ಮುಲ್ಕಿ : ಕಳೆದ 22 ವರ್ಷದ ಹಿಂದೆ ಆರಂಭಗೊಂಡ ಆಟಿಡೊಂಜಿ ದಿನ ಕಾರ್ಯಕ್ರಮ ಇಂದು ವಿಶ್ವವ್ಯಾಪಿಯಾಗಿದ್ದು ವಿಶೇಷವಾಗಿದೆ ಎಂದು ಭಾರತ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಹೇಳಿದರು. ಅವರು ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ (ರಿ) ಮುಲ್ಕಿ ಘಟಕದ 22ನೇ ವರ್ಷದ ಆಟಿದೊಂಜಿ ದಿನ ಕಾರ್ಯಕ್ರಮದ ವೇದಿಕೆಯಲ್ಲಿ ನಿರ್ಮಿಸಿದ ಬಾವಿಯಿಂದ ನೀರು ಸೇದುವ ಮೂಲಕ ವಿಶೇಷವಾಗಿ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷರು ರಿತೇಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರು ಪಿ ಕೆ.ಸದಾನಂದ ಪಡುಬಿದ್ರಿ ಅವರಿಗೆ ಆಟಿದ ತಮ್ಮನ ನೀಡಿ ಗೌರವಿಸಲಾಯಿತು. ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕರು ಯೋಗೀಶ್ ಕೈರೋಡಿ ಆಟಿದ ಮದಿಪು ನೀಡಿದರು.
ಯುವವಾಹಿನಿ (ರಿ ) ಕೇಂದ್ರ ಸಮಿತಿ ಅಧ್ಯಕ್ಷರು ಹರೀಶ್ ಕೆ ಪೂಜಾರಿ, ಯಕ್ಷಗಾನದ ಹಾಸ್ಯ ಕಲಾವಿದ ದಿನೇಶ್ ಶೆಟ್ಟಿಗಾರ್ ಕೊಡಪದವು, ಉದ್ಯಮಿ ಲೋಕೇಶ್ ಹೆಜಮಾಡಿ ಹಾಗೂ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು ಪ್ರಕಾಶ್ ಸುವರ್ಣ, ಘಟಕದ ಕಾರ್ಯದರ್ಶಿ ಲತೀಶ್ ಕಾರ್ನಾಡ್, ಕಾರ್ಯಕ್ರಮ ನಿರ್ದೇಶಕಿ ರಾಜೇಶ್ವರಿ ನಿತ್ಯಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮಧ್ಯೆ ಮಧ್ಯೆ ಸಭಿಕರಿಗೆ ಕಡ್ಲೆ , ಹಲಸಿನ ಹಪ್ಪಳ ನೀಡಲಾಯಿತು. ಸರಿ ಸುಮಾರು 1200 ರಷ್ಟು ಜನ ಆಟಿ ಊಟದ ಸವಿರುಚಿ ಸವಿದರು
ಘಟಕಾಧ್ಯಕ್ಷರು ರಿತೇಶ್ ಮುಲ್ಕಿ ಸ್ವಾಗತಿಸಿದರು, ಪ್ರೇರಣಾ ಹಾಗೂ ಮೇಘನಾ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷರು ಉದಯ್ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷರು ಜಯಕುಮಾರ ಕುಬೆವೂರು ಪ್ರಸ್ತಾವನೆ ಬುಡುಬುಡಿಕೆ ರೀತಿಯಲ್ಲಿ ವಿಶೇಷವಾಗಿ ಮಾಡಿದರು. ಸನ್ಮಾನ ಪತ್ರ ಮಾಜಿ ಅಧ್ಯಕ್ಷೆ ಕುಶಾಲ ಕುಕ್ಯಾನ್ ವಾಚಿಸಿದರು. ಮಾಜಿ ಅಧ್ಯಕ್ಷರು ಉದಯ್ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲತೀಶ್ ಕಾರ್ನಾಡ್ ಧನ್ಯವಾದ ಸಲ್ಲಿಸಿದರು.