ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 31-07-2024 ರಂದು ಜರುಗಿದ ಕಾರ್ಗಿಲ್ ವಿಜಯ್ ದಿವಸ್ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು .
ತಮ್ಮ ಸೈನ್ಯ ಜೀವನದ ಅನುಭವಗಳನ್ನು ಹಾಗೇ ಕೆಲವೊಂದು ಕಷ್ಟದ ಸಮಯದ ಸನ್ನಿವೇಶಗಳನ್ನು ಭಾವುಕರಾಗಿ ಹಂಚಿಕೊಂಡರು. ಯುವಕರು ಸೇನೆಗೆ ಸೇರಲು ಇಚ್ಛಿಸಿದರೆ ದಯವಿಟ್ಟು ಕೈಗಳಿಗೆ ಹಚ್ಚೆ ಹಾಕಬೇಡಿ , ಹಲ್ಲು ಕೀಳಬೇಡಿ, ಸೇನೆಗೆ ಸೇರಲು ದೈಹಿಕ ಸಾಮರ್ಥ್ಯ ಅಗತ್ಯವಾಗಿರುತ್ತದೆ ಎಂದು ಕಿವಿ ಮಾತು ಹೇಳಿದರು.
ಸೇನೆಯಲ್ಲಿ ಸೇವೆ ಸಲ್ಲಿಸಿದ ದಯಾನಂದರವರನ್ನು ಘಟಕದಿಂದ ಗೌರವಿಸಲಾಯಿತು.
ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರು ಇಂದಿರಾ ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಾರಾಯಣ ಗುರುಗಳ ಭಾವ ಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಾರತಾಂಬೆಗೆ ಪುಷ್ಪಾರ್ಚನೆಗೈದು, ಸಮಾರಂಭದ ಉದ್ಘಾಟನೆ ನೆರವೇರಿಸಿದರು.
ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿ ಭಾರತ ಮಾತೆಯ ಮಡಿಲು ಸೇರಿದ ವೀರ ಯೋಧರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ನುಡಿ ನಮನ ಸಲ್ಲಿಸಲಾಯಿತು.
ಸನ್ಮಾನ
ಕಾರ್ಯಕ್ರಮದಲ್ಲಿ ದಿನಾಂಕ 30/07/2024 ರಂದು ಸಂಜೆ 13F ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ಸಿನಲ್ಲಿ ಪ್ರಯಾಣಿಸುತಿದ್ದ ವಿದ್ಯಾರ್ಥಿನಿಯೊಬ್ಬಳು ತಟ್ಟನೆ ಎದೆ ನೋವಿನಿಂದ ಹಾರ್ಟ್ ಅಟ್ಯಾಕ್ ನ ಸೂಚನೆ ನೀಡಿದಾಗ ಎಚ್ಚೆತ್ತುಗೊಂಡು ಹುಡುಗಿಯ ಪ್ರಾಣ ಉಳಿಸಲು ಸಹಾಯ ಮಾಡಿದ ಬಸ್ಸಿನ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದರ್ ಹಾಗು ಮಹೇಶ್ ಪೂಜಾರಿ ಇವರನ್ನು ಸನ್ಮಾನಿಸಿದರು.
ಪ್ರತಿಭಾ ಪುರಸ್ಕಾರ
2023-24 ಸಾಲಿನ SSLC ಮತ್ತು PUC ಪರೀಕ್ಷೆಯಲ್ಲಿ ತೇರ್ಗಡೆಯಾದ ಘಟಕದ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಸುಮಾರು 22 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಘಟಕದ ವಿದ್ಯಾರ್ಥಿ ಸಂಘಟನಾ ನಿರ್ದೇಶಕರು ಮಧುಶ್ರೀ ಪ್ರಶಾಂತ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಾಮಾಜಿಕ ಜಾಲತಾಣ ಸಂಪಾದಕರು, ಮಾಜಿ ಸೈನಿಕರು ನವಾನಂದ ಇವರನ್ನು ಘಟಕದ ವತಿಯಿಂದ ಗೌರವಿಸಿದರು.
