ಮಂಗಳೂರು: ಗುರುತತ್ವವಾಹಿನಿ ಎಂಬ ಪರಿಕಲ್ಪನೆಯ ಮೂಲಕ ಮನೆ ಮನೆ ಭಜನೆ ಹಾಗೂ ಗುರುಸಂದೇಶದ ಗುರುತತ್ವವಾಹಿನಿ ಕಾರ್ಯಕ್ರಮವು ಬಂಟ್ವಾಳ ಘಟಕದ ನೂತನ ತಂಡದ ಯಶಸ್ಸಿನ ಮೆಟ್ಟಿಲಾಗಲಿ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ತಿಳಿಸಿದರು.
ಅವರು ದಿನಾಂಕ 01-07-2024ನೇ ಸೋಮವಾರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರ ಮನೆ ಭಜನೆಯ ಪರಿಕಲ್ಪನೆಯ ಗುರುತತ್ವವಾಹಿನಿ ಎಂಬ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುಪೀಠದ ಸಮ್ಮುಖದಲ್ಲಿ ಯುವವಾಹಿನಿ ಸದಸ್ಯರಿಂದ ಸುಮಾರು ಎರಡು ಗಂಟೆಗಳ ಕಾಲ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು. ಕ್ಷೇತ್ರಾಡಳಿತ ವತಿಯಿಂದ ಅನುಗ್ರಹ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ(ರಿ.) ಬಂಟ್ವಾಳ ಘಟಕದ ಅಧ್ಯಕ್ಷರಾದ ದಿನೇಶ್ ಸುವರ್ಣ ರಾಯಿ, ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್, ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ ಸಂಘಟನಾ ಕಾರ್ಯದರ್ಶಿ ಉದಯ್ ಮೆನಾಡ್, ಆರೋಗ್ಯ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಕ್ರೀಡಾ ನಿರ್ದೇಶಕರಾದ ಮಧುಸೂದನ್ ಮಧ್ವ, ಸದಸ್ಯರಾದ ಪ್ರಶಾಂತ್ ಶಾಂತಿ, ಹರೀಶ್ ಅಜೆಕಲ, ನಾಗೇಶ್ ಪೂಜಾರಿ ಏಲಬೆ, ಮಾಜಿ ಅಧ್ಯಕ್ಷರಾದ ರಾಜೇಶ್ ಸುವರ್ಣ, ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಕೋಶಾಧಿಕಾರಿ ಹರೀಶ್ ಪಚ್ಚನಾಡಿ, ಪ್ರಚಾರ ನಿರ್ದೇಶಕ ಪ್ರಥ್ವೀರಾಜ್, ಮಂಗಳೂರು ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ, ಮಂಗಳೂರು ಘಟಕದ ಸದಸ್ಯರಾದ ಕೌಶಿಕ್ ಮಂಜನಾಡಿ, ದಿಶಾಂತ್ ಮತ್ತಿತರರು ಉಪಸ್ಥಿತರಿದ್ದರು.