ಮಂಗಳೂರು: ಯುವವಾಹಿನಿ(ರಿ.) ಕೂಳೂರು ಘಟಕದ ವತಿಯಿಂದ ದಿನಾಂಕ 03-07-2024 ರಂದು ನಡೆದ ಅಂಚೆ ಇಲಾಖೆಯ ಸೇವೆ ಹಾಗೂ ವಿಮಾ ಸೌಲಭ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮವು ನಡೆಯಿತು.
ಯತೀನ್ ಕುಮಾರ್ ಡೆವಲಪ್ಮೆಂಟ್ ಆಫೀಸರ್ ಅಂಚೆ ಇಲಾಖೆ ಮಂಗಳೂರು ಇವರು ಮಾಹಿತಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಅಂಚೆ ಇಲಾಖೆಯ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಅಂಚೆ ಇಲಾಖೆ ಈಗ ಹಿಂದಿನಂತಿಲ್ಲ. ಆಧುನಿಕ ಜಗತ್ತಿಗೆ ಸರಿಯಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಪೈಪೋಟಿ ನೀಡುತ್ತಿದೆ. ಇವುಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ, ಪೋಸ್ಟ್ ಆಫೀಸ್ ಠೇವಣಿ ಯೋಜನೆ, ಪೋಸ್ಟ್ ಆಫೀಸ್ ಉಳಿತಾಯ ಖಾತೆ, ಆರ್‌ಡಿ, ಹಿರಿಯ ನಾಗರಿಕ ಉಳಿತಾಯ ಯೋಜನೆ, ಅಂಚೆ ವಿಮಾ ಸೌಲಭ್ಯ, ಪದವೀಧರರಾದವರಿಗೆ ಇನ್ಸೂರೆನ್ಸ್ ಯೋಜನೆ ಮೊದಲಾದವು ಪ್ರಮುಖವಾಗಿವೆ.
ಈ ಸೌಲಭ್ಯಗಳ ಹೊರತಾಗಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಕಿಸಾನ್ ವಿಕಾಸ್ ಪತ್ರ ಮತ್ತು ಮಹಿಳಾ ಸಮ್ಮನ್ ಯೋಜನೆಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅದು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪೋಸ್ಟ್ ಕಾರ್ಡ್, ಇನ್ ಲ್ಯಾಂಡ್ ಲೆಟರ್ ಮೂಲಕ ಸಂದೇಶ ರವಾನಿಸುತ್ತದೆ. ಪಾಸ್‌ಪೋರ್ಟ್ ಸೌಲಭ್ಯಗಳು, ಆಧಾರ್ ತಿದ್ದುಪಡಿಯಂತಹ ಪ್ರಮುಖ ಸೇವೆಗಳು ಕೂಡಾ ಈಗ ನಮ್ಮ ಅಂಚೆ ಇಲಾಖೆಯಲ್ಲಿ ಸಿಗುತ್ತದೆ. ಅಲ್ಲದೆ ನಾವು ಕೆಲವೊಂದು ಅಗತ್ಯ ಇರುವ ಪ್ರದೇಶಗಳಿಗೆ ನಮ್ಮ ಕಚೇರಿಯ ಸೇವೆಗಳನ್ನು ಅವರ ಮನೆ ಬಾಗಿಲಿಗೆ ತಂದು ನೀಡುತ್ತಿದ್ದೇವೆ ಎಂದು ಹೇಳಿದರು. ಅತ್ಯುತ್ತಮ ಮಾಹಿತಿ ನೀಡಿದ ಯತೀನ್ ಕುಮಾರ್ ಇವರನ್ನು ಘಟಕದ ವತಿಯಿಂದ ಮಾಜಿ ಅಧ್ಯಕ್ಷರುಗಳು ಸೇರಿ ಗೌರವಿಸಿದರು. ಈ ಸಂದರ್ಭ ಘಟಕದ ಅಧ್ಯಕ್ಷರಾದ ಇಂದಿರಾ ಸುರೇಶ್, ಎರಡನೇ ಉಪಾಧ್ಯಕ್ಷರಾದ ಗೀತಾ, ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ನಯನ ರಮೇಶ್, ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಕಾರ್ಯದರ್ಶಿ ನಯನ ಕೋಟ್ಯಾನ್, ಕೋಶಾಧಿಕಾರಿ ವಿಘ್ನೇಶ್, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.