ಕಾಪು: ದಿನಾಂಕ 14-08-2024 ರಂದು ಸಂಜೆ 7 ಗಂಟೆಗೆ ಲೈಟ್ ಹೌಸ್ ಬೀಚ್ ರೆಸಾರ್ಟ್ನಲ್ಲಿ ಯುವವಾಹಿನಿ (ರಿ) ಕಾಪು ಘಟಕದ ವತಿಯಿಂದ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಕಾಪು ತಹಸೀಲ್ದಾರ್ ಡಾ. ಪ್ರತಿಭಾರವರು ಕಾರ್ಯಕ್ರಮ ಉದ್ಘಾಟನೆ ಮಾಡಿ ತುಳುನಾಡಿನ ಆಚರಣೆ ಹಾಗೂ ಆಟಿಯ ವಿಶೇಷ ತಿಂಡಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು ಹಾಗೂ ವಿದ್ಯಾರ್ಥಿ ವೇತನ ನೀಡುವಂತಹ ಒಳ್ಳೆಯ ಕೆಲಸ ಯುವವಾಹಿನಿ (ರಿ) ಕಾಪು ಘಟಕ ಮಾಡುತ್ತಿದೆ ಎಂದು ಶ್ಲಾಘಿಸಿದರು.
10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರು ಹರೀಶ್ . ಕೆ. ಪೂಜಾರಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾಪು ಘಟಕದ ವತಿಯಿಂದ ಈ ವರ್ಷ ನಡೆದಿರುವ ಅನೇಕ ಸಮಾಜಮುಖಿ ಕೆಲಸದ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
ಯುವವಾಹಿನಿ (ರಿ) ಕಾಪು ಘಟಕದ ಅಧ್ಯಕ್ಷರು ಸೂರ್ಯ ನಾರಾಯಣ ಸುವರ್ಣರವರು ಸಮಾರಂಭ ಅಧ್ಯಕ್ಷತೆ ವಹಿಸಿ ಮಾತಾಡಿ, ಸದಸ್ಯರು ಬಗೆ ಬಗೆಯ ಆಟಿಯ ತಿಂಡಿ ತಮ್ಮ ಮನೆಯಲ್ಲಿಯೇ ತಯಾರಿಸಿ ತಂದಿರುವುದಕ್ಕೆ ಧನ್ಯವಾದ ತಿಳಿಸಿದರು.
ಕಾಪು ಬಿಲ್ಲವ ಸಂಘದ ಅಧ್ಯಕ್ಷರು ವಿಕ್ರಂ ಕಾಪು, ಲೈಟ್ ಹೌಸ್ ರೆಸಾರ್ಟ್ ಮಾಲಕರಾದ ದೀಪಕ್ ಎರ್ಮಾಲ್, ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಮಹಾಬಲ ಅಮೀನ್ ಅತಿಥಿಗಳಾಗಿದ್ದರು. ವಿದ್ಯಾರ್ಥಿ ವೇತನದ ಪ್ರಯೋಜಕತ್ವವನ್ನು ಉಳಿಯರಗೊಳಿ “ಜನನಿ”
ದಿ.ರೇಣುಕಾ ನಾರ್ಣಾಪ್ಪ ಪೂಜಾರಿ ಅವರ ಸ್ಮರಣಾರ್ಥ ಅವರ ಮಕ್ಕಳು ವಹಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಹರೀಶ್ ಪೂಜಾರಿ ಹಾಗೂ ಕಾಪು ಪುರಸಭೆಯಲ್ಲಿ ಸಮಾಜದ ನಾಮ ನಿರ್ದೇಶನಾ ಸದಸ್ಯ ದೇವರಾಜ್ ಕೋಟ್ಯಾನ್ ರವರನ್ನು ಸನ್ಮಾನಿಸಲಾಯಿತು.
ಯುವವಾಹಿನಿ ಕಾಪು ಘಟಕದ ಮಾಜಿ ಅಧ್ಯಕ್ಷೆ ಸೌಮ್ಯ ರಾಕೇಶ್ ಸ್ವಾಗತಿಸಿದರು, ಕಾರ್ಯದರ್ಶಿ ರಾಕೇಶ್ ಕುಂಜೂರ್ ಕಾರ್ಯಕ್ರಮ ನಿರೂಪಿಸಿದರು.