ಗೌರವ ಸ್ವೀಕಾರ ಮಾಡಿದ ಇವರು ದೇಶಸೇವೆ ಎಂದರೆ ಕೇವಲ ಸೈನ್ಯಕ್ಕೆ ಸೇರಿ ಮಾತ್ರ ಸೇವೆ ಮಾಡುವುದಲ್ಲ. ನಾವಿರುವ ಸಮಾಜಕ್ಕೆ ನಮ್ಮ ಕೈಲಾದ ಚಿಕ್ಕ ಸೇವೆಯನ್ನು ಮಾಡುವುದು ಕೂಡ ದೇಶ ಸೇವೆ ಎಂದರು. ಕಾರ್ಗಿಲ್ ವಿಜಯ್ ಒಂದು ಯುದ್ದ ಅಲ್ಲ. ಅದೊಂದು ಭಾರತ ಸೇನೆಯು ಮಾಡಿರುವ ಒಂದು ಆಪರೇಷನ್ ಅಷ್ಟೇ. ಇಂದು ಮಾಡಿದ ಸನ್ಮಾನ.. ಅಂದು ಕಾರ್ಗಿಲ್ ಅಪರೇಷನ್ ನಲ್ಲಿ ಭಾರತಮಾತೆಯ ಮಡಿಲು ಸೇರಿದ ವೀರ ಯೋಧರಿಗೆ ಸಲ್ಲುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷರು ಹರೀಶ್ ಕೆ.ಪೂಜಾರಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ) ಕೂಳೂರು ಘಟಕದ ಮಾಜಿ ಅಧ್ಯಕ್ಷರು ಪುಷ್ಪರಾಜ್ ಕೂಳೂರು, ಮಾಜಿ ಸೈನಿಕರು, ಆರ್ಮಿ ಮೆಡಿಕಲ್ ಕೋರ್ಪ್ ಇವರನ್ನು ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷರು ಇಂದಿರಾ ಸುರೇಶ್ ಇಂದು ಅಭಿನಂದನೆ ಸ್ವೀಕರಿಸಿದ ಮಕ್ಕಳು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಲು ಆಸಕ್ತಿ ಇದ್ದರೆ ಹೆತ್ತವರು ಪ್ರೋತ್ಸಾಹಿಸಿ ಎಂದು ಮಾರ್ಗದರ್ಶನವಿತ್ತರು.
ವೇದಿಕೆಯಲ್ಲಿ ಘಟಕದ ಕಾರ್ಯದರ್ಶಿ ನಯನ ಕೋಟ್ಯಾನ್ ಮತ್ತು ಕಾರ್ಯಕ್ರಮದ ಸಂಚಾಲಕರು ವ್ಯಕ್ತಿತ್ವ ವಿಕಸನ ನಿರ್ದೇಶಕರು ಶೋಭಾ, ಘಟಕದ ನಿಕಟಪೂರ್ವ ಅಧ್ಯಕ್ಷರು ಯಶವಂತ್ ಪೂಜಾರಿ , ಪ್ರಥಮ ಉಪಾಧ್ಯಕ್ಷರು ಲತೀಶ್ ಪೂಜಾರಿ, ದ್ವಿತೀಯ ಉಪಾಧ್ಯಕ್ಷರು ಗೀತಾ ವಸಂತ್ , ಮಾಜಿ ಅಧ್ಯಕ್ಷರು ಲೋಕೇಶ್ ಕೋಟ್ಯಾನ್, ನಯನ ರಮೇಶ್ ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಜಯಾನಂದ ಅಮೀನ್, ಚಂದಪ್ಪ ಸನಿಲ್, ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರು ಮೋಹನ್ ಮಾಡೂರು ಉಪಸ್ಥಿತರಿದ್ದರು.
ಮೋಕ್ಷ ಪ್ರಾರ್ಥನೆಗೈದರು. ಅಧ್ಯಕ್ಷರು ಸ್ವಾಗತಿಸಿದರು. ಶೈಲೇಶ್ ಬೈಕಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ವಂದಿಸಿದರು.