ಮೂಡಬಿದ್ರೆ: ಹಳ್ಳಿ ಪ್ರದೇಶದಲ್ಲಿ ಬಡಜನರಿಗೆ ಆರೋಗ್ಯ ತಪಾಸಣಾ ಶಿಬಿರದಿಂದ ಬಹಳಷ್ಟು ಪ್ರಯೋಜನ ಸಿಗಲಿದ್ದು, ಯುವವಾಹಿನಿ ಹಾಗೂ ಇತರ ಸಂಸ್ಥೆಗಳು ಸೇರಿಕೊಂಡು ನಡೆಸುವ ಈ ಶಿಬಿರವು ಅತ್ಯುತ್ತಮ ಸಮಾಜಸೇವೆಯ ಭಾಗವಾಗಿದ್ದು, ಪ್ರತಿಯೊಬ್ಬರು ಇದರ ಪ್ರಯೋಜನ ಪಡೆಯಂತಾಗಲಿ ಎಂದು ಯುವವಾಹಿನಿ(ರಿ.) ಮೂಡಬಿದ್ರೆ ಘಟಕದ ವತಿಯಿಂದ ಹಾಗೂ ಶ್ರೀಶಾ ಸೌಹಾರ್ದ ಸಹಕಾರಿ ಸೊಸೈಟಿ ಮಂಗಳೂರು, ಜೆಸಿಐ ಭಾರ್ಗವ ಮುಂಡ್ಕೂರು, ಬಿಲ್ಲವ ಸಂಘ ಕಡಂದಲೆ – ಪಾಲಡ್ಕ, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಕಡಂದಲೆ – ಪಾಲಡ್ಕ, ಶ್ರೀ ಸತ್ಯಸಾಯಿ ಬಾಲ ವಿಕಾಸ ಕೇಂದ್ರ ಮಂಗಳೂರು, ಹಾಲು ಉತ್ಪಾದಕರ ಸಹಕಾರ ಸಂಘ ಕದಂದಲೆ , ಇವರ ಸಹಕಾರದೊಂದಿಗೆ, ಕೆ.ಎಂ.ಸಿ ಆಸ್ಪತ್ರೆ ವೈದ್ಯರ ತಂಡ ಹಾಗೂ ಏನೇಪೋಯ ದಂತ ವೈದ್ಯಕೀಯ ಆಸ್ಪತ್ರೆಯ ವೈದ್ಯರ ತಂಡದಿಂದ ನಡೆದ ಉಚಿತ ವೈದ್ಯಕೀಯ ಶಿಬಿರ, ಉಚಿತ ಕಣ್ಣಿನ ತಪಾಸಣೆ, ಉಚಿತ ದಂತ ಚಿಕಿತ್ಸೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ ದೀಪ ಬೆಳಗಿಸಿ ನುಡಿದರು.
ಬಿಲ್ಲವ ಸಂಘ ಕಡಂದಲೆ – ಪಾಲಡ್ಕ ಇಲ್ಲಿಯ ಸಭಾಭವನದಲ್ಲಿ 07-06-2024 ರಂದು ನಡೆದ ಕಾರ್ಯಕ್ರಮ ಅಧ್ಯಕ್ಷತೆಯನ್ನು ಯುವವಾಹಿನಿ(ರಿ.) ಮೂಡಬಿದ್ರೆ ಘಟಕದ ಅಧ್ಯಕ್ಷರಾದ ಶಂಕರ್ ಕೋಟ್ಯಾನ್ ವಹಿಸಿದ್ದರು.
ಸಭಾ ವೇದಿಕೆಯಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಲೀಲಾದರ ಪೂಜಾರಿ ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ಶ್ರೀಶಾ ಸೌಹಾರ್ದ ಸಹಕಾರಿ ಸೊಸೈಟಿ ಮಂಗಳೂರು ಇಲ್ಲಿಯ ಸುರೇಶ್, ಕೆಎಂಸಿ ಆಸ್ಪತ್ರೆಯ ಡಾ. ಪ್ರೇರಣಾ, ಏನೋಪೋಯ ದಂತ ಚಿಕಿತ್ಸಾಲಯದ ಡಾ. ಅಲ್ಫಿಯಾ , ಎಂ ಎಸ್ ಗುರುರಾಜ್ ಅಧ್ಯಕ್ಷರು ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಕಡಂದಲೆ – ಪಾಲಡ್ಕ ಇದರ ಸಂಚಾಲಕರಾದ ಶಿವರಾಂ, ಘಟಕದ ಆರೋಗ್ಯ ನಿರ್ದೇಶಕಿ ಅನಿತಾ ಮುಂಡ್ರೋಟ್ಟು, ಶ್ರೀ ಭರತ್ ಸಂಪರ್ಕ ಅಧಿಕಾರಿ ಏನೋಪೋಯ ಡೆಂಟಲ್ ಕಾಲೇಜ್ ಮಂಗಳೂರು, ವೇದಿಕೆಯಲ್ಲಿ ಉಪಸ್ಥಿತಿರಿದ್ದರು.
ಶಿಬಿರದಲ್ಲಿ ಒಟ್ಟು 225 ಮಂದಿ ಭಾಗವಹಿಸಿದ್ದರು. 183 ಜನರಿಗೆ ಸಾಮಾನ್ಯ ತಪಾಸಣೆ ನಡೆಸಿ, 42 ಮಂದಿ ಉಚಿತ ದಂತ ಚಿಕಿತ್ಸೆ ಪಡೆದುಕೊಂಡರು. ಒಟ್ಟು 43 ಶಿಬಿರಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆ ಮಂಗಳೂರು ಇಲ್ಲಿಗೆ ಶಿಫಾರಸು ಮಾಡಲಾಯಿತು. ಸಾಮಾನ್ಯ ಕಾಯಿಲೆ ಇದ್ದ 43 ಮಂದಿಗೆ ಚಿಕಿತ್ಸೆ ನಡೆಸಿ ಉಚಿತವಾಗಿ ಔಷಧ ನೀಡಲಾಯಿತು.
ಯುವವಾಹಿನಿ(ರಿ.) ಮೂಡಬಿದ್ರೆ ಘಟಕದ ಮಾಜಿ ಅಧ್ಯಕ್ಷರಾದ ಹರಿಪ್ರಸಾದ್ .ಪಿ. ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ನವಾನಂದ, ಪ್ರಥಮ ಉಪಾಧ್ಯಕ್ಷ ಮುರಳೀಧರ ಕೋಟ್ಯಾನ್ , ಪ್ರಚಾರ ನಿರ್ದೇಶಕ ಆದರ್ಶ್ ಸುವರ್ಣ ಮೊದಲಾದವರು ಉಪಸ್ಥಿತಿರಿದ್ದರು.