ್ರಿ ಕು! ಸಾಕ್ಷಿಕೃಷ್ಣ ಇವರು 618 ಅಂಕ ಗಳಿಸಿದ್ದು, ಇವರನ್ನು ಸಹ ಅವರ ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ನಿಡ್ಪಳ್ಳಿ ಬಿಲ್ಲವ ಸಮಿತಿಯ ಶ್ರೀ ಸುಂದರ ಪೂಜಾರಿ ಹಾಗೂ ಶ್ರೀಮತಿ ಭವಿತಾ ದಂಪತಿಗಳ ಸುಪುತ್ರಿ ಕು! ಸಾನ್ವಿ ಎಸ್. ಪಿ. ಇವರು 612 ಅಂಕ ಗಳಿಸಿದ್ದು ಇವರನ್ನು ಇವರ ಹೆತ್ತವರ ಹಾಗೂ ಹಿರಿಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸದಸ್ಯರಾದ ಶ್ರೀ ರಾಜೇಶ್ ಅರ್ಲಪದವು ಉಪಸ್ಥಿತರಿದ್ದರು.
ಬಿಲ್ಲವ ಸಮಿತಿಯ ಶ್ರೀ ಮೋಹನಾ ಪೂಜಾರಿ ಹಾಗೂ ಶ್ರೀಮತಿ ಜಲಜಾ ದಂಪತಿಗಳ ಸುಪುತ್ರಿ ಕು! ಪ್ರಹರ್ಷ ಇವರು 604 ಅಂಕ ಗಳಿಸಿದ್ದು, ಇವರನ್ನು ಅವರ ಮಾತೃಶ್ರೀಯವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.*
ಶ್ರೀ ಜಯಂತ ನಡುಬೈಲು ಹಾಗೂ ಕಲಾವತಿ ಜಯಂತ್ ರವರ ಸುಪುತ್ರ
ಅಂಚಿತ್ ನಡುಬೈಲು ಇವರು ದ್ವಿತೀಯ ಪಿಯುಸಿಯಲ್ಲಿ 600 ಕ್ಕೆ 577 ಅಂಕ ಗಳಿಸಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಇವರನ್ನು ಅವರ ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆಮ್ಮಿಂಜೆ ಗ್ರಾಮ ಸಮಿತಿಯ ಕಾರ್ಯದರ್ಶಿಯವರಾದ ಶ್ರೀ ಶ್ರೀಧರ ಪೂಜಾರಿಯವರು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಶಾಂತಿಗೋಡಿನ ಪರಕಮೆ ನಿವಾಸಿಗಳಾದ ಶ್ರೀ ಜಗದೀಶ್ ಪೂಜಾರಿ ಪರಕಮೆ ಹಾಗೂ ಶ್ರೀಮತಿ ಪ್ರಮೀಳ ಜಗದೀಶ್ ದಂಪತಿಗಳ ಸುಪುತ್ರಿ ಕು! ರಕ್ಷಾ ಪೂಜಾರಿ ಇವರು ಫಾರ್ಮಾಸಿಯಲ್ಲಿ 4ನೇ RANK ಹಾಗೂ ಅಂತಿಮ ಪ್ರಾಜೆಕ್ಟ್ ವಿಷಯದಲ್ಲಿ 9ನೇ RANK ಪಡೆದು ಪ್ರಸ್ತುತ ಲಂಡನ್ ನಲ್ಲಿ ತಮ್ಮ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಅವರ ಹೆತ್ತವರಿಗೆ ಗೌರವ ಸಮರ್ಪಣೆಯನ್ನು ಸ್ವಗೃಹ ಪರಕಮೆಯಲ್ಲಿ ಮಾಡಲಾಯಿತು.
ಯುವವಾಹಿನಿ (ರಿ.), ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಜಯರಾಮ್ ಬಿ. ಎನ್. ಸರ್ವರನ್ನೂ ಸ್ವಾಗತಿಸಿ ಮಾತಾನ್ನಾಡುತ್ತಾ ಅಧಿಕ ಅಂಕಗಳಿಸಿ ನಮ್ಮ ಸಮಾಜಕ್ಕೆ ಒಳ್ಳೆಯ ಹೆಸರನ್ನು ತಂದು ಕೊಟ್ಟ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರ ವಿದ್ಯಾ ಸಾಧನೆಯು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದ್ದು, ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಸಮಾಜದ ಆಸ್ತಿ ಎಂದು ಹೇಳುತ್ತಾ ಇವರೆಲ್ಲರ ವಿದ್ಯಾರ್ಥಿ ಜೀವನವು ಉತ್ತಮ ರೀತಿಯಲ್ಲಿ ಸಾಗಿ ಭವಿಷ್ಯದಲ್ಲಿ ಅವರು ಹೆತ್ತವರಿಗೂ, ಊರಿಗೂ, ನಮ್ಮ ಸಮಾಜಕ್ಕೂ ಒಳ್ಳೆಯ ಹೆಸರನ್ನು ತರುವಲ್ಲಿಯೂ, ಅದೇ ರೀತಿಯಲ್ಲಿ ದೇಶದಲ್ಲಿ ಸತ್ಪ್ರಜೆಯಾಗಿ ಬಾಳುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕೃಪಾಶೀರ್ವಾದ ಸದಾ ಅವರ ಮೇಲಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಜಯರಾಮ ಬಿ. ಎನ್. ಉಪಾಧ್ಯಕ್ಷರಾದ ಶ್ರೀ ಅಣ್ಣಿ ಪೂಜಾರಿ ಚಿಕ್ಕಮುಡ್ನೂರು, ಕಾರ್ಯದರ್ಶಿ ಶ್ರೀ ಶಮಿತ್ ಪರ್ಪುಂಜ, ಕೋಶಾಧಿಕಾರಿ ಶ್ರೀ ಶರತ್ ಕೈಪಂಗಳ ದೋಳ, ನಿರ್ದೇಶಕರುಗಳಾದ ಶ್ರೀ ದಾಮೋದರ ಸುವರ್ಣ ಶಾಂತಿಗೋಡು, ಶ್ರೀ ಗೌತಮ್ ಸರ್ವೆ, ಶ್ರೀಮತಿ ನವ್ಯದಾಮೋದರ್ ಶಾಂತಿಗೋಡು, ಕು!ವೈಷ್ಣವಿ ಶಾಂತಿಗೋಡು ಹಾಗೂ ಎಲ್ಲಾ ವಿದ್ಯಾರ್ಥಿಗಳ ಹೆತ್ತವರು ಹಾಗೂ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.