ಮಂಗಳೂರು: ಯುವವಾಹಿನಿ(ರಿ.) ಕೂಳೂರು ಘಟಕದ ವತಿಯಿಂದ ದಿನಾಂಕ 10-07-2024 ಬುಧವಾರದಂದು ಪ್ರಕೃತಿ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಮತ್ತು ಹೆತ್ತವರ ಪಾತ್ರ ಎನ್ನುವ ವಿಚಾರದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ, ನಮ್ಮ ಟಿ.ವಿ ಚಾನೆಲ್ ನಲ್ಲಿ ಪ್ರಸಾರವಾಗುವ ನಮ್ಮ ರುಚಿ ಕಾರ್ಯಕ್ರಮದ ನಿರೂಪಕಿ ಸುಕನ್ಯಾ ಇವರು ಆಗಮಿಸಿದ್ದರು. ಇವರನ್ನು ಕೋಶಾಧಿಕಾರಿ ವಿಘ್ನೇಶ್ ಹೂ ಕೊಟ್ಟು ಸಭೆಗೆ ಸ್ವಾಗತಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಇವರು ಪರಿಸರ ಸಂರಕ್ಷಣೆ ಎಂದರೆ ಕೇವಲ ಗಿಡ ಮರಗಳನ್ನು ನೆಟ್ಟು ಬೆಳೆಸುವುದಲ್ಲ. ನೆಟ್ಟ ಗಿಡಗಳನ್ನು ನೀರು ಹಾಕಿ ಪೋಷಿಸಬೇಕು. ಪರಿಸರ ಸಂರಕ್ಷಣೆಯ ಮೊದಲ ಹೆಜ್ಜೆ ಮನೆಯಿಂದಲೇ ಆರಂಭಿಸಬೇಕು. ನಮ್ಮ ಮನೆಯಲ್ಲಿ ಗಿಡ ನೆಟ್ಟು ಪೋಷಿಸಬೇಕು. ಗಿಡ ನೆಡಲು ಜಾಗ ಇಲ್ಲದವರು ಡ್ರಮ್ ಗಳಲ್ಲೂ ಬೆಳೆಸಬಹುದು. ನಮ್ಮನ್ನು ನೋಡಿ ಇತರರೂ ಕೂಡ ಪರಿಸರ ಸಂರಕ್ಷಣೆ ಮಾಡುವಂತಾಗಬೇಕು. ಮನಸ್ಸಿದ್ದರೆ ನಮಗೆ ಜಾಗ ಇಲ್ಲದಿದ್ದರೂ ಗಿಡ ಮರ ಬೆಳೆಸಬಹುದು. ಟೆರೇಸ್ ಗಾರ್ಡನ್ ಕೂಡಾ ಮಾಡಬಹುದು. ಆದಷ್ಟು ಸಾವಯವ ಆಹಾರ ಬೆಳೆಸಬೇಕು. ನಮ್ಮ ಮನೆಯ ಸುತ್ತಮುತ್ತ ಪರಿಸರವನ್ನು ಶುಚಿತ್ವಗೊಳಿಸುವುದು.
ಹೊರಗಡೆ ಹೋದಾಗ ಕಸವನ್ನು ಎಲ್ಲೆಂದರಲ್ಲಿ ಹಾಕದೆ ಅದನ್ನು ಕಸದ ಡಬ್ಬಿಯಲ್ಲಿಯೇ ಹಾಕುವುದು. ಇದು ನಾನು ನನ್ನ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿರುವೆ. ನಮ್ಮ ಕೈಲಾದ ಸಣ್ಣ ಸಣ್ಣ ಸೇವೆಯನ್ನು ಸಮಾಜಕ್ಕೆ ಪ್ರಕೃತಿಗೆ ಕೊಡುವ ಮೂಲಕ ನಾವು ಯಾವ ರೀತಿ ಪರಿಸರವನ್ನು ರಕ್ಷಣೆ ಮಾಡಬಹುದು ತಿಳಿಸಿದ ಸುಕನ್ಯಾ ಇವರನ್ನು ಮಾಜಿ ಅಧ್ಯಕ್ಷರುಗಳು ಜೊತೆ ಸೇರಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸಸಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಸಂಚಾಲಕರಾದ ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾದ ಮಧುಶ್ರಿ ಪ್ರಶಾಂತ್ ಸಂಪನ್ಮೂಲ ವ್ಯಕ್ತಿಯವರ ಪರಿಚಯವನ್ನು ಸಭೆಯ ಮುಂದೆ ಇಟ್ಟರು. ಈ ಸಂದರ್ಭ ಘಟಕದ ಅಧ್ಯಕ್ಷರಾದ ಇಂದಿರಾ ಸುರೇಶ್, ನಿಕಟ ಪೂರ್ವ ಅಧ್ಯಕ್ಷರಾದ ಯಶವಂತ್ ಪೂಜಾರಿ, ಎರಡನೇ ಉಪಾಧ್ಯಕ್ಷರಾದ ಗೀತಾ ವಸಂತ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ನಯನ ರಮೇಶ್, ದೀಕ್ಷಿತ್ ಸಿ ಎಸ್,ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸರಸ್ವತಿ ಎಸ್. ಕೆ. , ಕಾರ್ಯದರ್ಶಿ ನಯನ ಕೋಟ್ಯಾನ್, ಜೊತೆ ಕಾರ್ಯದರ್ಶಿ ಕೀರ್ತನ , ಕೋಶಾಧಿಕಾರಿ ವಿಘ್ನೇಶ್, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.